ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಾಜೀವ್‌ ಚಂದ್ರಶೇಖರ್‌ ಅವರು ನೋಯ್ಡಾದಲ್ಲಿಆಲಿಸಬಹುದಾದ, ಧರಿಸಬಹುದಾದ ಮತ್ತು ಐಒಟಿ ಸಾಧನಗಳಿಗಾಗಿ ಮೆಗಾ ಉತ್ಪಾದನಾ ಸೌಲಭ್ಯವನ್ನು ಉದ್ಘಾಟಿಸಿದರು

Posted On: 17 MAY 2022 6:42PM by PIB Bengaluru

* ಝೆಟ್ವೆರ್ಕ್‌ ಗ್ರೂಪ್‌ ಕಂಪನಿಯು ವಾರ್ಷಿಕವಾಗಿ 10 ದಶಲಕ್ಷ  ಸಾಧನಗಳನ್ನು ಉತ್ಪಾದಿಸಲು ಹೊಸ ಸೌಲಭ್ಯವನ್ನು ನಿಯೋಜಿಸುತ್ತದೆ

* ಕೋವಿಡ್‌ ನಂತರ, ಎಲೆಕ್ಟ್ರಾನಿಕ್ಸ್‌ ಉತ್ಪಾದನೆಯಲ್ಲಿನಮ್ಮ ಮಹತ್ವಾಕಾಂಕ್ಷೆಗಳನ್ನು ಮರು-ಕಲ್ಪಿಸಲಾಗಿದೆ. ಎಲೆಕ್ಟ್ರಾನಿಕ್ಸ್‌ ಜಿವಿಸಿಗಳಲ್ಲಿಭಾರತದ ಪಾಲನ್ನು ಶೇ.10ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದೇವೆ- ರಾಜೀವ್‌ ಚಂದ್ರಶೇಖರ್‌

ನವದೆಹಲಿ, 2022, ಮೇ 17

ಝೆಟ್‌ ಟೌನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಎಂಬ ಝೆಟ್ವರ್ಕ್‌ ಕಂಪನಿಯು ತನ್ನ ಹೊಸ ಅತ್ಯಾಧುನಿಕ ಉತ್ಪಾದನಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾದಲ್ಲಿಇಂದು ಅನಾವರಣಗೊಳಿಸಿದೆ. ಈ ಘಟಕವನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಉದ್ಘಾಟಿಸಿದರು.

50,000 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಕಾರ್ಖಾನೆಯು ಸುಧಾರಿತ ಪರೀಕ್ಷ ಕಗಳೊಂದಿಗೆ 16 ಉತ್ಪಾದನಾ ಮಾರ್ಗಗಳನ್ನು ಮತ್ತು ಉತ್ಪನ್ನ ಅಭಿವೃದ್ಧಿಗಾಗಿ ವಿಶ್ವದರ್ಜೆಯ ಆವಿಷ್ಕಾರ ಪ್ರಯೋಗಾಲಯವನ್ನು ಒಳಗೊಂಡಿದೆ. ಸ್ಮಾರ್ಟ್‌ ತಂತ್ರಜ್ಞಾನ ಕ್ಷೇತ್ರದಲ್ಲಿಭಾರತದ ಉತ್ಪಾದನಾ ಸಾಮರ್ಥ್ಯ‌ಗಳನ್ನು ಬಲಪಡಿಸುವ ಉದ್ದೇಶದಿಂದ, ಆಲಿಸಬಹುದಾದ, ಧರಿಸಬಹುದಾದ ಮತ್ತು ಐಒಟಿ ಸಾಧನಗಳಲ್ಲಿಒಡಿಎಂಗಳನ್ನು (ಮೂಲ ವಿನ್ಯಾಸ ತಯಾರಕ) ರಚಿಸಲು ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ.

ಹೊಸ ಸೌಲಭ್ಯದ ಬಗ್ಗೆ ಮಾತನಾಡಿದ ರಾಜೀವ್‌ ಚಂದ್ರಶೇಖರ್‌, ‘‘ ಕಳೆದ 5 ವರ್ಷಗಳಲ್ಲಿ, ಪ್ರಧಾನ ಮಂತ್ರಿ ಅವರು ಎಲೆಕ್ಟ್ರಾನಿಕ್ಸ್‌ ವಲಯದಲ್ಲಿನಮ್ಮ ದೇಶೀಯ ಸಾಮರ್ಥ್ಯ‌ಗಳನ್ನು ಹೆಚ್ಚಿಸಲು ವ್ಯಾಪಕವಾಗಿ ಗಮನ ಹರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಮೊದಲು ಭಾರತೀಯ ಉತ್ಪಾದಕರಿಗೆ ಇದು ನಂಬಲಾಗದ ಬೆಳವಣಿಗೆಯ ಅವಕಾಶ ಎಂದು ಅವರು ಗುರುತಿಸಿದರು ಮತ್ತು ಕಳೆದ ಎರಡು ವರ್ಷಗಳಲ್ಲಿ, ಆ ಅವಕಾಶವು ಬಹು ಪಟ್ಟು ಬೆಳೆದಿದೆ. ಭಾರತವು 120 ಶತಕೋಟಿ ಅಮೆರಿಕ ಡಾಲರ್‌ ಮೌಲ್ಯದ ರಫ್ತು ಸೇರಿದಂತೆ ಸುಮಾರು 400 ಶತಕೋಟಿ ಅಮೆರಿಕ ಡಾಲರ್‌  ಮೌಲ್ಯದ ಎಲೆಕ್ಟ್ರಾನಿಕ್ಸ್‌ ಸರಕುಗಳನ್ನು ಕೊಡುಗೆಯಾಗಿ ನೀಡುವ ಸಾಮರ್ಥ್ಯ‌ವನ್ನು ಹೊಂದಿದೆ. ಇದು ಪ್ರಸ್ತುತ ಶೇಕಡ 1-2 ಪೂರೈಕೆ ಸಾಮರ್ಥ್ಯ‌ದಿಂದ ಒಟ್ಟಾರೆ ಜಾಗತಿಕ ಮೌಲ್ಯ ಸರಪಳಿಯ ಶೇಕಡ 9-10 ರಷ್ಟನ್ನು ಹೊಂದಿರುತ್ತದೆ. ಮಹತ್ವಾಕಾಂಕ್ಷೆಗಳನ್ನು ಮರುಹೊಂದಿಸಲಾಗಿದೆ ಮತ್ತು ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಮಗೆ ಝೆಟ್ವೆರ್ಕ್‌ ನಂತಹ ಹೆಚ್ಚಿನ ಕಂಪನಿಗಳು ಬೇಕು. ಅವರ ಮಾದರಿ ಅನನ್ಯವಾಗಿದೆ ಮತ್ತು ಸುಲಭವಾಗಿ ಆರೋಹಣ ಮಾಡಬಹುದು. ಇದಕ್ಕಾಗಿ ನಾನು ಝೆಟ್ವೆರ್ಕ್‌ ಅವರನ್ನು ಅಭಿನಂದಿಸುತ್ತೇನೆ. ಭಾರತವನ್ನು ಎಲೆಕ್ಟ್ರಾನಿಕ್ಸ್‌ ಜಿವಿಸಿಯಲ್ಲಿಪ್ರಮುಖರನ್ನಾಗಿ ಮಾಡುವ ನಮ್ಮ ಉದ್ದೇಶಗಳನ್ನು ಸಾಧಿಸುವಲ್ಲಿಅವರು ಮಹತ್ವದ ಪಾತ್ರ ವಹಿಸಬಹುದು,’’ ಎಂದು ಹೇಳಿದರು.

‘‘ ಮೇಕ್‌ ಇನ್‌ ಇಂಡಿಯಾದ ನೀತಿಗಳಿಗೆ ಬದ್ಧವಾಗಿರುವ ಬ್ರಾಂಡ್‌ ಆಗಿ, ವಿಶ್ವದ ಮುಂದಿನ ದೊಡ್ಡ ಉತ್ಪಾದನಾ ಕೇಂದ್ರವಾಗಿ ನಮ್ಮ ಸಾಮರ್ಥ್ಯ‌ಗಳನ್ನು ಬಲಪಡಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮಾರ್ಗಗಳನ್ನು ಕಂಡುಹಿಡಿಯುವುದು ಯಾವಾಗಲೂ ನಮ್ಮ ಪ್ರಯತ್ನವಾಗಿದೆ. ಈ ಹೊಸ ಸೌಲಭ್ಯದಲ್ಲಿನಮ್ಮ ಉತ್ಪಾದನಾ ಸಾಮರ್ಥ್ಯ‌ಗಳ ಮೂಲಕ, ನಾವು ಧರಿಸಬಹುದಾದ ಮತ್ತು ಆಲಿಸಬಹುದಾದ ಜಾಗದಲ್ಲಿವಿನ್ಯಾಸ ಆಧಾರಿತ ಉತ್ಪನ್ನ ಪ್ರಸ್ತಾಪವನ್ನು ಭಾರತೀಯ ಮಾರುಕಟ್ಟೆಗೆ ತರುತ್ತೇವೆ. ಇದು ಒಂದು ವಿಶಿಷ್ಟ ಆರೋಹಣ ಮಾದರಿಯಾಗಿದ್ದು, ವಿಶ್ವದಾದ್ಯಂತದ ಕೈಗಾರಿಕೆಗಳ ರಫ್ತು ಅವಶ್ಯಕತೆಗಳನ್ನು ಪರಿಹರಿಸುವ ಮೂಲಕ ಚೀನಾದ ಉತ್ಪಾದಕರ ಏಕಸ್ವಾಮ್ಯವನ್ನು ಪರಿಣಾಮಕಾರಿಯಾಗಿ ಅಡ್ಡಿಪಡಿಸುವ ಸಾಮರ್ಥ್ಯ‌ವನ್ನು ಹೊಂದಿದೆ,’’ ಎಂದು ಝೆಟ್ವೆರ್ಕ್‌ನ ಸಹ-ಸಂಸ್ಥಾಪಕ ರಾಹುಲ್‌ ಶರ್ಮಾ ಹೇಳಿದರು.

ಝೆಟ್‌ ಟೌನ್‌ ನ ಹೊಸ ಒಡಿಎಂ ಸೌಲಭ್ಯದಲ್ಲಿತಯಾರಾದ ಉತ್ಪನ್ನಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಬಹುದಾದ ಮಾದರಿಯನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾಗಿದೆ. ಇದು ಉತ್ಪನ್ನದ ವೈಶಿಷ್ಟ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡುವ ಮೂಲಕ ಮತ್ತು ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಸ್ಥಾನೀಕರಿಸುವ ಮೂಲಕ ಸಾಧನದಲ್ಲಿನ ಸ್ಮಾರ್ಟ್‌ ತಂತ್ರಜ್ಞಾನವನ್ನು ನಿಯಂತ್ರಿಸಲು ಕಂಪನಿಗೆ ಅನುವು ಮಾಡಿಕೊಡುತ್ತದೆ.
‘‘ ನಾವು ಒಡಿಎಂ ಮತ್ತು ಇಎಂಎಸ್‌ ಅನ್ನು ಧರಿಸಬಹುದಾದ ಮತ್ತು ಆಲಿಸಬಹುದಾದ ಜಾಗದಲ್ಲಿತಂತ್ರಜ್ಞಾನ-ಮೊದಲು, ಜನರು-ಮೊದಲು ವಿಧಾನದೊಂದಿಗೆ ಪ್ರವರ್ತಿಸುತ್ತಿದ್ದೇವೆ. ವಿನ್ಯಾಸ, ಏಕೀಕರಣ ಮತ್ತು ನಾವೀನ್ಯತೆಯ ಮೇಲೆ ಗಮನ ಕೇಂದ್ರೀಕರಿಸಿ, ವಿವಿಧ ವಿಭಾಗಗಳ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ನಾವು ನಮ್ಮ ಉತ್ಪನ್ನಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡುತ್ತೇವೆ. ಜಾಗತಿಕ ಬೇಡಿಕೆಯನ್ನು ಪೂರೈಸಲು ನಾವು ನಮ್ಮ ವ್ಯವಹಾರ ಮಾದರಿಯನ್ನು ಅಳೆಯುತ್ತಿರುವಾಗ, ವಿನ್ಯಾಸಗೊಳಿಸಿದ ಮತ್ತು ಮೇಡ್‌ ಇನ್‌ ಇಂಡಿಯಾ ಧರಿಸಬಹುದಾದ ಮತ್ತು ಆಲಿಸಬಹುದಾದ ಉತ್ಪನ್ನಗಳನ್ನು ವಿಶ್ವಕ್ಕೆ ರಫ್ತು ಮಾಡುವ ಭಾರತದ ಮೊದಲ ರಾಷ್ಟ್ರಗಳಲ್ಲಿಒಂದಾಗಲು ನಾವು ಬಯಸುತ್ತೇವೆ,’’  ಎಂದು ಝೆಟ್‌ ಟೌನ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಲಭ್‌ ಶ್ರೀವಾಸ್ತವ ಹೇಳಿದರು.

ಝೆಟ್‌ ಟೌನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ದೊಡ್ಡ ಐಒಟಿ ಡೊಮೇನ್‌ನಲ್ಲಿವಿನ್ಯಾಸ ಮತ್ತು ಉತ್ಪಾದನಾ ಸೇವೆಗಳ ಮೇಲೆ ಕೇಂದ್ರೀಕರಿಸುವ ಏಕ-ಬಿಂದು ಸಮಗ್ರ ಉತ್ಪನ್ನ ಜೀವನ ಚಕ್ರ ಬೆಂಬಲದೊಂದಿಗೆ ಭಾರತದ ಆಲಿಸಬಹುದಾದ ಮತ್ತು ಧರಿಸಬಹುದಾದ ಜಾಗದಲ್ಲಿಪ್ರಮುಖ  ಒಡಿಎಂ ಆಗಿದೆ. ಇದು ಸಂಶೋಧನೆ ಮತ್ತು ಅಭಿವೃದ್ಧಿ, ವಿನ್ಯಾಸ, ಸೋರ್ಸಿಂಗ್‌, ಅಸೆಂಬ್ಲಿಮತ್ತು ಟೆಸ್ಟಿಂಗ್‌ ಮತ್ತು ನೋಯ್ಡಾದಲ್ಲಿಅತ್ಯಾಧುನಿಕ ಉತ್ಪಾದನಾ ಸೌಲಭ್ಯಕ್ಕಾಗಿ ಸಮರ್ಪಿತ ತಂಡಗಳನ್ನು ಹೊಂದಿದೆ ಮತ್ತು ಸುಧಾರಿತ ಪರೀಕ್ಷ ಕಗಳೊಂದಿಗೆ 16 ಉತ್ಪಾದನಾ ಮಾರ್ಗಗಳು ಮತ್ತು ಉತ್ಪನ್ನ ಅಭಿವೃದ್ಧಿಗಾಗಿ ವಿಶ್ವದರ್ಜೆಯ ಆವಿಷ್ಕಾರ ಪ್ರಯೋಗಾಲಯವನ್ನು ಹೊಂದಿದೆ.

ಝೆಟ್ವರ್ಕ್‌ ಕುರಿತು:

ಝೆಟ್ವೆರ್ಕ್‌ ಗುತ್ತಿಗೆ ತಯಾರಿಕೆಗೆ ನಿರ್ವಹಿಸಲಾದ ಮಾರುಕಟ್ಟೆಯಾಗಿದೆ. ಸಣ್ಣ ಉತ್ಪಾದಕರ ಜಾಗತಿಕ ಜಾಲದ ಮೂಲಕ ತಮ್ಮ ಉತ್ಪನ್ನಗಳನ್ನು ತಯಾರಿಸಲು ವಿಶ್ವದ ಪ್ರಮುಖ ಕೈಗಾರಿಕಾ ಮತ್ತು ಗ್ರಾಹಕ ಉದ್ಯಮಗಳೊಂದಿಗೆ ಝೆಟ್ವೆರ್ಕ್‌ ಪಾಲುದಾರರು, ಅಲ್ಲಿಝೆಟ್ವರ್ಕ್‌ ಪೂರೈಕೆದಾರರ ಆಯ್ಕೆ, ಬೆಲೆ ಮತ್ತು ಆದೇಶಗಳ ಈಡೇರಿಕೆಗೆ ಸಹಾಯ ಮಾಡುತ್ತದೆ. ತೈಲ ಮತ್ತು ಅನಿಲ, ನವೀಕರಿಸಬಹುದಾದ ವಸ್ತುಗಳು, ಏರೋಸ್ಪೇಸ್‌, ಮೂಲಸೌಕರ್ಯ, ಉಡುಪುಗಳು, ಎಲೆಕ್ಟ್ರಾನಿಕ್ಸ್‌ ಮತ್ತು ರಿಟೇಲ್‌ ನಂತಹ ವೈವಿಧ್ಯಮಯ ಶ್ರೇಣಿಯ ಕೈಗಾರಿಕೆಗಳಲ್ಲಿಝೆಟ್ವೆರ್ಕ್‌ ಉತ್ಪಾದನಾ ಪರಿಹಾರಗಳನ್ನು ಒದಗಿಸುತ್ತದೆ. ಗ್ರಾಹಕರಿಗೆ, ಝೆಟ್ವೆರ್ಕ್‌ನ ಜಾಗತಿಕ ಉತ್ಪಾದನಾ ಜಾಲವು ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗಳಲ್ಲಿಮತ್ತು ವಿಶ್ವದರ್ಜೆಯ ಗುಣಮಟ್ಟದೊಂದಿಗೆ ವೇಗವಾಗಿ ತಯಾರಿಸುವುದನ್ನು ಖಚಿತಪಡಿಸುತ್ತದೆ. ಇದಲ್ಲದೆ, ಝೆಟ್ವೆರ್ಕ್‌ನ ಇನ್‌-ಹೌಸ್‌ ಮ್ಯಾನುಫ್ಯಾಕ್ಚರಿಂಗ್‌ ಆಪರೇಟಿಂಗ್‌ ಸಿಸ್ಟಂ ಸಾಫ್ಟ್‌ವೇರ್‌, ಜಿಐಎಸ್‌ಒ, ಪೂರೈಕೆಯ ಡಿಜಿಟಲ್‌ ಆಯ್ಕೆ, ಹಂತಗಳಾದ್ಯಂತ ನೈಜ-ಸಮಯದ ಟ್ರ್ಯಾಕಿಂಗ್‌, ತಯಾರಿಸಲಾಗುವ ಉತ್ಪನ್ನಗಳ ದೃಶ್ಯ ನವೀಕರಣಗಳು, ಮಧ್ಯಸ್ಥಗಾರರಾದ್ಯಂತ ತಡೆರಹಿತ ಸಂವಹನ ಮತ್ತು ಅಂತಿಮ ಉತ್ಪನ್ನದ ಗುಣಮಟ್ಟದ ಭರವಸೆಯನ್ನು ಸಕ್ರಿಯಗೊಳಿಸುತ್ತದೆ. ಆ ಮೂಲಕ ಗ್ರಾಹಕರಿಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಉತ್ಪಾದನಾ ಪಾಲುದಾರರಿಗೆ ಝೆಟ್ವೆರ್ಕ್‌ ಉತ್ಪಾದನಾ ಸಾಮರ್ಥ್ಯ‌ಗಳ ಹೆಚ್ಚಿನ ಬಳಕೆಗೆ ಚಾಲನೆ ನೀಡುತ್ತದೆ ಮತ್ತು ಆದಾಯದ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಉತ್ಪಾದನಾ ವೆಚ್ಚಗಳನ್ನು ಉತ್ತಮಗೊಳಿಸಲು ವಿವಿಧ ಪೋಟ್‌ಫೋಲಿಯೊ ಸೇವೆಗಳನ್ನು (ಲಾಜಿಸ್ಟಿಕ್ಸ್‌, ಕಚ್ಚಾ ವಸ್ತು ಸಂಗ್ರಹಣೆ, ದುಡಿಯುವ ಬಂಡವಾಳ ಪ್ರವೇಶ ಸೇರಿದಂತೆ) ನೀಡುತ್ತದೆ.

***


(Release ID: 1826215) Visitor Counter : 205


Read this release in: English , Urdu , Hindi