ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ದೇಹದ ದ್ರವಗಳಲ್ಲಿನ ಸಕ್ಕರೆ ಲೇಪಿತ ಪೌಚ್‌ಗಳು ಕ್ಯಾನ್ಸರ್‌ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ

Posted On: 22 SEP 2022 4:20PM by PIB Bengaluru

ವಿಜ್ಞಾನಿಗಳ ತಂಡವು ಇತ್ತೀಚೆಗೆ ಅಭಿವೃದ್ಧಿಪಡಿಸಿದ ಹೊಸ ಆಣ್ವಿಕ ಜೈವಿಕ ಸಂವೇದಕದ ಸಹಾಯದಿಂದ ಕ್ಯಾನ್ಸರ್‌ ಸೂಕ್ಷ್ಮ ಪರಿಸರವನ್ನು ಪತ್ತೆಹಚ್ಚುವುದು ಶೀಘ್ರದಲ್ಲೇ ಹೆಚ್ಚು ಸುಲಭವಾಗಬಹುದು.

ಕ್ಯಾನ್ಸರ್‌ ಕೋಶಗಳು ಸಣ್ಣ ಚೀಲಗಳನ್ನು ಸ್ರವಿಸುತ್ತವೆ, ಅಂದರೆ ಸಕ್ಕರೆ ಅಣುಗಳಿಂದ ಆವೃತವಾದ ಎಕ್ಸ್‌ಸ್ಟ್ರಾ ಸೆಲ್ಯುಲಾರ್‌ ವೆಸಿಕಲ್ಸ್‌ (ಇವಿ), ಹೈಲುರೊನಾನ್‌ (ಎಚ್‌ಎ), ಇದು ಗೆಡ್ಡೆಯ ಮಾರಣಾಂತಿಕತೆಗೆ ನೇರ ಸಂಪರ್ಕವನ್ನು ಹೊಂದಿದೆ ಮತ್ತು ಕರುಳಿನ ಕ್ಯಾನ್ಸರ್‌ನ ಆರಂಭಿಕ ರೋಗನಿರ್ಣಯಕ್ಕೆ ಸಂಭಾವ್ಯ ಬಯೋಮಾರ್ಕರ್‌ ಎಂದು ಪರಿಗಣಿಸಲಾಗುತ್ತದೆ. ಈ ಇವಿಗಳು ದೇಹದ ದ್ರವಗಳಲ್ಲಿ(ರಕ್ತ, ಮಲ, ಇತ್ಯಾದಿ) ಹೇರಳವಾಗಿವೆ, ಮತ್ತು ಎಲ್ಲಾ ರೀತಿಯ ಜೀವಕೋಶಗಳು ಈ ಇವಿಗಳನ್ನು ಬಾಹ್ಯಕೋಶೀಯ ಮ್ಯಾಟ್ರಿಕ್ಸ್‌ಗೆ ಸ್ರವಿಸುತ್ತವೆ. ಕ್ಯಾನ್ಸರ್‌ ಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತ ದೇಹದ ದ್ರವಗಳಲ್ಲಿ ಕನಿಷ್ಠ ಎರಡು ಪಟ್ಟು ಹೆಚ್ಚು ಇವಿಗಳನ್ನು ಸ್ರವಿಸುತ್ತವೆ. ಆದ್ದರಿಂದ, ಆರಂಭಿಕ ಕ್ಯಾನ್ಸರ್‌ ರೋಗನಿರ್ಣಯಕ್ಕಾಗಿ ಈ ಇವಿಗಳನ್ನು ರೋಗಿಯ ದೇಹದಿಂದ ಆಕ್ರಮಣರಹಿತವಾಗಿ ಬೇರ್ಪಡಿಸಬಹುದು.

ಈ ಕ್ಯಾನ್ಸರ್‌ ಇವಿಗಳಿಗೆ ಸಂಬಂಧಿಸಿದ ಸಕ್ಕರೆ ಅಣು ಎಚ್‌ಎ, ರೋಗಶಾಸ್ತ್ರೀಯ ಪರಿಸ್ಥಿತಿಗಳಲ್ಲಿ ಹೈಲುರೋನಿಡೇಸ್‌ (ಹೈಯಲ್‌ಗಳು) ಮತ್ತು ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳಿಂದ ಛಿದ್ರಗೊಂಡಾಗ ಗೆಡ್ಡೆಯ ಪ್ರಗತಿಯಲ್ಲಿಅಪಾಯದ ಸಂಕೇತಗಳನ್ನು ಹೊಂದಿರುತ್ತದೆ ಎಂದು ತಿಳಿದಿದೆ.

ದೆಹಲಿಯ ಶಿವ ನಾಡರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಮಿನೆನ್ಸ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ಇನ್‌ಸ್ಪೈರ್‌ ಫ್ಯಾಕಲ್ಟಿ ಅನುದಾನದ ನೆರವಿನೊಂದಿಗೆ, ಕೋಲ್ಕತಾದ ಎಸ್‌ಎನ್‌ ಬೋಸ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಬೇಸಿಕ್‌ ಸೈನ್ಸಸ್‌ (ಎಸ್‌ಎನ್‌ಬಿಎನ್‌ಸಿಬಿಎಸ್‌), ಕೋಲ್ಕತಾದ ಸಹಾ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್‌ ಫಿಸಿಕ್ಸ್‌ ಮತ್ತು ಐಐಟಿ ಭಿಲಾಯ್‌, ಛತ್ತೀಸ್‌ಗಢದ ಸಹಯೋಗದೊಂದಿಗೆ ಡಾ. ತತಿನಿ ರಕ್ಷಿತ್‌ ಪ್ರಯೋಗಾಲಯವು ಒಂದೇ ಕ್ಯಾನ್ಸರ್‌ ಕೋಶದಿಂದ ಪಡೆದ ಇವಿ ಮೇಲ್ಮೈಯಲ್ಲಿ ಎಚ್‌.ಎ.ಯ ರೂಪರೇಖೆಯ ಉದ್ದವನ್ನು ಬಿಚ್ಚಿಟ್ಟಿದೆ.

ಅವರ ಅಧ್ಯಯನವು ಒಂದೇ ಕ್ಯಾನ್ಸರ್‌ ಕೋಶದಿಂದ ಪಡೆದ ಇವಿಯನ್ನು ಒಂದೇ ಅಣು ತಂತ್ರಗಳನ್ನು ಬಳಸಿಕೊಂಡು ಅತ್ಯಂತ ಚಿಕ್ಕ ಸರಪಳಿ ಎಚ್‌ಎ ಅಣುಗಳಿಂದ ಲೇಪಿತವಾಗಿದೆ ಎಂದು ತೋರಿಸಿದೆ (ಕಾಂಟೂರ್‌ ಉದ್ದ 500 ನ್ಯಾನೋಮೀಟರ್‌ಗಳಿಗಿಂತ ಕಡಿಮೆ) ಮತ್ತು ಈ ಶಾರ್ಟ್‌-ಚೈನ್‌ ಎಚ್‌ಎ-ಲೇಪಿತ ಇವಿಗಳು ಸಾಮಾನ್ಯ ಜೀವಕೋಶದಿಂದ ಪಡೆದ ಇವಿಗಳಿಗಿಂತ ಗಮನಾರ್ಹವಾಗಿ ಹೆಚ್ಚು ಸ್ಥಿತಿಸ್ಥಾಪಕವಾಗಿವೆ ಎಂದು ಸ್ಪಷ್ಟಪಡಿಸಿದೆ. ಕ್ಯಾನ್ಸರ್‌ನಲ್ಲಿಎಚ್‌ಎ-ಲೇಪಿತ ಇವಿಗಳ ಈ ಆಂತರಿಕ ಸ್ಥಿತಿಸ್ಥಾಪಕತ್ವವು ಬಾಹ್ಯ ಕೋಶೀಯ ಸಾಗಣೆ, ಹೀರಿಕೊಳ್ಳುವಿಕೆ, ಜೀವಕೋಶಗಳಿಂದ ವಿಸರ್ಜನೆ, ಕೋಶದ ಮೇಲ್ಮೆಗಳಿಗೆ ಅಂಟಿಕೊಳ್ಳುವಿಕೆ ಮುಂತಾದವುಗಳ ಸಮಯದಲ್ಲಿಅನೇಕ ಬಾಹ್ಯ ಶಕ್ತಿಗಳನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ.

ಈ ಅಧ್ಯಯನವನ್ನು ಇತ್ತೀಚೆಗೆ ಜರ್ನಲ್‌ ಆಫ್‌ ಫಿಸಿಕಲ್‌ ಕೆಮಿಸ್ಟ್ರಿ ಲೆಟರ್ಸ್‌ನಲ್ಲಿ ಪ್ರಕಟಿಸಲಾಗಿದೆ. ಸಕ್ಕರೆ ಲೇಪಿತ ಪೌಚ್‌ಗಳು ಕ್ಯಾನ್ಸರ್‌ ಪ್ರಗತಿಯ ಅಪಾಯವನ್ನು ಹೇಗೆ ಹೆಚ್ಚಿಸುತ್ತವೆ ಎಂಬುದರ ಮೇಲೆ ಈ ಸಂಶೋಧನೆಗಳು ಪರಿಣಾಮ ಬೀರುತ್ತವೆ.

ಪ್ರಕಾಶನ ಲಿಂಕ್‌:

 https://pubs.acs.org/doi/full/10.1021/acs.jpclett.2c01629

 

 

******



(Release ID: 1861625) Visitor Counter : 119


Read this release in: English , Urdu , Hindi , Marathi