ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav g20-india-2023

ಬಾಕಿ ಉಳಿದಿರುವ ವಿಷಯಗಳ ವಿಲೇವಾರಿಗಾಗಿ ವಾಣಿಜ್ಯ ಇಲಾಖೆಯು ವಿಶೇಷ ಅಭಿಯಾನ 2.0 ಅನ್ನು ಪ್ರಾರಂಭಿಸುತ್ತದೆ

Posted On: 21 OCT 2022 12:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸ್ವಚ್ಛ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ, 2022 ರ ಅಕ್ಟೋಬರ್‌ 2 ರಿಂದ 31 ರವರೆಗೆ ವಾಣಿಜ್ಯ ಇಲಾಖೆಯಲ್ಲಿ ಬಾಕಿ ಉಳಿದಿರುವ ವಿಷಯಗಳ ವಿಲೇವಾರಿಗಾಗಿ ವಿಶೇಷ ಅಭಿಯಾನ ನಡೆಯುತ್ತಿದೆ. ಈ ಅಭಿಯಾನವನ್ನು ವಾಣಿಜ್ಯ ಇಲಾಖೆ ಮತ್ತು ಲಗತ್ತಿಸಲಾದ / ಅಧೀನ / ಕ್ಷೇತ್ರ ಕಚೇರಿಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾರ್ವಜನಿಕ ಕುಂದುಕೊರತೆಗಳ ಪರಿಣಾಮಕಾರಿ ವಿಲೇವಾರಿ, ಸಂಸತ್‌ ಸದಸ್ಯರ ಉಲ್ಲೇಖಗಳು, ಸಂಸತ್‌ ಭರವಸೆಗಳು, ಸ್ವಚ್ಛತಾ ಅಭಿಯಾನ, ಕಸದ ವಿಲೇವಾರಿ ಮತ್ತು ಕಡತಗಳಿಂದ ಕಳೆ ತೆಗೆಯುವುದು ಈ ಅಭಿಯಾನದ ಪ್ರಮುಖ ಗಮನ ಸೆಳೆಯುವ ಕ್ಷೇತ್ರಗಳಾಗಿವೆ.

ಅಭಿಯಾನದ ಮೊದಲ ಹಂತದಲ್ಲಿ(15.09.2022 ರಿಂದ 30.09.2022 ರವರೆಗೆ) ಬಾಕಿ ಇರುವವರನ್ನು ಗುರುತಿಸಲಾಗಿದೆ. ಈ ಉದ್ದೇಶಕ್ಕಾಗಿ ಮತ್ತು ಸಂಘಟನೆಗಳನ್ನು ಸಂವೇದನಾಶೀಲಗೊಳಿಸಲು, 2022ರ ಸೆಪ್ಟೆಂಬರ್‌ 14 ಮತ್ತು 2022ರ ಸೆಪ್ಟೆಂಬರ್‌ 30 ರಂದು ಸಂಸ್ಥೆಗಳ ಎಲ್ಲಾ ನೋಡಲ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.

ಅಭಿಯಾನದ ಹಂತದಲ್ಲಿ(2022 ರ ಅಕ್ಟೋಬರ್‌ 2ರಿಂದ 31), ಇಲಾಖೆ ಮತ್ತು ಅದರ ಅಧೀನ ಕಚೇರಿ / ಸ್ವಾಯತ್ತ ಸಂಸ್ಥೆಗಳು ಪೂರ್ವಸಿದ್ಧತಾ ಹಂತದಲ್ಲಿ ಗುರುತಿಸಲಾದ ಎಲ್ಲಾ ಉಲ್ಲೇಖಗಳನ್ನು ವಿಲೇವಾರಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಎಸ್‌.ಸಿ.ಡಿ.ಪಿ.ಎಂ ಪೋರ್ಟಲ್‌ ನಲ್ಲಿ ಪ್ರತಿದಿನ ಪ್ರಗತಿಯನ್ನು ಅಪ್‌ ಲೋಡ್‌ ಮಾಡಲಾಗುತ್ತಿದೆ.

ಮುಖ್ಯ ಪರವಾನಗಿ ಪ್ರಾಧಿಕಾರ, ಡಿಜಿಎಫ್‌ಟಿ ದೆಹಲಿ ಒಂದು ಸಭಾಂಗಣವನ್ನು ಗುಜರಿ ವಸ್ತುಗಳನ್ನು ತೆಗೆದುಹಾಕುವ ಮೂಲಕ ಈ ಪ್ರದೇಶದ ವಿವಿಧ ಪ್ರಚಾರ ಸಾಮಗ್ರಿಗಳ ಪ್ರದರ್ಶನವಾಗಿ ಪರಿವರ್ತಿಸಿದೆ.

https://static.pib.gov.in/WriteReadData/userfiles/image/image0018PY5.jpg

2022ರ ಅಕ್ಟೋಬರ್‌ 20 ರವರೆಗೆ ವಾಣಿಜ್ಯ ಇಲಾಖೆ ಮತ್ತು ಅದರ ಸಂಸ್ಥೆಗಳು 73 ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿವೆ. ಸ್ಕ್ರ್ಯಾಪ್‌ (ನಿರುಪಯುಕ್ತ ವಸ್ತುಗಳು) ಗಳ ಹರಾಜಿನಿಂದ 21,53,277/- ರೂ.ಗಳ ಆದಾಯವನ್ನು ಗಳಿಸಲಾಗಿದೆ. 64,249 ವಿದ್ಯುನ್ಮಾನ ಕಡತಗಳ ಪೈಕಿ 29,170 ಕಡತಗಳನ್ನು ಪರಿಶೀಲಿಸಲಾಗಿದ್ದು, 14,560 ಕಡತಗಳನ್ನು ಮುಚ್ಚಲಾಗಿದೆ. 1000 ಕಡತಗಳನ್ನು ಸಂರಕ್ಷ ಣೆಗಾಗಿ ನ್ಯಾಷನಲ್‌ ಆರ್ಕೈವ್‌ ಗೆ ವರ್ಗಾಯಿಸಲಾಗಿದೆ.(Release ID: 1869967) Visitor Counter : 78


Read this release in: English , Urdu , Hindi