ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ನವದೆಹಲಿಯಲ್ಲಿಂದು "ಸ್ವರಾಜ್: ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ" ದೂರದರ್ಶನದ ಧಾರಾವಾಹಿಗೆ ಚಾಲನೆ ಮತ್ತು ವಿಶೇಷ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಶ್ರೀ ಅಮಿತ್ ಶಾ


ಸ್ವಾತಂತ್ರ್ಯಕ್ಕಾಗಿ ತಿಳಿದೋ ತಿಳಿಯದೆಯೋ ತಮ್ಮ ಜೀವನವನ್ನು ಮುಡಿಪಾಗಿಟ್ಟ ಲಕ್ಷಾಂತರ ಜನರನ್ನು ಸ್ಮರಿಸಲು ಮತ್ತು ಕಳೆದ 75 ವರ್ಷಗಳಲ್ಲಿ ರಾಷ್ಟ್ರದ ಸಾಧನೆಗಳನ್ನು ಅಭೂತಪೂರ್ವವೆಂಬಂತೆ ಬಿಂಬಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ

ಅದೇ ವೇಳೆ, ನಾವು ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವದಿಂದ ಶತಮಾನೋತ್ಸವದವರೆಗಿನ ಅವಧಿಯಲ್ಲಿ ಶ್ರೇಷ್ಠ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡಿದ್ದು, ಈ ಸಂಕಲ್ಪವನ್ನು ಪೂರ್ಣಗೊಳಿಸಲು ಆದರ್ಶಪ್ರಾಯ ಪ್ರಯತ್ನಗಳನ್ನು ಮಾಡಲು ನಾವು ನಮ್ಮ ಬಲವಾದ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸುತ್ತಿದ್ದೇವೆ

ಭಾರತ ದಾಪುಗಾಲಿಟ್ಟ ನಂತರ, ಭಾರತ ಮಹಾನ್ ಆಗುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ, ಈ ಪ್ರಯತ್ನದ ನಿಟ್ಟಿನಲ್ಲಿ ದೂರದರ್ಶನವು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ "ಸ್ವರಾಜ್" ಧಾರಾವಾಹಿಯ 75 ಕಂತುಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ, ಇದು ಬಹಳ ದಿಟ್ಟ ಕ್ರಮವಾಗಿದೆ

ಆಕಾಶವಾಣಿ ಮತ್ತು ದೂರದರ್ಶನ ಮಾತ್ರ ಭಾರತದ ಭಾವನೆಯನ್ನು ಸಮರ್ಥವಾಗಿ ವ್ಯಕ್ತಪಡಿಸಬಲ್ಲದು

ದೂರದರ್ಶನ ಮತ್ತು ಆಕಾಶವಾಣಿಗಳು ಕಾಲಕಾಲಕ್ಕೆ ವಿವಿಧ ರೀತಿಯ ಕಾರ್ಯಕ್ರಮಗಳ ಮೂಲಕ, ಭಾವನೆಗಳನ್ನು ಬೆಳೆಸುವ ಮತ್ತು ಸರಿಯಾದ ರೀತಿ ತೆಗೆದುಕೊಂಡು ಹೋಗುವ ಮೂಲಕ ಹಾಗೂ ಅಂತಿಮವಾಗಿ ಸೃಜನ ಶೀಲ ಶಕ್ತಿಯನ್ನು ಒಗ್ಗೂಡಿಸುವ ಮೂಲಕ ದೇಶದಲ್ಲಿ ಹುರುಪು ಮೂಡಿಸಿದೆ.

ದೇಶದ ಭವಿಷ್ಯವನ್ನು ಶ್ರೇಷ್ಠಗೊಳಿಸಬೇಕಾದರೆ, ಭಾರತದ ಮಹಾನ್ ಇತಿಹಾಸದ ಬಗ್ಗೆ ಹೆಮ್ಮೆಯ ಭಾವನೆಯನ್ನು ಯುವಜನರಲ್ಲಿ ಒಡಮೂಡಿಸಬೇಕು

ಭಾರತದಲ್ಲಿ ಸ್ವರಾಜ್ಯ ಎಂಬ ಪದದ ಅರ್ಥವು ಸ್ವಯಂ ಆಡಳಿತಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಸ್ವರಾಜ್ಯ ಪದದ ಅರ್ಥವು ಇಡೀ ಭಾರತವನ್ನು ಸ್ವತಂತ್ರಗೊಳಿಸುವ ಮತ್ತು ನಮ್ಮದೇ ಆದ ರೀತಿಯಲ್ಲಿ ಮುನ್ನಡೆಸುವುದಾಗಿದೆ

ಸ್ವಭಾಷಾ, ಸ್ವಧರ್ಮ, ಸ್ವ-ಸಂಸ್ಕೃತಿ ಮತ್ತು ನಮ್ಮದೇ ಆದ ಕಲೆಗಳು ಕೂಡ ಸ್ವರಾಜ್ಯದ ಅರ್ಥವನ್ನು ಹೊಂದಿವೆ ಮತ್ತು ಇದನ್ನು ನಾವು ನಿಜವಾದ ಮನೋಭಾವದಿಂದ ಅರ್ಥಮಾಡಿಕೊಳ್ಳದ ಹೊರತು, ಭಾರತವು ನಿಜವಾದ ಅರ್ಥದಲ್ಲಿ ಸ್ವರಾಜ್ಯವನ್ನು ಸಾಧಿಸಲು ಸಾಧ್ಯವಿಲ್ಲ

ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷಗಳಲ್ಲಿ ನಾವು ನಮ್ಮ ಭಾಷೆಗಳನ್ನು ಉಳಿಸಲು ಸಾಧ್ಯವಾಗದಿದ್ದರೆ, ನಾವು ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗದಿದ್ದರೆ ಮತ್ತು ಸಾವಿರಾರು ವರ್ಷಗಳಿಂದ ನಿರಂತರವಾಗಿರುವ ನಮ್ಮ ಸಂಸ್ಕೃತಿಯನ್ನು ಉಳಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಸ್ವರಾಜ್ಯವನ್ನು ಸಾಧಿಸಲು ಸಾಧ್ಯವಾಗುತ್ತದೆಯೇ?

ಭಾರತವನ್ನು ಆಳಿದವರು ನಮ್ಮ ಅತ್ಯುತ್ತಮ ವ್ಯವಸ್ಥೆಗಳನ್ನು ಹಾಳುಗೆಡವಿದರು, ಅವರು ನಮ್ಮ ಜನರಲ್ಲಿ ಕೀಳರಿಮೆಯನ್ನು ಹುಟ್ಟುಹಾಕಿದ್ದರಿಂದ ನಮ್ಮನ್ನು ಆಳಲು ಸಾಧ್ಯವಾಯಿತು, ಏಕೆಂದರೆ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗಿಂತ ಬಹಳ ಮುಂದಿದ್ದೆವು

ಜಗತ್ತಿಗೆ ಗೀತೆ, ವೇದಗಳು, ಸೊನ್ನೆಯ ಸಂಖ್ಯೆ ಮತ್ತು ಖಗೋಳಶಾಸ್ತ್ರವನ್ನು ನೀಡಿದ್ದು ಭಾರತ, ನಮ್ಮನ್ನು ಆಳಿದವರು ಸಹ ನಮ್ಮ ಜ್ಞಾನದ ಬಗ್ಗೆ ಮಿಥ್ಯೆಗಳನ್ನು ಸೃಷ್ಟಿಸಲು ಪ್ರಯತ್ನಿಸಿದರು, ಅವರು ನಮ್ಮ ಭಾಷೆಗಳು, ಸಂಸ್ಕೃತಿ ಮತ್ತು ನಮ್ಮ ಆಡಳಿತದ ಸಾಮರ್ಥ್ಯದ ಬಗ್ಗೆ ಜನರಲ್ಲಿ ಕೀಳರಿಮೆಯನ್ನು ಮೂಡಿಸಿದರು

"ಸ್ವರಾಜ್" ಧಾರಾವಾಹಿಯ ಉದ್ದೇಶವು ಪ್ರತಿಯೊಂದು ಕೀಳರಿಮೆಯ ಸಂಕೀರ್ಣತೆಯನ್ನು ಬೇರುಸಹಿತ ಕಿತ್ತೊಗೆಯುವುದು ಮತ್ತು ಸಾರ್ವಜನಿಕರಲ್ಲಿ ಅಭಿಮಾನವನ್ನು ಮೂಡಿಸುವುದಾಗಿರಬೇಕು, ಆಗ ಮಾತ್ರ ನಾವು ಸ್ವರಾಜ್ಯದ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಮತ್ತು ಇದು ಆಜಾದಿ ಕಾ ಅಮೃತ ಮಹೋತ್ಸವದ ಅತಿದೊಡ್ಡ ಸಾಧನೆಯಾಗುತ್ತದೆ

ಈ ಧಾರಾವಾಹಿಯು ನಮ್ಮ ಯುವಕರನ್ನು ಪ್ರಚೋದಿಸುತ್ತದೆ ಮತ್ತು ನಮ್ಮ ಇತಿಹಾಸದ ಬಗ್ಗೆ ಅವರಲ್ಲಿ ಹೆಮ್ಮೆಯನ್ನು ಮೂಡಿಸುತ್ತದೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದ ಕೇಂದ್ರ ಗೃಹ ಸಚಿವರು; ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ನಾವು ಭವ್ಯ ಭಾರತದ ನಿರ್ಮಾಣದತ್ತ ವೇಗವಾಗಿ ಸಾಗುತ್ತೇವೆ ಎಂದೂ ಹೇಳಿದರು

Posted On: 05 AUG 2022 6:40PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರಿಂದು ನವದೆಹಲಿಯಲ್ಲಿ ಮುಖ್ಯ ಅತಿಥಿಯಾಗಿ ದೂರದರ್ಶನದ "ಸ್ವರಾಜ್: ಭಾರತ್ ಕೆ ಸ್ವತಂತ್ರ ಸಂಗ್ರಾಮ್ ಕಿ ಸಮಗ್ರ ಗಾಥಾ" (ಸ್ವರಾಜ್- ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಗ್ರ ಗಾಥೆ) ಧಾರಾವಾಹಿಗೆ ಚಾಲನೆ ಮತ್ತು ವಿಶೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಯಾಂಕ್ ಕುಮಾರ್ ಅಗರವಾಲ್ ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.

  

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ದೂರದರ್ಶನ ಮತ್ತು ಆಕಾಶವಾಣಿ ಕಾಲಕಾಲಕ್ಕೆ ವಿವಿಧ ಕಾರ್ಯಕ್ರಮಗಳ ಮೂಲಕ ಭಾವನೆಗಳನ್ನು ಬೆಳೆಸುವ ಮತ್ತು ಸರಿದಾರಿಯಲ್ಲಿ ತೆಗೆದುಕೊಂಡು ಮೂಲಕ ಮತ್ತು ಅಂತಿಮವಾಗಿ ಸೃಜನಶೀಲ ಶಕ್ತಿಯನ್ನು ಒಗ್ಗೂಡಿಸುವ ಮೂಲಕ ದೇಶವನ್ನು ಪ್ರಚೋದಿಸಿವೆ ಎಂದು ಹೇಳಿದರು. ಆಕಾಶವಾಣಿ ಮತ್ತು ದೂರದರ್ಶನಗಳು ಮಾತ್ರ ಭಾರತದ ಭಾವನೆಯನ್ನು ವ್ಯಕ್ತಪಡಿಸಲು ಸಾಧ್ಯ ಎಂದು ಶ್ರೀ ಶಾ ಹೇಳಿದರು.

 

ಇಂದಿನ ಕಾರ್ಯಕ್ರಮಕ್ಕೆ ವಿಶೇಷ ಮಹತ್ವವಿದೆ, ಏಕೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ, ಇದು ರಾಷ್ಟ್ರಕ್ಕೆ ಬಹಳ ಮುಖ್ಯವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ನಾವು ದೇಶ ವಿದೇಶಗಳಲ್ಲಿ ನಮ್ಮ ಸ್ವಾತಂತ್ರ್ಯವನ್ನು ಮತ್ತು ಕಳೆದ 75 ವರ್ಷಗಳಲ್ಲಿ ನಮ್ಮ ರಾಷ್ಟ್ರೀಯ ಸಾಧನೆಗಳನ್ನು ವೈಭವೀಕರಿಸುತ್ತಿದ್ದೇವೆ. ಲಕ್ಷಾಂತರ ಜನರು, ತಿಳಿದೋ ತಿಳಿಯದೆಯೋ, ಸ್ವಾತಂತ್ರ್ಯವನ್ನು ಪಡೆಯಲು ತಮ್ಮ ಜೀವಗಳನ್ನು ತ್ಯಾಗ ಮಾಡಿದರು, ಮತ್ತು ನಾವು ಅವರುಗಳನ್ನು ಸಹ ಸ್ಮರಿಸುತ್ತಿದ್ದೇವೆ. ಅದೇ ವೇಳೆ, ಅಮೃತಮಹೋತ್ಸವದಿಂದ ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವದವರೆಗಿನ ಅವಧಿಯಲ್ಲಿ ನಾವು ಭವ್ಯ ಭಾರತವನ್ನು ನಿರ್ಮಿಸಲು ಸಂಕಲ್ಪ ಮಾಡುತ್ತಿದ್ದೇವೆ ಮತ್ತು ಈ ನಿರ್ಣಯಗಳನ್ನು ಪೂರೈಸಲು ಆದರ್ಶಪ್ರಾಯ ಪ್ರಯತ್ನಗಳನ್ನು ಮಾಡಲು ನಾವು ನಮ್ಮ ಬಲವಾದ ಇಚ್ಛೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ದೇಶವು ಮುನ್ನಡೆಯ ದಾಪುಗಾಲಿಟ್ಟ ನಂತರ, ಭಾರತವು ಶ್ರೇಷ್ಠವಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ದೂರದರ್ಶನವು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ನೇತೃತ್ವದಲ್ಲಿ "ಸ್ವರಾಜ್" ಧಾರಾವಾಹಿಯ 75 ಕಂತುಗಳ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ ಎಂದರು.

  

 ಭಾರತದಲ್ಲಿ ಸ್ವರಾಜ್ಯ ಎಂಬ ಪದದ ಅರ್ಥವು ಸ್ವಯಂ ಆಡಳಿತಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಶ್ರೀ ಅಮಿತ್ ಶಾ ಹೇಳಿದರು. ಸ್ವರಾಜ್ಯ ಎಂಬ ಪದದ ಅರ್ಥವೇನೆಂದರೆ ಇಡೀ ಭಾರತವನ್ನು ಸ್ವತಂತ್ರಗೊಳಿಸುವುದು ಮತ್ತು ನಮ್ಮ ಆಡಳಿತವನ್ನು ನಮ್ಮದೇ ಆದ ರೀತಿಯಲ್ಲಿ ನಡೆಸುವುದು. ಸ್ವರಾಜ್ಯ ಎಂಬ ಪದದ ಅರ್ಥ ಸ್ವ-ಭಾಷೆ, ಸ್ವ-ಧರ್ಮ ಮತ್ತು ಸ್ವ-ಸಂಸ್ಕೃತಿ ಮತ್ತು ನಮ್ಮದೇ ಆದ ಕಲೆಯೂ ಆಗಿದೆ. ಸ್ವರಾಜ್ಯದ ಸ್ಫೂರ್ತಿಯನ್ನು ನಾವು ಅಕ್ಷರಶಃ ಅರ್ಥಮಾಡಿಕೊಳ್ಳದ ಹೊರತು, ಭಾರತವು ಸ್ವರಾಜ್ಯವನ್ನು ನಿಜವಾದ ಅರ್ಥದಲ್ಲಿ ಸಾಧಿಸಲು ಸಾಧ್ಯವಿಲ್ಲ. ಕಳೆದ 75 ವರ್ಷಗಳಲ್ಲಿ, ಪ್ರತಿಯೊಬ್ಬರೂ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಆದರೆ ನಾವು ಸ್ವಾತಂತ್ರ್ಯೋತ್ಸವ ಶತಮಾನೋತ್ಸವವನ್ನು ಆಚರಿಸುವಾಗ ನಮ್ಮ ಭಾಷೆಗಳನ್ನು ಉಳಿಸಲು ನಮಗೆ ಸಾಧ್ಯವಾಗದಿದ್ದರೆ, ನಮ್ಮ ಇತಿಹಾಸವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗದಿದ್ದರೆ ಮತ್ತು ಸಾವಿರಾರು ವರ್ಷಗಳಿಂದ ನಿರಂತರವಾಗಿರುವ ನಮ್ಮ ಸಂಸ್ಕೃತಿಯನ್ನು ಉಳಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಸ್ವರಾಜ್ಯವನ್ನು ಸಾಧಿಸಬಹುದೇ? ಎಂದು ಪ್ರಶ್ನಿಸಿದ ಅವರು, ನಮ್ಮನ್ನು ಆಳಿದವರು ನಮ್ಮ ಅತ್ಯುತ್ತಮ ಅಭಿವೃದ್ಧಿ ಹೊಂದಿದ ವ್ಯವಸ್ಥೆಯನ್ನು ನಾಶಪಡಿಸಿದರು ಎಂದು ಅವರು ಹೇಳಿದರು. ನಮ್ಮಲ್ಲಿ ಕೀಳರಿಮೆಯನ್ನು ಸೃಷ್ಟಿಸಿದರೆ ಮಾತ್ರ ಅವರು ನಮ್ಮನ್ನು ಆಳಲು ಸಾಧ್ಯವಾಗುತ್ತಿತ್ತು, ಏಕೆಂದರೆ ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಅವರಿಗಿಂತ ಮುಂದಿದ್ದೇವು. ಮಾನವೀಯ ಮತ್ತು ಆಡಳಿತದ ಮೌಲ್ಯಗಳಲ್ಲಿ ನಾವು ಅವರಿಗಿಂತ ಬಹಳ ಮುಂದಿದ್ದೆವು. ಗೀತೆ, ವೇದಗಳು, ಸೊನ್ನೆಯೆಂಬ ಸಂಖ್ಯೆ ಮತ್ತು ಖಗೋಳಶಾಸ್ತ್ರವನ್ನು ಜಗತ್ತಿಗೆ ನೀಡಿದ್ದು ಭಾರತ. ನಮ್ಮನ್ನು ಆಳಿದವರು ನಮ್ಮಲ್ಲಿರುವ ಜ್ಞಾನದ ಬಗ್ಗೆ ಮಿಥ್ಯೆಗಳನ್ನು ಹುಟ್ಟುಹಾಕಲು ಪ್ರಯತ್ನಿಸಿದರು, ಅವರು ನಮ್ಮ ಭಾಷೆಗಳು, ನಮ್ಮ ಸಂಸ್ಕೃತಿ ಮತ್ತು ಆಳುವ ನಮ್ಮ ಸಾಮರ್ಥ್ಯದ ಬಗ್ಗೆ ಕೀಳರಿಮೆಯನ್ನು ಮೂಡಿಸಿದರು ಎಂದರು.

 

 75 ವಾರಗಳ ಸುದೀರ್ಘ "ಸ್ವರಾಜ್" ಧಾರಾವಾಹಿಯನ್ನು ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದಿಸಿ ಪ್ರದರ್ಶಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಪ್ರತಿಯೊಂದು ಕೀಳರಿಮೆಯ ಸಂಕೀರ್ಣತೆಯನ್ನು ಬೇರುಸಹಿತ ಕಿತ್ತೊಗೆಯುವುದು ಮತ್ತು ನಮ್ಮ ಜನರಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸುವುದು ಈ ಧಾರಾವಾಹಿಯ ಉದ್ದೇಶವಾಗಬೇಕು, ಆಗ ಮಾತ್ರ ನಾವು ಸ್ವರಾಜ್ಯದ ಉದ್ದೇಶಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಮತ್ತು ಇದು ಆಜಾದಿ ಕಾ ಅಮೃತ ಮಹೋತ್ಸವದ ಅತಿದೊಡ್ಡ ಸಾಧನೆಯಾಗಲಿದೆ. ತಮ್ಮ ಇತಿಹಾಸದ ಸಕಾರಾತ್ಮಕ ಅಂಶಗಳನ್ನು ವೈಭವೀಕರಿಸದ ಹೊರತು ಯುವಕರು ಎಂದಿಗೂ ತಮಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೀ ಶಾ ಸಮಾರಂಭದಲ್ಲಿ ನೆರೆದಿದ್ದ ಯುವಕರಿಗೆ ತಿಳಿಸಿದರು. ದೇಶಕ್ಕೆ ಉತ್ತಮ ಭವಿಷ್ಯ ಇರಬೇಕಾದರೆ, ನಮ್ಮ ಮಹಾನ್ ಇತಿಹಾಸವು ಯುವಕರಲ್ಲಿ ಹೆಮ್ಮೆಯನ್ನು ಮೂಡಿಸಬೇಕು. ಈ ಧಾರಾವಾಹಿಯು ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಅವರಲ್ಲಿ ನಮ್ಮ ಇತಿಹಾಸದ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ ಎಂಬ ಸಂಪೂರ್ಣ ನಂಬಿಕೆ ತಮಗಿದೆ ಎಂದರು ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಶ್ರೇಷ್ಠ ಭಾರತವನ್ನು ನಿರ್ಮಿಸುವತ್ತ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತೇವೆ ಎಂದೂ ಗೃಹ ಸಚಿವರು ಹೇಳಿದರು.

 

********


(Release ID: 1848942) Visitor Counter : 371


Read this release in: English , Urdu , Hindi , Assamese