ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav

ಸಿ.ಎನ್.ಆರ್ ವಲಯದಲ್ಲಿ ಹಸಿರೀಕಣರಗೊಳಿಸುವ ಕ್ರಿಯಾ ಯೋಜನೆಯಂತೆ ಮುಂಗಾರು ಸಂದರ್ಭದಲ್ಲಿ ಕಾರ್ಯಗತಗೊಳಿಸಲು ಸಿ.ಎ.ಕ್ಯೂ.ಎಂ ಪ್ರಗತಿಗೆ ವೇಗ ನೀಡಿದೆ


ದೆಹಲಿ ಎನ್.ಸಿ.ಆರ್. ನಿಂದ 01,81,90,447 ಗಿಡ ನೆಟ್ಟು ಸಾಧನೆ

Posted On: 23 JUL 2022 12:52PM by PIB Bengaluru

ಹಸಿರು ಹೊದಿಕೆ ಹೆಚ್ಚಳ ಮತ್ತು ದೊಡ್ಡ ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಮೂಲಕ ದೇಶದ ರಾಜಧಾನಿ ವಲಯದಲ್ಲಿ [ಎನ್.ಸಿ.ಆರ್] ವಾಯು ಮಾಲೀನ್ಯ ತಗ್ಗಿಸಲು ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಿದೆ. ಎನ್.ಸಿ.ಆರ್ ಮತ್ತು ಸಮೀಪದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗ [ಸಿ.ಎ.ಕ್ಯೂ.ಎಂ] ಎನ್.ಸಿ.ಆರ್ ವಲಯದ ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಎನ್.ಸಿ.ಟಿಯ ಎನ್.ಸಿ.ಆರ್. ವಲಯದ ಜಿಲ್ಲೆಗಳಲ್ಲಿ ಗಿಡನೆಡುವ ಪ್ರಗತಿಯನ್ನು ಪರಿಶೀಲಿಸುತ್ತಿದೆ. 3,34,56,541 ಗಿಡನೆಡುವ ಪರಿಷ್ಕೃತ ಗುರಿಯಲ್ಲಿ ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿ ಎನ್.ಸಿ.ಟಿಯ ಎನ್.ಸಿ.ಆರ್ ವಲಯದ ಜಿಲ್ಲೆಗಳಲ್ಲಿ 01,81,90,447 ಗಿಡಗಳನ್ನು ನೆಡಲಾಗಿದ್ದು, ಜುಲೈ 20ರ ವೇಳೆಗೆ 54% ಕ್ಕೂ ಹೆಚ್ಚು ಸಾಧನೆಯನ್ನು ದಾಖಲಿಸಲಾಗಿದೆ.

 

2022 – 23 ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೆಚ್ಚು ಗಿಡ ನೆಡುವ ಗುರಿ ನಿಗದಿ ಮಾಡಲಾಗಿದೆ ಮತ್ತು ಹರ್ಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಜಿ.ಎಸ್.ಸಿ.ಟಿ.ಡಿ ಯಲ್ಲಿ 2022-23 ನೇ ಸಾಲಿಗೆ ಹೆಚ್ಚಿನ ಗುರಿ ನಿಗದಿ ಮಾಡಲಾಗಿದೆ. 35,06,900 ಗಿಡ ನೆಡುವ ಗುರಿಯಲ್ಲಿ ದೆಹಲಿ ಎನ್.ಸಿ.ಟಿಯಲ್ಲಿ 20.07.2022 ರವರೆಗೆ 8,38,416 ಗಿಡಗಳನ್ನು ನೆಡಲಾಗಿದೆ. ಯು.ಪಿಯ ಎನ್.ಸಿ.ಆರ್ ಜಿಲ್ಲೆಗಳಲ್ಲಿ 1,87,39,565 ಗಿಡ ನೆಡುವ ಗುರಿ ಪೈಕಿ 1,52,36,379 ಗಿಡಗಳನ್ನು ನೆಡಲಾಗಿದೆ. ಹರ್ಯಾಣ [ಎನ್.ಸಿ.ಆರ್] ದಲ್ಲಿ 1,01,56,447 ಗುರಿ ಪೈಕಿ 17,06,152 ಗಿಡಗಳನ್ನು ನೆಡಲಾಗಿದೆ ಮತ್ತು ರಾಜಸ್ಥಾನದ ಎನ್.ಸಿ.ಆರ್ ಜಿಲ್ಲೆಗಳಲ್ಲಿ 10,53,629 ಗಿಡಗಳ ಪೈಕಿ 4,09,500 ಗಿಡಗಳನ್ನು ನೆಡಲಾಗಿದೆ. ಜುಲೈ 20 ರ ವರೆಗೆ ಪರಿಷ್ಕೃತ ಗುರಿಯಲ್ಲಿ ಎನ್.ಸಿ.ಆರ್ ಹರ್ಯಾಣ, ಎನ್.ಸಿ.ಆರ್ ಉತ್ತರ ಪ್ರದೇಶ, ಎನ್.ಸಿ.ಆರ್ ರಾಜಸ್ಥಾನ ಮತ್ತು ಎನ್.ಸಿ.ಟಿ ದೆಹಲಿಯಲ್ಲಿ ಕ್ರಮವಾಗಿ 16.7%, 81.3%, 38.8% and 23.9 % ರಷ್ಟು ಸಾಧನೆ ಮಾಡಲಾಗಿದೆ.   

 

ಎನ್.ಸಿ.ಆರ್ ರಾಜ್ಯಗಳಾದ ಹರ್ಯಾಣ ಮತ್ತು ರಾಜಸ್ಥಾನ ಹಾಗೂ ಜಿ.ಎನ್.ಸಿ.ಟಿ.ಡಿಗಳಲ್ಲಿ ಗಿಡನೆಡುವ ಕಾರ್ಯಕ್ಕೆ ಮತ್ತಷ್ಟು ವೇಗ ನೀಡುವ ಅಗತ್ಯವಿದೆ. ಆಯಾ ಗುರಿಗಳನ್ನು ಸಾಧಿಸಲು ಗಿಡ ನೆಡುವ ಅಭಿಯಾನವನ್ನು ತ್ವರಿತಗೊಳಿಸುವ ಮತ್ತು 31.07.2022 ರ ವರೆಗಿನ ವಸ್ತುಸ್ಥಿತಿ ಮಾಹಿತಿಯನ್ನು ಆಗಸ್ಟ್ ಆರಂಭದ ವೇಳೆಗೆ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ರಾಷ್ಟ್ರದ ರಾಜಧಾನಿ ಪ್ರದೇಶದಲ್ಲಿ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಸೇರಿದಂತೆ ವಿವಿಧ ಪಾಲುದಾರರನ್ನು ತೊಡಗಿಸಿಕೊಂಡು ಗಿಡನೆಡುವ ಅಭಿಯಾನವನ್ನು ತ್ವರಿತಗೊಳಿಸಲು ಆಯೋಗ ಕ್ರಮ ಕೈಗೊಂಡಿದೆ.  

 

ಎನ್.ಸಿ.ಆರ್ ರಾಜ್ಯಗಳು ಮತ್ತು ಎನ್.ಸಿ.ಟಿ.ಡಿಯೊಂದಿಗೆ ಗಿಡ ನೆಡುವ ಪ್ರಗತಿಯನ್ನು ಆಯೋಗ ಆಗಸ್ಟ್ ನಲ್ಲಿ ಮತ್ತೆ ಪ್ರಗತಿ ಪರಿಶೀಲನೆ ನಡೆಸಲಿದೆ.

 

*********


(Release ID: 1844293)
Read this release in: English , Urdu , Hindi