ನೌಕಾ ಸಚಿವಾಲಯ
ಜವಾಹರಲಾಲ್ ನೆಹರು ಬಂದರು ಭಾರತದ ಮೊದಲ 100 ಪ್ರತಿಶತ ಒಡೆತನದ ಪ್ರಮುಖ ಯೋಜನೆ
ಜೆಎನ್ ಪಿಸಿಟಿ ಬಂದರಿನ ಸಾಮರ್ಥ್ಯವು 1.5 ದಶಲಕ್ಷ ಟಿಇಯು(Twenty-foot Equivalent Unit-20 ಅಡಿ ಸಮಾನವಾದ ಘಟಕ)ನಿಂದ 1.8 ದಶಲಕ್ಷ ಟಿಇಯುಗೆ ಹೆಚ್ಚಾಗಲಿದೆ
ಬಂದರಿನ ಪ್ರತಿ ಟಿಇಯು ಕನಿಷ್ಠ ಮೀಸಲು ಬೆಲೆ 1,800 ರೂ.ಗೆ ಪ್ರತಿಯಾಗಿ ಪ್ರತಿ ಟಿಇಯು ರಾಜಧನ ಬೆಲೆ 4,520 ರೂ. ಸ್ವೀಕರಿಸಿದೆ
ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ(ಪಿಪಿಪಿ) ಆಪರೇಟರ್‌ಗಳ ಮೂಲಕ ಎಲ್ಲಾ ಪ್ರಮುಖ ಬಂದರುಗಳಲ್ಲಿ ನಿರ್ವಹಿಸಲಾದ ಸರಕುಗಳ ಶೇಕಡಾವಾರು ಪ್ರಮಾಣ 2030ರ ವೇಳೆಗೆ ಶೇ.85ರ ಹೆಚ್ಚಳ ಗುರಿ
Posted On:
19 JUL 2022 11:52AM by PIB Bengaluru
ಕಳೆದ 25 ವರ್ಷಗಳಲ್ಲಿ ಭಾರತೀಯ ಬಂದರುಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಹೂಡಿಕೆ ವಿಧಾನವು ಗಮನಾರ್ಹ ಪ್ರಗತಿ ಸಾಧಿಸಿದೆ. ಇದು ಜವಾಹರಲಾಲ್ ನೆಹರು ಬಂದರಿ(ಜೆಎನ್ ಪಿ)ನಿಂದ ಆರಂಭವಾಗಿದೆ. ಇದರ ಪರಿಣಾಮವಾಗಿ ಸಾಮರ್ಥ್ಯ ಸೇರ್ಪಡೆ ಮತ್ತು ಉತ್ಪಾದಕತೆ ಸುಧಾರಣೆಯಾಗಿದೆ. ಈ ವರ್ಷ ಜುಲೈನಲ್ಲಿ ತನ್ನ 25ನೇ ವರ್ಷದ ಪಿಪಿಪಿ ಹೂಡಿಕೆ ಮಾದರಿಯ ಯಶಸ್ಸನ್ನು ಪೂರ್ಣಗೊಳಿಸಿದ ಒಪ್ಪಂದ ಪ್ರಾಧಿಕಾರ ಮತ್ತು ಒಪ್ಪಂದದಾರರ ನಡುವಿನ ಮೊದಲ ಒಡಂಬಡಿಕೆಯ ಸಮರ್ಥನೀಯತೆಯು ಪ್ರಮುಖ ಬಂದರುಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳ ಅಭಿವೃದ್ಧಿಯ ಮೇಲೆ ಮಹತ್ತರ ಪ್ರಭಾವ ಬೀರಿದೆ. ಈಗ ಜೆಎನ್ ಪಿ 100 ಪ್ರತಿಶತ ಒಡೆತನದ(ಬಂದರು ಪ್ರಾಧಿಕಾರದ ಮಾಲಿಕತ್ವ) ದೇಶದ ಮೊದಲ ಪ್ರಮುಖ ಬಂದರು ಆಗಿದ್ದು, ಪಿಪಿಪಿ ಮಾದರಿಯಲ್ಲಿ ಎಲ್ಲಾ ಲಂಗರು ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.
ಜೆಎನ್ ಪಿ ದೇಶದ ಪ್ರಮುಖ ಕಂಟೈನರ್ ಬಂದರುಗಳಲ್ಲಿ ಒಂದಾಗಿದೆ ಜಾಗತಿಕ ಮಟ್ಟದ ಟಾಪ್ 100 ಬಂದರುಗಳ ಪೈಕಿ 26ನೇ ಸ್ಥಾನದಲ್ಲಿದೆ (2021ರ ವರದಿ ಪ್ರಕಾರ, ಲಾಯ್ಡ್ಸ್ ಪಟ್ಟಿಯ ಟಾಪ್ 100 ಪೋರ್ಟ್‌ಗಳು). ಪ್ರಸ್ತುತ, 5 ಕಂಟೈನರ್ ಟರ್ಮಿನಲ್‌ಗಳು ಜೆಎನ್ ಪಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಕೇವಲ ಒಂದು ಪೋರ್ಟ್ ಒಡೆತನದಲ್ಲಿದೆ. ಜೆಎನ್ ಪಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎಲ್ಲಾ ಅಂತಾರಾಷ್ಟ್ರೀಯ ಮಾನದಂಡಗಳು, ಬಳಕೆದಾರ ಸ್ನೇಹಿ ವಾತಾವರಣ ಹಾಗು ಒಳನಾಡಿಗೆ ರೈಲು ಮತ್ತು ರಸ್ತೆಯ ಮೂಲಕ ಅತ್ಯುತ್ತಮ ಸಂಪರ್ಕ ಕಲ್ಪಿಸುತ್ತಿದೆ. ಕಂಟೈನರ್ ಸರಕು ಸ್ಟೇಷನ್(ಸಿಎಫ್ಎಸ್)ಗಳಂತಹ ಹಿಂಬದಿಯ ಮೂಲಸೌಕರ್ಯಗಳ ಸೌಲಭ್ಯ, ಒಳನಾಡು ಕಂಟೈನರ್ ಡಿಪೋ(ಐಸಿಡಿ)ಗಳೊಂದಿಗೆ ಸಂಪರ್ಕ, ಪೂರ್ಣ ಪ್ರಮಾಣದ ಕಸ್ಟಮ್ ಹೌಸ್, ವಿಮಾನ ನಿಲ್ದಾಣ, ಹೋಟೆಲ್‌ಗಳು, ಮುಂಬೈ, ಪುಣೆ, ನಾಸಿಕ್ ನಗರ ಮತ್ತು ಅದರ ಕೈಗಾರಿಕಾ ಪ್ರದೇಶಗಳಿಗೆ ನೇರ ಸಂಪರ್ಕ ಕಲ್ಪಿಸಲಾಗಿದ್ದು, ಇದು ಅನನ್ಯ ಕಂಟೇನರ್ ಟರ್ಮಿನಲ್ ಆಗಿ ರೂಪಿಸಲಾಗಿದೆ.
ಜವಾಹರಲಾಲ್ ನೆಹರು ಪೋರ್ಟ್ ಕಂಟೈನರ್ ಟರ್ಮಿನಲ್(ಜೆಎನ್ ಪಿಸಿಟಿ) ಒಟ್ಟು 680 ಮೀಟರ್ ಮತ್ತು 15 ಮೀಟರ್ ಅಳತೆಯ 2 ಲಂಗರು ತಾಣಗಳನ್ನು ಹೊಂದಿದೆ. ಇದನ್ನು ಪಿಪಿಪಿ ಒಪ್ಪಂದದ ಅಡಿ 30 ವರ್ಷಗಳವರೆಗೆ 54.74 ಹೆಕ್ಟೇರ್ ಬ್ಯಾಕಪ್ ಪ್ರದೇಶದೊಂದಿಗೆ ಹಸ್ತಾಂತರಿಸಲಾಗುತ್ತದೆ. ಜೆಎನ್ ಪಿಸಿಟಿ ಪ್ರಸ್ತುತ 9, ಟಿಇಯು ಸಾಮರ್ಥ್ಯದ ಹಡಗುಗಳನ್ನು ನಿರ್ವಹಿಸುತ್ತಿದೆ ಮತ್ತು ಉನ್ನತೀಕರಣದೊಂದಿಗೆ 12,200 ಟಿಇಯು ಸಾಮರ್ಥ್ಯದ ಹಡಗುಗಳನ್ನು ನಿರ್ವಹಿಸುತ್ತಿದೆ. ಬಂದರಿನಲ್ಲಿ ಆರ್ ಎಂಕ್ಯುಸಿ (Rail-mounted quay crane-ರೈಲು ಆರೋಹಿತ ಕ್ವೇ ಕ್ರೇನ್) ರೈಲಿನ ವ್ಯಾಪ್ತಿಯನ್ನು 20 ಮೀಟರ್‌ನಿಂದ 30.5 ಮೀಟರ್‌ಗೆ ಹೆಚ್ಚಿಸಲು ಸಹ ಪ್ರಸ್ತಾಪಿಸಲಾಗಿದೆ. ಈ ಯೋಜನೆಗೆ ಹೂಡಿಕೆ ಒಪ್ಪಂದದಾರರು ಒಟ್ಟು 872 ಕೋಟಿ ರೂ. ಹಾಗೂ ಒಪ್ಪಂದದಾರರು ಪಿಪಿಪಿ ಆಧಾರದ ಮೇಲೆ ಈ ಟರ್ಮಿನಲ್ ಅನ್ನು ಕಾರ್ಯಾಚರಿಸಬೇಕು, ನಿರ್ವಹಿಸಬೇಕು, ನವೀಕರಿಸಬೇಕು ಮತ್ತು ವರ್ಗಾಯಿಸಬೇಕು. ಈ ಯೋಜನೆಯನ್ನು 2 ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
• ಮೊದಲ ಹಂತದಲ್ಲಿ 12,200 ಟಿಇಯು ಸಾಮರ್ಥ್ಯದ ಹಡಗುಗಳನ್ನು (15 ಮೀಟರ್ ಡ್ರಾಫ್ಟ್ ಮತ್ತು 56.4 ಬೀಮ್‌ನ 370 ಒಟ್ಟಾರೆ ಉದ್ದ (ಎಲ್ ಒಎ) ದ ಹಡಗುಗಳು) ನಿರ್ವಹಿಸಲು 400 ಮೀಟರ್ ಲಂಗರು ತಾಣ (ಬೆರ್ತ್) ಉದ್ದವನ್ನು ನವೀಕರಿಸಲಾಗುತ್ತದೆ. ಜೆಎನ್ ಪಿಎ 2022 ಜೂನ್ 06 ರಂದು ಜೆ ಎಮ್ ಬಕ್ಸಿ ಪೋರ್ಟ್ಸ್ ಅಂಡ್ ಲಾಜಿಸ್ಟಿಕ್ಸ್ ಲಿಮಿಟೆಡ್ ಮತ್ತು ಸಿಎಂಎ ಟರ್ಮಿನಲ್ಸ್ ಕನ್ಸೋರ್ಟಿಯಂ ಮೆಂಬರ್ ಜತೆ ಒಪ್ಪಂದ ಮಾಡಿಕೊಂಡಿದ್ದು, 2022 ಜುಲೈ 27ರಂದು ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಲಾಗುತ್ತದೆ. 180 ದಿನಗಳಲ್ಲಿ ಷರತ್ತುಗಳನ್ನು ಅನುಸರಿಸಿದ ನಂತರ ಒಪ್ಪಂದ ಪತ್ರ ನೀಡಲಾಗುತ್ತದೆ. ಮೊದಲ ಹಂತದ ಅವಧಿಯು ಒಪ್ಪಂದ ದಿನಾಂಕದಿಂದ 18 ತಿಂಗಳು ಆಗಿರುತ್ತದೆ. ಈ ಅವಧಿಯಲ್ಲಿ ಯೋಜನಾ ವೆಚ್ಚವು 591.99 ಕೋಟಿ ರೂ. ಆಗಿದೆ.
• 2ನೇ ಹಂತದಲ್ಲಿ 12,200 ಟಿಇಯು ಸಾಮರ್ಥ್ಯದ ಹಡಗುಗಳನ್ನು ನಿರ್ವಹಿಸಲು 280 ಮೀಟರ್‌ಗಳ ಬರ್ತ್ ಉದ್ದವನ್ನು ನವೀಕರಿಸಲಾಗುತ್ತದೆ. 1.02 ದಶಲಕ್ಷ ಟಿಇಯು ಸಾಮರ್ಥ್ಯ ನಿರ್ಮಾಣ ಅಥವಾ 7 ವರ್ಷಗಳ ಅವಧಿ... ಇವೆರಡರಲ್ಲಿ ಯಾವುದು ಮೊದಲು ಎಂದು ನಿರ್ಧರಿಸಿ, 2ನೇ ಹಂತದ ಅಭಿವೃದ್ಧಿ ಶುರುವಾಗಲಿದೆ. 2ನೇ ಹಂತದ ಯೋಜನೆಯನ್ನು 18 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು, 2ನೇ ಹಂತದ ವೆಚ್ಚ 280.17 ಕೋಟಿ ರೂ. ಆಗಿದೆ.
ಈ ಯೋಜನೆಯು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 11 ಹೂಡಿಕೆದಾರರಿಂದ ಅಗಾಧ ಪ್ರತಿಕ್ರಿಯೆ ಪಡೆದಿದೆ. ಟೆಂಡರ್ ಗೆಲ್ಲುವ ಸಲುವಾಗಿ ಜೆ ಎಂ ಬಕ್ಸಿ ಪೋರ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಲಿಮಿಟೆಡ್ ಮತ್ತು ಸಿಎಂಎ ಟರ್ಮಿನಲ್ಸ್ ನಡುವಿನ ಸಮಾನ ಜಂಟಿ ಉದ್ಯಮವು ಪ್ರತಿ ಟಿಇಯುಗೆ 4,520 ರೂ. ರಾಯಧನ ಬೆಲೆ ನೀಡಿವೆ. ಒಪ್ಪಂದದ ಅವಧಿಯಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಏರಿಕೆಗೆ ಅನುಗುಣವಾಗಿ ವಾರ್ಷಿಕವಾಗಿ ಪಾವತಿಸಬೇಕಾದ ರಾಯಲ್ಟಿ ಹೆಚ್ಚಾಗುತ್ತದೆ. ಹೊಸ ಪ್ರಮುಖ ಬಂದರು ಪ್ರಾಧಿಕಾರ ಕಾಯಿದೆ ಮತ್ತು ಮಾದರಿ ಒಪ್ಪಂದದ ಅಡಿ, ಟರ್ಮಿನಲ್ ಆಪರೇಟರ್ ಮಾರುಕಟ್ಟೆ ನಿರ್ಧರಿತ ಸುಂಕದ ದರಗಳನ್ನು ನಿಗದಿಪಡಿಸಲು ಮುಕ್ತವಾಗಿದೆ. ಎಂಜಿಸಿ(ಮೀಜಿಯಂ ಗ್ಯಾಸ್ ಕೆರಿಯರ್-ಮಧ್ಯಮ ಅನಿಲ ವಾಹಕ) ಕಾರ್ಯಾಚರಣೆಯ ಮೊದಲ ವರ್ಷದಲ್ಲಿ 4 ಲಕ್ಷ ಟಿಇಯುನಿಂದ ಹಿಡಿದು 10ನೇ ವರ್ಷದಲ್ಲಿ 9 ಲಕ್ಷ ಟಿಇಯುಗೆ ಪ್ರಾರಂಭಿಸಿ 30 ವರ್ಷಗಳ ಒಪ್ಪಂದದ ಅಂತ್ಯದವರೆಗೆ ಇದು ಮುಂದುವರಿಯುವ ನಿರೀಕ್ಷೆಯಿದೆ.
ಬಂದರು ವಲಯದಲ್ಲಿ ಹೂಡಿಕೆ ಆಕರ್ಷಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ(ಪಿಪಿಪಿ) ಪರಿಣಾಮಕಾರಿ ಸಾಧನವೆಂದು ಪರಿಗಣಿಸಲಾಗಿದೆ. ಇದುವರೆಗೆ 55,000 ಕೋಟಿ ರೂ. ಮೌಲ್ಯದ 86 ಯೋಜನೆಗಳಿಗೆ ಪಿಪಿಪಿ ಅಡಿ ಅನುಮೋದನೆ ನೀಡಲಾಗಿದೆ. ಪಿಪಿಪಿ ಅಡಿ ಅನುಷ್ಠಾನಗೊಳ್ಳುತ್ತಿರುವ ಪ್ರಮುಖ ಯೋಜನೆಗಳಲ್ಲಿ ಲಂಗರು ತಾಣಗಳು(ಬರ್ತ್‌ಗಳು), ಯಾಂತ್ರೀಕರಣ, ತೈಲ ಜೆಟ್ಟಿಯ ಅಭಿವೃದ್ಧಿ, ಕಂಟೇನರ್ ಜೆಟ್ಟಿಗಳು, ಕಂಟೈನರ್ ಟರ್ಮಿನಲ್‌ನ ಕಾರ್ಯಾಚರಣೆ ಮತ್ತು ನಿರ್ವಹಣೆ, ಇಂಟರ್‌ನ್ಯಾಶನಲ್ ಕ್ರೂಸ್ ಟರ್ಮಿನಲ್ ಕಾರ್ಯಾಚರಣೆ ಮತ್ತು ನಿರ್ವಹಣೆ, ಪಿಪಿಪಿ ಮಾದರಿಯಲ್ಲಿ ಆಸ್ತಿಗಳ ವಾಣಿಜ್ಯೀಕರಣ, ಪ್ರವಾಸೋದ್ಯಮ ಯೋಜನೆಗಳು ಅಂದರೆ ಮರೀನಾ, ಪ್ರವಾಸೋದ್ಯಮ ಉತ್ತೇಜಿಸಲು ದ್ವೀಪಗಳ ಅಭಿವೃದ್ಧಿ ಸೇರಿವೆ. 2030ರ ವೇಳೆಗೆ ಸರಕು ಪ್ರಮಾಣವು 2020ರ ಇರುವ 1.7ರಿಂದ 2 ಪಟ್ಟು ಹೆಚ್ಚಾಗುವ ನಿರೀಕ್ಷೆಯೊಂದಿಗೆ, ಪಿಪಿಪಿ ಅಥವಾ ಇತರ ನಿರ್ವಾಹಕರು ಪ್ರಮುಖ ಬಂದರುಗಳಲ್ಲಿ ನಿರ್ವಹಿಸುವ ಸರಕುಗಳ ಶೇಕಡಾವಾರು ಪ್ರಮಾಣ 2030 ರ ವೇಳೆಗೆ ಶೇ.85 ತಲುಪುವ ನಿರೀಕ್ಷೆಯಿದೆ. ಪ್ರತಿ ವರ್ಷವು ಈ ಗುರಿ ಸಾಧನೆ ಒಂದು ಮೈಲಿಗಲ್ಲು ಆಗಲಿದೆ.
ಈಗಾಗಲೇ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ಈ ಗುರಿ ಸಾಧಿಸಲು 2025ರ ವರೆಗೆ 13 ಯೋಜನೆಗಳ ಪೈಪ್‌ಲೈನ್ ಗುರುತಿಸಿದೆ, ಸಚಿವಾಲಯವು 2022ನೇ ಆರ್ಥಿಕ ವರ್ಷಕ್ಕಾಗಿ 6954 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದೆ. ನಂತರ 2023ರಲ್ಲಿ 12,550 ಕೋಟಿ ರೂ. ಮೌಲ್ಯದ 24 ಯೋಜನೆಗಳನ್ನು ನಿಗದಿ ಪಡಿಸಲಾಗಿದೆ. ಇದಲ್ಲದೆ, 2024 ಮತ್ತು 2025ರಲ್ಲಿ 23,000 ಕೋಟಿ ರೂ. ಮೌಲ್ಯದ 44 ಯೋಜನೆಗಳನ್ನು ಗುತ್ತಿಗೆ ನೀಡಲು ನಿಗದಿಪಡಿಸಲಾಗಿದೆ. ಹೆಚ್ಚಿನ ಮೌಲ್ಯದ ಯೋಜನೆಗಳಾದ ಪಾರಾದೀಪ್ ನಲ್ಲಿ ವೆಸ್ಟರ್ನ್ ಡಾಕ್ ಮತ್ತು ಜೆಎನ್ ಪೋರ್ಟ್ ಕಂಟೈನರ್ ಟರ್ಮಿನಲ್ ಡಿಪಿಎಯ 2 ಯೋಜನೆಗಳಿಗೆ ಈಗಾಗಲೇ 3,800 ಕೋಟಿ ರೂ. ನೀಡಲಾಗಿದೆ. ಇವೆರಡು ಯೋಜನೆಗಳ ಒಟ್ಟು ಮೌಲ್ಯ 6000 ಕೋಟಿ ರೂ. ಆಗಿದೆ.
ಈ ಸಾಧನೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ಸಚಿವ ಸಚಿವ ಶ್ರೀ ಸರ್ಬಾನಂದ ಸೋನೊವಾಲ್, “ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಖಾಸಗಿ ಉದ್ಯಮಗಳನ್ನು ಪ್ರಗತಿಯತ್ತ ಸಮರ್ಥ ಪಾಲುದಾರರನ್ನಾಗಿ ಸೇರಿಸುವ ತತ್ವದ ಮೇಲೆ ಪಿಪಿಪಿ ಆಧರಿಸಿದೆ ಎಂದು ಹೇಳಿದರು. ಈ ಯೋಜನೆಯು ಟರ್ಮಿನಲ್‌ನ ಕ್ರೇನ್ ಮತ್ತು ಬರ್ತ್ ಉತ್ಪಾದಕತೆಯ ಬಳಕೆಯನ್ನು ಸುಧಾರಿಸುತ್ತದೆ. ಅಲ್ಲದೆ, ಜೆಎನ್ ಪಿಸಿಟಿಯ ಒಟ್ಟು ನಿರ್ವಹಣೆ ಸಾಮರ್ಥ್ಯ ಹೆಚ್ಚಿಸಲಿದೆ. 2020-21ರಲ್ಲಿ ಇದ್ದ 1.5 ದಶಲಕ್ಷ ಟಿಇಯು ನಿರ್ವಹಣಾ ಸಾಮರ್ಥ್ಯವು 1.8 ದಶಲಕ್ಷ ಟಿಇಯುಗೆ ಹೆಚ್ಚಾಗಲಿದೆ. ಇದು 'ಭಾರತದ ಪ್ರೀಮಿಯರ್ ಕಂಟೈನರ್ ಪೋರ್ಟ್' ಆಗಿ ಜೆಎನ್ ಪಿಎ ಸ್ಥಾನವನ್ನು ಬಲಪಡಿಸುತ್ತದೆ. ಈ ಟರ್ಮಿನಲ್ ರೋ-ರೋ ಹಡಗುಗಳನ್ನು ಸಹ ನಿರ್ವಹಿಸುತ್ತದೆ. ಇದು ಸರಕುಗಳ ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ, ಸಾರಿಗೆ ಸಮಯವನ್ನು ಕಡಿಮೆ ಮಾಡುತ್ತದೆ. ಆದರೆ ರಸ್ತೆಗಳ ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಸ್ವಚ್ಛ ಪರಿಸರದ ಕಡೆಗೆ ಉತ್ತೇಜಿಸುವಲ್ಲಿ ಅಪಾರ ಕೊಡುಗೆ ನೀಡುತ್ತದೆ ಎಂದರು.
**********
(Release ID: 1842695)
Visitor Counter : 259