ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಐಆರ್‌ಇಡಿಎ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು

Posted On: 12 JUL 2022 2:00PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ (ಎಮೆನ್‌ಆರ್‌ಇ), ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ ಅವರು ನಿನ್ನೆ, ನವದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿರುವ ಐಆರ್‌ಇಡಿಎ ನ ನೋಂದಾಯಿತ ಕಚೇರಿಗೆ ಭೇಟಿ ನೀಡಿದರು. ಶ್ರೀ ಖೂಬಾ ಅವರು ಐಆರ್‌ಇಡಿಎಯ ಕಾರ್ಯಕ್ಷಮತೆ ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಪರಿಶೀಲಿಸಿದರು, ನಂತರ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಸಂವಾದಾತ್ಮಕ ಚರ್ಚೆಯನ್ನು ನಡೆಸಿದರು.

ಎಂಎನ್‌ಆರ್‌ಇಯಿಂದ ಕಂಪನಿಯ ಕಚೇರಿಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಸ್ವಾಗತಿಸಿದ ಐಆರ್‌ಇಡಿಎ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ಶ್ರೀ ಪ್ರದೀಪ್ ಕುಮಾರ್ ದಾಸ್ ಅವರು ಹಿಂದಿನ ಎರಡು ವರ್ಷಗಳಲ್ಲಿ ಐಆರ್‌ಇಡಿಎಯ ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು. ಶ್ರೀ ಖೂಬಾ ಅವರಿಗೆ ಹಣಕಾಸು ಒದಗಿಸುವ ಕ್ಷೇತ್ರಗಳು, ವೈವಿಧ್ಯೀಕರಣ ಮತ್ತು ನಿಧಿಸಂಗ್ರಹಣೆ ಯೋಜನೆಗಳು ಮತ್ತು ಕಳೆದ ಎರಡು ವರ್ಷಗಳಲ್ಲಿ ಸುಗಮ ವ್ಯಾಪಾರ - 'ಈಸ್ ಆಫ್ ಡೂಯಿಂಗ್ ಬಿಸಿನೆಸ್'ಗಾಗಿ ಕೈಗೊಂಡ ಉಪಕ್ರಮಗಳ ಬಗ್ಗೆ ತಿಳಿಸಲಾಯಿತು. ನವೀಕರಿಸಬಹುದಾದ ಇಂಧನ ವಲಯಕ್ಕೆ ಹಣಕಾಸಿನ ಭಾರಿ ಬೇಡಿಕೆಯನ್ನು ಪೂರೈಸಲು ಸಂಸ್ಥೆಯು ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಚರ್ಚಿಸಲಾಯಿತು. ವಿವರವಾದ ಪ್ರಸ್ತುತಿಯನ್ನು ಐಆರ್‌ಇಡಿಎಯ ಸಿಎಮ್‌ ಡಿ ಅವರು ಮಾಡಿದರು.

 

ಐಆರ್‌ಇಡಿಎ 'ಮಿನಿ-ರತ್ನ'ದಿಂದ 'ನವರತ್ನ' ಮತ್ತು 'ಶೆಡ್ಯೂಲ್-ಬಿ' ಅನ್ನು 'ಶೆಡ್ಯೂಲ್-ಎ' ಗೆ ಉನ್ನತ ಮಟ್ಟಕ್ಕೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಶ್ರೀ ಖೂಬಾ ಹಂಚಿಕೊಂಡಿದ್ದಾರೆ. ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಯೋಜನೆಯನ್ನು ಪರಿಗಣಿಸಿ ಪ್ರಕ್ರಿಯೆಯನ್ನು ವೇಗಗೊಳಿಸಲು ಐಆರ್‌ಇಡಿಎ ಗೆ ಮಾನ್ಯ ಸಚಿವರು ಭರವಸೆ ನೀಡಿದರು.

ಶ್ರೀ ಭಗವಂತ ಖೂಬಾ ಅವರು ತಮ್ಮ ಸಂವಾದದಲ್ಲಿ ಐಆರ್‌ಇಡಿಎ ಉದ್ಯಮದ ಪ್ರವರ್ತಕವಾಗಿದ್ದು ಮತ್ತು ಅದರ ಪ್ರಾರಂಭದಿಂದಲೂ ನವೀಕರಿಸಬಹುದಾದ ಇಂಧನ ವಲಯಕ್ಕೆ ಸೇವೆ ಸಲ್ಲಿಸುತ್ತಿರುವುದನ್ನು ಶ್ಲಾಘಿಸಿದರು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಠಿಣ ವ್ಯಾಪಾರ ವಾತಾವರಣದ ಹೊರತಾಗಿಯೂ ಕಳೆದ ಎರಡು ವರ್ಷಗಳಲ್ಲಿ ಐಆರ್‌ಇಡಿಎನ ಐತಿಹಾಸಿಕ ಸಾಧನೆಗಾಗಿ ಅವರು ಶ್ಲಾಘಿಸಿದರು. ಸಂಘಟನೆಯ ಕಾರ್ಯ ಸಂಸ್ಕೃತಿಯ ಅಭಿವೃದ್ಧಿಯ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದ್ದಕ್ಕಾಗಿ ಅವರು ಐಆರ್‌ಇಡಿಎ ತಂಡವನ್ನು ಶ್ಲಾಘಿಸಿದರು.

ಸಚಿವರು ಐಆರ್‌ಇಡಿಎಯ ಸಿಎಮ್‌ ಡಿ, ಸಚಿವಾಲಯದ ಜಂಟಿ ಕಾರ್ಯದರ್ಶಿ, ಶ್ರೀ ಲಲಿತ್ ಬೋಹ್ರಾ, ಮತ್ತು ಐಆರ್‌ಇಡಿಎಯ ಸಿವಿಒ ಶ್ರೀಮತಿ ಮನೀಶ್ ಸಕ್ಸೇನಾ ಅವರು " ಜಾಗೃತಿ ಬಗ್ಗೆ ಉದ್ಯೋಗಿಗಳ ಕೈಪಿಡಿ” ಯ 2 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದರು, ಇದು ಐಆರ್‌ಇಡಿಎ ಅಧಿಕಾರಿಗಳಲ್ಲಿ ವಿವಿಧ ಕಾರ್ಯವಿಧಾನಗಳು ಮತ್ತು ಅಭ್ಯಾಸಗಳ ಅರಿವನ್ನು ಹೆಚ್ಚಿಸುತ್ತದೆ.

2030 ರ ವೇಳೆಗೆ ಪಳೆಯುಳಿಕೆ ಇಂಧನಗಳಿಂದ 50% ಶಕ್ತಿ ಇಂಧನ ಮತ್ತು 500 ಜಿಡಬ್ಲ್ಯೂ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗೌರವಾನ್ವಿತ ಪ್ರಧಾನ ಮಂತ್ರಿಯವರ ಗುರಿಗೆ ಅನುಗುಣವಾಗಿ, ನವೀಕರಿಸಬಹುದಾದ ಇಂದನ ವಲಯದ ಹಣಕಾಸು ಅಗತ್ಯತೆಗಳಿಗಾಗಿ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ನಿರಂತರ ಬೆಂಬಲ ಇರುವುದಾಗಿ ಶ್ರೀ ಭಗವಂತ ಖೂಬಾ ಅವರು ಐಆರ್‌ಇಡಿಎಗೆ ಭರವಸೆ ನೀಡಿದರು.

******



(Release ID: 1841041) Visitor Counter : 143


Read this release in: English , Urdu , Hindi , Tamil