ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
azadi ka amrit mahotsav

ಕೇಂದ್ರ ವಲಯದ ರಕ್ಷಣಾ ಯೋಜನೆ ಸಂಪದ

Posted On: 29 JUL 2022 1:03PM by PIB Bengaluru

ಕೃಷಿ ಭೂಮಿಯ ಬಾಗಿಲಿನಿಂದ ಚಿಲ್ಲರೆ ಮಾರಾಟ ಹಂತದವರೆಗೆ ಸಮರ್ಥ ಪೂರೈಕೆ ಸರಪಳಿಯ ನಿರ್ವಹಣೆಯೊಂದಿಗೆ ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯ ಪ್ರಧಾನಮಂತ್ರಿ ಕಿಸಾನ್ ಸಂಪದ [ಪಿ.ಎಂ.ಕೆ.ಎಸ್.ವೈ] ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಿಂದ ಆಹಾರ ಸಂಸ್ಕರಣಾ ವಲಯದ ಬೆಳವಣಿಗೆಗೆ ಪುಷ್ಟಿ ದೊರೆಯಲಿದ್ದು, ರೈತರಿಗೆ ಉತ್ತಮ ಆದಾಯ, ಉದ್ಯೋಗಾವಕಾಶಗಳು, ಕೃಷಿ ಸಂಸ್ಕರಣೆಯಲ್ಲಿ ತ್ಯಾಜ್ಯ ತಗ್ಗಿಸುವ, ಸಂಸ್ಕರಣಾ ವಲಯದ ಉತ್ಪಾದನೆ ಏರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರದ ರಫ್ತು ಉತ್ತೇಜಿಸಲು ಸಹಕಾರಿಯಾಗಲಿದೆ.

ಸಂಪದ ಎಂಬುದು ಡಿಜಿಟಲ್ ವೇದಿಕೆಯಾಗಿದ್ದು, ಇದರ ಮೂಲಕ ಪಿ.ಎಂ.ಕೆ.ಎಸ್.ವೈ ವಿವಿಧ ಉಪ ಯೋಜನೆಗಳ ಅಡಿಯಲ್ಲಿ ಮಂಜೂರಾದ ವಿವಿಧ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ.

ಸಚಿವಾಲಯದ ಪಿ.ಎಂ.ಕೆ.ಎಸ್.ವೈ ಉಪ ಯೋಜನೆಗಳಡಿ 853 ಆಹಾರ ಸಂಸ್ಕರಣಾ ಘಟಕಗಳನ್ನು ಅಸ್ಥಿತ್ವಕ್ಕೆ ತರಲು 21058.29 ಕೋಟಿ ರೂಪಾಯಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಮತ್ತು ಈ ಯೋಜನೆಯಡಿ ಈವರೆಗೆ 6673.74 ಕೋಟಿ ರೂಪಾಯಿ ಮೊತ್ತಕ್ಕೆ ಮಂಜೂರಾತಿ ನೀಡಿದ್ದು, ಈ ಪೈಕಿ 4444.25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಇದರಿಂದ ವಾರ್ಷಿಕ 216.81 ಮೆಟ್ರಿಕ್ ಟನ್ ಸಂಸ್ಕರಣೆ ಮತ್ತು 70.014 ಲಕ್ಷ ಮೆಟ್ರಿಕ್ ಟನ್ ಸಂರಕ್ಷಣೆ ಮಾಡುವ ಸಾಮರ್ಥ್ಯವನ್ನು ವೃದ್ದಿಸುವ ಅಂಶಗಳನ್ನು ಒಳಗೊಂಡಿದೆ. ಇದರಿಂದ 41,42,917 ರೈತರಿಗೆ ಪ್ರಯೋಜನ ದೊರೆಯಲಿದೆ ಮತ್ತು 10,61,361 ಉದ್ಯೋಗಾವಕಾಶಗಳು ಲಭಿಸುತ್ತವೆ.

ಆಹಾರ ಸಂಸ್ಕರಣೆ ಕೈಗಾರಿಕಾ ಖಾತೆ ರಾಜ್ಯ ಸಚಿವ ಶ್ರೀ ಪ್ರಲ್ಲಾದ್ ಸಿಂಗ್ ಪಟೇಲ್ ಅವರು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.  

**********


(Release ID: 1846267) Visitor Counter : 131


Read this release in: English , Urdu , Gujarati , Telugu