ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ ವತಿಯಿಂದ ವಿದ್ಯುತ್ ಉತ್ಪಾದನೆ ಮಾಡಲಿರುವ ʻತೆಹ್‌ಖಂಡ್‌ ತ್ಯಾಜ್ಯದಿಂದ ಇಂಧನ ಘಟಕʼವನ್ನು ಉದ್ಘಾಟಿಸಿದರು


ಸ್ವಚ್ಛತೆಯ ಮೂಲಕ ರಾಜಧಾನಿಯನ್ನು ಕಸ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಇಂದು ನಾವು ಮತ್ತಷ್ಟು ಕೆಲವು ಕ್ರಮಗಳನ್ನು ಕೈಗೊಂಡಿದ್ದೇವೆ

ಕಸದ ಪರ್ವತಗಳು ಕ್ರಮೇಣ ಕಡಿಮೆಯಾಗುತ್ತಿವೆ, ತ್ಯಾಜ್ಯ ವಿಲೇವಾರಿಗಾಗಿ ಅನೇಕ ಘಟಕಗಳನ್ನು ಸ್ಥಾಪಿಸಲಾಗಿದೆ, ಚರಂಡಿ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸಲಾಗಿದೆ ಮತ್ತು ದೇಶಾದ್ಯಂತ ತ್ಯಾಜ್ಯ ಸಂಗ್ರಹಣೆಗಾಗಿ ವೈಜ್ಞಾನಿಕ ಜಾಲವನ್ನು ಸಹ ಸ್ಥಾಪಿಸಲಾಗಿದೆ

ಈ ಘಟಕದ ಕಾರ್ಯಾರಂಭದೊಂದಿಗೆ, ದೆಹಲಿಯಲ್ಲಿ ಪ್ರತಿದಿನ ಕಸ ವಿಲೇವಾರಿಯ ಸಾಮರ್ಥ್ಯವು 2,000 ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗುತ್ತದೆ ಮತ್ತು ಈ ಘಟಕವು 25 ಮೆಗಾವ್ಯಾಟ್ ಹಸಿರು ಶಕ್ತಿಯನ್ನು ಸಹ ಉತ್ಪಾದಿಸುತ್ತದೆ

ಉತ್ತಮ ಆಡಳಿತ ಮತ್ತು ಸುವ್ಯವಸ್ಥೆಗಾಗಿ ಹಾಗೂ ನಗರಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮೋದಿ ಅವರು 2014ರಲ್ಲಿ ʻನಗರಾಭಿವೃದ್ಧಿ ನೀತಿʼಯನ್ನು ಹೊರತಂದರು, ಇದರಿಂದಾಗಿ ಇಂದು ಭಾರತದಾದ್ಯಂತದ ನಗರಗಳು ಬದಲಾಗುತ್ತಿವೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರಾಭಿವೃದ್ಧಿ ನೀತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ ಅವುಗಳಲ್ಲಿ ಮೊದಲನೆಯದು ನಗರಗಳನ್ನು ಆಧುನೀಕರಿಸುವ ʻಸ್ಮಾರ್ಟ್ ಸಿಟಿ ಮಿಷನ್ʼ, ʻಇ-ಆಡಳಿತʼ, ʻಇಂಟಿಗ್ರೇಟೆಡ್ ಕಮಾಂಡ್ ಮತ್ತು ʻಕಂಟ್ರೋಲ್ ಸಿಸ್ಟಮ್ʼ ಹಾಗೂ ʻಸಿಸಿಟಿವಿ ಕ್ಯಾಮೆರಾಗಳ ಜಾಲದ ರಚನೆʼ

ಎರಡನೆಯದಾಗ

Posted On: 20 OCT 2022 7:27PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ʻತೆಹ್‌ಖಂಡ್‌ ತ್ಯಾಜ್ಯದಿಂದ ಇಂಧನ ಘಟಕʼವನ್ನು ಉದ್ಘಾಟಿಸಿದರು. ಈ ಘಟಕವು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್‌ನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡಲಿದೆ. ಈ ಸಂದರ್ಭದಲ್ಲಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

https://static.pib.gov.in/WriteReadData/userfiles/image/image0010R31.jpg

ಸ್ವಚ್ಚತೆಯ ಮೂಲಕ ರಾಜಧಾನಿಯನ್ನು ಕಸ ಮುಕ್ತವಾಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಂಕಲ್ಪ ಕೈಗೊಂಡಿದ್ದಾರೆ. ಈ ಸಂಕಲ್ಪವನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಇಂದಿನ ದಿನವು ರಾಷ್ಟ್ರ ರಾಜಧಾನಿ ಮತ್ತು ಈ ಪ್ರದೇಶಕ್ಕೆ ದೊರೆತ ದೊಡ್ಡ ಅವಕಾಶವಾಗಿದೆ ಎಂದು ಗೃಹ ಸಚಿವರು ತಮ್ಮ ಭಾಷಣದಲ್ಲಿ ಹೇಳಿದರು. ಈ ಘಟಕವನ್ನು ಪ್ರಾರಂಭಿಸಿದ ನಂತರ, ದೆಹಲಿ ದಿನಕ್ಕೆ ಸುಮಾರು 7,000 ಮೆಟ್ರಿಕ್ ಟನ್ ಕಸವನ್ನು ವಿಲೇವಾರಿ ಮಾಡುವ ಸಾಮರ್ಥ್ಯವನ್ನು ಹೊಂದಲಿದೆ ಎಂದು ಅವರು ಹೇಳಿದರು. ಇಂದಿನಿಂದ ಪ್ರಾರಂಭವಾಗುವ ಈ ಘಟಕದಿಂದ ಪ್ರತಿದಿನ 2,000 ಮೆಟ್ರಿಕ್ ಟನ್ ತ್ಯಾಜ್ಯವನ್ನು ಬೇರ್ಪಡಿಸಲಾಗುವುದು, ಸುಡಲಾಗುವುದು ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಬಳಸಲಾಗುವುದು ಎಂದು ಶ್ರೀ ಶಾ ಹೇಳಿದರು. ಈ ಘಟಕದಿಂದ ಸುಮಾರು 25 ಮೆಗಾವ್ಯಾಟ್ ಹಸಿರು ಇಂಧನವನ್ನು ಸಹ ಉತ್ಪಾದಿಸಲಾಗುವುದು ಎಂದರು.

https://static.pib.gov.in/WriteReadData/userfiles/image/image002LDMV.jpg

2025ರ ಆಗಸ್ಟ್ ವೇಳೆಗೆ ನರೇಲಾದಲ್ಲಿ 3,000 ಮೆಟ್ರಿಕ್ ಟನ್ ʻತ್ಯಾಜ್ಯದಿಂದ ಇಂಧನ ಘಟಕʼ ನಿರ್ಮಾಣ ಪೂರ್ಣವಾಗಲಿದೆ. ಅದು ಪೂರ್ಣಗೊಂಡ ಬಳಿಕ ದೆಹಲಿಯಲ್ಲಿ ದೈನಂದಿನ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀ ಅಮಿತ್ ಶಾ ಹೇಳಿದರು. ಈ ಘಟಕದ ಜೊತೆಗೆ, 300 ಮೆಟ್ರಿಕ್ ಟನ್ ಜೈವಿಕ ಸಿಎನ್‌ಜಿ ಸ್ಥಾವರ, ದಿನಕ್ಕೆ 200 ಮೆಟ್ರಿಕ್ ಟನ್ ಸಾಮರ್ಥ್ಯದ 3 ಜೈವಿಕ ಅನಿಲ ಘಟಕಗಳು ಮತ್ತು ದಿನಕ್ಕೆ 175 ಮೆಟ್ರಿಕ್ ಟನ್ ಸಾಮರ್ಥ್ಯದ 8 ಮೆಟಲ್ ರಿಕವರಿ ಸೌಲಭ್ಯಗಳು ಓಖ್ಲಾದಲ್ಲಿ ತಲೆ ಎತ್ತಲಿವೆ ಎಂದು ಅವರು ಹೇಳಿದರು. ದೆಹಲಿಯನ್ನು ಕಸಮುಕ್ತಗೊಳಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ ನೀಡಿದ ಗುರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಶ್ರೀ ಶಾ ಹೇಳಿದರು.

https://static.pib.gov.in/WriteReadData/userfiles/image/image0036RZT.jpg

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತ, ಸುವ್ಯವಸ್ಥೆ ಮತ್ತು ನಗರಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೂಪಿಸಿದ ನಗರಾಭಿವೃದ್ಧಿ ನೀತಿಯು ಭಾರತದಾದ್ಯಂತ ನಗರಗಳಲ್ಲಿ ಬದಲಾವಣೆಗಳನ್ನು ತರುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಉಲ್ಲೇಖಿಸಿದರು. ಶ್ರೀ ಮೋದಿ ಅವರು ನಗರಾಭಿವೃದ್ಧಿ ನೀತಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ ಎಂದು ಅವರು ವಿವರಿಸಿದರು. ಮೊದಲನೆಯದಾಗಿ ನಗರಗಳನ್ನು ಆಧುನೀಕರಿಸುವ ʻಸ್ಮಾರ್ಟ್ ಸಿಟಿ ಮಿಷನ್ʼ, ʻಇ-ಆಡಳಿತʼ, ʻಇಂಟಿಗ್ರೇಟೆಡ್ ಕಮಾಂಡ್ ಮತ್ತು ʻಕಂಟ್ರೋಲ್ ಸಿಸ್ಟಮ್ʼ ಹಾಗೂ ʻಸಿಸಿಟಿವಿ ಕ್ಯಾಮೆರಾಗಳ ಜಾಲದ ರಚನೆʼ

ಎರಡನೆಯದಾಗಿ, ನಗರಗಳಲ್ಲಿ ಮೂಲಸೌಕರ್ಯಗಳನ್ನು ಆಧುನೀಕರಿಸಲು ʻಅಮೃತ್ ಮಿಷನ್ʼ, ʻರೇರಾ ಕಾಯ್ದೆʼ, 25ಕ್ಕೂ ಹೆಚ್ಚು ನಗರಗಳಲ್ಲಿ ಮೆಟ್ರೋ ಜಾಲ ಮತ್ತು ಎಲೆಕ್ಟ್ರಿಕ್ ಬಸ್‌ಗಳು. ಮೂರನೆಯದೆಂದರೆ ನಗರಗಳಲ್ಲಿ ವಾಸಿಸುವವರ, ವಿಶೇಷವಾಗಿ ಕೊಳೆಗೇರಿ ನಿವಾಸಿಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗುವಂತೆ ನಗರಗಳನ್ನು ಸ್ವಚ್ಚಗೊಳಿಸುವುದು ಎಂದು ಸಚಿವರು ವಿವರಿಸಿದರು. ಶೌಚಾಲಯಗಳ ನಿರ್ಮಾಣ, ತ್ಯಾಜ್ಯದಿಂದ ಸ್ವಚ್ಛ ಇಂಧನ ಘಟಕಗಳು, ಸೌರ ಮೇಲ್ಛಾವಣಿಗಳು ಮತ್ತು ಎಲ್ಇಡಿ ದೀಪಗಳ ಮುಂತಾದ ಕ್ರಮಗಳ ಮೂಲಕ ನಾವು ಈ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದೇವೆ. ಇದರ ಜೊತೆಗೆ, ʻಪ್ರಧಾನ ಮಂತ್ರಿ ಶಹರಿ ಆವಾಸ್ ಯೋಜನೆʼ, ʻಪ್ರಧಾನ ಮಂತ್ರಿ ಸ್ವನಿಧಿ ಯೋಜನೆʼ ಮತ್ತು ಡಿಜಿಟಲ್ ವಹಿವಾಟುಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

https://static.pib.gov.in/WriteReadData/userfiles/image/image004GZB6.jpg

2014ರ ಆಗಸ್ಟ್ 15ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲೆ ಚಾಲನೆ ನೀಡಿದ ಸ್ವಚ್ಛತಾ ಅಭಿಯಾನವು ದೇಶಾದ್ಯಂತ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.

https://static.pib.gov.in/WriteReadData/userfiles/image/image005PG8J.jpg

ಅನೇಕ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಿರುವುದರಿಂದ ಮತ್ತು ಚರಂಡಿ ವ್ಯವಸ್ಥೆಗಳನ್ನು ಸುವ್ಯವಸ್ಥಿತಗೊಳಿಸಿರುವುದರಿಂದ ಕಸದ ಪರ್ವತಗಳು ಕ್ರಮೇಣ ಕಡಿಮೆಯಾಗುತ್ತಿವೆ ಎಂದು ಅವರು ಹೇಳಿದರು. ಕಾಶ್ಮೀರದಾದ್ಯಂತ ಕನ್ಯಾಕುಮಾರಿಯವರೆಗೆ ಮತ್ತು ಅಸ್ಸಾಂನಿಂದ ಗುಜರಾತ್‌ವರೆಗೆ ಪ್ರತಿಯೊಂದು ಗ್ರಾಮ ಮತ್ತು ನಗರದಿಂದ ತ್ಯಾಜ್ಯವನ್ನು ಸಂಗ್ರಹಿಸಲು ವೈಜ್ಞಾನಿಕ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧಿಯವರು ಭಾರತಕ್ಕೆ ಸ್ವಚ್ಚತೆಯ ಸಂದೇಶವನ್ನು ನೀಡಿದ್ದರು, ಆದರೆ 70ವರ್ಷಗಳ ಕಾಲ ಪ್ರತಿಯೊಬ್ಬರೂ ಮಹಾತ್ಮರ ಸಂದೇಶವನ್ನು ಮರೆತಿದ್ದರು. ಆದರೆ 2014ರಿಂದ, ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಸ್ವಚ್ಛತೆಯ ಸಂದೇಶ ತಳಮಟ್ಟದವರೆಗೆ ತಲುಪುವುದನ್ನು ಖಾತರಿಪಡಿಸಿದ್ದಾರೆ. ಇಂದು ಒಂದು ಮಗು ಕೂಡ ಕಸವನ್ನು ಕಸದ ಬುಟ್ಟಿಗೆ ಮಾತ್ರ ಎಸೆಯುವಂತೆ ಇತರರನ್ನು ಕೋರುತ್ತದೆ ಎಂದರೆ ಅದಕ್ಕೆ ಸ್ವಚ್ಚತಾ ಅಭಿಯಾನದ ಯಶಸ್ಸು ಕಾರಣ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವ ಪೀಳಿಗೆಯಲ್ಲಿ ಸ್ವಚ್ಛತೆಯ ಸಂಸ್ಕೃತಿಯನ್ನು ಬೆಳೆಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಶುಚಿತ್ವವನ್ನು ಜನಾಂದೋಲನವನ್ನಾಗಿ ಮಾಡದ ಹೊರತು, ಫಲಿತಾಂಶಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

https://static.pib.gov.in/WriteReadData/userfiles/image/image006ZKEP.jpg

ಪ್ರಧಾನಿ ನರೇಂದ್ರ ಮೋದಿ ಅವರು ಸೃಷ್ಟಿಸಿದ ಮೂಲಸೌಕರ್ಯಗಳ ನೆರವಿನಿಂದ ದೆಹಲಿಯು ವಿಶ್ವದ ಅತ್ಯುತ್ತಮ ರಾಜಧಾನಿಯಾಗಿ ಹೊರಹೊಮ್ಮುವಂತೆ ಮಾಡಲು ಅಗತ್ಯ ಪರಿಸರ ವ್ಯವಸ್ಥೆಯನ್ನು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಸೃಷ್ಟಿಸಲು ಅನುವಾಗಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಜಾಹೀರಾತುಗಳು ಅಭಿವೃದ್ಧಿಗೆ ಕಾರಣವಾಗುತ್ತವೆ ಮತ್ತು ಸಂದರ್ಶನಗಳು ಜನರನ್ನು ಗೊಂದಲಕ್ಕೀಡುಮಾಡುತ್ತವೆ ಎಂದು ದೆಹಲಿ ಸರಕಾರ ನಂಬುತ್ತದೆ. ಅವರು ದೆಹಲಿಯನ್ನು ʻಎಎಪಿʼ ಅವಲಂಬಿಯನ್ನಾಗಿ ಮಾಡಲು ಬಯಸುತ್ತಾರೆ. ಆದರೆ ನಾವು ದೆಹಲಿಯನ್ನು ಸ್ವಾವಲಂಬಿಯನ್ನಾಗಿ ಮಾಡಲು ಬಯಸುತ್ತೇವೆ ಎಂದು ಅವರು ಹೇಳಿದರು. ದೆಹಲಿ ಸರಕಾರವು ಕೋಟ್ಯಂತರ ರೂಪಾಯಿಗಳ ಅನುದಾನವನ್ನು ನಿಲ್ಲಿಸುವ ಮೂಲಕ ಮೂರು ಮಹಾನಗರ ಪಾಲಿಕೆಗಳಿಗೆ ಅನ್ಯಾಯ ಮಾಡುತ್ತಿದೆ ಮತ್ತು ಕೆಟ್ಟ ರೀತಿಯಲ್ಲಿ ಅವುಗಳನ್ನು ನಡೆಸಿಕೊಳ್ಳುತ್ತಿದೆ. ಆದರೆ ಕೇಂದ್ರದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, ದೆಹಲಿಯ ಅಭಿವೃದ್ಧಿಯನ್ನು ನಿಲ್ಲಿಸಲು ನಾವು ಬಿಡುವುದಿಲ್ಲ ಎಂದು ಶ್ರೀ ಶಾ ಹೇಳಿದರು.

ʻಎಂಸಿಡಿʼ ಅನೇಕ ಮೇಲ್ಸೇತುವೆಗಳು, ರಸ್ತೆಗಳು, ಸುರಂಗ ಮಾರ್ಗಗಳು, ತ್ಯಾಜ್ಯದಿಂದ ಇಂಧನ ಘಟಕಗಳು, 150ಟನ್ ಸ್ಕ್ರ್ಯಾಪ್‌ನಿಂದ ಉದ್ಯಾನವನಗಳನ್ನು ನಿರ್ಮಿಸಿದೆ ಮತ್ತು ತ್ಯಾಜ್ಯವನ್ನು ಚಿನ್ನವಾಗಿ ಪರಿವರ್ತಿಸಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸೌರವಿದ್ಯುತ್ ʻಎಲ್ಇಡಿʼಗೆ ಸಬ್ಸಿಡಿಯನ್ನು ಸಹ ಒದಗಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರವು ಈ ಸಬ್ಸಿಡಿಯನ್ನು ಒದಗಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. ʻಜಾಹೀರಾತಿನ ರಾಜಕೀಯ ಅಥವಾ ಅಭಿವೃದ್ಧಿಯ ರಾಜಕೀಯʼ; ʻಪ್ರಚಾರದ ರಾಜಕೀಯ ಅಥವಾ ಬದಲಾವಣೆಯ ರಾಜಕೀಯʼ; ʻಭ್ರಷ್ಟಾಚಾರದ ರಾಜಕೀಯ ಅಥವಾ ಪಾರದರ್ಶಕತೆಯ ರಾಜಕೀಯʼ ಇವುಗಳಲ್ಲಿ ಯಾವುದು ಬೇಕು ಎಂಬುದನ್ನು ದೆಹಲಿಯ ಜನರು ನಿರ್ಧರಿಸಬೇಕು ಎಂದು ಶ್ರೀ ಶಾ ಕರೆ ನೀಡಿದರು.

2025ಕ್ಕೆ ಮೊದಲು ʻಸ್ವಚ್ಛ ದೆಹಲಿʼಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಂದು ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದ್ದೇವೆ. ದೆಹಲಿಯ ದೈನಂದಿನ ತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ʻಎಂಸಿಡಿʼ ಪೂರ್ಣಗೊಳಿಸುತ್ತದೆ. ಇದರಿಂದ ಕಸದ ಪರ್ವತಗಳು ಕಣ್ಮರೆಯಾಗುತ್ತವೆ ಮತ್ತು ದೆಹಲಿ ಇನ್ನಷ್ಟು ಸುಂದರವಾಗುತ್ತದೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

******

 



(Release ID: 1869912) Visitor Counter : 148