ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಚಯಿಸಿದ ಆಡಳಿತ ಸುಧಾರಣೆಗಳು ವಾಸ್ತವದಲ್ಲಿ ಶ್ರೀಸಾಮಾನ್ಯರ 'ಜೀವನವನ್ನು ಸುಗಮಗೊಳಿಸಲು' ಮತ್ತು ಮಹತ್ವಾಕಾಂಕ್ಷೆಯ ಯುವಕರಿಗೆ 'ಸಮಾನ ಅವಕಾಶದ ವೇದಿಕೆ ಕಲ್ಪಿಸುವ' ಗುರಿಯನ್ನು ಹೊಂದಿರುವ ಸಾಮಾಜಿಕ ಸುಧಾರಣೆಗಳಾಗಿವೆ - ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿಕೆ
ಬೆಂಗಳೂರಿನಲ್ಲಿ ನಡೆದ “ಉತ್ತಮ ಆಡಳಿತಕ್ಕಾಗಿ ನಾಗರಿಕರು, ವಾಣಿಜ್ಯೋದ್ಯಮಿಗಳು ಮತ್ತು ಸರ್ಕಾರವನ್ನು ಒಟ್ಟಿಗೆ ತರುವುದು” ಎಂಬ ವಿಷಯದ ಕುರಿತ ಎರಡು ದಿನಗಳ ಪ್ರಾದೇಶಿಕ ಸಮ್ಮೇಳನದ ಸಮಾರೋಪದಲ್ಲಿ ಸಚಿವ ಭಾಷಣ
ಈ ವರ್ಷದ ಅಂತ್ಯದೊಳಗೆ ಪತ್ರಾಂಕಿತೇತರ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್‌ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (ಸಿಇಟಿ) ನಡೆಸಲು ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಸಜ್ಜಾಗಿದೆ: ಡಾ ಜಿತೇಂದ್ರ ಸಿಂಗ್
ಪ್ರಕಟಣಾ ದಿನಾಂಕ:
12 JUL 2022 3:01PM by PIB Bengaluru
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಚಯಿಸಿದ ಆಡಳಿತ ಸುಧಾರಣೆಗಳು ವಾಸ್ತವವಾಗಿ ಶ್ರೀಸಾಮಾನ್ಯರ 'ಜೀವನವನ್ನು ಸುಗಮಗೊಳಿಸುವ' ಮತ್ತು ಮಹತ್ವಾಕಾಂಕ್ಷೆಯ ಯುವಕರಿಗೆ "ಸಮಾನ ಅವಕಾಶದ ವೇದಿಕೆ" ಕಲ್ಪಿಸುವ ಗುರಿಯನ್ನು ಸಾಧಿಸುವ ಸಾಮಾಜಿಕ ಸುಧಾರಣೆಗಳಾಗಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ (ಸ್ವತಂತ್ರ ನಿರ್ವಹಣೆ) ಖಾತೆ ರಾಜ್ಯ ಸಚಿವ; ಭೂ ವಿಜ್ಞಾನ (ಸ್ವತಂತ್ರ ನಿರ್ವಹಣೆ) ಖಾತೆ; ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ, ಅಣುಶಕ್ತಿ ಮತ್ತು ಬಾಹ್ಯಾಕಾಶ ಖಾತೆಯ ರಾಜ್ಯ ಸಚಿವ, ಡಾ ಜಿತೇಂದ್ರ ಸಿಂಗ್ ಅವರಿಂದು ಇಲ್ಲಿ ತಿಳಿಸಿದ್ದಾರೆ.
6XGF.jpg)
ಬೆಂಗಳೂರಿನಲ್ಲಿ ಡಿಎಆರ್.ಪಿ.ಜಿ. ಮತ್ತು ಕರ್ನಾಟಕ ಸರ್ಕಾರ ಆಯೋಜಿಸಿದ್ದ ಎರಡು ದಿನಗಳ ಪ್ರಾದೇಶಿಕ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಡಾ. ಜಿತೇಂದ್ರ ಸಿಂಗ್, ವಿಶಿಷ್ಠ ನಿರ್ಣಯಗಳನ್ನು ಕೈಗೊಳ್ಳುವ ಸಾಮರ್ಥ್ಯ, ಗತಕಾಲದ ನಿಷೇಧಗಳನ್ನು ತೆರವು ಮಾಡುವುದು ಮತ್ತು ಧೈರ್ಯ, ಸಂಕಲ್ಪ ಮತ್ತು ಪ್ರಾಮಾಣಿಕತೆಯ ಆಧಾರದ ಮೇಲೆ ಸರ್ಕಾರದ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸುವುದು ಮೋದಿ ಅವರ ಆಡಳಿತ ಮಾದರಿಯ ಹೆಗ್ಗುರುತಾಗಿದೆ ಎಂದರು.
"ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರವನ್ನು ಒಟ್ಟಿಗೆ ತರುವುದು" ಎಂಬ ಸಮ್ಮೇಳನದ ವಿಷಯವನ್ನು ಉಲ್ಲೇಖಿಸಿದ ಡಾ ಜಿತೇಂದ್ರ ಸಿಂಗ್, ವ್ಯಾಪಕವಾದ ಸಾಮಾಜಿಕ ಪರಿಣಾಮಗಳನ್ನು ಹೊಂದಿರುವ ಇಂತಹ ಸುಧಾರಣೆಗಳ ಪಟ್ಟಿ ಮಾಡಿದರು. ಮೇ, 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಮೂರು ತಿಂಗಳೊಳಗೇ, ಪ್ರಧಾನಮಂತ್ರಿಗಳು ಗೆಜೆಟೆಡ್ ಅಧಿಕಾರಿಗಳಿಂದ ಪ್ರಮಾಣಪತ್ರಗಳ ದೃಢೀಕರಣವನ್ನು ರದ್ದುಗೊಳಿಸಿ, ಅದರ ಬದಲಿಗೆ ಸ್ವಯಂ ದೃಢೀಕರಣವನ್ನು ಉತ್ತೇಜಿಸುವ ಅತ್ಯಂತ ಕ್ರಾಂತಿಕಾರಿ ಮತ್ತು ಮಹತ್ವದ ನಿರ್ಧಾರವನ್ನು ಕೈಗೊಂಡರು ಎಂದು ಸ್ಮರಿಸಿದರು. ಅಂತೆಯೇ, ನರೇಂದ್ರ ಮೋದಿ ಅವರು 15 ಆಗಸ್ಟ್ 2015 ರಂದು ಕೆಂಪು ಕೋಟೆಯ ಮೇಲಿಂದ ಮಾಡಿದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಂದರ್ಶನಗಳನ್ನು ರದ್ದುಗೊಳಿಸುವಂತೆ ಸಲಹೆ ನೀಡಿದ್ದರು, ಡಿಓಪಿಟಿ 2016ರ ಜನವರಿ 1ರಿಂದ ಅನುಷ್ಠಾನಗೊಳಿಸಿ, ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶದ ವೇದಿಕೆ ಕಲ್ಪಿಸಿತು ಎಂದು ಹೇಳಿದರು.
ಸಿಪಿಜಿಆರ್.ಎ.ಎಂ.ಎಸ್.ನಲ್ಲಿ 2014ರಲ್ಲಿ ವರ್ಷಕ್ಕೆ 2 ಲಕ್ಷ ದೂರುಗಳು ದಾಖಲಾಗುತ್ತಿದ್ದವು, ಈಗ ಇದು ವರ್ಷಕ್ಕೆ 25 ಲಕ್ಷಕ್ಕೆ ಏರಿದೆ ಎಂದ ಸಚಿವರು, ಇದು ನಾಗರಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಆಲಿಸುವ ಮತ್ತು ಅವುಗಳನ್ನು ಪರಿಹರಿಸುವ ಸರ್ಕಾರ ಇದೆ ಎಂಬುದನ್ನು ಧನಾತ್ಮಕವಾಗಿ ಪ್ರತಿಬಿಂಬಿಸುತ್ತದೆ. ಪ್ರಧಾನಮಂತ್ರಿ ಉತ್ಕೃಷ್ಟತಾ ಪ್ರಶಸ್ತಿಗಳು ಅಧಿಕಾರಿಗಳ ವೈಯಕ್ತಿಕ ಸಾಧನೆಯ ಮೇಲೆ, ಪ್ರಮುಖ ಯೋಜನೆಗಳ ಮೇಲೆ ಕೇಂದ್ರೀಕರಿಸುವ ಮತ್ತೊಂದು ದೂರಗಾಮಿ ಆಡಳಿತ ಸುಧಾರಣೆಯಾಗಿದ್ದು, 750 ಜಿಲ್ಲೆಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸುತ್ತದೆ ಎಂದು ಸಚಿವರು ಹೇಳಿದರು.
AGRE.JPG)
ಈ ವರ್ಷದ ಅಂತ್ಯದ ವೇಳೆಗೆ, ಡಿಒಪಿಟಿ ಅಡಿಯಲ್ಲಿ ಬರುವ ರಾಷ್ಟ್ರೀಯ ನೇಮಕಾತಿ ಸಂಸ್ಥೆ (ಎನ್‌ಆರ್‌ಎ) ಗೆಜೆಟೆಡೇತರ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್ ಲೈನ್ ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು (ಸಿಇಟಿ) ನಡೆಸಲು ಸಜ್ಜಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಪ್ರತಿನಿಧಿಗಳಿಗೆ ತಿಳಿಸಿದರು. ಮೊದಲಿಗೆ, 12 ಭಾಷೆಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಕ್ರಮೇಣ ಇದು ಸಂವಿಧಾನದ 8 ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾದ ಎಲ್ಲಾ 22 ಭಾಷೆಗಳನ್ನು ಒಳಗೊಂಡಿರುತ್ತದೆ, ಇದು ಕೆಲವು ದಕ್ಷಿಣದ ರಾಜ್ಯಗಳಿಂದ ಬರುವ ಭಾಷಾ ಪಕ್ಷಪಾತದ ದೂರುಗಳನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿಯವರ ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತದ ಮಂತ್ರವೇನೆಂದರೆ ನಾಗರಿಕರ ಹೆಚ್ಚಿನ ಒಳಗೊಳ್ಳುವಿಕೆ, ನಾವೀನ್ಯತೆ, ಇತ್ತೀಚಿನ ತಂತ್ರಗಳ ಬಳಕೆ ಮತ್ತು ಪಾರದರ್ಶಕತೆಯಾಗಿದೆ ಎಂದು ಸಚಿವರು ಹೇಳಿದರು. ಎಲ್ಲಾ ಆಡಳಿತ ಮಾದರಿಗಳ ಅಂತಿಮ ಗುರಿ ಕೊನೆಯ ಸಾಲಿನಲ್ಲಿರುವ ಕೊನೆಯ ವ್ಯಕ್ತಿಯನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದಾಗಿದೆ ಎಂದು ಅವರು ಹೇಳಿದರು. ಪರಸ್ಪರ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ನಮ್ಮ ಆಯಾ ವಲಯಗಳು, ಪ್ರದೇಶಗಳು ಮತ್ತು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸರ್ಕಾರವು ಒಂದೇ ರೀತಿಯ ಸಮಸ್ಯೆಗಳನ್ನು ಹೊಂದಿರುವ ರಾಜ್ಯಗಳನ್ನು ಒಗ್ಗೂಡಿಸಿದೆ ಎಂದು ಅವರು ಉಲ್ಲೇಖಿಸಿದರು, ಇದರಿಂದಾಗಿ ಅವರು ತಮ್ಮ ಪರಿಣತಿ ಮತ್ತು ಸಮಾನ ವಿಷಯಗಳಿಗೆ ಸಂಬಂಧಿಸಿದ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ಪರಸ್ಪರ ಕಲಿಯಲು ಯಶೋಗಾಥೆಗಳನ್ನು ಪರಸ್ಪರ ಹಂಚಿಕೊಳ್ಳಲು ಸಹಕಾರಿ ಎಂದರು.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮಾದರಿಯನ್ನು ಆಧರಿಸಿ, ಡಿಎಆರ್‌ಪಿಜಿಯು ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕದ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ವರ್ಷದ ಜನವರಿಯಲ್ಲಿ ಜಿಲ್ಲಾ ಸೂಚ್ಯಂಕವನ್ನು ಬಿಡುಗಡೆ ಮಾಡಿದ ಮೊದಲ ರಾಜ್ಯ ಜಮ್ಮು ಮತ್ತು ಕಾಶ್ಮೀರವಾಗಿದ್ದು, ನಂತರ ಉತ್ತರ ಪ್ರದೇಶ ಮತ್ತು ಈಗ ಮಧ್ಯಪ್ರದೇಶದಲ್ಲಿ ಈ ಕಾರ್ಯ ನಡೆಯುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕವು ಒಂದು ಮೈಲಿಗಲ್ಲಾಗಿದೆ ಮತ್ತು ಇದು ರಾಜ್ಯಗಳ ಎಲ್ಲಾ ಜಿಲ್ಲೆಗಳ ಕಾರ್ಯಕ್ಷಮತೆಯ ಸಾಕ್ಷ್ಯಾಧಾರಿತ ಮೌಲ್ಯಮಾಪನಕ್ಕೆ ದೃಢವಾದ ಚೌಕಟ್ಟನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಮುಂದಿನ ಹಂತದಲ್ಲಿ ಸೂಚ್ಯಂಕವು ವಿಭಾಗ ಮತ್ತು ಪಂಚಾಯತ್ ಮಟ್ಟಕ್ಕೆ ತಲುಪಲಿದೆ ಎಂದು ಸಚಿವರು ಸಭೆಗೆ ತಿಳಿಸಿದರು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್. ರಾಜ್ಯದಲ್ಲಿ ಜನಕೇಂದ್ರಿತ ಆಡಳಿತ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದರು. "ಸುಗಮ ವ್ಯಾಪಾರ" ಯಶಸ್ಸನ್ನು ಉಲ್ಲೇಖಿಸಿದ ಅವರು, ಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯಿಂದಾಗಿ, 400ಕ್ಕೂ ಹೆಚ್ಚು ಬಹು ರಾಷ್ಟ್ರೀಯ ಕಂಪನಿಗಳು ಕರ್ನಾಟಕದಲ್ಲಿ ಘಟಕಗಳನ್ನು ಸ್ಥಾಪಿಸಿವೆ ಎಂದರು. ಯುವಕರು ಮತ್ತು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸಲು ಗುರುತಿಸಿ, ಸ್ಪಂದಿಸಿ ಮತ್ತು ಪರಿಹಾರ ಒದಗಿಸುವ ಆರ್.ಆರ್.ಆರ್. ಮಾದರಿಯನ್ನು ಡಾ ಸುಧಾಕರ್ ಉಲ್ಲೇಖಿಸಿದರು.
ಡಿಎಆರ್‌ಪಿಜಿ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಮಾತನಾಡಿ, ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಆಡಳಿತ ಸುಧಾರಣೆಗಳ ಮೂಲಕ ಸರ್ಕಾರ ಮತ್ತು ನಾಗರಿಕರನ್ನು ಒಟ್ಟಿಗೆ ತರುವ ಪ್ರಯತ್ನ ಈ ಸಮ್ಮೇಳನದ್ದಾಗಿದೆ. ಡಿಜಿಟಲ್ ತಂತ್ರಜ್ಞಾನ ಬಳಕೆ, ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ ನೀತಿ ಉದ್ದೇಶಗಳೊಂದಿಗೆ ಮುಂದಿನ ಪೀಳಿಗೆಯ ಸುಧಾರಣೆ ಮತ್ತು ನಾವೀನ್ಯತೆ, ಮರು ಎಂಜಿನಿಯರಿಂಗ್ ನ ಸರ್ಕಾರದ ಪ್ರಕ್ರಿಯೆಗಳನ್ನು ಒಳಗೊಳ್ಳುವಿಕೆ, ಇ-ಸೇವೆಗಳಿಗೆ ಸಾರ್ವತ್ರಿಕ ಪ್ರವೇಶ, ಜಿಲ್ಲಾ ಮಟ್ಟದಲ್ಲಿ ಡಿಜಿಟಲ್ ಉಪಕ್ರಮಗಳಲ್ಲಿ ಉತ್ಕೃಷ್ಟತೆ ಮತ್ತು ಹೊಸದಾಗಿ ಹೊರಹೊಮ್ಮುವ ತಂತ್ರಜ್ಞಾನದ ಅಳವಡಿಕೆ ಮತ್ತು ಐಸಿಟಿ ನಿರ್ವಹಣೆಯ ಬಳಕೆಯೊಂದಿಗೆ ಇದನ್ನು ಸಕ್ರಿಯಗೊಳಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ 'ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ' ಇ-ಪತ್ರಿಕೆಯನ್ನು ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿ ಖಾತೆ ಸಚಿವರಾದ ಡಾ. ಜಿತೇಂದ್ರ ಸಿಂಗ್ ಬಿಡುಗಡೆ ಮಾಡಿದರು.
ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರದಾನ ಕಾರ್ಯದರ್ಶಿ ಶ್ರೀ ಶ್ರೀವತ್ಸ ಕೃಷ್ಣ ಉಪಸ್ಥಿತರಿದ್ದರು
2 ದಿನಗಳ ಕಾರ್ಯಕ್ರಮದಲ್ಲಿ ಆರು ಅಧಿವೇಶಗಳಲ್ಲಿ (i) ಆಡಳಿತಾತ್ಮಕ ಸುಧಾರಣೆ; (ii) ನೋಟದಲ್ಲಿನ ಹೊರಭಾಗ: ಖಾಸಗಿ ವಲಯ ಮತ್ತು ಉತ್ತಮ ಆಡಳಿತ; (iii) ಉತ್ತಮ ರೂಢಿಗಳ ಪುನರಾವರ್ತನೆ; (iv) ರಾಜ್ಯಗಳಲ್ಲಿ ಆಡಳಿತಾತ್ಮಕ ಸುಧಾರಣೆ; (v) ಹೆಗ್ಗುರುತಿನ ಆಡಳಿತ ಮತ್ತು (vi) ನವೋದ್ಯಮ ಮತ್ತು ಆಡಳಿತದಲ್ಲಿ ಪ್ರಯೋಗಗಳು ಪ್ರಸ್ತುತಿಪಡಿಸಲಾಯಿತು.
*******
(ಪ್ರಕಟಣೆ ಐ.ಡಿ.: 1840985)
ವಿಸಿಟರ್ ಕೌಂಟರ್ : 205