ಕಲ್ಲಿದ್ದಲು ಸಚಿವಾಲಯ

2022-23 ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ನಿರ್ಬಂಧಿತ(ಕ್ಯಾಪ್ಟಿವ್) ಮತ್ತು ವಾಣಿಜ್ಯ ಗಣಿಗಳಿಂದ ಕಲ್ಲಿದ್ದಲು ಉತ್ಪಾದನೆ 58% ಏರಿಕೆ


37 ನಿರ್ಬಂಧಿತ ಮತ್ತು ವಾಣಿಜ್ಯ ಗಣಿಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಪ್ರಗತಿಯಲ್ಲಿ; 11 ಹೊಸ ಗಣಿಗಳಲ್ಲಿ ಈ ವರ್ಷ ಉತ್ಪಾದನೆ ಆರಂಭ ಸಾಧ್ಯತೆ 

Posted On: 06 SEP 2022 11:57AM by PIB Bengaluru

2022-23 ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ನಿರ್ಬಂಧಿತ(ಕ್ಯಾಪ್ಟಿವ್) ಮತ್ತು ವಾಣಿಜ್ಯ ಗಣಿಗಳಿಂದ ಕಲ್ಲಿದ್ದಲ ಪ್ರತಿಪಾದಕರ ಸಮ್ಮುಖದಲ್ಲಿ 2022-23ರ ಆರ್ಥಿಕ ವರ್ಷದಲ್ಲಿ ಗಣಿಗಳ ಕಲ್ಲಿದ್ದಲು ಉತ್ಪಾದನೆಯ ಪರಿಶೀಲನೆ(ಪರಾಮರ್ಶೆ) ನಡೆಸಿದೆ.

2022-23ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ 43.93 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆ ಆಗಿದೆ. ಇದು 2021-22ರ ಇದೇ ಅವಧಿಯಲ್ಲಿ ಉತ್ಪಾದಿಸಲಾದ 27.85 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದನೆಗೆ ಹೋಲಿಸಿದರೆ 57.74% ಹೆಚ್ಚಳವಾಗಿದೆ.

ವಾಣಿಜ್ಯ ಹರಾಜು ಸುಧಾರಣಾ ಕ್ರಮಗಳ ಅಡಿ, 2021ರಲ್ಲಿ ಹರಾಜಾದ 2 ಗಣಿಗಳು ಕಾರ್ಯಾಚರಣೆ ನಡೆಸುತ್ತಿವೆ. ಅವು 2022-23ರ ಏಪ್ರಿಲ್-ಆಗಸ್ಟ್ ಅವಧಿಯಲ್ಲಿ 2.36 ದಶಲಕ್ಷ ಟನ್ ಕಲ್ಲಿದ್ದಲು ಉತ್ಪಾದಿಸಿವೆ. ಪ್ರಸ್ತುತ, 37 ನಿರ್ಬಂಧಿತ ಮತ್ತು ವಾಣಿಜ್ಯ ಗಣಿಗಳಲ್ಲಿ ಉತ್ಪಾದನೆ ನಡೆಯುತ್ತಿದೆ. ಈ ವರ್ಷ ಕನಿಷ್ಠ 11 ಹೊಸ ಗಣಿಗಳಲ್ಲಿ ಉತ್ಪಾದನೆ ಆರಂಭವಾಗುವಕ ನಿರೀಕ್ಷೆಯಿದೆ. ಇದು ದೇಶದಲ್ಲಿ ಕಲ್ಲಿದ್ದಲು ಬೇಡಿಕೆಯನ್ನು ಪೂರೈಸಲು ಗಣನೀಯ ಕೊಡುಗೆ ನೀಡಲಿದೆ.

ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆದಾರರ ಉತ್ಪಾದನಾ ಪ್ರಯತ್ನಗಳನ್ನು ಸಚಿವಾಲಯವು ಶ್ಲಾಘಿಸಿದೆ. 2022-23ರ ಆರ್ಥಿಕಗ ವರ್ಷದಲ್ಲಿ ಈ ಕಲ್ಲಿದ್ದಲು ಬ್ಲಾಕ್‌ಗಳು 141.78 ದಶಲಕ್ಷ ಟನ್ ಉತ್ಪಾದನಾ ಗುರಿ ಸಾಧಿಸಲಿವೆ ಎಂಬ ಆಶಾವಾದ ಹೊರಹಾಕಿದೆ.
ಅದೇ ವೇಳೆ, ಪಾರ್ಸಾ ಪೂರ್ವ ಮತ್ತು ಕಾಂತಾ ಬಸಾನ್ ಕಲ್ಲಿದ್ದಲು ಗಣಿಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಮತ್ತು ಪಾರ್ಸಾ ಕಲ್ಲಿದ್ದಲು ಗಣಿಯ ಉತ್ಪಾದನೆ ಆರಂಭವಾಗಿಲ್ಲ. ನಿರಂತರ ನಿಲುಗಡೆಯು ಈ ವರ್ಷದ ಗುರಿ  ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.


ಇದಲ್ಲದೆ, ಪರಿಶೀಲನೆಯ ಸಮಯದಲ್ಲಿ, ಯೋಜನೆಯ ಅನುಷ್ಠಾನಗಾರರು (ಪ್ರತಿಪಾದಕರು) ತಾವು ಮಾಡಿದ ಪ್ರಯತ್ನಗಳು ಮತ್ತು ಎದುರಿಸಿದ ಸವಾಲುಗಳನ್ನು ಹಂಚಿಕೊಂಡಿದ್ದಾರೆ. ಕಲ್ಲಿದ್ದಲು ಸಚಿವಾಲಯವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದೆ.

*****



(Release ID: 1857135) Visitor Counter : 135


Read this release in: Tamil , English , Urdu , Hindi