ಚುನಾವಣಾ ಆಯೋಗ
ಕರ್ನಾಟಕ ವಿಧಾನ ಪರಿಷತ್ತಿಗೆ 2 ಪದವೀಧರರ ಮತ್ತು 2 ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಬಗ್ಗೆ
Posted On:
12 MAY 2022 12:17PM by PIB Bengaluru
ಕೆಳಗಿನ ವಿವರಗಳಂತೆ ಹಾಲಿ ಸದಸ್ಯರ ನಿವೃತ್ತಿಯಿಂದಾಗಿ 04.07.2022 ರಂದು 04.07.2022 ರಂದು 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿನ 04 ಹಾಲಿ ಸದಸ್ಯರ ಅಧಿಕಾರಾವಧಿಯು ಮುಕ್ತಾಯಗೊಳ್ಳಲಿದೆ: -
ಪದವೀಧರ ಕ್ಷೇತ್ರ
|
ಕ್ರಮ
ಸಂಖ್ಯೆ
|
ಕ್ಷೇತ್ರದ ಹೆಸರು
|
ಸದಸ್ಯರ ಹೆಸರು
|
ನಿವೃತ್ತಿಯ ದಿನಾಂಕ
|
1.
|
ಕರ್ನಾಟಕ ವಾಯುವ್ಯ ಪದವೀಧರರು
|
ನಿರಾಣಿ ಹನಮಂತ್ ರುದ್ರಪ್ಪ
|
04.07.2022
|
2.
|
ಕರ್ನಾಟಕ ದಕ್ಷಿಣ ಪದವೀಧರರು
|
ಕೆ.ಟಿ.ಶ್ರೀಕಂಠೇಗೌಡ
|
ಶಿಕ್ಷಕರ ಕ್ಷೇತ್ರ
|
1.
|
ಕರ್ನಾಟಕ ವಾಯುವ್ಯ ಶಿಕ್ಷಕರು
|
ಅರುಣ್ ಶಹಪುರ್
|
04.07.2022
|
2.
|
ಕರ್ನಾಟಕ ಪಶ್ಚಿಮ ಶಿಕ್ಷಕರು
|
ಬಸವರಾಜ್ ಲಿಂಗಪ್ಪ ಹೊರಟ್ಟಿ
|
2. ಈ ಕೆಳಗಿನ ಕಾರ್ಯಕ್ರಮದ ಪ್ರಕಾರ ಮೇಲೆ ತಿಳಿಸಿದ 2 ಪದವೀಧರರ ಮತ್ತು 2 ಶಿಕ್ಷಕರ ಕ್ಷೇತ್ರಗಳಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯನ್ನು ನಡೆಸಲು ಆಯೋಗವು ನಿರ್ಧರಿಸಿದೆ:-
ಕ್ರಮ
ಸಂಖ್ಯೆ
|
ವಿವರಗಳು
|
ದಿನಾಂಕ
|
1.
|
ಅಧಿಸೂಚನೆಯನ್ನು ಹೊರಡಿಸುವ ದಿನಾಂಕ
|
19 ಮೇ, 2022 (ಗುರುವಾರ)
|
2.
|
ನಾಮಪತ್ರಗಳನ್ನು ಸಲ್ಲಿಸಲು ಕೊನೆ ದಿನಾಂಕ
|
26 ಮೇ, 2022 (ಗುರುವಾರ)
|
3.
|
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ
|
27 ಮೇ, 2022 (ಶುಕ್ರವಾರ)
|
4.
|
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ
|
30 ಮೇ, 2022 (ಸೋಮವಾರ)
|
5.
|
ಮತದಾನದ ದಿನಾಂಕ
|
13 ಜೂನ್, 2022 (ಸೋಮವಾರ)
|
6.
|
ಮತದಾನದ ಸಮಯ
|
ಬೆಳಿಗ್ಗೆ 08:00 ರಿಂದ ಸಂಜೆ 04:00 ರವರೆಗೆ
|
7.
|
ಮತಗಳ ಎಣಿಕೆ
|
15 ಜೂನ್, 2022 (ಬುಧವಾರ)
|
8.
|
ಚುನಾವಣೆಯನ್ನು ಯಾವ ದಿನಾಂಕಕ್ಕೆ ಮೊದಲು ಮುಕಾಯಗೊಳಿಸಬೇಕೋ ಆ ದಿನಾಂಕ
|
17 ಜೂನ್, 2022 (ಶುಕ್ರವಾರ)
|
3. 02.05.2022 ದಿನಾಂಕದ ಪತ್ರಿಕಾ ಪ್ರಕಟಣೆಯ ಪ್ಯಾರಾ 06 ರಲ್ಲಿ ಒಳಗೊಂಡಿರುವಂತೆ ಭಾರತೀಯ ಚುನಾವಣಾ ಆಯೋಗವು ಹೊರಡಿಸಿದ ಕೋವಿಡ್-19 ರ ವಿವರವಾದ ಮಾರ್ಗಸೂಚಿಗಳು ಈ ಲಿಂಕ್‌ನಲ್ಲಿ ಲಭ್ಯವಿದ್ದು, ಎಲ್ಲಾ ವ್ಯಕ್ತಿಗಳು ಸಂಪೂರ್ಣ ಚುನಾವಣಾ ಪ್ರಕ್ರಿಯೆಯಲ್ಲಿ ಅನ್ವಯಿಸುವ ಕಡೆಯಲೆಲ್ಲಾ ಅನುಸರಿಸಬೇಕು. https://eci.gov.in/files/file/14151-schedule-for-bye-election-in-3-assembly-constituencies-of-odisha-kerala-and-uttarakhand%E2%80%93-reg/
4. ಈ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ದಯವಿಟ್ಟು ಆಯೋಗದ ಜಾಲತಾಣದಲ್ಲಿರುವ ಈ ಲಿಂಕ್ ನಲ್ಲಿ ವಿವರಗಳನ್ನು ನೋಡಿ:
https://eci.gov.in/files/file/4070-biennial-bye-elections-to-the-legislative-councils-from-council-constituencies-by-graduates%E2%80%99-and-teachers%E2%80%99-and-local-authorities%E2%80%99-constituencies-%E2%80%93-mcc-instructions-%E2%80%93-regarding/
5. ಚುನಾವಣೆಯನ್ನು ನಡೆಸಲು ವ್ಯವಸ್ಥೆ ಮಾಡುವಾಗ ಕೋವಿಡ್-19 ನಿಯಂತ್ರಣ ಕ್ರಮಗಳ ಬಗ್ಗೆ ಇರುವ ಸೂಚನೆಗಳನ್ನು ಅನುಸರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯದಿಂದ ಹಿರಿಯ ಅಧಿಕಾರಿಯನ್ನು ನಿಯೋಜಿಸಲು ಕರ್ನಾಟಕ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಲಾಗುತ್ತಿದೆ.
***
(Release ID: 1824706)
Visitor Counter : 2004