ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಫಿಫಾ-ಯು17 ಮಹಿಳಾ ಫುಟ್ಬಾಲ್ ವಿಶ್ವಕಪ್ ಉದ್ಘಾಟನಾ ಸಮಾರಂಭ; ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಭಾಗಿ


ಕೇಂದ್ರ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಮತ್ತು ಶ್ರೀ ಕಿರೆನ್ ರಿಜಿಜು ಸಹ ಭಾಗಿ

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ(ಆರಂಭಿಕ) ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಅಮೆರಿಕ ಮುಖಾಮುಖಿ

Posted On: 11 OCT 2022 9:03PM by PIB Bengaluru

ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡೆ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿಂದು ಆಯೋಜಿತವಾಗಿದ್ದ ಫಿಫಾ ಯು-17 ಮಹಿಳಾ ಫುಟ್ಬಾಲ್ ವಿಶ್ವಕಪ್ ಭಾರತ-2022 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

 

 

ಶ್ರೀ ಠಾಕೂರ್ ಅವರು ಭಾರತ ಮತ್ತು ಅಮೆರಿಕ ನಡುವಿನ ಉದ್ಘಾಟನಾ (ಆರಂಭಿಕ) ಪಂದ್ಯ ವೀಕ್ಷಿಸಿದರು. ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಖಾತೆ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ್ ಹಾಗು ಕಾನೂನು ಮತ್ತು ನ್ಯಾಯ ಖಾತೆ ಸಚಿವ ಶ್ರೀ ಕಿರಣ್ ರಿಜಿಜು ಅವರು ಸಹ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

 

ಭಾರತವು ಫಿಫಾ ಯು-17 ಮಹಿಳಾ ವಿಶ್ವಕಪ್-2022ರ ಪ್ರಾಯೋಜಕತ್ವ ವಹಿಸಿದೆ. ಫುಟ್ಬಾಲ್ ಪಂದ್ಯಾವಳಿಗಳನ್ನು 3 ಪ್ರತ್ಯೇಕ ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಭುವನೇಶ್ವರದ ಕಳಿಂಗ ಸ್ಟೇಡಿಯಂ, ಗೋವಾದ ಪಿಜೆಎನ್ ಸ್ಟೇಡಿಯಂ ಮತ್ತು ನವಿ ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಪಂದ್ಯಗಳು ಜರುಗಲಿವೆ.

ಅಕ್ಟೋಬರ್ 30ರ ವರೆಗೆ ನಡೆಯಲಿರುವ ಅದ್ಧೂರಿ ಕ್ರೀಡಾಕೂಟದಲ್ಲಿ 16 ರಾಷ್ಟ್ರಗಳು ಭಾಗವಹಿಸಲಿವೆ. 7ನೇ ಆವೃತ್ತಿಯ ಈ ಪ್ರತಿಷ್ಠಿತ ಪಂದ್ಯಾವಳಿಯು ಎ, ಬಿ, ಸಿ ಮತ್ತು ಡಿ ಹೆಸರಿನ 4 ಗುಂಪುಗಳನ್ನು ಹೊಂದಿದೆ. ಅಕ್ಟೋಬರ್ 30 ರಂದು ನಡೆಯಲಿರುವ ಗ್ರ್ಯಾಂಡ್ ಫೈನಲ್‌ಗೆ ಆತಿಥ್ಯ ವಹಿಸಲು ನವಿ ಮುಂಬೈ ಸಜ್ಜಾಗಿದೆ.

ಫಿಫಾ ಯು-17 ಫುಟ್ಬಾಲ್ ಮಹಿಳಾ ವಿಶ್ವಕಪ್ ಭಾರತ-2022ರಲ್ಲಿ ಮಾಜಿ ಚಾಂಪಿಯನ್‌ಗಳಾದ ಫ್ರಾನ್ಸ್, ಜಪಾನ್ ಮತ್ತು ಸ್ಪೇನ್‌ ಮೈದಾನಕ್ಕೆ ಇಳಿಯಲಿವೆ. ಏತನ್ಮಧ್ಯೆ, ಕೆನಡಾ, ಜರ್ಮನಿ ಮತ್ತು ನ್ಯೂಜಿಲೆಂಡ್ ಜತೆಗೆ ಜಪಾನ್ ಸಹ, ಈ ಚಮತ್ಕಾರದ ವಿಶ್ವಕಪ್ ನ ಪ್ರತಿ ಆವೃತ್ತಿಯಲ್ಲಿ ಭಾಗವಹಿಸುವ ತಮ್ಮ ಹೆಮ್ಮೆಯ ದಾಖಲೆಯನ್ನು ಮುಂದುವರಿಸಲಿವೆ.

 

ಈ ಮಧ್ಯೆ, ಆತಿಥೇಯ ಭಾರತ ಮಹಿಳಾ ತಂಡವು ಈ ಬಾರಿಯ ವಿಶ್ವಕಪ್‌ಗೆ ಪದಾರ್ಪಣೆ ಮಾಡಿದೆ. 2017ರಲ್ಲಿ ಬಾಲಕರ ತಂಡ ಭಾಗವಹಿಸಿದ ನಂತರ, ಈ ಪಂದ್ಯಾವಳಿಯಲ್ಲಿ ಅಮೋಘ ಪ್ರದರ್ಶನ ನೀಡುವುದು ಭಾರತದ ಯು-17 ಮಹಿಳಾ ತಂಡದ ಸರದಿಯಾಗಿದೆ.

*****


(Release ID: 1867016) Visitor Counter : 164


Read this release in: English , Urdu , Hindi , Odia