ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಭಾರತದ ಅಭಿವೃದ್ಧಿ ಪಯಣದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿ ಸಾಧಿಸಲು ನೆರವಾಗುತ್ತದೆ : ಶ‍್ರೀ ಗೋಯಲ್


ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಸರ್ಕಾರ ತನ್ನ ಕಾರ್ಯನಿರ್ವಹಣೆಯ ವಿಧಾನದ ಮರು ವ್ಯಾಖ್ಯಾನಕ್ಕೆ ಬಳಸಲಿದೆ : ಶ್ರೀ ಗೋಯಲ್

‘ಭಾರತದಲ್ಲೇ ತಯಾರಿಸು’ ಅನ್ನುವ ಸರ್ಕಾರದ ಕ್ರಮ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದೆ, ಭಾರತ ವಿಶ್ವದ ಕಾರ್ಖಾನೆಯಾಗಲು ಅನುವು ಮಾಡಿಕೊಡುತ್ತದೆ ಎಂದು ಶ್ರೀ ಗೋಯಲ್ ಹೇಳಿದ್ದಾರೆ

ಪಿ.ಎಂ.ಜಿ.ಕೆ.ವೈ ನಡಿ ಬಡವರಿಗೆ ಪರಿಣಾಮಕಾರಿಯಾಗಿ ಆಹಾರಧಾನ್ಯಗಳನ್ನು ಪೂರೈಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಕೆಯಾಗುತ್ತಿದ್ದು, ನ್ಯಾಯ ಬೆಲೆ ಅಂಗಡಿಗಳ ಕಾರ್ಯನಿರ್ವಹಣೆ, ಬಡವರಿಗೆ ಅಗತ್ಯವಾಗಿರುವ ವಲಯದ ಮೇಲೆ ಇದು  ನಿಗಾವಹಿಸಲಿದೆ ; ಶ್ರೀ ಗೋಯಲ್

ಸಮಾಜವನ್ನು ಸಬಲೀಕರಣಗೊಳಿಸಲು ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಹೊಸ ಮಾರ್ಗಗಳನ್ನು ಬಳಸಿಕೊಳ್ಳಲು ಅನ್ವೇಷಣೆ ಮಾಡುವಂತೆ ಯುವ ಮನಸ್ಸುಗಳಿಗೆ ಒತ್ತಾಯಿಸಿದ ಶ್ರೀ ಗೋಯಲ್

3 ನೇ ಆವೃತ್ತಿಯ ಜಾಗತಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಶೃಂಗ ಸಭೆ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಶ್ರೀ ಗೋಯಲ್  

Posted On: 07 OCT 2022 3:42PM by PIB Bengaluru

2022 ರ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದಂತೆ 2047 ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗುವ ನೈಜ ಸ್ಫೂರ್ತಿಗೆ ಅನುಗುಣವಾಗಿ ದೇಶ ನಿಗದಿತ ಗುರಿ  ತಲುಪಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನೆರವಾಗುತ್ತದೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರಲ್ಲೂ ಸಮೃದ್ಧತೆ ತರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಜವಳಿ ಸಚಿವ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ. ಅವರು 3 ನೇ ಆವೃತ್ತಿಯ ಜಾಗತಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಶೃಂಗ ಸಭೆ ಮತ್ತು ಪ್ರಶಸ್ತಿ ಸಮಾರಂಭದ ಉದ್ದೇಶಿಸಿ ಮಾತನಾಡಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿದ ಶ್ರೀ ಗೋಯಲ್, “ಯಾವುದೇ ಸಮಾಜ ಆವಿಷ್ಕಾರಗೊಳ್ಳುವುದಿಲ್ಲ, ನಿಶ್ಚಲವಾಗುತ್ತದೆ”. ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನಿಜವಾಗಿಯೂ ಭಾರತದ ಅಭಿವೃದ್ಧಿಯ ಪಯಣದಲ್ಲಿ ವೇಗವರ್ಧಕವಾಗಿದೆ. ‘ಭಾರತದಲ್ಲೇ ತಯಾರಿಸು’ ಕಾರ್ಯಕ್ರಮವನ್ನು ಎಐ ತಂತ್ರಜ್ಞಾನದೊಂದಿಗೆ ಜೋಡಿಸಿದಾಗ ಭಾರತ ಜಗತ್ತಿಗೆ ಉಪಕರಣಗಳು ಮತ್ತು ತಂತ್ರಜ್ಞಾನ ಎರಡನ್ನೂ ಒದಗಿಸುವ ವಿಶ್ವದ ಕಾರ್ಖಾನೆಯಾಗಲು ಅನುವು ಮಾಡಿಕೊಡುತ್ತಿದೆ ಎಂದು ಹೇಳಿದರು.

ದೇಶದಲ್ಲಿ ಬೃಹತ್ ಪ್ರತಿಭೆಗಳ ಭಂಡಾರವಿದ್ದು, ಆರ್ಥಿಕ ಚಟುವಟಿಕೆಯ ಎಲ್ಲಾ ವಲಯಗಳಲ್ಲಿ ಎಐ ಅನ್ನು ಹೊಂದಲು ಹೊಸ ಮಾರ್ಗಗಳನ್ನು ಅನ್ವೇಷಿಸಲು ಖಂಡಿತವಾಗಿಯೂ ಇದು ಸಹಾಯ ಮಾಡುತ್ತದೆ. ದೇಶದ ವೈಜ್ಞಾನಿಕ ಸಮುದಾಯಕ್ಕೆ ವರ್ಷಗಳಿಂದ ಮತ್ತು ನಿರ್ದಿಷ್ಟವಾಗಿ ಕೋವಿಡ್ ಸವಾಲಿನ ಸಮಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನೆರವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
 ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಸರ್ಕಾರ ತನ್ನ ಕಾರ್ಯನಿರ್ವಹಣೆಯ ವಿಧಾನದ ಮರು ವ್ಯಾಖ್ಯಾನಕ್ಕೆ ಬಳಸಲಿದೆ. ಯೂನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್ ಫಾರ್ಮ್ [ಯುಎಲ್ಐಪಿ] ಇದು ದೇಶದ ಸಂಪೂರ್ಣ ಸಾಗಣೆ ಪರಿಸರ ವ್ಯವಸ್ಥೆಯನ್ನು ಸುಧಾರಿಸಲು,ಇದೇ ರೀತಿಯಲ್ಲಿ ಪಿಎಂ ಗತಿಶಕ್ತಿ ರಾಷ್ಟ್ರೀಯ ಮಹತ್ವದ ಯೋಜನೆ ನಮ್ಮ ಮೂಲ ಸೌಕರ್ಯವನ್ನು ಇನ್ನಷ್ಟು ಚತುರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಒ.ಎನ್.ಡಿ.ಸಿ ಇ-ವಾಣಿಜ್ಯ ವಲಯವನ್ನು ಮತ್ತಷ್ಟು ಪ್ರಜೆಗಳ ಸ್ನೇಹಿ ಮಾಡುವ ಗುರಿ ಹೊಂದಿದೆ. ಸರ್ಕಾರಿ ಸಂಗ್ರಹಣೆಯಲ್ಲಿ ಮಹತ್ವದ ಪ್ರಭಾವ ಬೀರಿದ ಜಿಇಎಂ ಸೇವೆಗಳ ವಿತರಣೆಯಲ್ಲಿ ದಕ್ಷತೆಯನ್ನು ತರಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅನ್ನು ಬಳಸಿಕೊಳ್ಳುತ್ತಿದೆ.    

ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ  ಕಾರ್ಯವ್ಯಾಪ್ತಿಯ ಕುರಿರು ಮತ್ತಷ್ಟು ವಿಸ್ತಾರಗೊಳಿಸಿದ ಶ್ರೀ ಗೋಯಲ್, ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಪ್ರಮುಖ ಉಪಕ್ರಮವಾಗಿದ್ದು, 80 ಕೋಟಿ ಜನರಿಗೆ ಹೆಚ್ಚುವರಿಯಾಗಿ ಆಹಾರ ಭದ್ರತೆ ಒದಗಿಸಲು ಹಲವು ವಿಧಾನಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿಕೊಳ್ಳಲಾಗುತ್ತಿದೆ. ಫಲಾನುಭವಿಗಳ ಅಗತ್ಯಗಳು ಮತ್ತು ನಡವಳಿಕೆಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಮತ್ತು ನ್ಯಾಯಬೆಲೆ ಅಂಗಡಿಗಳ ಕಾರ್ಯಕ್ಷಮತೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್   ನೆರವಾಗುತ್ತಿದೆ.  ನ್ಯಾಯಬೆಲೆ ಅಂಗಡಿಗಳು ಸಮರ್ಥವಾಗಿ ಕಾರ್ಯನಿರ್ವಹಿಸಲು ಮತ್ತು ಫಲಾನುಭವಿಗಳಿಗೆ ಉತ್ತಮ ಸೇವೆ ದೊರಕಿಸಿಕೊಡಲು ಇದರಿಂದ ಸಾಧ್ಯವಾಗಿದೆ. ಒಂದು ದೇಶ ಒಂದು ಪಡಿತರ ಚೀಟಿ [ಒ.ಎನ್.ಒ.ಆರ್.ಸಿ] ಗೆ ಏಐ ಬಳಕೆ ಮಾಡಲಾಗಿದೆ ಮತ್ತು ನಮ್ಮ ವಲಸೆ ಕಾರ್ಮಿಕರ ಚಲನಶೀಲತೆಯ ಮಾದರಿಗಳನ್ನು ವಿಶ್ಲೇಷಿಸಲು ನಮಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದರು.  

ಶ್ರೀ ಗೋಯಲ್ ಅವರು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕ್ರಾಂತಿ ಉಳಿಯಲು ಉದ್ಯಮ, ನವೋದ್ಯಮಗಳು, ಇನ್ಕ್ಯುಬೇಟರ್ ಗಳು, ಅಕಾಡೆಮಿಗಳು ಅರ್ಥಪೂರ್ಣ ಕೊಡುಗೆಯೊಂದಿಗೆ ವಿಶ್ವದಾದ್ಯಂತ ಭಾರತ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ನ ಕ್ರಾಂತಿಯ ಕೇಂದ್ರವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದರು. ಯುವ ಮನಸ್ಸುಗಳು ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಹಾಗೂ ಎಐ ತಂತ್ರಜ್ಞಾನ ನಮ್ಮ ದೈನಂದಿನ ಬದುಕಿನಲ್ಲಿ ಸಮೃದ್ಧತೆಯನ್ನು ತರಲು ವಿವಿಧ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸಬೇಕು. ರೈತರು, ಮೀನುಗಾರರು ಮತ್ತು ಎಂ.ಎಸ್.ಎಂ.ಇ ವಲಯದಲ್ಲಿ ಎಐ ನಿರ್ಣಾಯಕ ಪಾತ್ರ ವಹಿಸುವ ಕುರಿತು ಪರಿಶೋಧಿಸುವಂತೆ ಸಚಿವರು ಸೂಚಿಸಿದರು.     

ಎಐ ಶೃಂಗಸಭೆಯನ್ನು ಎ.ಐ.ಸಿ.ಆರ್,ಎ ಆಯೋಜಿಸಿತ್ತು ಮತ್ತು ಇದು ಸರ್ಕಾರದ ಸಹಭಾಗಿತ್ವದೊಂದಿಗೆ ರಕ್ಷಣೆ, ಆರೋಗ್ಯ ಆರೈಕೆ, ಕೃಷಿ, ಸ್ಮಾರ್ಟ್ ನಗರಗಳು, ಸಾಗಣೆ ಮತ್ತು ಶಿಕ್ಷಣ ವಲಯವನ್ನು ಕೇಂದ್ರೀಕರಿಸಿದೆ. ಎಐ ಪರಿಸರ ವ್ಯವಸ್ಥೆ ಮತ್ತು ನವೋದ್ಯಮಗಳ ಮೂಲಕ ಸಮಾಜಕ್ಕೆ ಲಾಭ ದೊರಕಿಸಿಕೊಡಲು ಹೇಗೆ ಮಾರ್ಗನಕ್ಷೆ ರೂಪಿಸಬಹುದು ಎನ್ನುವ ಗುರಿಯನ್ನು ಇದು ಹೊಂದಿದೆ. 3 ನೇ ವಾರ್ಷಿಕ ಸಮ್ಮೇಳನ ವಿವಿಧ ಪಾಲುದಾರರು ಕೆಲಸ ಮಾಡುತ್ತಿರುವ ವಲಯದಲ್ಲಿ ಏಕತಾನತೆಯನ್ನು ಮುರಿಯಲು ಮತ್ತು ನಮ್ಮ ಸಮಾಜದ ಪ್ರಮುಖ ಕ್ಷೇತ್ರಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡು ಹಿಡಿಯಲು ಬಹುಶಿಸ್ತೀಯ ಗುಂಪುಗಳನ್ನು ರಚಿಸಿದೆ.


******



(Release ID: 1866149) Visitor Counter : 157