ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸಾರೆ ಜಹಾನ್ ಸೆ ಅಚ್ಚಾ, ಡಿಜಿಟಲ್ ಇಂಡಿಯಾ ಹಮಾರಾ” - ರಾಜೀವ್ ಚಂದ್ರಶೇಖರ್


“ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳು ಭಾರತದ ಡಿಜಿಟಲ್ ಆರ್ಥಿಕತೆಯ ಹೊಸ ಮುಂದಾಳುಗಳು”

ಡಿಜಿಟಲ್ ಇಂಡಿಯಾ "ನವ ಭಾರತದ ಟೆಕ್ಕೇಡ್ ಅನ್ನು ವೇಗಗೊಳಿಸುವುದು”

Posted On: 05 JUL 2022 5:41PM by PIB Bengaluru

ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮಗಳು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಮತ್ತು ಯುವಕರನ್ನು ಭಾರತೀಯ ಡಿಜಿಟಲ್ ಆರ್ಥಿಕತೆಯನ್ನು ಮುನ್ನಡೆಸುವ ಸ್ಥಾನದಲ್ಲಿ ಇರಿಸುವ ಮೂಲಕ ದೇಶದ ಆರ್ಥಿಕ ದ ಕ್ಷೇತ್ರದಲ್ಲಿ ಮಹತ್ತರ ಪರಿವರ್ತನೆಯನ್ನು ತಂದಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.

 

“ಸಾರೆ ಜಹಾನ್ ಸೆ ಅಚ್ಚಾ, ಡಿಜಿಟಲ್ ಇಂಡಿಯಾ ಹಮಾರಾ”. ವಿಶ್ವವೂ ಈಗ ಭಾರತದ ಉದ್ಯಮಶೀಲತೆಯ ಶಕ್ತಿಯನ್ನು ಅರಿತುಕೊಂಡಿದೆ ಮತ್ತು ಅನೇಕ ದೇಶಗಳು ನಮ್ಮ ದೇಶದ ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳೊಂದಿಗೆ ಸಹಯೋಗಕ್ಕಾಗಿ ಆಸಕ್ತಿಯನ್ನು ವ್ಯಕ್ತಪಡಿಸಿವೆ ಎಂದು ನಿನ್ನೆಯಿಂದ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಾರಂಭಿಸಲಾದ ಡಿಜಿಟಲ್ ಇಂಡಿಯಾ ವಾರದ ಆಚರಣೆಯಲ್ಲಿ ಅವರು ನವೋದ್ಯಮಗಳ ಸಮ್ಮೇಳನದ ಅಧಿವೇಶನವನ್ನು ಉದ್ದೇಶಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಮಹಿಳೆಯರು ಸೇರಿದಂತೆ ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳ ಹಲವಾರು ಸಂಸ್ಥಾಪಕರು/ಸಹ ಸಂಸ್ಥಾಪಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಜಲ್ ಅಲಾಘ್, ಸಂಸ್ಥಾಪಕ ಮಾಮಾ ಅರ್ಥ್, ವರುಣ್ ಖೈತಾನ್, ಸಹ ಸಂಸ್ಥಾಪಕ, ಅರ್ಬನ್ ಕಂಪನಿ, ರೋಹನ್ ವರ್ಮಾ, ಸಿಇಒ ಮ್ಯಾಪ್‌ಮಿಇಂಡಿಯಾ, ಶ್ರೀನಾಥ್ ರಾಮಕೃಷ್ಣನ್, ಜೈಟ್‌ವರ್ಕ್ ಸಹ ಸಂಸ್ಥಾಪಕ, ಅನಿಲ್ ಶರ್ಮಾ, ಟಿಸಿಎಸ್, ಹೆಡ್ ಕಾರ್ಪೊರೇಟ್ ಇನ್‌ಕ್ಯುಬೇಶನ್, ಸೋನಿಯಾ ಸ್ವರೂಪ್ ಚೋಕ್ಸಿ ಸೇರಿದಂತೆ ಅನೇಕ ಉದ್ಯಮಿಗಳು, ಡಿಜಿಟಲ್ ಇಂಡಿಯಾ ಕಾರ್ಯಕ್ರಮ ತಂದಿರುವ ಡಿಜಿಟಲ್ ಪರಿಹಾರಗಳ ಪ್ರಯೋಜನಗಳನ್ನು ಹೇಗೆ ಪಡೆದುಕೊಳ್ಳಲು ಸಾಧ್ಯವಾಯಿತು ಎನ್ನುವುದರ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.

ತಮ್ಮ ಇತ್ತೀಚಿನ ಯುಕೆ ಭೇಟಿಯನ್ನು ಉಲ್ಲೇಖಿಸಿ, ಶ್ರೀ ಚಂದ್ರಶೇಖರ್ ಅವರು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಅವರ ಸಚಿವಸಂಪುಟದ ಹಲವಾರು ಇತರ ಮಂತ್ರಿಗಳನ್ನು ಭೇಟಿ ಮಾಡಿರುವುದಾಗಿ, ಜೊತೆಗೆ ಭಾರತೀಯ 50 ನವೋದ್ಯಮಗಳು ಮತ್ತು ಯುನಿಕಾರ್ನ್‌ಗಳ ನಿಯೋಗದೊಂದಿಗೆ ಸಹಯೋಗ ಮತ್ತು ಪಾಲುದಾರಿಕೆಗಳ ಮಾರ್ಗಗಳ ಕುರಿತು ಚರ್ಚಿಸಿರುವುದಾಗಿ ಹೇಳಿದರು.

 “ನಮ್ಮ ಯಶಸ್ಸು ಮತ್ತು ಸಾಮರ್ಥ್ಯಗಳು ಇಂಡಿಯಾ ಸ್ಟಾಕ್, ಯುಪಿಐ, ಅಂತರಜಾಲ ಗ್ರಾಹಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್‌ಗಳು, ವೆಬ್ 3.0, ಇಂಡಸ್ಟ್ರಿ 4.0, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್‌ನಿಂದ ಹಿಡಿದು. ನಾಯಕತ್ವ ಮತ್ತು ಉದ್ಯಮಶೀಲತೆಯ ಈ ಸಾಮರ್ಥ್ಯಗಳು ನವ ಭಾರತವನ್ನು ಹೆಚ್ಚು ಹೆಚ್ಚು ವ್ಯಾಖ್ಯಾನಿಸುತ್ತಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೋಮವಾರ ಸಂಜೆ ಗುಜರಾತ್‌ನ ಗಾಂಧಿನಗರದಲ್ಲಿ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಿದರು, ಇದರ ವಿಷಯ 'ಕ್ಯಾಟಲೈಸಿಂಗ್ ನ್ಯೂ ಇಂಡಿಯಾಸ್ ಟೆಕ್ಡೆಡ್' ('ನವ ಭಾರತದ ಟೆಕ್ಕೇಡ್ ಅನ್ನು ವೇಗಗೊಳಿಸುವುದು) ಆಗಿದೆ. ಕಾರ್ಯಕ್ರಮದದಲ್ಲಿ, ಅವರು ಹಲವಾರು ಡಿಜಿಟಲ್ ಇಂಡಿಯಾ ಉಪಕ್ರಮಗಳಿಗೆ ಚಾಲನೆ ನೀಡಿದರು, ಅವುಗಳೆಂದರೆ, ಇಂಡಿಯಾಸ್ಟ್ಯಾಕ್: ಇಂಡಿಯಾಸ್ಟಾಕ್. ಜಾಗತಿಕ, ಮೈಸ್ಕೀಮ್: ಸರ್ವಿಸ್ ಡಿಸ್ಕವರಿ ಪ್ಲಾಟ್‌ಫಾರ್ಮ್, ಮೆರಿಪೆಹಚಾನ್: ನ್ಯಾಷನಲ್ ಸಿಂಗಲ್ ಸೈನ್ ಆನ್ (ಎನ್‌ಎಸ್‌ಎಸ್‌ಒ), ಡಿಜಿಟಲ್ ಇಂಡಿಯಾ ಭಾಷಿಣಿ: ಭಾಷಾ ದಾನ್, ಡಿಜಿಟಲ್ ಇಂಡಿಯಾ ಜೆನೆಸಿಸ್ ಮತ್ತು ಇ-ಪುಸ್ತಕ ‘ಕ್ಯಾಟಲೈಸಿಂಗ್ ನ್ಯೂ ಇಂಡಿಯಾಸ್ ಟೆಕ್ಡೇಡ್ʼ. ಚಿಪ್ಸ್ ಟು ಸ್ಟಾರ್ಟ್ಅಪ್ (ಸಿ2ಎಸ್‌) ಕಾರ್ಯಕ್ರಮದ ಅಡಿಯಲ್ಲಿ ಬೆಂಬಲಿತವಾದ 30 ಸಂಸ್ಥೆಗಳ ಮೊದಲ ಸಮೂಹವನ್ನು ಸಹ ಘೋಷಿಸಲಾಯಿತು.

ಡಿಜಿಟಲ್ ಪರಿಹಾರಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು 200 ಕ್ಕೂ ಹೆಚ್ಚು ಮಳಿಗೆಗಳನ್ನು ಪ್ರದರ್ಶಿಸಿದ ಡಿಜಿಟಲ್ ಮೇಳಕ್ಕೂ ಶ್ರೀ ಮೋದಿ ಭೇಟಿ ನೀಡಿದರು. ದೇಶದಾದ್ಯಂತ ಡಿಜಿಟಲ್ ಇಂಡಿಯಾ ಉಪಕ್ರಮಗಳ ಸುಮಾರು 1,500 ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಲವು ಫಲಾನುಭವಿಗಳು ಪ್ರಧಾನಮಂತ್ರಿಯವರೊಂದಿಗೆ ಸಂವಾದ ನಡೆಸಲು ಮತ್ತು ತಮ್ಮ ಅನುಭವಗಳನ್ನು ಹಂಚಿಕೊಂಡರು.

 

*******


(Release ID: 1839430) Visitor Counter : 155


Read this release in: English , Marathi , Hindi , Urdu