ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಎಲೆಕ್ಟ್ರಿಕ್‌ ವೆಹಿಕಲ್‌ ಬ್ಯಾಟರಿಗಳಿಗೆ ಬಿಐಎಸ್‌ ಕಾರ್ಯಕ್ಷ ಮತೆಯ ಮಾನದಂಡಗಳನ್ನು ರೂಪಿಸುತ್ತದೆ.


ವಿವಿಧ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ವಾಹನಗಳಿಗೆ ಬ್ಯಾಟರಿಗಳಿಗೆ ಸಂಬಂಧಿಸಿದ ಇನ್ನೂ ಎರಡು ಮಾನದಂಡಗಳನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿ ಬಿಐಎಸ್‌.

Posted On: 24 JUN 2022 5:55PM by PIB Bengaluru

ಭಾರತದ ರಾಷ್ಟ್ರೀಯ ಗುಣಮಟ್ಟ ಸಂಸ್ಥೆ ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌, ಎಲೆಕ್ಟ್ರಿಕಲ್‌ ಚಾಲಿತ ರಸ್ತೆ ವಾಹನಗಳಿಗೆ ಲಿಥಿಯಂ-ಅಯಾನ್‌ ಟ್ರಾಕ್ಷ ನ್‌ ಬ್ಯಾಟರಿ ಪ್ಯಾಕ್‌ ಗಳು ಮತ್ತು ಸಿಸ್ಟಮ್‌ (ಪರ್ಫಾರ್ಮೆನ್ಸ್‌ ಟೆಸ್ಟಿಂಗ್‌) ಗಾಗಿ ಪರೀಕ್ಷಾ ನಿರ್ದಿಷ್ಟತೆಗಳಿಗಾಗಿ ಮಾನದಂಡಗಳನ್ನು ಪ್ರಕಟಿಸಿದೆ. ಈ ಬ್ಯಾಟರಿ ಪ್ಯಾಕ್‌ಗಳು ಮತ್ತು ಸಿಸ್ಟಮ್‌ಗಳಿಗಾಗಿ ಸ್ಟ್ಯಾಂಡರ್ಡ್‌ ಐಎಸ್‌ 17855: 2022 ಅನ್ನು ಐಎಸ್‌ಒ 12405-4: 2018 ನೊಂದಿಗೆ ಸಮನ್ವಯಗೊಳಿಸಲಾಗಿದೆ.

 

ಈ ಮಾನದಂಡವು ಬ್ಯಾಟರಿ ಪ್ಯಾಕ್‌ ಗಳು ಮತ್ತು ಹೆಚ್ಚಿನ ಶಕ್ತಿಯ ಅಪ್ಲಿಕೇಶನ್‌ಗಾಗಿ ಸಿಸ್ಟಂನ ಕಾರ್ಯಕ್ಷ ಮತೆ, ವಿಶ್ವಾಸಾರ್ಹತೆ ಮತ್ತು ವಿದ್ಯುತ್‌ ಕಾರ್ಯನಿರ್ವಹಣೆಯ ಮೂಲಭೂತ ಗುಣಲಕ್ಷ ಣಕ್ಕಾಗಿ ಪರೀಕ್ಷಾ ಕಾರ್ಯವಿಧಾನವನ್ನು ಸಂಯೋಜಿಸುತ್ತದೆ. ಉದಾಹರಣೆಗೆ ವಾಹನವು ಪಾರ್ಕಿಂಗ್‌ನಲ್ಲಿದ್ದಾಗ (ಬ್ಯಾಟರಿಯನ್ನು ದೀರ್ಘಾಕಾಲದವರೆಗೆ ಬಳಸಲಾಗುವುದಿಲ್ಲ), ಬ್ಯಾಟರಿ ವ್ಯವಸ್ಥೆಯನ್ನು ರವಾನಿಸಲಾಗುತ್ತದೆ (ಸಂಗ್ರಹಿಸಲಾಗುತ್ತದೆ), ಕಡಿಮೆ ಮತ್ತು ಹೆಚ್ಚಿನ ತಾಪಮಾನದಲ್ಲಿ ಬ್ಯಾಟರಿ ಕಾರ್ಯನಿರ್ವಹಿಸುತ್ತದೆ. ಅದಕ್ಕೆ ಅನುಗುಣವಾಗಿ ವಿವಿಧ ಪರೀಕ್ಷೆಗಳನ್ನು ಈ ಮಾನದಂಡದಲ್ಲಿ ಸಂಯೋಜಿಸಲಾಗಿದೆ.

 

ಸುರಕ್ಷ ತೆ ಮತ್ತು ಕಾರ್ಯಕ್ಷ ಮತೆ ವಿದ್ಯುನ್ಮಾನ ಸಾಧನಗಳ ಎರಡು ನಿರ್ಣಾಯಕ ಅಂಶಗಳಾಗಿವೆ. ವಾಹನಗಳ ಮುನ್ನೂಕುವ ಶಕ್ತಿಗಾಗಿ ವಿದ್ಯುತ್‌ ಮೂಲವಾಗಿ ಬಳಸಲು ಬ್ಯಾಟರಿ ವ್ಯವಸ್ಥೆಯ ಅವಶ್ಯಕತೆಯು ಗ್ರಾಹಕ ಎಲೆಕ್ಟ್ರಾನಿಕ್ಸ್‌ ಅಥವಾ ಸ್ಥಿರ ಬಳಕೆಗೆ ಬಳಸುವ ಬ್ಯಾಟರಿಗಿಂತ ಗಮನಾರ್ಹವಾಗಿ ಭಿನ್ನವಾಗಿದೆ.

 

ಎಲೆಕ್ಟ್ರಿಕ್‌ ವಾಹನಗಳು ಎಲೆಕ್ಟ್ರಿಕ್‌ ಮೋಟಾರ್‌ ಮತ್ತು ರೀಚಾರ್ಜ್‌ ಮಾಡಬಹುದಾದ ಬ್ಯಾಟರಿಗಳಲ್ಲಿ ಕಾರ್ಯನಿರ್ವಹಿಸುವ ವಾಹನಗಳಾಗಿವೆ. ಕಳೆದ ದಶಕದಲ್ಲಿ, ಎಲೆಕ್ಟ್ರಿಕ್‌ ವಾಹನಗಳು ಮಾರುಕಟ್ಟೆಯಲ್ಲಿಗೋಚರತೆ ಮತ್ತು ಲಭ್ಯತೆಯ ದೃಷ್ಟಿಯಿಂದ ಬೆಳೆದಿವೆ. ಗ್ರಾಹಕರ ಸುರಕ್ಷ ತೆ, ವಿಶ್ವಾಸಾರ್ಹತೆ ಮತ್ತು ಸುರಕ್ಷ ತೆಗಾಗಿ, ಇಂಧನ ಶೇಖರಣಾ ವ್ಯವಸ್ಥೆಗಳು ಯಾವುದೇ ಇವಿ (ಎಲೆಕ್ಟ್ರಿಕ್‌ ವೆಹಿಕಲ್‌) ಯ ನಿರ್ಣಾಯಕ ಭಾಗವಾಗುತ್ತವೆ. ಹೆಚ್ಚಿನ ಶಕ್ತಿ ಮತ್ತು ತೂಕದ ಅನುಪಾತದಿಂದ ಹೆಚ್ಚಿನ ಇವಿಗಳು ಲೀಥಿಯಂ-ಅಯಾನ್‌ ಬ್ಯಾಟರಿಗಳನ್ನು ಬಳಸುತ್ತವೆ.

 

ಇದಲ್ಲದೆ, ಇವಿಗಾಗಿ ಬ್ಯಾಟರಿಗಳ ಸುರಕ್ಷ ತಾ ಅಂಶವನ್ನು ಗಮನದಲ್ಲಿಟ್ಟುಕೊಂಡು, ಬ್ಯೂರೋ ಆಫ್‌ ಇಂಡಿಯನ್‌ ಸ್ಟ್ಯಾಂಡರ್ಡ್‌ ವಿವಿಧ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ವಾಹನಗಳಿಗೆ (ಎಲ್‌, ಎಂ ಮತ್ತು ಎನ್‌ ವರ್ಗ) ಬ್ಯಾಟರಿಗಳಿಗೆ ಸಂಬಂಧಿಸಿದ ಇನ್ನೂ 2 ಮಾನದಂಡಗಳನ್ನು ಪ್ರಕಟಿಸುವ ಪ್ರಕ್ರಿಯೆಯಲ್ಲಿದೆ.

******



(Release ID: 1836866) Visitor Counter : 210