ಪರಿಸರ ಮತ್ತು ಅರಣ್ಯ ಸಚಿವಾಲಯ

ಎನ್ ಸಿಆರ್ ನಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟವನ್ನು ನಿಭಾಯಿಸಲು  ಸಿ.ಎ.ಕ್ಯು.ಎಂ.(CAQM) ತುರ್ತು ಸಭೆ 



ಸಂಪೂರ್ಣ ಎನ್ ಸಿಆರ್ ವ್ಯಾಪ್ತಿಯಲ್ಲಿ  ಮೂರನೇ ಹಂತದ ಗ್ರಾಪ್ (GRAP) ಜಾರಿ

ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಜಾರಿ

ಅನುಮೋದಿತ ಇಂಧನಗಳನ್ನು ಬಳಸದ ಕೈಗಾರಿಕೆಗಳ ಮೇಲೆ ನಿರ್ಬಂಧಗಳ ಹೇರಿಕೆ

ಎನ್ಸಿಆರ್ ಮತ್ತು ಡಿಪಿಸಿಸಿಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (ಪಿಸಿಬಿಗಳು) ಗ್ರಾಪ್ (GRAP)ನ್ನು  ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು  ಖಚಿತಪಡಿಸಿಕೊಳ್ಳಲು ಸಲಹೆ 

ಸಾರ್ವಜನಿಕ ಸಾರಿಗೆಯನ್ನು ಬಳಸಲು ಮತ್ತು ತೆರೆದ ಬಯಲುಗಳಲ್ಲಿ ಸುಡುವಿಕೆಯನ್ನು ತಪ್ಪಿಸಲು ನಾಗರಿಕರಿಗೆ ಸಲಹೆ ಮಾಡಿದ ಸಿ.ಎ.ಕ್ಯು.ಎಂ.(CAQM)

Posted On: 29 OCT 2022 5:37PM by PIB Bengaluru

ರಾಷ್ಟ್ರದ  ರಾಜಧಾನಿ ಪ್ರದೇಶದಲ್ಲಿ  ಹದಗೆಡುತ್ತಿರುವ ವಾಯು ಗುಣಮಟ್ಟವನ್ನು ನಿಭಾಯಿಸಲು, ಎನ್ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗದ (ಸಿಎಕ್ಯೂಎಂ) ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿ.ಆರ್.ಎ.ಪಿ-ಗ್ರಾಪ್) ಅಡಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ  ಉಪ-ಸಮಿತಿಯು ಇಂದು ತುರ್ತು ಸಭೆ ನಡೆಸಿತು. ಸಭೆಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ನಿಯತಾಂಕಗಳನ್ನು ಸಮಗ್ರವಾಗಿ ಪರಾಮರ್ಶಿಸಿತು ಮತ್ತು ಆಯೋಗವು, ನಿಧಾನಗತಿಯ ಗಾಳಿ ಹಾಗು ಕೃಷಿ ತ್ಯಾಜ್ಯದ ಬೆಂಕಿ ಘಟನೆಗಳಲ್ಲಿ ಹಠಾತ್ ಏರಿಕೆಯಾಗುವುದರೊಂದಿಗೆ ಉಂಟಾಗಿರುವ  ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದಾಗಿ, ಇಡೀ ಎನ್ಸಿಆರ್ನಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಆರ್ಎಪಿಯ ಮೂರನೇ ಹಂತವನ್ನು ಅನುಷ್ಠಾನಗೊಳಿಸುವುದು ಅಗತ್ಯವೆಂದು ಪರಿಗಣಿಸಿತು. 

ಕ್ರಿಯಾತ್ಮಕ ಚಲನಶೀಲ  ಮಾದರಿ ಮತ್ತು ಹವಾಮಾನ / ಹವಾಮಾನ ಮುನ್ಸೂಚನೆಯ ಪ್ರಕಾರ, ದೆಹಲಿಯ ಒಟ್ಟಾರೆ ವಾಯು ಗುಣಮಟ್ಟವು 29.10.2022 ರಿಂದ ಮತ್ತು 30.10.2022 ರಂದು  ಅತ್ಯಂತ ಕಳಪೆಯಿಂದ ತೀವ್ರ ಕಳಪೆ ವರ್ಗದಲ್ಲಿ ಇರುವ  ಸಾಧ್ಯತೆಯಿದೆ. 31.10.2022 ರಿಂದ 01.11.2022 ರವರೆಗೆ ಗಾಳಿಯ ಗುಣಮಟ್ಟವು ಹದಗೆಟ್ಟು ಗಂಬೀರ ಪ್ರಮಾಣದಲ್ಲಿ ಕಳಪೆ ವರ್ಗದಲ್ಲಿ ಉಳಿಯುವ  ಸಾಧ್ಯತೆಯಿದೆ ಮತ್ತು ನಂತರದ 6 ದಿನಗಳವರೆಗೆ, ಗಾಳಿಯ ಗುಣಮಟ್ಟವು ತೀವ್ರದಿಂದ ಅತ್ಯಂತ ಕಳಪೆ ವರ್ಗದ ನಡುವೆ ಏರಿಳಿತಗೊಳ್ಳುವ ಸಾಧ್ಯತೆಯಿದೆ. ಮುಂಬರುವ ದಿನಗಳಲ್ಲಿ ಗಾಳಿಯು ಶಾಂತವಾಗಿರುತ್ತದೆ ಮತ್ತು ಗಾಳಿಯ ದಿಕ್ಕು ಆಗಾಗ್ಗೆ ಪಥವನ್ನು ಬದಲಾಯಿಸುವ ಸಾಧ್ಯತೆಯಿದೆ. ಹೀಗಾಗಿ, ಮಾಲಿನ್ಯಕಾರಕಗಳು ಈ ಪ್ರದೇಶದಲ್ಲಿ ಸಿಕ್ಕಿಹಾಕಿಕೊಳ್ಳುವ ಮತ್ತು ಪರಿಣಾಮಕಾರಿಯಾಗಿ ಚದುರಿಹೋಗದಿರುವ ಸಾಧ್ಯತೆ ಹೆಚ್ಚಿದೆ. 

ಉಪ ಸಮಿತಿಯು ಈ ಪ್ರದೇಶದಲ್ಲಿನ ವಾಯು ಗುಣಮಟ್ಟ ಪರಿಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿತು ಮತ್ತು ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ನಿಯತಾಂಕಗಳು ಕುಸಿಯುವ ಸಾಧ್ಯತೆಯಿರುವ ಬಗ್ಗೆ ಗಮನಿಸಿತು.  ಮತ್ತು ದೆಹಲಿ-ಎನ್ಸಿಆರ್ ನ  ಎಕ್ಯೂಐ ಯನ್ನು ನಿಭಾಯಿಸುವ ಪ್ರಯತ್ನವಾಗಿ, ಉಪ ಸಮಿತಿಯು ಇಂದು ಜಿಆರ್ಎಪಿಯ ಮೂರನೆ ಹಂತದ ಜಾರಿಯ ಅಗತ್ಯವನ್ನು ಮನಗಂಡು - ವಾಯು ಗುಣಮಟ್ಟ 'ತೀವ್ರ' ಕುಸಿದಿರುವ ಹಿನ್ನೆಲೆಯಲ್ಲಿ (ದಿಲ್ಲಿಯಲ್ಲಿ ವಾಯುಗುಣಮಟ್ಟ  ಎಕ್ಯೂಐ 401-450 ರ ನಡುವೆ) 3 ನೇ ಹಂತದ ಅಡಿಯಲ್ಲಿ ಕಲ್ಪಿಸಲಾದ ಎಲ್ಲಾ ಕ್ರಮಗಳನ್ನು ಜಾರಿಗೆ ತರಲು ಕ್ರಮವಹಿಸಲು ಸೂಚಿಸಿದೆ.  ಇಡೀ ಎನ್ಸಿಆರ್ ನಲ್ಲಿ ಇದು ತಕ್ಷಣದಿಂದ ಜಾರಿಗೆ ತರಲೂ ಕರೆ ನೀಡಿದೆ. ಇದು ಗ್ರಾಪ್ ನ ಹಂತ 1 ಮತ್ತು ಹಂತ 2 ರಲ್ಲಿ ಉಲ್ಲೇಖಿಸಲಾದ ನಿರ್ಬಂಧಿತ ಕ್ರಮಗಳಿಗೆ ಹೆಚ್ಚುವರಿಯಾದ ಕ್ರಮವಾಗಿದೆ. ಎನ್ಸಿಆರ್ ಮತ್ತು ಡಿಪಿಸಿಸಿಯ ಮಾಲಿನ್ಯ ನಿಯಂತ್ರಣ ಮಂಡಳಿ (ಪಿಸಿಬಿ)ಗಳಿಗೆ ಹಾಗು ಗ್ರಾಪ್ ಅಡಿಯಲ್ಲಿ ಕ್ರಮಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುವ ವಿವಿಧ ಏಜೆನ್ಸಿಗಳಿಗೆ ಈ ಅವಧಿಯಲ್ಲಿ ಗ್ರಾಪ್ ಅಡಿಯಲ್ಲಿ ಮೂರನೇ ಹಂತದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ.

ಇದಲ್ಲದೆ, ಎನ್ಸಿಆರ್  ನಾಗರಿಕರಿಗೆ “ಗ್ರಾಪ್” ಅನುಷ್ಠಾನಗೊಳಿಸಲು ಸಹಕರಿಸುವಂತೆ ಮತ್ತು ಗ್ರಾಪ್ (ಜಿಆರ್ ಪಿ) ಅಡಿಯಲ್ಲಿ ನಾಗರಿಕ ಸನ್ನದಿನಲ್ಲಿ ಉಲ್ಲೇಖಿಸಲಾದ ಕ್ರಮಗಳನ್ನು ಅನುಸರಿಸುವಂತೆ ಸಿಎಕ್ಯೂಎಂ ಮನವಿ ಮಾಡಿದೆ. ಮತ್ತು ನಾಗರಿಕರಿಗೆ ಈ ಕೆಳಗಿನ ಸಲಹೆಗಳನ್ನು ನೀಡಲಾಗಿದೆ: 
ಪ್ರಯಾಣಕ್ಕೆ ಸ್ವಚ್ಛ ಸಾರಿಗೆಯನ್ನು ಆಯ್ಕೆ ಮಾಡಿ - ಕೆಲಸಕ್ಕೆ ಹೋಗುವಾಗ ವಾಹನಗಳನ್ನು ಹಂಚಿಕೊಳ್ಳಿ ಅಥವಾ ಸಾರ್ವಜನಿಕ ಸಾರಿಗೆ ಬಳಸಿ ಅಥವಾ ನಡೆದುಕೊಂಡು ಹೋಗಿ  ಅಥವಾ ಸೈಕಲ್ ಬಳಸಿ.

ಮನೆಯಿಂದ ಕೆಲಸ ಮಾಡಲು ಅನುಮತಿಸುವ ಹುದ್ದೆಗಳಲ್ಲಿ ಇರುವ ಜನರು ಮನೆಯಿಂದಲೇ ಕೆಲಸ ಮಾಡಬಹುದು.

ಬಿಸಿಮಾಡುವ ಉದ್ದೇಶಕ್ಕಾಗಿ ಕಲ್ಲಿದ್ದಲು ಮತ್ತು ಉರುವಲಾಗಿ ಕಟ್ಟಿಗೆಯನ್ನು ಬಳಸಬೇಡಿ.

ತೆರೆದ ಬಯಲು/ಸ್ಥಳಗಳಲ್ಲಿ ಸುಡುವಿಕೆಯನ್ನು ತಪ್ಪಿಸಲು ಮನೆ ಮಾಲೀಕರು ಭದ್ರತಾ ಸಿಬ್ಬಂದಿಗೆ ವಿದ್ಯುತ್ ಹೀಟರ್ ಗಳನ್ನು (ಚಳಿಗಾಲದಲ್ಲಿ) ಒದಗಿಸಬಹುದು

ಕೆಲಸಗಳನ್ನು ಸಂಯೋಜಿಸಿ ಮತ್ತು ಟ್ರಿಪ್ (ಓಡಾಟ) ಗಳನ್ನು ಕಡಿಮೆ ಮಾಡಿ. ಕೆಲಸಗಳಿಗಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ನಡೆಯಿರಿ.

ಇದಲ್ಲದೆ, “ಗ್ರಾಪ್’ನ  ಮೂರನೇ ಹಂತದ ಪ್ರಕಾರ 9 ಅಂಶಗಳ ಕ್ರಿಯಾ ಯೋಜನೆ ಇಂದಿನಿಂದ ಇಡೀ ಎನ್ಸಿಆರ್ ನಲ್ಲಿ ತಕ್ಷಣದಿಂದ ಜಾರಿಗೆ ಬರುತ್ತದೆ.

ಈ 9 ಅಂಶಗಳ ಕ್ರಿಯಾ ಯೋಜನೆಯು ವಿವಿಧ ಏಜೆನ್ಸಿಗಳು ಮತ್ತು ಎನ್ಸಿಆರ್ ಹಾಗು ಡಿಪಿಸಿಸಿಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಅನುಷ್ಠಾನಗೊಳಿಸಬೇಕಾದ / ಖಚಿತಪಡಿಸಿಕೊಳ್ಳಬೇಕಾದ ಕ್ರಮಗಳನ್ನು ಒಳಗೊಂಡಿದೆ. ಅದರ ಹಂತಗಳು ಈ ಕೆಳಗಿನಂತಿವೆ: 

1. ರಸ್ತೆಗಳ ಧೂಳು ತೆಗೆಯುವುದನ್ನು ಹೆಚ್ಚು ತೀವ್ರಗೊಳಿಸುವುದು.ಯಾಂತ್ರೀಕೃತ/ ನಿರ್ವಾತ ಆಧಾರಿತ ಕಸ ಗುಡಿಸುವ ಯಂತ್ರಗಳ ಮೂಲಕ ಗುಡಿಸುವಿಕೆಯ ಆವರ್ತನವನ್ನು ಹೆಚ್ಚಿಸುವುದು. 

2. ಧೂಳು ಏಳುವುದನ್ನು ತಡೆಯಲು ಧೂಳು ನಿಗ್ರಹಕಗಳ ಬಳಕೆಯೊಂದಿಗೆ ದಿನ ನಿತ್ಯ ನೀರು ಸಿಂಪರಣೆ, ವಾಹನ ದಟ್ಟನೆಯ ಸಮಯಕ್ಕೆ ಮುಂಚಿತವಾಗಿ, ರಸ್ತೆಗಳು ಮತ್ತು ಹಾಟ್ ಸ್ಪಾಟ್ ಗಳಲ್ಲಿ,  ಭಾರೀ ಟ್ರಾಫಿಕ್ ಕಾರಿಡಾರ್ ಗಳಲ್ಲಿ ಧೂಳು ತೆಗೆದು, ಸಂಗ್ರಹಿಸಿ ಅದನ್ನು ನಿಯೋಜಿತ ನಿವೇಶನಗಳಲ್ಲಿ / ಭೂಭರ್ತಿಗಳಲ್ಲಿ ಸಮರ್ಪಕವಾಗಿ ವಿಲೇವಾರಿ ಮಾಡುವುದು.

3. ಸಾರ್ವಜನಿಕ ಸಾರಿಗೆ ಸೇವೆಗಳನ್ನು ತೀವ್ರಗೊಳಿಸುವುದು. ಆಫ್ ಪೀಕ್ (ದಟ್ಟಣೆ ರಹಿತ) ಅವಧಿಯಲ್ಲಿ ಪ್ರಯಾಣಿಸುವುದನ್ನು ಉತ್ತೇಜಿಸಲು ಡಿಫರೆನ್ಷಿಯಲ್ ದರಗಳನ್ನು ಅಂದರೆ ಬೇರೆ ಬೇರೆ ದರಗಳನ್ನು ಜಾರಿಗೆ ತರುವುದು. 

4. ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳು:

(i) ಈ ಕೆಳಗಿನ ವರ್ಗಗಳ ಯೋಜನೆಗಳನ್ನು ಹೊರತುಪಡಿಸಿ, ಇಡೀ ಎನ್.ಸಿ.ಆರ್.(NCR) ನಲ್ಲಿ ನಿರ್ಮಾಣ ಮತ್ತು ನೆಲಸಮಗೊಳಿಸುವ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿಷೇಧವನ್ನು ಜಾರಿಗೊಳಿಸುವುದು:

a.    ರೈಲ್ವೆ ಸೇವೆಗಳು / ರೈಲ್ವೆ ನಿಲ್ದಾಣಗಳು
b. ಮೆಟ್ರೋ ರೈಲು ಸೇವೆಗಳು ಮತ್ತು ನಿಲ್ದಾಣಗಳು 
c. ವಿಮಾನ ನಿಲ್ದಾಣಗಳು ಮತ್ತು ಅಂತರರಾಜ್ಯ ಬಸ್ ಟರ್ಮಿನಲ್ ಗಳು.
d. ರಾಷ್ಟ್ರೀಯ ಭದ್ರತೆ / ರಕ್ಷಣಾ ಸಂಬಂಧಿತ ಚಟುವಟಿಕೆಗಳು / ರಾಷ್ಟ್ರೀಯ ಪ್ರಾಮುಖ್ಯತೆಯ ಯೋಜನೆಗಳು;
e.    ಆಸ್ಪತ್ರೆಗಳು/ ಆರೋಗ್ಯ ರಕ್ಷಣಾ ಸೌಲಭ್ಯಗಳು.
f.    ಹೆದ್ದಾರಿಗಳು, ರಸ್ತೆಗಳು,  ಮೇಲ್ಸೇತುವೆಗಳು, ವಿದ್ಯುತ್ ಪ್ರಸರಣ, ಪೈಪ್ ಲೈನ್ ಗಳು,  ಕೊಳವೆ ಮಾರ್ಗಗಳು ಇತ್ಯಾದಿಗಳಂತಹ ಸಾರ್ವಜನಿಕ ಯೋಜನೆಗಳು.
g.    ನೈರ್ಮಲ್ಯ ಯೋಜನೆಗಳಾದ ಒಳಚರಂಡಿ ಕೊಳಚೆ ಸಂಸ್ಕರಣಾ ಘಟಕಗಳು ಮತ್ತು ನೀರು ಸರಬರಾಜು ಯೋಜನೆಗಳು, ಇತ್ಯಾದಿ;
h.    ಈ ಮೇಲಿನ ವರ್ಗಗಳ ಯೋಜನೆಗಳಿಗೆ ನಿರ್ದಿಷ್ಟವಾದ ಮತ್ತು ಪೂರಕವಾದ ಚಟುವಟಿಕೆಗಳು.

ಸೂಚನೆ: ಈ ಮೇಲಿನ ವಿನಾಯಿತಿಗಳು ಸಿ & ಡಿ ತ್ಯಾಜ್ಯ ನಿರ್ವಹಣಾ ನಿಯಮಗಳು, ಧೂಳು ತಡೆಗಟ್ಟುವಿಕೆ / ನಿಯಂತ್ರಣ ಮಾನದಂಡಗಳ ಕಟ್ಟುನಿಟ್ಟಾದ ಅನುಸರಣೆಗೆ ಒಳಪಟ್ಟಿರುತ್ತವೆ, ಇದರಲ್ಲಿ ಆಯೋಗವು ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನಗಳ ಅನುಸರಣೆಯೂ ಸೇರಿರುತ್ತದೆ.

(ii) ಮೇಲೆ ಪಟ್ಟಿ ಮಾಡಲಾದ  (i) ಅಡಿಯಲ್ಲಿ ವಿನಾಯಿತಿ ನೀಡಲಾದ ಯೋಜನೆಗಳನ್ನು ಹೊರತುಪಡಿಸಿ, ಧೂಳು ಉತ್ಪಾದಿಸುವ/ ವಾಯುಮಾಲಿನ್ಯ ಉಂಟುಮಾಡುವ ಸಿ ಮತ್ತು ಡಿ (ನಿರ್ಮಾಣ ಮತ್ತು ನೆಲಸಮ) ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅವುಗಳು  ಈ ಕೆಳಗಿನಂತಿವೆ:  

a.    ಕೊರೆಯುವ ಮತ್ತು ಡ್ರಿಲ್ಲಿಂಗ್ ಕೆಲಸಗಳನ್ನು ಒಳಗೊಂಡಂತೆ ಭೂ ಉತ್ಖನನ ಮತ್ತು ಭೂಭರ್ತಿ ಕೆಲಸ.
b.    ಫ್ಯಾಬ್ರಿಕೇಶನ್ ಮತ್ತು ವೆಲ್ಡಿಂಗ್ ಕಾರ್ಯಾಚರಣೆಗಳು ಸೇರಿದಂತೆ ಎಲ್ಲಾ ರಾಚನಿಕ ನಿರ್ಮಾಣ ಕಾರ್ಯಗಳು.
c. ನೆಲಸಮ ಕಾರ್ಯಗಳು.
d. ಯೋಜನಾ ನಿವೇಶನಗಳ ಒಳಗೆ ಅಥವಾ ಹೊರಗೆ ನಿರ್ಮಾಣ ಸಾಮಗ್ರಿಗಳನ್ನು ಲೋಡ್ ಮಾಡುವುದು ಮತ್ತು ಅನ್ ಲೋಡ್ ಮಾಡುವುದು.
e.    ಹಾರುಬೂದಿ ಸೇರಿದಂತೆ ಕಚ್ಚಾವಸ್ತುಗಳನ್ನು ಮಾನವ ಸಂಪನ್ಮೂಲ ಬಳಸಿ  ಅಥವಾ ಕನ್ವೇಯರ್ ಬೆಲ್ಟ್ ಗಳ ಮೂಲಕ ವರ್ಗಾಯಿಸುವುದು.
f. ಮಣ್ಣಿನ ರಸ್ತೆಗಳಲ್ಲಿ ವಾಹನಗಳ ಓಡಾಟ.
g.ಕಾಂಕ್ರೀಟ್ ತಯಾರಿಸುವ ಸ್ಥಾವರಗಳ  (ಬ್ಯಾಚಿಂಗ್ ಪ್ಲಾಂಟ್) ಕಾರ್ಯಾಚರಣೆ.
h.    ತೆರೆದ ಕಂದಕ ವ್ಯವಸ್ಥೆಯ ಮೂಲಕ ಕೊಳಚೆ ಸಾಗಿಸುವ  ಮಾರ್ಗ, ಕೊಳವೆ ಮಾರ್ಗ, ಒಳಚರಂಡಿ ಕಾಮಗಾರಿ ಮತ್ತು ವಿದ್ಯುತ್ ಕೇಬಲ್ ಗಳನ್ನು ಹಾಕುವುದು.
a.    ಟೈಲ್ಸ್, ಕಲ್ಲುಗಳು ಮತ್ತು ಇತರ ಫ್ಲೋರಿಂಗ್ (ನೆಲಕ್ಕೆ ಅಳವಡಿಸುವ)ವಸ್ತುಗಳನ್ನು ಕತ್ತರಿಸುವುದು ಮತ್ತು ಅಳವಡಿಸುವುದು
j. ಗ್ರೈಂಡಿಂಗ್ ಚಟುವಟಿಕೆಗಳು.
k. ರಾಶಿ ಹಾಕುವಿಕೆ, ಗುಡ್ಡೆ ಹಾಕುವಿಕೆ
xx. ವಾಟರ್ ಪ್ರೂಫಿಂಗ್ ಕೆಲಸ.
ಪಾದಚಾರಿ ಮಾರ್ಗಗಳು (ಫುಟ್ ಪಾತ್)/ ಪಾಥ್ ವೇಗಳು ಮತ್ತು ಮಧ್ಯದ ಅಂಚುಗಳು ಇತ್ಯಾದಿಗಳ ನೆಲಗಟ್ಟು  ಮಾಡುವುದು ಸೇರಿದಂತೆ ರಸ್ತೆ ನಿರ್ಮಾಣ/ ರಿಪೇರಿ ಕಾರ್ಯಗಳು.
(iii) ಎನ್ಸಿಆರ್ ನಲ್ಲಿನ ಎಲ್ಲಾ ನಿರ್ಮಾಣ ಯೋಜನೆಗಳಿಗೆ, ಪ್ಲಂಬಿಂಗ್ ಕೆಲಸಗಳು, ಒಳಾಂಗಣ ಅಲಂಕಾರ, ಎಲೆಕ್ಟ್ರಿಕಲ್ ಕೆಲಸಗಳು ಮತ್ತು ಮರಗೆಲಸಕ್ಕೆ ಸಂಬಂಧಿಸಿದ ಕೆಲಸಗಳಂತಹ ಮಾಲಿನ್ಯಕಾರಕವಲ್ಲದ / ಧೂಳು ಉತ್ಪಾದಿಸದ  ಚಟುವಟಿಕೆಗಳನ್ನು ಮುಂದುವರಿಸಲು ಅನುಮತಿಸಲಾಗುತ್ತದೆ.

5. ಕೈಗಾರಿಕಾ ಕಾರ್ಯಾಚರಣೆಗಳು
a.    ಪಿ.ಎನ್.ಜಿ ಮೂಲಸೌಕರ್ಯ ಮತ್ತು ಪೂರೈಕೆಯನ್ನು ಹೊಂದಿರುವ ಕೈಗಾರಿಕಾ ಪ್ರದೇಶಗಳಿಗೆ:
ಎನ್.ಸಿ.ಆರ್.ನಲ್ಲಿ ( NCR ) ಅನುಮೋದಿತ ಇಂಧನಗಳ ಪ್ರಮಾಣಿತ ಪಟ್ಟಿಯಲ್ಲಿರುವ ಇಂಧನಗಳನ್ನು ಬಳಸದೆ ಕಾರ್ಯನಿರ್ವಹಿಸುವ  ಕೈಗಾರಿಕೆಗಳು/ ಕಾರ್ಯಾಚರಣೆಗಳನ್ನು ಮುಚ್ಚುವ / ನಿಷೇಧಿಸುವ ನಿರ್ಧಾರವನ್ನು  ಕಡ್ಡಾಯವಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. 
b.    ಪಿ.ಎನ್.ಜಿ  ಮೂಲಸೌಕರ್ಯ ಮತ್ತು ಪೂರೈಕೆಯನ್ನು ಹೊಂದಿರದ ಕೈಗಾರಿಕಾ ಪ್ರದೇಶಗಳಿಗೆ:
ಎನ್.ಸಿ.ಆರ್. ನಲ್ಲಿ   ಅನುಮೋದಿತ ಇಂಧನಗಳ ಪ್ರಮಾಣಿತ ಪಟ್ಟಿಯ ಪ್ರಕಾರ ಯಾವುದೇ ಇಂಧನಗಳನ್ನು ಬಳಸದ ಕೈಗಾರಿಕೆಗಳ ಕಾರ್ಯಾಚರಣೆಗಳನ್ನು ನಿಯಂತ್ರಿಸುವುದು, ಮತ್ತು  ಈ ಕೆಳಗಿನಂತೆ ವಾರಕ್ಕೆ ಗರಿಷ್ಠ 5 ದಿನಗಳು ಮಾತ್ರ (31.12.2022 ರವರೆಗೆ) ಕಾರ್ಯನಿರ್ವಹಿಸಲು ಅವಕಾಶ ನೀಡುವುದು.
(i) ಕಾಗದ ಮತ್ತು ತಿರುಳು ಸಂಸ್ಕರಣೆ, ಡಿಸ್ಟಿಲರಿಗಳು ಮತ್ತು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು - ಶನಿವಾರ ಮತ್ತು ಭಾನುವಾರಗಳಲ್ಲಿ ಕಾರ್ಯಾಚರಿಸುವಂತಿಲ್ಲ
(ii) ಭತ್ತ/ ಅಕ್ಕಿ ಸಂಸ್ಕರಣಾ ಘಟಕಗಳು - ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಿಸುವಂತಿಲ್ಲ.
(iii) ಬಟ್ಟೆ/ ಉಡುಪು ತಯಾರಿಕಾ ಮತ್ತು ಬಣ್ಣ ಹಾಕುವ (ಗಾರ್ಮೆಂಟ್ಸ್ ಮತ್ತು ಡೈಯಿಂಗ್ )ಪ್ರಕ್ರಿಯೆಗಳು - ಬುಧವಾರ ಮತ್ತು ಗುರುವಾರದಂದು ನಿಷ್ಕ್ರಿಯವಾಗಿರಬೇಕು.
(iv) ಮೇಲೆ ನಮೂದಿಸಿದ ವರ್ಗಗಳಲ್ಲಿ ಸೇರದ ಇತರ ಕೈಗಾರಿಕೆಗಳು - ಶುಕ್ರವಾರ ಮತ್ತು ಶನಿವಾರಗಳಂದು ನಿಷ್ಕ್ರಿಯವಾಗಿರುತ್ತವೆ.
01.01.2023 ರಿಂದ ಜಾರಿಗೆ ಬರುವಂತೆ, ಎನ್ಸಿಆರ್ ನಲ್ಲಿ ಅನುಮೋದಿತ ಇಂಧನಗಳ ಪ್ರಮಾಣಿತ ಪಟ್ಟಿಯಲ್ಲಿರುವಂತಹ  ಇಂಧನ ಬಳಸಿ ಕಾರ್ಯನಿರ್ವಹಿಸದ ಕೈಗಾರಿಕೆಗಳು / ಕಾರ್ಯಾಚರಣೆಗಳ ಮೇಲೆ ಇಡೀ ಎನ್.ಸಿ.ಆರ್.ವ್ಯಾಪ್ತಿಯಲ್ಲಿ  ಮುಚ್ಚುವಿಕೆ / ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತದೆ. 
ಸೂಚನೆ: ಹಾಲು ಮತ್ತು ಡೈರಿ ಘಟಕಗಳು ಮತ್ತು ಜೀವರಕ್ಷಕ ವೈದ್ಯಕೀಯ ಸಲಕರಣೆಗಳು/ಸಾಧನಗಳು, ಔಷಧಗಳು ಮತ್ತು ಔಷಧಗಳ ತಯಾರಿಕೆಯಲ್ಲಿ ತೊಡಗಿರುವ ಘಟಕಗಳಿಗೆ ಮೇಲಿನ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗುವುದು.
6. NCR ಗಾಗಿ ಅನುಮೋದಿತ ಇಂಧನಗಳ ಪ್ರಮಾಣಿತ ಪಟ್ಟಿಯಲ್ಲಿರುವಂತಹ ಇಂಧನಗಳ ಮೇಲೆ ಕಾರ್ಯನಿರ್ವಹಿಸದ ಇಟ್ಟಿಗೆ ಗೂಡುಗಳು, ಬಿಸಿ ಮಿಶ್ರಣ ಸ್ಥಾವರಗಳನ್ನು ಮುಚ್ಚತಕ್ಕದ್ದು.

7. ಸ್ಟೋನ್ ಕ್ರಷರ್ ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು.

8. ಎನ್.ಸಿ.ಆರ್.ನಲ್ಲಿ  ಗಣಿಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳನ್ನು ನಿಷೇಧಿಸುವುದು / ಮುಚ್ಚುವುದು.

9. ಎನ್.ಸಿ.ಆರ್.ನಲ್ಲಿ  / ಜಿಎನ್ಸಿಟಿಡಿಯಲ್ಲಿನ ರಾಜ್ಯ ಸರ್ಕಾರಗಳು BS III ಪೆಟ್ರೋಲ್ ಮತ್ತು BS IV ಡೀಸೆಲ್  ಬಳಸುವ ಲಘು ಮೋಟಾರು ವಾಹನಗಳ  (LMV) (4 ಚಕ್ರಗಳು) ಮೇಲೆ ನಿರ್ಬಂಧಗಳನ್ನು ವಿಧಿಸಬಹುದು.

ಗ್ರಾಪ್ ನ ಪರಿಷ್ಕೃತ ವೇಳಾಪಟ್ಟಿಯು ಆಯೋಗದ ವೆಬ್ ಸೈಟ್ ನಲ್ಲಿ ಲಭ್ಯವಿದೆ ಮತ್ತು http://caqm.nic.in ಮೂಲಕ ಇದನ್ನು ಪಡೆಯಬಹುದು.

****



(Release ID: 1871895) Visitor Counter : 125


Read this release in: English , Urdu , Hindi , Odia , Telugu