ಕಲ್ಲಿದ್ದಲು ಸಚಿವಾಲಯ
ಕಲ್ಲಿದ್ದಲಿನಿಂದ-ರಾಸಾಯನಿಕ ಉತ್ಪನ್ನಗಳಿಗಾಗಿ ಮೂರು ಪ್ರಮುಖ ʻಪಿಎಸ್‌ಯುʼಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದ ಕೋಲ್ ಇಂಡಿಯಾ
ನಾಲ್ಕು ಭೂ ಮೇಲ್ಮೈ ಕಲ್ಲಿದ್ದಲು ಅನಿಲೀಕರಣ ಯೋಜನೆಗಳನ್ನು ಆರಂಭಿಸಲಾಗುವುದು
2030ರವೇಳೆಗೆ 100 ದಶಲಕ್ಷ ಟನ್ ಅನಿಲೀಕರಣದ ಗುರಿ ಹೊಂದಲಾಗಿದೆ
Posted On:
23 SEP 2022 3:56PM by PIB Bengaluru
ಭೂ ಮೇಲ್ಮೈ ಕಲ್ಲಿದ್ದಲು ಅನಿಲೀಕರಣ (ಎಸ್‌ಸಿಜಿ) ಮಾರ್ಗದ ಮೂಲಕ ʻಕಲ್ಲಿದ್ದಲಿನಿಂದ-ರಾಸಾಯನಿಕʼ ಯೋಜನೆಗಳ ಸ್ಥಾಪನೆ ಹಾದಿಯನ್ನು ಸರಾಗಗೊಳಿಸುವ ಸಲುವಾಗಿ, ಕಲ್ಲಿದ್ದಲು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻಕೋಲ್ ಇಂಡಿಯಾ ಲಿಮಿಟೆಡ್ʼ(ಸಿಐಎಲ್) 2022ರ ಸೆಪ್ಟೆಂಬರ್ 27ರಂದು ನವದೆಹಲಿಯಲ್ಲಿ ಮೂರು ಪ್ರಮುಖ ಒಡಂಬಡಿಕೆಗಳಿಗೆ (ಎಂಒಯು) ಸಹಿ ಹಾಕಲಿದೆ.
ನಾಲ್ಕು ʻಎಸ್‌ಸಿಜಿʼ ಯೋಜನೆಗಳನ್ನು ಸ್ಥಾಪಿಸಲು ದೇಶದ ಇತರ ಮೂರು ಪ್ರಮುಖ ಸರಕಾರಿ ವಲಯದ ಉದ್ಯಮಗಳಾದ ʻಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ʼ(ಬಿಎಚ್ಇಎಲ್), ʻಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ʼ (ಐಒಸಿಎಲ್) ಮತ್ತು ʻಗೇಲ್ʼ (ಇಂಡಿಯಾ) ಜೊತೆ ಸಿಐಎಲ್ ಕೈಜೋಡಿಸಲಿದೆ.
ʻಎಸ್‌ಸಿಜಿʼ ಮಾರ್ಗದ ಮೂಲಕ ಕಲ್ಲಿದ್ದಲನ್ನು ಸಿಂಥಸಿಸ್ ಗ್ಯಾಸ್ (Syngas) ಆಗಿ ಪರಿವರ್ತಿಸಲಾಗುತ್ತದೆ. ನಂತರ ಅದನ್ನು ಮುಂದಿನ ಹಂತದ ಮೌಲ್ಯವರ್ಧಿತ ರಾಸಾಯನಿಕಗಳ ಉತ್ಪಾದನೆಗಾಗಿ ಸಂಸ್ಕರಿಸಬಹುದು. ಆಮದು ಮಾಡಿಕೊಂಡ ನೈಸರ್ಗಿಕ ಅನಿಲ ಅಥವಾ ಕಚ್ಚಾ ತೈಲದ ಮೂಲಕ ಇವುಗಳನ್ನು ಉತ್ಪಾದಿಸಲಾಗುತ್ತದೆ. ಇದರಿಂದ ಉತ್ಪಾದನೆಯಾಗುವ ಅಂತಿಮ ಉತ್ಪನ್ನಗಳು ಡೈ-ಮೀಥೈಲ್ ಈಥರ್, ಸಿಂಥಟಿಕ್ ನೈಸರ್ಗಿಕ ಅನಿಲ ಮತ್ತು ಅಮೋನಿಯಂ ನೈಟ್ರೇಟ್ ಆಗಿರುತ್ತವೆ.
ಉದ್ದೇಶಿತ ಯೋಜನೆಗಳ ಮತ್ತೊಂದು ಅನುಕೂಲವೆಂದರೆ, ವಿದೇಶೀ ವಿನಿಮಯ ಕಡಿಮೆಯಾಗಲಿದೆ ಜೊತೆಗೆ 23,000 ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿವೆ.
ಸ್ವಾವಲಂಬನೆ ಮತ್ತು ಇಂಧನ ಸ್ವಾತಂತ್ರ್ಯದ ಅವಳಿ ಉದ್ದೇಶಗಳೊಂದಿಗೆ, ಕಲ್ಲಿದ್ದಲು ಸಚಿವಾಲಯವು 2030ರ ವೇಳೆಗೆ 100 ದಶಲಕ್ಷ ಟನ್ ಕಲ್ಲಿದ್ದಲು ಅನಿಲೀಕರಣವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
******
(Release ID: 1861775)
Visitor Counter : 167