ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಅರ್ಹ ಅರ್ಜಿದಾರರಿಗೆ ಪೇಟೆಂಟ್  ನಿರಾಕರಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಕ್ಷ್ಮತೆ ಕಾಯ್ದುಕೊಳ್ಳಬೇಕು: ಶ್ರೀ ಪಿಯೂಶ್ ಗೋಯಲ್


ನಮ್ಮ ಐಪಿ ಪರಿಸರ ವ್ಯವಸ್ಥೆಯಲ್ಲಿ ನಾವು ಉನ್ನತ ಮಟ್ಟದ ಪಾರದರ್ಶಕತೆ, ಸಮಗ್ರತೆ, ದಕ್ಷತೆ ಮತ್ತು ವೇಗವನ್ನು ತರಬೇಕಾಗಿದೆ : ಶ್ರೀ ಪಿಯೂಶ್ ಗೋಯಲ್

ಐಪಿ ಪ್ರಕ್ರಿಯೆಗಳನ್ನು ಮುಂದೂಡುವುದು, ಪದೇ ಪದೇ ಮಾಡುವ ಮನವಿಗಳಿಗೆ ಸ್ಪಂದಿಸದೇ ಇರುವುದನ್ನು ಖಚಿತಪಡಿಸಿಕೊಳ್ಳಲು ನಿಯಮಗಳಿಗೆ ತಿದ್ದುಪಡಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ : ಶ್ರೀ ಪಿಯೂಶ್ ಗೋಯಲ್

2021- 22 ನೇ ಸಾಲಿನ ಐಪಿ ಪ್ರಶಸ್ತಿಗಳನ್ನು ವಾಣಿಜ್ಯ ಸಚಿವರು ಪ್ರದಾನ ಮಾಡಿದರು

Posted On: 15 OCT 2022 6:34PM by PIB Bengaluru

ಅರ್ಹ ಅರ್ಜಿದಾರರಿಗೆ ಪೇಟೆಂಟ್ ನೀಡಿಕೆ ನಿರಾಕರಿಸುವುದಿಲ್ಲ ಎಂಬುದನ್ನು  ಖಚಿತಪಡಿಸಿಕೊಳ್ಳಲು ಐಪಿ ವೃತ್ತಿಪರರು ತಮ್ಮ ಕೆಲಸದಲ್ಲಿ ಸೂಕ್ಷ್ಮತೆ ಕಾಯ್ದುಕೊಳ್ಳಬೇಕು. ಪೇಟೆಂಟ್ ನಿರಾಕರಣೆಯಿಂದ ಉತ್ತಮ ಕೆಲಸಕ್ಕೆ ಅಡ್ಡಿಯಾಗಲಿದ್ದು. ಕಠಿಣ ಪರಿಶ್ರಮದ ನಾವೀನ್ಯಗಳು ನಿಜವಾಗಿಯೂ ಅವರ ರಕ್ಷಣೆಗೆ ಅರ್ಹವಾಗಿವೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ, ಜವಳಿ ಸಚಿವ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ.

ನವದಹಲಿಯಲ್ಲಿಂದು “ಜ್ಞಾನಾಧಾರಿತ ಆರ್ಥಿಕತೆಯ ಬೆಳವಣಿಗೆಗೆ ಐಪಿ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆಗೊಳಿಸುವ” ಕುರಿತಾದ ರಾಷ್ಟ್ರೀಯ ಬೌದ್ಧಕಿ ಸಮ್ಮೇಳನ 2022 ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  

ನಾವೀನ್ಯದ ಲಕ್ಷಣವೇ ಮನುಕುಲವನ್ನು ಸದಾಕಾಲ ಮುಂದಕ್ಕೆ ಕರೆದೊಯ್ಯುವುದು ಅದೇ ಅದರ ವಿಶೇಷತೆಯಾಗಿದೆ ಮತ್ತು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶವಾಗಿದೆ. ನಾವೀನ್ಯವು ನಮಗೆ ಮುಂದಿನ ದಿನಗಳಲ್ಲಿ ಉಳಿಯಲು ನೆರವಾಗುತ್ತದೆ ಎಂದು ಶ್ರೀ ಗೋಯಲ್ ಹೇಳಿದರು.

 

https://static.pib.gov.in/WriteReadData/userfiles/image/image001ASYZ.jpg

 

ನಾವೀನ್ಯ ದೈನಂದಿನ ಸಮಸ್ಯೆಗಳಿಗೆ ಸರಳ ಪರಿಹಾರ ಕಂಡುಕೊಳ್ಳುವುದರ ಹೊರತುಪಡಿಸಿ ಬೇರೆ ಏನೂ ಅಲ್ಲ. ಹೊಸತನದ ಶೋಧ ಎಂಬುದು ವಿಷಯಗಳನ್ನು ಉತ್ತಮಗೊಳಿಸುವ, ಚತುರತೆ, ವೇಗ, ಹೆಚ್ಚು ದಕ್ಷತೆ, ಪರಿಣಾಮಕಾರಿ ವೆಚ್ಚ ಮತ್ತು ಸುಸ್ಥಿರತೆಯನ್ನು ತರಲಿದೆ. ಈ ದೃಷ್ಟಿಕೋನದಲ್ಲಿ ಕಡಿಮೆ ವೆಚ್ಚದಲ್ಲಿ ಬೈಸಿಕಲ್ ರಿಕ್ಷಾಗಳನ್ನು ಉನ್ನತ ತಂತ್ರಜ್ಞಾನದ ದಕ್ಷತೆಯೊಂದಿಗೆ  ಸಂಚರಿಸುವಂತೆ ಮಾಡಬೇಕು ಮತ್ತು ರಿಕ್ಷಾಗಳ ಮೂಲಕ ತಮ್ಮ ಜೀವನ ಮಾಡುವವರ ಬದುಕನ್ನು ಹೆಚ್ಚು ಸುಲಭಗೊಳಿಸಲು ಸಾಧ್ಯವಾಗಬೇಕು ಎಂದು ಆಶಿಸಿದರು.  

ಬೌದ್ಧಿಕ ಆಸ್ತಿ ರಂಗದಲ್ಲಿ ಭಾರತ ಮೊದಲ ಸ್ಥಾನಕ್ಕೆ ಬರಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. ಪೇಟೆಂಟ್ ಕಚೇರಿಗಳು ಕಳೆದ ಎರಡು ವರ್ಷಗಳಲ್ಲಿ ತಮ್ಮನ್ನು ತಾವು ನೈಜವಾಗಿ ಆತ್ಮಾವಲೋಕನ ಮಾಡಿಕೊಂಡಿವೆ, ಆದರೂ ಈ ನಿಟ್ಟಿನಲ್ಲಿ ಹೆಚ್ಚಿನ ಸುಧಾರಣೆಗಳ ಅಗತ್ಯವಿದೆ ಎಂದು ಸಚಿವರು ಪ್ರತಿಪಾದಿಸಿದರು.

ಪೇಟೆಂಟ್ ಪರಿಸರ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮಧ್ಯವರ್ತಿಗಳು ಮತ್ತು ಅರ್ಜಿದಾರರು ಕಾಗದಗಳನ್ನು ಸಿದ್ಧಪಡಿಸುವ ವ್ಯವಸ್ಥೆಯಲ್ಲಿ ಸಹಾಯ ಮಾಡುವ ವಿಶ್ವಾಸವಿದೆ. ಈ ಗುರಿ ಸಾಧನೆಗೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಅರ್ಜಿದಾರರು ಮತ್ತು ಪಾಲುದಾರರೊಂದಿಗೆ ಪೇಟೆಂಟ್ ಕಚೇರಿಗಳು ದೈನಂದಿನ, ಮುಕ್ತ ಸಂವಾದಗಳನ್ನು ನಡೆಸಬೇಕು. ಈ ವಿಡಿಯೋ ಕಾನ್ಪರೆನ್ಸ್ ಗಳು ಕುಂದುಕೊರತೆಗಳನ್ನು ನಿವಾರಿಸಲು ಮತ್ತು ಸುಧಾರಣೆಗಾಗಿ ಸಲಹೆಗಳನ್ನು ಸಂಗ್ರಹಿಸಲು ವೇದಿಕೆಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

 

https://static.pib.gov.in/WriteReadData/userfiles/image/image0026MM1.jpg

 

ಅರ್ಜಿದಾರರಿಗೆ ಕಚೇರಿಗಳಿಗೆ ಬರುವಂತೆ ಹೇಳಲೇಬಾರದು ಎಂದು ಶ್ರೀ ಗೋಯಲ್ ಒತ್ತಿ ಹೇಳಿದರು. ಪೇಟೆಂಟ್ ಗಾಗಿ ಸಲ್ಲಿಸುವ ಅರ್ಜಿಗಳು, ಅರ್ಜಿ ತುಂಬುವ ಮತ್ತು ಅನುಮತಿ ನೀಡುವ ಪ್ರಕ್ರಿಯೆ ಆದಷ್ಟು ಬೇಗ ಆನ್ ಲೈನ್ ವ್ಯವಸ್ಥೆಗೆ ಒಳಪಡಬೇಕು. ಸರ್ಕಾರ ಈಗಾಗಲೇ ಕಾನೂನಿನಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆಯಲ್ಲಿದೆ ಮತ್ತು ಸಲಹೆಗಳನ್ನು ಕಳುಹಿಸಿದರೆ ಅವುಗಳನ್ನು ಎಚ್ಚರಿಕೆಯಿಂದ ಪರಿಗಣಿಸಲಾಗುವುದು, ವಾಸ್ತವಿಕ ನೆಲೆಗಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಪಾಲುದಾರರನ್ನು ಸಚಿವರು ಕೋರಿದರು.

 

ಪೇಟೆಂಟ್ ಕಚೇರಿಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗುತ್ತಿದೆ. ಟ್ರೇಡ್ ಮಾರ್ಕ್ ಮತ್ತು ಪೇಟೆಂಟ್ ಗಳಿಗೆ ಕಾಲಮಿತಿಯೊಳಗೆ ಅನುಮತಿ ನೀಡುವುದನ್ನು ತಪ್ಪಿಸಲಾಗದು. ತಂತ್ರಜ್ಞಾನವನ್ನು ಆದಷ್ಟು ಉತ್ತಮವಾಗಿ ಬಳಸಬೇಕು ಮತ್ತು ಎಲ್ಲ ಕಡತಗಳು ಡಿಜಿಟಲೀಕರಣಗೊಳ್ಳಬೇಕು ಹಾಗೂ ಬೌದ್ಧಿಕ ಆಸ್ತಿ ಕಚೇರಿಗಳನ್ನು ಇನ್ನಷ್ಟು ಚತುರವಾಗಿ ಅಭಿವೃದ್ಧಿಪಡಿಸುವಂತೆ ಅವರು ಕರೆ ನೀಡಿದರು.  

 

ಸರ್ಕಾರ ನಿಯಂತ್ರಕರ ಸಂಖ್ಯೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ ಮತ್ತು ಹಿಂದಿನ ನಿಯಂತ್ರಕರು ಮತ್ತು ನಿವೃತ್ತ ತಜ್ಞರಿಗೆ ಸ್ವಯಂ ಸೇವಕರಾಗಿ ಕೆಲವು ವರ್ಷಗಳ ಕಾಲ ಬ್ಯಾಕ್ ಲಾಗ್ ಮತ್ತು ಐತಿಹಾಸಿಕವಾಗಿರುವ ಹಿಂಬಾಕಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡುವಂತೆ ಸಚಿವರು ಮನವಿ ಮಾಡಿದರು. ಮುಂದೂಡಿಕೆಗಾಗಿ ಪದೇ ಪದೇ ಮಾಡುವ ಮನವಿಗಳನ್ನು ನಿರುತ್ಸಾಹಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಿಯಮಗಳಲ್ಲಿ ಬದಲಾವಣೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ನಮ್ಮ ಐಪಿ ಪರಿಸರ ವ್ಯವಸ್ಥೆಯಲ್ಲಿ ನಾವು ಉನ್ನತ ಮಟ್ಟದ ಪಾರದರ್ಶಕತೆ, ಸಮಗ್ರತೆ, ದಕ್ಷತೆ ಮತ್ತು ವೇಗವನ್ನು ತರಬೇಕಾಗಿದೆ ಎಂದು ಹೇಳಿದರು.  

 

https://static.pib.gov.in/WriteReadData/userfiles/image/image003KSF0.jpg

 

ಜಾಗತಿಕ ನಾವೀನ್ಯ ಸೂಚ್ಯಂಕ[ಜಿಐಐ]ದಲ್ಲಿ ಭಾರತ 2015 ರಲ್ಲಿ 81 ನೇ ಶ್ರೇಯಾಂಕದಿಂದ 2022 ರ ವೇಳೆಗೆ 40 ನೇ ಶ್ರೇಯಾಂಕಕ್ಕೆ ಜಿಗಿದಿದೆ. ಇದೀಗ ಜಿಐಐ ನಲ್ಲಿ 10 ರಾಷ್ಟ್ರಗಳ ಸಾಲಿಗೆ ಸೇರುವ ನಿರೀಕ್ಷೆ ಹೊಂದಿದ್ದೇವೆ ಮತ್ತು ಸರ್ಕಾರ, ಶಿಕ್ಷಣ ತಜ್ಞರು, ಕೈಗಾರಿಕೆ, ಕಾನೂನು ವಲಯ ಮತ್ತು ತಂತ್ರಜ್ಞಾನ ಪರಿಸರ ವ್ಯವಸ್ಥೆಯ ಸಾಮೂಹಿಕ ಪ್ರಯತ್ನದಿಂದ ನಾವು ಈ ಗುರಿ ತಲುಪಲು ಸಹಾಯವಾಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. 

 

ಬೌದ್ಧಿಕ ಆಸ್ತಿ ವಲಯದಲ್ಲಿನ ಉತ್ಕೃಷ್ಟ ಸಾಧನೆಗಾಗಿ ಸಚಿವರು 2021-22 ನೇ ಸಾಲಿನ ರಾಷ್ಟ್ರೀಯ ಐಪಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತ ರನ್ನು ಅಭಿನಂದಿಸಿದ ಸಚಿವರು, ಹೆಜ್ಜೆಗುರುತು ಮೂಡಿಸುವ ಕೆಲಸವನ್ನು ಮುಂದುವರಿಸುವಂತೆ ಸಲಹೆ ಮಾಡಿದರು.  

 

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಕಾರ್ಯದರ್ಶಿ [ಡಿಪಿಐಐಟಿ] ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 800 ಮಂದಿ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಕೊಡುಗೆ ನೀಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು. ಮಾಜಿ ರಾಷ್ಟ್ರಪತಿ ಶ್ರೀ ಎ.ಪಿ.ಜೆ ಅಬ್ದುಲ್ ಕಲಾಂ ಅವರ 91 ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ಮಾಜಿ ರಾಷ್ಟ್ರಪತಿ ಅವರು ದೇಶದ ಯುವ ಸಮೂಹಕ್ಕೆ ಹೆಚ್ಚು ಸ್ಫೂರ್ತಿದಾಯಕವಾಗಿದ್ದರು ಎಂದು ಸ್ಮರಿಸಿಕೊಂಡರು.

 

ಜ್ಞಾನ, ನಾವೀನ್ಯ ಮತ್ತು ಸುಸ್ಥಿರತೆ ಭವಿಷ್ಯದ ಆರ್ಥಿಕತೆಯ ಸಾರಥಿಯಾಗಿವೆ. ಕಳೆದ 7 ವರ್ಷಗಳಲ್ಲಿ ಪೇಟೆಂಟ್ ಗಾಗಿ ಅರ್ಜಿ ತುಂಬುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಟ್ರೇಡ್ ಮಾರ್ಕ್ ಅರ್ಜಿ ತುಂಬುವಲ್ಲಿಯೂ ಗಣನೀಯ ಸುಧಾರಣೆಯಾಗಿದ್ದು, 4 ಪಟ್ಟು ಏರಿಕೆಯಾಗಿದೆ. ಬೌದ್ಧಿಕ ಆಸ್ತಿ ಪರಿಸರ ವ್ಯವಸ್ಥೆಯಲ್ಲಿ ಐಪಿ ಹಕ್ಕುಗಳ ಅನುದಾನದ ಕ್ಷೇತ್ರದಲ್ಲಿ ಹಿಂಬಾಕಿಯನ್ನು ಕಡಿಮೆ ಮಾಡುವಂತೆ ಒತ್ತಾಯಿಸಿದರು. 

 

ಪೇಟೆಂಟ್ ಕಂಟ್ರೋಲರ್ ಜನರಲ್, ವಿನ್ಯಾಸ ಮತ್ತು ಟ್ರೇಡ್ ಮಾರ್ಕ್‍ನ ನ ಪ್ರೊಫೆಸರ್ [ಡಾ] ಉನ್ನತ್ ಪಿ ಪಂಡಿತ್, ಸಾಮರ್ಥ್ಯ ವೃದ್ಧಿ ಆಯೋಗದ ಕಾರ್ಯದರ್ಶಿ ಮತ್ತು ಮಂಡಳಿ ಸದಸ್ಯ ಶ್ರೀ ಹೇಮಂಗ್ ಜಾನಿ, ಕರ್ಮಯೋಗಿ ಭಾರತ್, ಡಿಪಿಐಐಟಿ ಜಂಟಿ ಕಾರ್ಯದರ್ಶಿ  ಶ್ರೀಮತಿ ಶೃತಿ ಸಿಂಗ್ ಹಾಗೂ ಇತರೆ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

******


(Release ID: 1868345) Visitor Counter : 115


Read this release in: English , Urdu , Hindi