ಪರಿಸರ ಮತ್ತು ಅರಣ್ಯ ಸಚಿವಾಲಯ
ನೈಸರ್ಗಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಆಯೋಜಿಸುತ್ತಿರುವ ಚೀತಾ ಜಾಗೃತಿ ಕಾರ್ಯಕ್ರಮ
Posted On:
28 OCT 2022 6:31PM by PIB Bengaluru
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಧೀನ ಕಚೇರಿಯಾಗಿರುವ ನವದೆಹಲಿಯ ನೈಸರ್ಗಿಕ ಇತಿಹಾಸದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಮಕ್ಕಳ ಮೇಲೆ ವಿಶೇಷ ಗಮನ ಕೇಂದ್ರೀಕರಿಸಿ ಜನಸಾಮಾನ್ಯರಲ್ಲಿ ಪರಿಸರ ಜಾಗೃತಿ ಮೂಡಿಸುವ ಸಮರ್ಪಿತವಾದ ಸಂಸ್ಥೆಯಾಗಿದೆ.
ನವದೆಹಲಿಯ ಎನ್‌ಎಂಎನ್‌ಎಚ್ ಮತ್ತು ಮೈಸೂರು, ಭೋಪಾಲ್, ಭುವನೇಶ್ವರ ಮತ್ತು ಸವಾಯಿ ಮಾಧೋಪುರದಲ್ಲಿನ ತನ್ನ ಪ್ರಾದೇಶಿಕ ವಸ್ತುಸಂಗ್ರಹಾಲಯಗಳೊಂದಿಗೆ ಚೀತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು 2022ರ ಅಕ್ಟೋಬರ್ 2ರಿಂದ ಪ್ರಾರಂಭವಾದ ವಿಶೇಷ ಒಂದು ತಿಂಗಳ ಅಭಿಯಾನವಾಗಿದ್ದು, ಇದು ವನ್ಯಜೀವಿ ಸಪ್ತಾಹದ ಪ್ರಾರಂಭದ ದಿನವಾಗಿದೆ ಮತ್ತು ಇದು 2022 ರ ಅಕ್ಟೋಬರ್ 31ರವರೆಗೆ ಮುಂದುವರಿಯುತ್ತದೆ.
ಪ್ರತಿದಿನ ಶಾಲಾ ಕಾಲೇಜುಗಳ ಸಾವಿರಾರು ಮಕ್ಕಳು ಮತ್ತು ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳಿಗೆ ಭೇಟಿ ನೀಡುವ ಸಂದರ್ಶಕರಿಗೆ ವನ್ಯಜೀವಿ ಸಂರಕ್ಷ ಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೂ ಮೊದಲು ಒಂದು ವಾರದ ಜಾಗೃತಿ ಅಭಿಯಾನ ಚೀತಾದ ಮರು ಪರಿಚಯ (2022ರ ಅಕ್ಟೋಬರ್ 09 ರಿಂದ 2022ರ ಅಕ್ಟೋಬರ್ 17 ರವರೆಗೆ) ವನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಇದರಲ್ಲಿ ಭಾರತದಾದ್ಯಂತ 500 ಕ್ಕೂ ಹೆಚ್ಚು ಶಾಲೆಗಳ 1.5 ಲಕ್ಷ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡಿದ್ದಾರೆ.


****
(Release ID: 1871722)