ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರು ವಾಯುಮಾಲಿನ್ಯದ ವಿಷಯದ ಕುರಿತು ರಾಷ್ಟ್ರೀಯ ರಾಜಧಾನಿ ರಾಜ್ಯಗಳು, ದೆಹಲಿ  ಮತ್ತು ಪಂಜಾಬ್‌ನ  ಸರ್ಕಾರಗಳ ಪರಿಸರ ಮಂತ್ರಿಗಳೊಂದಿಗೆ ಸಭೆ ನಡೆಸಿದರು


ಸಕಾರಾತ್ಮಕ ಫಲಿತಾಂಶಗಳನ್ನು ಸಾಧಿಸಲು ಸಹಭಾಗಿತ್ವ ಮತ್ತು ಸಂಘಟಿತ ವಿಧಾನದ ಅಗತ್ಯವಿದೆ: ಶ್ರೀ ಭೂಪೇಂದ್ರ ಯಾದವ್

ವಾಯುಮಾಲಿನ್ಯವನ್ನು ನಿಭಾಯಿಸಲು ರಾಜ್ಯಗಳು ಸಿದ್ಧಪಡಿಸಿದ ಸಮರ್ಥನೀಯ ಮತ್ತು ದಂಡನೀಯ ಕ್ರಿಯಾ ಯೋಜನೆ

ಎಲ್ಲಾ ರಾಜ್ಯಗಳ ಸಚಿವರು ಸಕಾರಾತ್ಮಕ ಸಾರ್ವಜನಿಕ ಸಹಭಾಗಿತ್ವಕ್ಕೆ ಮನವಿ ಮಾಡಿದರು

ಬೆಳೆ ಶೇಷ ನಿರ್ವಹಣೆ ಮತ್ತು ಶುದ್ಧ ಇಂಧನಗಳ ಅಳವಡಿಕೆಗೆ ಆದ್ಯತೆ 

Posted On: 11 OCT 2022 3:06PM by PIB Bengaluru

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವರಾದ ಶ್ರೀ ಭೂಪೇಂದರ್ ಯಾದವ್ ರಾಷ್ಟ್ರೀಯ ರಾಜಧಾನಿ ರಾಜ್ಯಗಳು (ಎನ್‌ಸಿಆರ್), ದೆಹಲಿ  ಮತ್ತು ಪಂಜಾಬ್‌ನ ಪರಿಸರ ಮಂತ್ರಿಗಳೊಂದಿಗೆ ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯದ ಸಮಸ್ಯೆಯನ್ನು ನಿರ್ವಹಿಸಲು ರಾಜ್ಯಗಳು ಕೈಗೊಳ್ಳುತ್ತಿರುವ ಮತ್ತು ಯೋಜಿಸಿರುವ ಚಟುವಟಿಕೆಗಳನ್ನು ಪರಿಶೀಲಿಸಲು ವಾಸ್ತವೋಪಮ ಸಭೆ ನಡೆಸಿದರು. ಈ ಋತುವಿನಲ್ಲಿ ದೆಹಲಿ ಎನ್‌ ಸಿ ಆರ್‌ ಪ್ರದೇಶದ ಮೇಲೆ ಪರಿಣಾಮ ಬೀರುವ ವಾಯುಮಾಲಿನ್ಯವನ್ನು ಎದುರಿಸಲು ಎಲ್ಲಾ ಮಧ್ಯಸ್ಥಗಾರರ ಸಂಘಟಿತ ಕ್ರಮ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ರಾಜ್ಯ ಪರಿಸರ ಖಾತೆಯ ಉಸ್ತುವಾರಿ ವಹಿಸಿರುವ ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಖಟ್ಟರ್, ರಾಜಸ್ಥಾನದ ಶ್ರೀ ಹೇಮಾರಾಮ್ ಚೌಧರಿ,  ದೆಹಲಿಯ  ಶ್ರೀ ಗೋಪಾಲ್ ರೈ, ಉತ್ತರ ಪ್ರದೇಶದ ಡಾ. ಅರುಣ್ ಕುಮಾರ್, ಮತ್ತು ಪಂಜಾಬಿನ ಶ್ರೀ ಗುರ್ಮೀತ್ ಸಿಂಗ್ ಮೀತ್‌ ಹಾಜರಿದ್ದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ರಾಜ್ಯ ಸಚಿವರಾದ ಶ್ರೀ ಅಶ್ವಿನಿ ಕುಮಾರ್ ಚೌಬೆ ಯವರು ಸಹ ಸಭೆಯಲ್ಲಿ ಭಾಗವಹಿಸಿದ್ದರು. 

 

https://static.pib.gov.in/WriteReadData/userfiles/image/image001SA5K.jpg

   https://static.pib.gov.in/WriteReadData/userfiles/image/image003CWX0.jpg

ವಾಯು ಗುಣಮಟ್ಟ ನಿರ್ವಹಣೆ ಆಯೋಗ (ಸಿಎಕ್ಯೂಎಂ)ವು  ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್‌ ಸಿ ಆರ್) ಪ್ರದೇಶದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಅಂಶಗಳು ಮತ್ತು ಸವಾಲುಗಳ ಕುರಿತು ವಿವರವಾದ ಪ್ರಸ್ತುತಿಯನ್ನು ನೀಡಿತು. ಈ ಋತುವಿನಲ್ಲಿ ವಾಯು ಮಾಲಿನ್ಯವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಚಟುವಟಿಕೆಗಳ ಜೊತೆಗೆ ಕ್ರಮಗಳು, ನಿರ್ದೇಶನಗಳು ಮತ್ತು ಸಲಹೆಗಳನ್ನು ಸಿಎಕ್ಯೂಎಂ ವಿವರಿಸಿದೆ. ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳೆಂದರೆ ಕೃಷಿ ಹುಲ್ಲು ಸುಡುವಿಕೆ, ಕೈಗಾರಿಕಾ ಮಾಲಿನ್ಯ, ಡೀಸೆಲ್ ಜನರೇಟರ್ ಸೆಟ್‌ಗಳಿಂದ ಮಾಲಿನ್ಯ, ವಾಹನ ಮಾಲಿನ್ಯ,  ವಿದ್ಯುತ್‌ ಚಾಲಿತ ವಾಹನಗಳ ಮಾಲಿನ್ಯ, ಮಾಲಿನ್ಯ ರಸ್ತೆ ಮತ್ತು ತೆರೆದ ಪ್ರದೇಶಗಳಿಂದ ಧೂಳು ಮತ್ತು ನಿರ್ಮಾಣ ಮತ್ತು ಕೆಡವುವ ಚಟುವಟಿಕೆಯಿಂದ ಉಂಟಾಗುವ ಧೂಳು ಸೇರಿವೆ. ಸಂಬಂಧಿಸಿದ ವಿವಿಧ ಏಜೆನ್ಸಿಗಳಿಂದ ವಿವಿಧ ವಲಯಗಳಲ್ಲಿ ಉದ್ದೇಶಿತ ಅಲ್ಪ/ಮಧ್ಯಮ/ ಮತ್ತು ದೀರ್ಘಾವಧಿಯ ಕ್ರಮಕ್ಕಾಗಿ ರೂಪಿಸಿದ ಮತ್ತು ನಿರ್ದೇಶಿಸಿದ ಸಮಗ್ರ ನೀತಿಯನ್ನು ಸಿಎಕ್ಯೂಎಂ ಪುನರುಚ್ಚರಿಸಿದೆ.

ವಾಯುಮಾಲಿನ್ಯದ ನಿರ್ವಹಣೆ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ ಮತ್ತು ಮೇಲ್ವಿಚಾರಣೆ ಮತ್ತು ಜಾರಿ ಕುರಿತು ಅರಿವು ಮೂಡಿಸಲು ಏಜೆನ್ಸಿಗಳು ಮತ್ತು ರಾಜ್ಯ ಸರ್ಕಾರಗಳೊಂದಿಗೆ ಹಲವಾರು ಸಭೆಗಳನ್ನು ಕೈಗೊಳ್ಳಲಾಗಿದೆ ಎಂದು ಸಿಎಕ್ಯೂಎಂ ಮತ್ತಷ್ಟು ಮಾಹಿತಿ ನೀಡಿದೆ. ರಾಜ್ಯಗಳು ಒದಗಿಸಿರುವ ಅಂದಾಜು ಭತ್ತದ ಒಣಹುಲ್ಲಿನ ಉತ್ಪಾದನೆಯ ಅಂಕಿಅಂಶಗಳ ಹಿನ್ನೆಲೆಯಲ್ಲಿ ಸಮಸ್ಯೆಯ ಪ್ರಮಾಣವನ್ನು ಸಭೆಯಲ್ಲಿ ಚರ್ಚಿಸಲಾಯಿತು.

ಕೃಷಿಯ ಒಣ ಹುಲ್ಲಿನ ದಹನದ ಸಮಸ್ಯೆಯು ಎಲ್ಲಾ ಮಧ್ಯಸ್ಥಗಾರರಿಗೆ ಒಂದು ಪ್ರಮುಖ ಕಾಳಜಿಯಾಗಿದೆ. ಭತ್ತದ ಅವಶೇಷಗಳನ್ನು ಸುಡುವ ಘಟನೆಗಳ ಬಗ್ಗೆ ಕೈಗೊಂಡ ಕ್ರಮ ಮತ್ತು ಯೋಜನೆಗಳನ್ನು ಸಭೆಯಲ್ಲಿ ರಾಜ್ಯಗಳು ಎತ್ತಿ ತೋರಿಸಿದವು. ರಾಜ್ಯ ಸರ್ಕಾರಗಳಿಂದ ಸಿಆರ್‌ ಎಂ ಯಂತ್ರೋಪಕರಣಗಳ ಲಭ್ಯತೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಇತ್ತೀಚಿನ ಮಾಹಿತಿ ಒದಗಿಸಲಾಗಿದೆ. ಸ್ಥಳೀಯ ಸಂಸ್ಥೆಗಳನ್ನು ತೊಡಗಿಸಿಕೊಂಡಿವೆ ಮತ್ತು ಬೆಳೆ ಅವಶೇಷಗಳನ್ನು ನಿರ್ವಹಿಸುವ ಮೂಲ ವಿಧಾನಗಳನ್ನು ಉತ್ತೇಜಿಸಲು ರೈತರಿಗೆ  ವಿನೂತನ ಯಂತ್ರೋಪಕರಣಗಳನ್ನು ಒದಗಿಸುತ್ತಿವೆ ಎಂದು ರಾಜ್ಯ ಸರ್ಕಾರಗಳು ತಿಳಿಸಿವೆ.

ಜೈವಿಕ ವಿಘಟನೆಗೆ ಒಳಪಡುವ ಪ್ರದೇಶದ ವಿಸ್ತರಣೆಯು ಒಣ ಹುಲ್ಲಿನ ನಿರ್ವಹಣೆಯ ಪ್ರಮುಖ ಕಾರ್ಯತಂತ್ರವಾಗಿ ಸಭೆಯಲ್ಲಿ ಚರ್ಚಿಸಲಾಯಿತು. ಭತ್ತದ ಒಣಹುಲ್ಲಿನ ಪರ್ಯಾಯ ಬಳಕೆಯನ್ನು ಆರ್ಥಿಕ ಸಂಪನ್ಮೂಲವಾಗಿ ಉತ್ತೇಜಿಸಲು ಬೆಳೆ ಶೇಷ ನಿರ್ವಹಣೆ ಮತ್ತು ಚಟುವಟಿಕೆಗಳ ಪ್ರಗತಿಯ ಬಗ್ಗೆ ರಾಜ್ಯಗಳು ಮಾಹಿತಿ ನೀಡಿವೆ.

ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ ಎ ಪಿ) ಅನ್ನು ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಮೌಲ್ಯಗಳ ಪ್ರಕಾರ ಪರಿಷ್ಕರಿಸಲಾಗಿದೆ ಎಂದು ಸಿಎಕ್ಯೂಎಂ ಹೇಳಿದೆ. ಜಿಆರ್‌ ಎ ಪಿ ಈಗ ಮುನ್ಸೂಚನೆಗಳ ಮೇಲೆ ಕಾರ್ಯನಿರ್ವಹಿಸುತ್ತದೆ ಅದು ಅದು ಕ್ರಿಯಾ ಯೋಜನೆ ಮತ್ತು ಉತ್ತಮ ನಿರ್ವಹಣೆಗೆ ಸಹಾಯ ಮಾಡುತ್ತದೆ.  

ಹರಿಯಾಣ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳು ಸಹ ಕೈಗೊಳ್ಳಲಾಗುತ್ತಿರುವ ಧೂಳು ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿವೆ. 30.9.2022 ಕ್ಕೆ 2,72,01,113 ಮರಗಳೊಂದಿಗೆ ಹಸಿರು ಹೊದಿಕೆಯ ಪ್ರದೇಶವು ವಿಸ್ತರಿಸಿದೆ. ಏಪ್ರಿಲ್ - ಆಗಸ್ಟ್ 2022 ರ ಅವಧಿಯಲ್ಲಿ ಎನ್‌ಸಿಆರ್‌ನಲ್ಲಿ ಒಟ್ಟು 240.9 ಕಿಮೀ ರಸ್ತೆ / ಆರ್‌ ಒ ಡಬ್ಲ್ಯೂಗಳನ್ನು ಹಸಿರುಗೊಳಿಸಲಾಯಿತು. ದೆಹಲಿಯಲ್ಲಿ 4.7 ಕಿಮೀ, ಯುಪಿ (ಎನ್‌ಸಿಆರ್), 79.4 ಕಿಮೀ ಯುಪಿ (ಎನ್‌ಸಿಆರ್), 49.4 ಹರ್ಯಾಣ (ಎನ್‌ಸಿಆರ್) ಮತ್ತು ರಾಜಸ್ಥಾನ (ಎನ್‌ಸಿಆರ್) ನಲ್ಲಿ 107.4 ಕಿಮೀ. ದೆಹಲಿಯ ಎನ್‌ಸಿಟಿಯಲ್ಲಿ11, ಯುಪಿಯಲ್ಲಿ 18, ಹರಿಯಾಣದಲ್ಲಿ ಹದಿನೇಳು  ಮತ್ತು ರಾಜಸ್ಥಾನದಲ್ಲಿ 14 ಜೊತೆಗೆ ರಸ್ತೆ ಮಾಲೀಕತ್ವ/ನಿರ್ವಹಣಾ ಏಜೆನ್ಸಿಗಳ ಮೂಲಕ 60 ಧೂಳು ನಿಯಂತ್ರಣ ಮತ್ತು ನಿರ್ವಹಣಾ ಕೋಶಗಳನ್ನು ಸ್ಥಾಪಿಸಲಾಗಿದೆ. ರಾಜ್ಯಗಳು ರಸ್ತೆಗಳನ್ನು ಸ್ವಚ್ಛಗೊಳಿಸಲು ಮತ್ತು ನೀರು ಚಿಮುಕಿಸಲು ಯಂತ್ರಗಳನ್ನು ನಿಯೋಜಿಸಿವೆ.

ನಿರ್ಮಾಣ ಮತ್ತು ಕೆಡವುವ  ಕಾರ್ಯಗಳಿಂದಾಗುವ ಧೂಳಿನಿಂದ ಮಾಲಿನ್ಯವನ್ನು ನಿಭಾಯಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ದೆಹಲಿ, ಹರಿಯಾಣ ಮತ್ತು ಯುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಬ್ ಪೋರ್ಟಲ್ ನಿರ್ಮಾಣ ಚಟುವಟಿಕೆಯಿಂದ ಧೂಳನ್ನು ನಿಯಂತ್ರಿಸಲು ನಿರ್ದೇಶನಗಳನ್ನು ಅನುಸರಿಸಲು 500 ಚದರ ಮೀಟರ್‌ಗಿಂತ ಹೆಚ್ಚಿನ ಗಾತ್ರದ ಯೋಜನೆಗಳ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ. ಧೂಳಿನ ಮಾಲಿನ್ಯವನ್ನು ನಿಭಾಯಿಸಲು ಅಗತ್ಯವಿರುವಂತೆ ಒಟ್ಟು ನಿರ್ಮಾಣ ಪ್ರದೇಶಕ್ಕೆ ಅನುಗುಣವಾಗಿ ಆಂಟಿಸ್ಮಾಗ್ ಗನ್‌ಗಳನ್ನು ನಿಯೋಜಿಸುವ ಬಗ್ಗೆಯೂ ಚರ್ಚಿಸಲಾಯಿತು.

ಕೈಗಾರಿಕೆಗಳು ಪಿಎನ್‌ಜಿ/ ಶುದ್ಧ ಇಂಧನವನ್ನು ಅಳವಡಿಸಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಸಾಧಿಸುತ್ತಿರುವ ಪ್ರಗತಿಯ ಬಗ್ಗೆ ರಾಜ್ಯಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು.
ವಾಹನ ಮಾಲಿನ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು ಮತ್ತು ಎಲ್ಲಾ ವಾಹನಗಳಲ್ಲಿ ಮಾಲಿನ್ಯ ತಪಾಸಣೆ (ಪಿಯುಸಿ) ಪ್ರಮಾಣಪತ್ರವಿರುವುದನ್ನು ಖಚಿತಪಡಿಸಿಕೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯಗಳು ತಿಳಿಸಿವೆ. ರಸ್ತೆ ಸಂಚಾರ ನಿರ್ವಹಣಾ ವ್ಯವಸ್ಥೆಗಳ ಬಗ್ಗೆಯೂ ಚರ್ಚೆ ಮಾಡಲಾಯಿತು. 

 ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್‌ ಎ ಪಿ) ಸಮಯದಲ್ಲಿ ತುರ್ತು ಸೇವೆಗಳಿಗೆ ಮಾತ್ರ ಡೀಸೆಲ್ ಜನರೇಟರ್‌ಗಳ ತಡೆರಹಿತ ಬಳಕೆಯನ್ನು ಅನುಮತಿಸಲಾಗುವುದು ಎಂದು ಸಿಎಕ್ಯೂಎಂ ಮಾಹಿತಿ ನೀಡಿದೆ. ಡೀಸೆಲ್ ಜೆನರೇಟರುಗಳ ಬಳಕೆಯನ್ನು ಕುಂಠಿತಗೊಳಿಸಲು ಈ ಪ್ರದೇಶದಲ್ಲಿ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ಈ ಹಿಂದೆ ಡಿಸ್ಕಾಂಗಳ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.   

ಎನ್‌ಸಿಆರ್ ಪ್ರದೇಶದಲ್ಲಿ ಸುಡುವ ನಗರದ ಘನ ತ್ಯಾಜ್ಯ ಮತ್ತು ಬಯಲಿನಲ್ಲಿ ಒಣ ಸಸ್ಯ, ಹುಲ್ಲುಗಳ  ಸುಡುವಿಕೆಯನ್ನು ನಿಯಂತ್ರಿಸಲು ಸೂಚನೆಗಳನ್ನು ಅನುಸರಿಸದಿದ್ದಲ್ಲಿ ಕಟ್ಟುನಿಟ್ಟಾದ ಮೇಲ್ವಿಚಾರಣೆ ಮತ್ತು ಕ್ರಮಗಳ ಕುರಿತು ವಿವರವಾದ ಚರ್ಚೆ ನಡೆಯಿತು. ದೆಹಲಿಯಲ್ಲಿ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಹರಿಯಾಣ ಮತ್ತು ಉತ್ತರ ಪ್ರದೇಶ ಹಸಿರು ಪಟಾಕಿಗಳನ್ನು ಬಳಸಲು ಅನುಮತಿ ನೀಡಿದೆ.

 ವಾಯು ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸಲು, ಸಾರ್ವಜನಿಕ ಜಾಗೃತಿ ಮತ್ತು ಭಾಗವಹಿಸುವಿಕೆ ಮತ್ತು ಎಲ್ಲಾ ಪಾಲುದಾರರ ಜಂಟಿ ಪ್ರಯತ್ನಗಳು ಸಹ ಮುಖ್ಯವಾಗಿದೆ. ಎನ್‌ಸಿಆರ್ ಪ್ರದೇಶದಲ್ಲಿ ಏರ್‌ಶೆಡ್ ಸ್ಥಿತಿಯಿಂದಾಗಿ ವಾಯು ಮಾಲಿನ್ಯವನ್ನು ಎದುರಿಸಲು ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಗಾಗಿ ಎಲ್ಲಾ ರಾಜ್ಯಗಳ ಸಚಿವರು ಮನವಿ ಮಾಡಿದರು. 

ರಾಜ್ಯಗಳ ಪರಿಸರ ಮಂತ್ರಿಗಳು ಈ ಸಭೆಯನ್ನು ನಿರ್ಣಾಯಕ ಸಮಯದಲ್ಲಿ, ಚಳಿಗಾಲದ ಆರಂಭದ ಮೊದಲು, ರಾಜ್ಯಗಳ ಸಂಘಟಿತ ಪ್ರಯತ್ನಗಳನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರ ಪ್ರಯತ್ನಗಳನ್ನು ಶ್ಲಾಘಿಸಿದರು.  ಸಿಎಕ್ಯೂಎಂ, ಸಿಪಿಸಿಬಿ, ಡಿಸ್ಕಾಂಗಳು, ಎನ್‌ ಟಿ ಪಿಸಿ ಮತ್ತು ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು. ಈ ಸಹಭಾಗಿತ್ವ ಮತ್ತು ಸಂಘಟಿತ ವಿಧಾನವು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಎನ್‌ ಸಿ ಆರ್‌, ದೆಹಲಿ ಸರ್ಕಾರ ಮತ್ತು ಪಂಜಾಬ್‌ನ ಪರಿಸರ ಮಂತ್ರಿಗಳು ವಾಯು ಮಾಲಿನ್ಯವನ್ನು ನಿರ್ವಹಿಸಲು ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಸಿಎಕ್ಯೂಎಂ ಮತ.

*******


(Release ID: 1866958) Visitor Counter : 196


Read this release in: English , Urdu , Hindi