ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಡಿಎಸ್‌ಟಿಯಿಂದ ಧನಸಹಾಯ ಪಡೆದ ಯೋಜನೆಗಳು, ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್‌ಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಮೇಲ್ವಿಚಾರಣೆ ಮತ್ತು ಪ್ರತಿಕ್ರಿಯೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಡ್ಯಾಶ್‌ಬೋರ್ಡ್‌ಗೆ ಚಾಲನೆ ನೀಡಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್


ಕಳೆದ ಐದು ವರ್ಷಗಳಲ್ಲಿ 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 2,768 ಏಜೆನ್ಸಿಗಳಿಗೆ ಡಿಎಸ್‌ಟಿಯಿಂದ ವಿತರಿಸಲಾದ 20,000 ಕೋಟಿ ರೂ.ಗೂ ಹೆಚ್ಚಿನ ಪ್ರತಿ ವಿವರಗಳನ್ನು ಡ್ಯಾಶ್‌ಬೋರ್ಡ್ ಒಳಗೊಂಡಿದೆ:  ಡಾ.ಜಿತೇಂದ್ರ ಸಿಂಗ್

ಡಿಎಸ್‌ಟಿ ಡ್ಯಾಶ್‌ಬೋರ್ಡ್ ಉತ್ತಮ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಾಮಾನ್ಯ ಡ್ಯಾಶ್‌ಬೋರ್ಡ್‌ ರೂಪಿಸಲಾಗುವುದು: ಡಾ ಜಿತೇಂದ್ರ ಸಿಂಗ್

ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಸಾಮಾನ್ಯ ವರ್ಗಗಳ ವಯೋಮಾನ ಮತ್ತು ಲಿಂಗವಾರು ಯೋಜನೆಗಳು ಮತ್ತು ವಿದ್ಯಾರ್ಥಿವೇತನಗಳ ಪರಿಣಾಮದ ವಿಶ್ಲೇಷಣೆಯನ್ನು ರಾಜ್ಯಗಳು ಸುಧಾರಣಾ ಕ್ರಮಗಳನ್ನು ಸೂಚಿಸಲು ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸಲಾಗಿದೆ: ಡಾ ಜಿತೇಂದ್ರ ಸಿಂಗ್

Posted On: 15 SEP 2022 5:24PM by PIB Bengaluru

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಯಿಂದ ಧನಸಹಾಯ ಪಡೆದ ಯೋಜನೆಗಳು, ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು ಮತ್ತು ಫೆಲೋಶಿಪ್‌ಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಮೇಲ್ವಿಚಾರಣೆ ಮತ್ತು ಪ್ರತಿಕ್ರಿಯೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಡ್ಯಾಶ್‌ಬೋರ್ಡ್‌ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ಉಸ್ತುವಾರಿ), ಭೂ ವಿಜ್ಞಾನ (ಸ್ವತಂತ್ರ ಉಸ್ತುವಾರಿ); ಪ್ರಧಾನಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಸಹಾಯಕ ಸಚಿವ ಡಾ ಜಿತೇಂದ್ರ ಸಿಂಗ್ ಇಂದು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಡ್ಯಾಶ್‌ಬೋರ್ಡ್ ಮೂಲಕ, ಪ್ರತಿ ರಾಜ್ಯದಲ್ಲಿನ ಯಾವುದೇ ಗುಂಪಿನ ಪ್ರತಿಯೊಂದು ಯೋಜನೆಗಳು ಮತ್ತು ಕಾರ್ಯಕ್ರಮಗಳ ವಿವರಗಳಿಗೆ ನೈಜ ಸಮಯದಲ್ಲಿ ಪ್ರವೇಶಿಸಬಹುದು ಮತ್ತು ಯಾವುದಾದರೂ ಪರಿಹಾರ ಕ್ರಮದ ಅಗತ್ಯವಿದ್ದರೆ ಅದನ್ನು ತ್ವರಿತವಾಗಿ ಕೈಗಪಳ್ಳಬಹುದು ಎಂದು ಹೇಳಿದರು. ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಸಾಮಾನ್ಯ ವರ್ಗಗಳಿಗೆ ವಯೋಮಾನ ಮತ್ತು ಲಿಂಗವಾರು ಯೋಜನೆಗಳು ಮತ್ತು ವಿದ್ಯಾರ್ಥಿವೇತನಗಳ ಪರಿಣಾಮದ ವಿಶ್ಲೇಷಣೆಯನ್ನು ರಾಜಜ್ಯಗಳು ಸುಧಾರಣಾ ಕ್ರಮಗಳನ್ನು ಸೂಚಿಸಲು ಡ್ಯಾಶ್‌ಬೋರ್ಡ್‌ನಲ್ಲಿ ಅಳವಡಿಸಲಾಗಿದೆ ಎಂದು ಅವರು ಹೇಳಿದರು.

 

ಹೆಚ್ಚಿನ ಸಂಯೋಜನೆಯ ಪರಿಕಲ್ಪನೆಯ ಕುರಿತು ಮಾತನಾಡಿದ ಡಾ ಜಿತೇಂದ್ರ ಸಿಂಗ್, ಡಿಎಸ್‌ಟಿ ಡ್ಯಾಶ್‌ಬೋರ್ಡ್ ಉತ್ತಮ ಆರಂಭವಾಗಿದೆ ಮತ್ತು ಭವಿಷ್ಯದಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸಾಮಾನ್ಯ ಡ್ಯಾಶ್‌ಬೋರ್ಡ್‌ಗಾಗಿ ಪ್ರಯತ್ನಗಳನ್ನು ಮಾಡಲಾಗುವುದು. ಕಳೆದ ಐದು ವರ್ಷಗಳಲ್ಲಿ 20,000 ಕೋಟಿ ರೂ.ಗಳನ್ನು 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 2,768 ಏಜೆನ್ಸಿಗಳಿಗೆ ಡಿಎಸ್‌ಟಿ ಮೂಲಕ ವಿತರಿಸಲಾಗಿದೆ ಮತ್ತು ಇದರ ಪ್ರತಿ ನಿಮಿಷದ ವಿವರವು ಡ್ಯಾಶ್‌ಬೋರ್ಡ್‌ನಲ್ಲಿ ಲಭ್ಯವಿದೆ ಎಂದು ಸಚಿವರು ಮಾಹಿತಿ ನೀಡಿದರು.

ಡ್ಯಾಶ್‌ಬೋರ್ಡ್ ಡಿಎಸ್‌ಟಿಯ ಸಾಂಸ್ಥಿಕ ಕಾರ್ಯವಿಧಾನವಾಗಿದ್ದು, ಇಲಾಖೆಯ ಅಂಕಿಅಂಶ ಮತ್ತು ಡೇಟಾ ವಿಶ್ಲೇಷಣಾತ್ಮಕ ಸಾಮರ್ಥ್ಯಗಳನ್ನು ನಿರ್ಮಿಸುವ, ಬಳಸಿಕೊಳ್ಳುವ ಮತ್ತು ವರ್ಧಿಸುವ ಮತ್ತು ಮೇಲ್ವಿಚಾರಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡುತ್ತದೆ ಎಂದು  ಡಾ. ಜಿತೇಂದ್ರ ಸಿಂಗ್ ಹೇಳಿದರು. ಇದು ಫೆಬ್ರವರಿ 2021 ರಲ್ಲಿ ನೀಡಲಾದ ನೀತಿ ಆಯೋಗದ ನಿರ್ದೇಶನಗಳಿಗೆ ಅನುಸಾರವಾಗಿದೆ ಎಂದು ಅವರು ಹೇಳಿದರು. ಜನವರಿ, 2019 ರಲ್ಲಿ ಡಿಎಸ್‌ಟಿಯು ಇದೇ ರೀತಿಯ ಡೇಟಾ ನಿರ್ವಹಣಾ ಕೋಶವನ್ನು ಅದೇ ಉದ್ದೇಶಗಳೊಂದಿಗೆ ಸ್ಥಾಪಿಸಿದೆ ಎಂದು ಸಚಿವರು ಹೇಳಿದರು.

 

ಡೇಟಾ ಮತ್ತು ಕಾರ್ಯತಂತ್ರದ ಘಟಕಗಳು (ಡಿಎಸ್‌ಯುಗಳು) ವಿಭಿನ್ನ ಗುರಿ ಗುಂಪುಗಳಿಗೆ ವಿಭಿನ್ನ ಡ್ಯಾಶ್‌ಬೋರ್ಡ್‌ಗಳನ್ನು ರಚಿಸುತ್ತವೆ ಮತ್ತು ಈ ಡ್ಯಾಶ್‌ಬೋರ್ಡ್‌ಗಳು ಸಾಕ್ಷ್ಯ ಆಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಡಿಎಸ್‌ಟಿಗೆ ಸಹಾಯ ಮಾಡಿವೆ. ಕಾರ್ಯಕ್ರಮಗಳ ತಲುಪುವಿಕೆಯನ್ನು ಗಮನಿಸಿದ ನಂತರ ಅನೇಕ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಡ್ಯಾಶ್‌ಬೋರ್ಡ್‌ಗಳ ಮೂಲಕ ಮಾಡಿದ ಡೇಟಾ ವಿಶ್ಲೇಷಣೆಯ ಆಧಾರದ ಮೇಲೆ ಅನೇಕ ಕಾರ್ಯಕ್ರಮಗಳಿಗೆ ಮಧ್ಯಂತರ ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ಈ ಡ್ಯಾಶ್‌ಬೋರ್ಡ್‌ಗಳ ಪ್ರಮುಖ ಫಲಿತಾಂಶವೆಂದರೆ ಧನಸಹಾಯ ಪಡೆದ ಯೋಜನೆಗಳು ಅಥವಾ ವಿದ್ಯಾರ್ಥಿವೇತನ/ಫೆಲೋಶಿಪ್ ಅನ್ನು ನಿಯಮಿತವಾಗಿ ಮತ್ತು ಬಳಕೆದಾರ ಸ್ನೇಹಿ ರೀತಿಯಲ್ಲಿ ನೀಡಲು ತೆಗೆದುಕೊಂಡ ನಿರ್ಧಾರಗಳ ಫಲಿತಾಂಶಗಳು ಮತ್ತು ಪರಿಣಾಮಗಳ ಬಗ್ಗೆ ಇಲಾಖೆಗೆ ತಿಳಿದಿರುತ್ತದೆ,

ಡಿಎಸ್‌ಟಿ ಕಾರ್ಯದರ್ಶಿ ಶ್ರೀ ಎಸ್. ಚಂದ್ರಶೇಖರ್ ಮಾತನಾಡಿ, ಡೇಟಾ ಮತ್ತು ಕಾರ್ಯತಂತ್ರ ಘಟಕ (ಡಿಎಸ್‌ಯು) ಕ್ಕೆ ಶೈಕ್ಷಣಿಕ, ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಪ್ರಖ್ಯಾತ ದತ್ತಾಂಶ ವಿಜ್ಞಾನಿಗಳನ್ನು ಒಳಗೊಂಡಿರುವ ಪರಿಣಿತ ಸಲಹಾ ಗುಂಪು ಸಹಾಯ ಮಾಡುತ್ತದೆ ಎಂದರು. ಇಂಟರ್ನ್‌ಗಳಾಗಿ ತೊಡಗಿಸಿಕೊಳ್ಳುವ ಮೂಲಕ ಉದಯೋನ್ಮುಖ ಡೇಟಾ ವಿಜ್ಞಾನಿಗಳಿಗೆ ಡಿಎಸ್‌ಯು ಅವಕಾಶವನ್ನು ಒದಗಿಸುತ್ತದೆ. ಸಚಿವಾಲಯಗಳು/ಇಲಾಖೆಗಳು ತಮ್ಮ ಡೇಟಾ ಸನ್ನದ್ಧತೆಯ ಮಟ್ಟವನ್ನು ಸುಧಾರಿಸಲು ಮತ್ತು ನಿರ್ದಿಷ್ಟವಾಗಿ ಡಿಸೆಂಬರ್, 2022 ರ ವೇಳೆಗೆ ಡಿಜಿಕ್ಯುಐ 5.0 ಸ್ಕೋರ್‌ಗಳನ್ನು ತಲುಪಲು ಕ್ರಿಯಾ ಯೋಜನೆ ಅಥವಾ ಡೇಟಾ ತಂತ್ರದ ಅಭಿವೃದ್ಧಿ ಮತ್ತು ಅನುಷ್ಠಾನಕ್ಕೆ ಕೇಂದ್ರೀಯ ಘಟಕವಾಗಿ ಡೇಟಾ ಮತ್ತು ಕಾರ್ಯತಂತ್ರದ ಘಟಕವನ್ನು (ಡಿಎಸ್‌ಯು) ಸ್ಥಾಪಿಸಲು ಸಲಹೆ ನೀಡಲಾಯಿತು ಎಂದು ಅವರು ಹೇಳಿದರು.

ಡಿಎಸ್‌ಟಿಯ ಡೇಟಾ ಮತ್ತು ಕಾರ್ಯತಂತ್ರ ಘಟಕವು ಡೇಟಾ ವಿಶ್ಲೇಷಣೆ ಮತ್ತು ಡ್ಯಾಶ್‌ಬೋರ್ಡ್‌ಗಳನ್ನು ರಚಿಸುವುದರ ಹೊರತಾಗಿ ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಡೇಟಾದ ಬಗ್ಗೆ ಅರಿವು ಮೂಡಿಸುವಲ್ಲಿ ತೊಡಗಿಸಿಕೊಂಡಿದೆ. ಡಿಎಸ್‌ಟಿಯ ವಿಜ್ಞಾನಿಗಳು, ಡೇಟಾ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಉಪನ್ಯಾಸಗಳು ಮತ್ತು ಸಂವಾದಗಳಿಗಾಗಿ ಡಿಎಸ್‌ಯು ಪ್ರಖ್ಯಾತ ಡೇಟಾ ವಿಜ್ಞಾನಿಗಳು ಮತ್ತು ಡೇಟಾ ಚಾಂಪಿಯನ್‌ಗಳನ್ನು ಆಹ್ವಾನಿಸುತ್ತದೆ. ಡಿಎಸ್‌ಟಿಯ ಯೋಜನೆಗಳು/ಕಾರ್ಯಕ್ರಮಗಳು ಮತ್ತು ಸಾಮಾನ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಾಧಾರಿತ ಸಾಪ್ತಾಹಿಕ ಪೋಸ್ಟರ್ ಅನ್ನು ಸಂಬಂಧಿತ ಡ್ಯಾಶ್‌ಬೋರ್ಡ್‌ನ ಕ್ಯುಆರ್‌ ಕೋಡ್‌ನೊಂದಿಗೆ ವಿಜ್ಞಾನಿಗಳು ಮತ್ತು ಇತರ ಅಧಿಕಾರಿಗಳಿಗೆ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ತಂತ್ರಜ್ಞಾನ ಭವನದ ಪ್ರಮುಖ ಸ್ಥಳಗಳಲ್ಲಿ ಇರಿಸಲಾಗುತ್ತದೆ.

 

*****


(Release ID: 1859695) Visitor Counter : 171


Read this release in: English , Urdu , Hindi , Odia , Tamil