ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

“ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರವನ್ನು ಉತ್ತಮ ಆಡಳಿತಕ್ಕಾಗಿ ಸನಿಹಕ್ಕೆ ತರುವ” ವಿಷಯ ಕುರಿತು ಎರಡು ದಿನಗಳ ಪ್ರಾದೇಶಿಕ ಸಮ್ಮೇಳನ ನಾಳೆಯಿಂದ ಬೆಂಗಳೂರಿನಲ್ಲಿ


ಜುಲೈ 12 ರ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಭಾಗಿ

Posted On: 10 JUL 2022 3:58PM by PIB Bengaluru

“ಉತ್ತಮ ಆಡಳಿತಕ್ಕಾಗಿ ನಾಗರಿಕರು, ಉದ್ಯಮಿಗಳು ಮತ್ತು ಸರ್ಕಾರವನ್ನು ಸನಿಹಕ್ಕೆ ತರುವ” ಎರಡು ದಿನಗಳ ಪ್ರಾದೇಶಿಕ ಸಮ್ಮೇಳನ ಬೆಂಗಳೂರಿನಲ್ಲಿ ನಾಳೆಯಿಂದ ಆರಂಭವಾಗಲಿದೆ. ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕೇಂದ್ರ ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಕುಂದುಕೊರತೆ ಇಲಾಖೆ ಈ ಪ್ರಾದೇಶಿಕ ಸಮ್ಮೇಳನವನ್ನು ಆಯೋಜಿಸಿದೆ.

 

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ [ಸ್ವತಂತ್ರ ನಿರ್ವಹಣೆ], ಭೂ ವಿಜ್ಞಾನ [ಸ್ವತಂತ್ರ ನಿರ್ವಹಣೆ], ಪ್ರಧಾನಮಂತ್ರಿ ಕಾರ್ಯಾಲಯ, ಸಾರ್ವಜನಿಕ ಸಿಬ್ಬಂದಿ, ಪಿಂಚಣಿ, ಅಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್, ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಜುಲೈ 12 ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

 

ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿವಿಧ ಆಡಳಿತ ಸುಧಾರಣೆಗಳ ಮೂಲಕ ಸರ್ಕಾರ ಮತ್ತು ನಾಗರಿಕರನ್ನು ಸನಿಹಕ್ಕೆ ತರುವ ಪ್ರಯತ್ನವನ್ನು ಈ ಸಮ್ಮೇಳನ ಹೊಂದಿದೆ. “ಡಿಜಿಟಲ್ ತಂತ್ರಜ್ಞಾನ, ಮುಂದಿನ ಪೀಳಿಗೆಯ ಸುಧಾರಣೆಗಳು ಮತ್ತು “ಗರಿಷ್ಠ ಸರ್ಕಾರ, ಕನಿಷ್ಠ ಆಡಳಿತ”, ಸರ್ಕಾರಿ ಪ್ರಕ್ರಿಯೆಯಲ್ಲಿ ಮರು ಇಂಜಿನಿಯರಿಂಗ್, ಇ ಸೇವೆಗಳಲ್ಲಿ ಸಾರ್ವತ್ರಿಕ ಪ್ರವೇಶ, ಜಿಲ್ಲಾ ಮಟ್ಟದಲ್ಲಿ ಡಿಜಿಟಲ್ ಉಪಕ್ರಮಗಳಲ್ಲಿ ಉತ್ಕೃಷ್ಟತೆ ಮತ್ತು ಬೆಳವಣಿಗೆಯಾಗುತ್ತಿರುವ ತಂತ್ರಜ್ಞಾನದಲ್ಲಿ ಶ್ರೇಷ್ಠತೆ ಅಳವಡಿಸಿಕೊಳ್ಳುವ ಹಾಗೂ ಐಸಿಟಿ ಬಳಕೆಯಲ್ಲಿ ನಿರ್ವಹಣೆ ಕುರಿತು ಸಮ್ಮೇಳನ ಬೆಳಕು ಚೆಲ್ಲಲಿದೆ.

 

ಎರಡು ದಿನಗಳ ಸಮ್ಮೇಳನದಲ್ಲಿ ಆರು ಪ್ರಸ್ತುತಿಗಳಿರಲಿವೆ;

 

(i) ಆಡಳಿತ ಸುಧಾರಣೆ, (ii) ಖಾಸಗಿ ವಲಯ ಮತ್ತು ಉತ್ತಮ ಆಡಳಿತ ಕುರಿತು ಹೊರ ನೋಟ, (iii) ಅತ್ಯುತ್ತಮ ಅಭ್ಯಾಸಗಳ ಪುನರಾವರ್ತನೆ (iv) ರಾಜ್ಯಗಳಲ್ಲಿ ಆಡಳಿತ ಸುಧಾರಣೆ, (v) ಮಾನದಂಡದ ಆಡಳಿತ ಮತ್ತು (vi) ಉತ್ತಮ ಆಡಳಿತದಲ್ಲಿ ನವೋದ್ಯಮಗಳು ಮತ್ತು ಪ್ರಯೋಗಗಳು.

 

ಎ.ಆರ್.ಪಿ.ಜಿಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಅಮರನಾಥ್ ಅವರು ಸ್ವಾಗತ ಭಾಷಣ ಮಾಡಲಿದ್ದಾರೆ. ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ವಂದಿತಾ ಶರ್ಮಾ ಹಾಗೂ ಎ.ಆರ್.ಪಿ.ಜಿ ಕಾರ್ಯದರ್ಶಿ ಶ್ರೀ ವಿ. ಶ್ರೀನಿವಾಸ್ ಅವರು ಸಮಾರೋಪ ಸಮಾರಂಭದಲ್ಲಿ ಮಾತನಾಡಲಿದ್ದಾರೆ. ಕರ್ನಾಟಕದ ಡಿ.ಪಿ.ಎ.ಆರ್ ಪ್ರಧಾನ ಕಾರ್ಯದರ್ಶಿ ಡಾ. ಶ್ರೀವತ್ಸ ಕೃಷ್ಣ ಅವರು ವಂದನಾರ್ಪಣೆ ಮಾಡಲಿದ್ದಾರೆ.

 

ಸಮ್ಮೇಳನದಲ್ಲಿ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಪ್ಯಾನ್ ಇಂಡಿಯಾದಿಂದ 400 ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಸಮ್ಮೇಳನ ಅರೆ ವರ್ಚುವಲ್ ಮಾದರಿಯಲ್ಲಿ ನಡೆಯಲಿದೆ.

 

 

*********


(Release ID: 1840606) Visitor Counter : 185


Read this release in: Hindi , Tamil , Telugu , English , Urdu