ಸಂಪುಟ
azadi ka amrit mahotsav

ಛತ್ತೀಸ್‌ಗಢ ರಾಜ್ಯದ ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಗಳ ಒಳ ಪ್ರದೇಶಗಳ ಸ್ಥಳೀಯ ಬುಡಕಟ್ಟು ಯುವಕರನ್ನು ಸಿ ಆರ್‌ ಪಿ ಎಫ್‌ ಕಾನ್‌ಸ್ಟೆಬಲ್‌ಗಳಾಗಿ ನೇಮಿಸಿಕೊಳ್ಳಲು ಕಾನ್‌ಸ್ಟೆಬಲ್ ಹುದ್ದೆಯ ಶೈಕ್ಷಣಿಕ ಅರ್ಹತೆಯಲ್ಲಿ ಸಡಿಲಿಕೆಗೆ ಸಂಪುಟದ ಅಂಗೀಕಾರ

Posted On: 01 JUN 2022 4:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ದಕ್ಷಿಣ ಛತ್ತೀಸ್‌ಗಢದ ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ಜಿಲ್ಲೆಗಳಲ್ಲಿ ಸಿಆರ್‌ಪಿಎಫ್‌ನಲ್ಲಿ ಕಾನ್ಸ್‌ಟೇಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗೆ 400 ಅಭ್ಯರ್ಥಿಗಳ ನೇಮಕಾತಿಗಾಗಿ 10ನೇ ತರಗತಿ ತೇರ್ಗಡೆಯ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು 8ನೇ ತರಗತಿಗೆ ಸಡಿಲಿಸುವ ಗೃಹ ಸಚಿವಾಲಯದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. 
ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ನೀಡುವುದರ ಜೊತೆಗೆ ಈ ಮೂರು ಜಿಲ್ಲೆಗಳ ಒಳ ಪ್ರದೇಶಗಳಲ್ಲಿ ಈ ನೇಮಕಾತಿ ರ್ಯಾಲಿಯ ವ್ಯಾಪಕ ಪ್ರಚಾರಕ್ಕಾಗಿ ಎಲ್ಲಾ ವಿಧಾನಗಳನ್ನು ಅಳವಡಿಸಿಕೊಳ್ಳುತ್ತದೆ ಮತ್ತು  ಈ ಹೊಸದಾಗಿ ನೇಮಕಗೊಂಡ ಪ್ರಶಿಕ್ಷಣಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ಸಿಆರ್‌ಪಿಎಫ್ ಔಪಚಾರಿಕ ಶಿಕ್ಷಣವನ್ನು ನೀಡುತ್ತದೆ.
ಛತ್ತೀಸ್‌ಗಢ ರಾಜ್ಯದ ಬಿಜಾಪುರ, ದಾಂತೇವಾಡ ಮತ್ತು ಸುಕ್ಮಾ ಮೂರು ಜಿಲ್ಲೆಗಳ ಒಳ ಪ್ರದೇಶಗಳ 400 ಬುಡಕಟ್ಟು ಯುವಕರು ಉದ್ಯೋಗಾವಕಾಶಗಳನ್ನು ಪಡೆಯಲಿದ್ದಾರೆ. ನೇಮಕಾತಿಗಾಗಿ ದೈಹಿಕ ಮಾನದಂಡಗಳಲ್ಲಿ ಸೂಕ್ತವಾದ ಸಡಿಲಿಕೆಯನ್ನೂ ಸಹ ಗೃಹ ವ್ಯವಹಾರಗಳ ಸಚಿವಾಲಯವು ನೀಡುತ್ತದೆ.
ಸಿಆರ್‌ಪಿಎಫ್ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಒಂದಾಗಿದೆ, ಮೂಲಭೂತವಾಗಿ ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆ, ದಂಗೆಯನ್ನು ನಿಭಾಯಿಸುವುದು ಮತ್ತು ಆಂತರಿಕ ಭದ್ರತೆಯನ್ನು ನಿರ್ವಹಿಸುವ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತದೆ. ಛತ್ತೀಸ್‌ಗಢದ ತುಲನಾತ್ಮಕವಾಗಿ ಹಿಂದುಳಿದ ಪ್ರದೇಶಗಳಿಂದ 400 ಸ್ಥಳೀಯ ಬುಡಕಟ್ಟು ಯುವಕರನ್ನು ಕಾನ್ಸ್‌ಟೇಬಲ್‌ಗಳಾಗಿ (ಸಾಮಾನ್ಯ ಕರ್ತವ್ಯ) ನೇಮಿಸಿಕೊಳ್ಳಲು ಸಿಆರ್‌ಪಿಎಫ್ ಪ್ರಸ್ತಾಪಿಸಿದೆ. 10 ನೇ ತರಗತಿ ಉತ್ತೀರ್ಣತೆಯ ನಿಗದಿತ ಕನಿಷ್ಠ ಶೈಕ್ಷಣಿಕ ಅರ್ಹತೆಯನ್ನು ಪಡೆದ ನಂತರವೇ ಅವರನ್ನು ಸೇವೆಯಲ್ಲಿ ಕಾಯಂಗೊಳಿಸಲಾಗುತ್ತದೆ, ಹೀಗಾಗಿ ಈ ನೇಮಕಾತಿಗಳಿಗೆ ಔಪಚಾರಿಕ ಶಿಕ್ಷಣವನ್ನು ನೀಡಲಾಗುವುದು ಮತ್ತು ಅವರ ಪರೀಕ್ಷಾ ಅವಧಿಯಲ್ಲಿ ಅಧ್ಯಯನ ಸಾಮಗ್ರಿ, ಪುಸ್ತಕಗಳು ಮತ್ತು ತರಬೇತಿ  ನೆರವು ನೀಡುವಂತಹ ಎಲ್ಲಾ ಸಂಭಾವ್ಯ ಬೆಂಬಲವನ್ನು ಸಿಆರ್‌ಪಿಎಫ್ ನೀಡುತ್ತದೆ. ನಿಗದಿತ ಶಿಕ್ಷಣ ಅರ್ಹತೆಯನ್ನು ಪಡೆಯಲು ಹೊಸ ನೇಮಕಾತಿಗಳಿಗೆ ಅನುಕೂಲವಾಗುವಂತೆ ಅಗತ್ಯವಿದ್ದಲ್ಲಿ ಅವಧಿಯನ್ನು ವಿಸ್ತರಿಸಬಹುದು. 10 ನೇ ತರಗತಿಯ ಪರೀಕ್ಷೆಯನ್ನು ತೆಗೆದುಕೊಳ್ಳಲು ಅವರಿಗೆ ಅನುಕೂಲವಾಗುವಂತೆ, ಈ ನೇಮಕಾತಿಗಳನ್ನು ಕೇಂದ್ರ/ರಾಜ್ಯ ಸರ್ಕಾರಗಳಿಂದ ಗುರುತಿಸಲ್ಪಟ್ಟ ರಾಷ್ಟ್ರೀಯ ಮುಕ್ತ ಶಾಲೆಗಳ ಸಂಸ್ಥೆಯಲ್ಲಿ ನೋಂದಾಯಿಸಲಾಗುತ್ತದೆ. 
ಸಿಆರ್‌ಪಿಎಫ್ 2016-2017ರಲ್ಲಿ ಛತ್ತೀಸ್‌ಗಢದ ನಾಲ್ಕು ಜಿಲ್ಲೆಗಳಾದ ಬಿಜಾಪುರ, ದಾಂತೇವಾಡ, ನಾರಾಯಣಪುರ ಮತ್ತು  ಸುಕ್ಮಾದಿಂದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡುವ ಮೂಲಕ ಬಸ್ತಾರಿಯಾ ಬೆಟಾಲಿಯನ್ ಅನ್ನು ರಚಿಸಿದೆ. ಆದಾಗ್ಯೂ, ಅಗತ್ಯವಿರುವ ಶೈಕ್ಷಣಿಕ ಅರ್ಹತೆಯನ್ನು ಅಂದರೆ 10 ನೇ ತರಗತಿ ತೇರ್ಗಡೆಯನ್ನು ಪೂರೈಸದ ಕಾರಣ ಒಳ ಪ್ರದೇಶಗಳ ಸ್ಥಳೀಯ ಯುವಕರು ನೇಮಕಾತಿ ಪ್ರಕ್ರಿಯೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಇದು ಅತ್ಯುತ್ತಮ ಫಲಿತಾಂಶಗಳನ್ನು ನೀಡಲು ಸಾಧ್ಯವಾಗಲಿಲ್ಲ.

******


(Release ID: 1830272) Visitor Counter : 196