ಇಂಧನ ಸಚಿವಾಲಯ

ಎನ್‌ಟಿಪಿಸಿ ಸಹಯೋಗದೊಂದಿಗೆ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಯೋಮಾಸ್‌ (ಜೀವರಾಶಿ) ಬಳಕೆ ಕುರಿತು ಸಮರ್ಥ್‌ನಿಂದ ಕಾರ್ಯಾಗಾರ ಆಯೋಜಿಜನೆ


ಕಾರ್ಯಾಗಾರವು ಕೃಷಿ ಅವಶೇಷಗಳ ಎಕ್ಸ್-ಸಿಟು ಬಳಕೆಯನ್ನು ಉತ್ತೇಜಿಸಲು ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ

Posted On: 14 JUL 2022 6:15PM by PIB Bengaluru

ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಯೋಮಾಸ್‌ ಬಳಕೆ ಕುರಿತ ರಾಷ್ಟ್ರೀಯ ಮಿಷನ್‌ (ಸಮರ್ಥ್‌) ಎನ್‌ಟಿಪಿಸಿಯ ಸಹಯೋಗದೊಂದಿಗೆ ಇಂದು ಚಂಡೀಗಢದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಿತು.

ಸರ್ಕಾರ, ಸಚಿವಾಲಯಗಳು, ಸಿಎಕ್ಯೂಎಂ, ಎಂಒಇಎಫ್‌ಸಿಸಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ, ಎಂಎನ್‌ಆರ್‌ಇ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ-ಪಂಜಾಬ್‌, ವಿದ್ಯುತ್‌ ಇಲಾಖೆ-ಪಂಜಾಬ್‌ , ಕೃಷಿ ಇಲಾಖೆ-ಪಂಜಾಬ್‌, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ-ಪಂಜಾಬ್‌, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ-ಹರಿಯಾಣ, ಕೃಷಿ ಇಲಾಖೆ-ಹರಿಯಾಣ, ಇಂಧನ-ಹರಿಯಾಣ, ಸಮರ್ಥ್‌ ಮಿಷನ್‌, ಎನ್‌ಟಿಪಿಸಿ ಲಿಮಿಟೆಡ್‌, ಎನ್‌ಸಿಆರ್‌ ಪ್ರದೇಶದ ಎಲ್ಲಾ ಜಿಇಎನ್‌ಸಿಎಒಗಳು, ಹಣಕಾಸು ಸಂಸ್ಥೆಗಳು, ಪೆಲೆಟ್‌ ತಯಾರಕರು, ಉದ್ಯಮಿಗಳು, ಕೈಗಾರಿಕಾ ಸಂಘಗಳು, ಒಇಎಂಗಳು, ಕೃಷಿ ವಿಶ್ವವಿದ್ಯಾಲಯಗಳು, ಕೆವಿಕೆಗಳು, ಎಫ್‌ಪಿಒಗಳು, ಸಿಬಿಬಿಒಗಳು ಮತ್ತು ರೈತ ಸಂಘಟನೆಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದವು.

 

ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಬಯೋಮಾಸ್‌ನ ಕ್ರೋಡೀಕರಣ, ಸಾಗಾಣಿಕೆ, ಉತ್ಪಾದನೆ, ಪೂರೈಕೆ ಮತ್ತು ಸಹ-ಫೈರಿಂಗ್‌ ಗಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುವ ಮೂಲಕ, ವಿವಿಧ ಆನ್ವಯಿಕೆಗಳಲ್ಲಿ ಕೃಷಿ-ಉಳಿಕೆಯ ಎಕ್ಸ್‌-ಸಿಟು ಬಳಕೆಯನ್ನು ಉತ್ತೇಜಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಒಂದು ದಿನದ ಕಾರ್ಯಾಗಾರ ಹೊಂದಿತ್ತು. ಈ ಕಾರ್ಯಾಗಾರವನ್ನು ಸಾಕಷ್ಟು ಸಾಮರ್ಥ್ಯ‌ಗಳು ಇರುವ ಪ್ರದೇಶದಲ್ಲಿ ಆಯೋಜಿಸಲಾಗಿದೆ ಮತ್ತು ಬಯೋಮಾಸ್‌ ಒಟ್ಟುಗೂಡಿಸುವಿಕೆ ಮತ್ತು ಪೆಲೆಟ್‌ ಉತ್ಪಾದನೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಮಧ್ಯಸ್ಥಗಾರರೊಂದಿಗೆ ಚರ್ಚಿಸಲಾಯಿತು.

 

ಶ್ರೀ ಸುದೀಪ್‌ ನಾಗ್‌ (ಮಿಷನ್‌ ಡೈರೆಕ್ಟರ್‌, ನ್ಯಾಷನಲ್‌ ಮಿಷನ್‌ ಆನ್‌ ಯೂಸ್‌ ಆನ್‌ ಬಯೋಮಾಸ್‌ ಆನ್‌ ಯೂಸ್‌ ಇನ್‌ ಥರ್ಮಲ್‌ ಪವರ್‌ ಪ್ಲಾಂಟ್ಸ್‌ ಮತ್ತು ಎನ್‌ ಟಿಪಿಸಿ ಲಿಮಿಟೆಡ್‌ ನ ಕಾರ್ಯನಿರ್ವಾಹಕ ನಿರ್ದೇಶಕರು) ಅವರು ಭಾರತದ ಇಂಧನ ಇಂಧನ ಭದ್ರತೆಯನ್ನು ಸಾಧಿಸುವಲ್ಲಿ ಬಯೋಮಾಸ್‌ನ ಮಹತ್ವವನ್ನು ವಿವರಿಸುವ ಮೂಲಕ ಕಾರ್ಯಾಗಾರ ಪ್ರಾರಂಭವಾಯಿತು. ಎನ್‌.ಟಿ.ಪಿ.ಸಿ. ಲಿಮಿಟೆಡ್‌ ನ ನಿರ್ದೇಶಕ (ಕಾರ್ಯಾಚರಣೆ) ಶ್ರೀ ರಮೇಶ್‌ ಬಾಬು ಅವರು, ಬಳಕೆಯಾಗದ ಸಂಪನ್ಮೂಲವಾಗಿ, ಹೆಚ್ಚುವರಿ ಆದಾಯದ ಮೂಲವಾಗಿ, ಹೆಚ್ಚಿನ ಪ್ರಮಾಣದ ಬೇಡಿಕೆ ಮತ್ತು ಅನುಕೂಲಕರ ಸರ್ಕಾರಿ ನೀತಿಗಳಾಗಿ ಬಯೋಮಾಸ್‌ನ ಸಾಮರ್ಥ್ಯ‌ದ ಕುರಿತು ಬೆಳಕು ಚೆಲ್ಲಿದರು. ಟಿ.ಪಿ.ಪಿ.ಗಳಲ್ಲಿ ಬಯೋಮಾಸ್‌ ಬಳಕೆಗಾಗಿ ಎನ್‌.ಟಿ.ಪಿ.ಸಿ ಕೈಗೊಂಡಿರುವ ವಿವಿಧ ಉಪಕ್ರಮಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು ಮತ್ತು ಎನ್‌.ಟಿ.ಪಿ.ಸಿ.ಯ 14 ಘಟಕಗಳು ಈಗಾಗಲೇ ಸಹ-ಫೈರಿಂಗ್‌ ಪ್ರಾರಂಭಿಸಿವೆ ಮತ್ತು ಇಲ್ಲಿಯವರೆಗೆ ಸುಮಾರು 77000 ಟನ್‌ ಬಯೋಮಾಸ್‌ ಅನ್ನು ಸಹ-ಫೈರ್‌ ಮಾಡಲಾಗಿದೆ ಎಂದು ಉಲ್ಲೇಖಿಸಿದರು.

 

ಸಿಎಕ್ಯೂಎಂನ ಅಧ್ಯಕ್ಷ ರಾದ ಡಾ. ಎಂ.ಎಂ. ಕುಟ್ಟಿ ಅವರು, ವಾಯುಮಾಲಿನ್ಯದ ಜ್ವಲಂತ ಸಮಸ್ಯೆಯನ್ನು, ವಿಶೇಷವಾಗಿ ಎನ್‌ಸಿಆರ್‌ ಪ್ರದೇಶದಲ್ಲಿನ ಮತ್ತು ಸವಾಲುಗಳನ್ನು ಕುರಿತು ಮಾತನಾಡಿದರು. ಬಯೋಮಾಸ್‌ನ ವಿವಿಧ ಸಂಭಾವ್ಯ ಉಪಯೋಗಗಳು, ಬೆಳೆ ಅವಶೇಷಗಳ ನಿರ್ವಹಣೆಗಾಗಿ ರಾಷ್ಟ್ರೀಯ ನೀತಿ, ಕೃಷಿ ಯಾಂತ್ರೀಕರಣಕ್ಕಾಗಿ ಕೇಂದ್ರೀಯ ಯೋಜನೆ, ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಸಹ-ಫೈರಿಂಗ್‌ ಮೂಲಕ ವಿದ್ಯುತ್‌ ಉತ್ಪಾದನೆಗೆ ಬಯೋಮಾಸ್‌ ಬಳಕೆಯ ನೀತಿ ಮತ್ತು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಹಾರಗಳನ್ನು ಅನ್ವಯಿಸುವ ಮೂಲಕ ಕೃಷಿ ವಲಯವು ಹೇಗೆ ಮುಂದೆ ಬರಬಹುದು ಮತ್ತು ಮಾಲಿನ್ಯವನ್ನು ನಿಯಂತ್ರಿಸಲು ಹೇಗೆ ಕೊಡುಗೆ ನೀಡಬಹುದು ಎಂದು ಅವರು ಮಾರ್ಗದರ್ಶನ ನೀಡಿದರು. ಉದ್ಯಮಿಗಳು, ಹಣಕಾಸು ಸಂಸ್ಥೆಗಳು, ಒಇಎಂಗಳು ಮತ್ತು ಸಮರ್ಥ್‌ ಮಿಷನ್‌ನ ವಿವಿಧ ತಾಂತ್ರಿಕ ಮತ್ತು ಆರ್ಥಿಕ ಅಂಶಗಳನ್ನು ಪ್ರದರ್ಶಿಸಲು ಕಾರ್ಯಾಗಾರದ ಸ್ಥಳದಲ್ಲಿ 09 ಪ್ರದರ್ಶನ ಮಳಿಗೆಗಳನ್ನು ಸಹ ಸ್ಥಾಪಿಸಲಾಗಿತ್ತು. ವಸ್ತು ಪ್ರದರ್ಶನ ಮಳಿಗೆಗಳನ್ನು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಎಲ್ಲಾ ಹಿರಿಯ ಅಧಿಕಾರಿಗಳು ಶ್ಲಾಘಿಸಿದರು.

 

ಸರ್ಕಾರ, ಸಚಿವಾಲಯಗಳು, ಸಿಎಕ್ಯೂಎಂ, ಎಂಒಇಎಫ್‌ಸಿಸಿ, ಎಂಒಎ ಮತ್ತು ಎಫ್‌ಡಬ್ಲ್ಯೂ, ಎಂಎನ್‌ಆರ್‌ಇ, ಪಂಜಾಬ್‌ ಮತ್ತು ಹರಿಯಾಣದ ಹಿರಿಯ ಸರ್ಕಾರಿ ಅಧಿಕಾರಿಗಳು, ಎನ್‌ಟಿಪಿಸಿ ಲಿಮಿಟೆಡ್‌, ಎನ್‌ಸಿಆರ್‌ ಪ್ರದೇಶದ ಎಲ್ಲಾ ಜಿಇಎನ್‌ಒಸಿಗಳು, ಹಣಕಾಸು ಸಂಸ್ಥೆಗಳು, ಪೆಲೆಟ್‌ ತಯಾರಕರು, ಉದ್ಯಮಿಗಳು, ಕೈಗಾರಿಕಾ ಸಂಘಗಳು, ಒಇಎಂಗಳು, ಕೃಷಿ ವಿಶ್ವವಿದ್ಯಾಲಯಗಳು, ಕೆವಿಕೆಗಳು, ಎಫ್‌ಪಿಒಗಳು, ಸಿಬಿಬಿಒಗಳು ಮತ್ತು ರೈತ ಸಂಸ್ಥೆಗಳಿಂದ 250 ಕ್ಕೂ ಹೆಚ್ಚು ನೋಂದಾಯಿತ ಸ್ಪರ್ಧಿಗಳು ಆಗಮಿಸಿದ್ದು, ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಲ್ಲಿ ಕೃಷಿ ಅವಶೇಷಗಳ ಎಕ್ಸ್‌-ಸಿಟು ಬಳಕೆಯ ಕಾರ್ಯಾಗಾರವು ಅತ್ಯಂತ ದೊಡ್ಡ ಜೈವಿಕ ಇಂಧನ ಕಾರ್ಯಕ್ರಮಗಳಲ್ಲಿಒಂದಾಗಿದೆ. ಹೊಸ ವ್ಯಾಪಾರ ಅವಕಾಶಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನ್ವೇಷಿಸಲು ಅನೇಕ ಕಂಪನಿಗಳು / ಉದಯೋನ್ಮುಖ ಉದ್ಯಮಿಗಳು / ರೈತರು ಕಾರ್ಯಾಗಾರಕ್ಕೆ ಬಂದಿದ್ದರು.

 

ಈ ಕಾರ್ಯಾಗಾರವು ಕೃಷಿ-ಉಳಿಕೆಯ ಉದ್ದೇಶಪೂರ್ವಕ ಬಳಕೆ ಮತ್ತು ಗಳಿಕೆಯ ಸಾಮರ್ಥ್ಯ‌ಕ್ಕಾಗಿ ತಮ್ಮ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲು ಎಲ್ಲಾ ಮಧ್ಯಸ್ಥಗಾರರಿಗೆ ಒಂದು ಆದರ್ಶ ವೇದಿಕೆಯನ್ನು ಒದಗಿಸಿತು.

 

ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಅಧ್ಯಕ್ಷ ರಾದ ಡಾ. ಎಂ.ಎಂ. ಕುಟ್ಟಿ, ಎನ್‌.ಟಿ.ಪಿ.ಸಿ. ಲಿಮಿಟೆಡ್‌ ನ ನಿರ್ದೇಶಕ (ಕಾರ್ಯಾಚರಣೆ) ಶ್ರೀ ರಮೇಶ್‌ ಬಾಬು, ಸದಸ್ಯ ಕಾರ್ಯದರ್ಶಿ (ಸಿಎಕ್ಯೂಎಂ), ಶ್ರೀ ಅರವಿಂದ್‌ ನೌಟಿಯಾಲ್‌, ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀ ಎಸ್‌. ನಾರಾಯಣನ್‌, ಪಂಜಾಬ್‌ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀ ಕೃಣೇಶ್‌ ಗರ್ಗ್‌, ಥರ್ಮಲ್‌ ಪವರ್‌ ಪ್ಲಾಂಟ್‌ ಗಳಲ್ಲಿ ಬಯೋಮಾಸ್‌ ಬಳಕೆಯ ರಾಷ್ಟ್ರೀಯ ಮಿಷನ್‌ ನಿರ್ದೇಶಕ ಶ್ರೀ ಸುದೀಪ್‌ ನಾಗ್‌ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ, ಎನ್‌ಟಿಪಿಸಿ ಲಿಮಿಟೆಡ್‌, ಮತ್ತು ಪಂಜಾಬ್‌ ಮತ್ತು ಹರಿಯಾಣದ ಹಿರಿಯ ಸರ್ಕಾರಿ ಅಧಿಕಾರಿಗಳು.

********



(Release ID: 1841594) Visitor Counter : 147


Read this release in: English , Urdu , Hindi , Punjabi