ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮದ ಸಂಭಾವ್ಯತೆಯ ಬಗ್ಗೆ ಎಸ್ ಇ ಎಂ ಐ ಮತ್ತು ಐ ಇ ಎಸ್ ಎ ಚರ್ಚೆ
ದೇಶದಲ್ಲಿ ಸೆಮಿಕಂಡಕ್ಟರ್ ಮತ್ತು ಮೈಕ್ರೋಎಲೆಕ್ಟ್ರಾನಿಕ್ಸ್ ಕ್ಷೇತ್ರದ ಸಾಮರ್ಥ್ಯವನ್ನು ಪ್ರೋತ್ಸಾಹಿಸಲು ಸಹಯೋಗಕ್ಕೆ ಒಪ್ಪಿಗೆ
Posted On:
30 APR 2022 3:36PM by PIB Bengaluru
ಬೆಂಗಳೂರಿನಲ್ಲಿ 29ನೇ ಏಪ್ರಿಲ್‌ನಿಂದ 1ನೇ ಮೇ 2022 ರವರೆಗೆ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ 2022 ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಭಾರತದಲ್ಲಿ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಪ್ರೋತ್ಸಾಹಕ್ಕಾಗಿ ಇತ್ತೀಚೆಗೆ 76,000 ಕೋಟಿ ರೂಪಾಯಿಗಳ ಬೃಹತ್ ವೆಚ್ಚದ ಯೋಜನೆಯನ್ನು ಘೋಷಿಸಿದೆ. ಎಸ್ ಇ ಎಂ ಐ ಅಧ್ಯಕ್ಷ ಮತ್ತು ಸಿಇಒ ಶ್ರೀ ಅಜಿತ್ ಮನೋಚಾ ಅವರು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮವನ್ನು ಉತ್ತೇಜಿಸಲು ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಅಸೋಸಿಯೇಷನ್ (ಐ ಇ ಎಸ್ ಎ) ಅಧ್ಯಕ್ಷ ಶ್ರೀ ವಿವೇಕ್ ತ್ಯಾಗಿ ಮತ್ತು ನವದೆಹಲಿ ಮತ್ತು ಬೆಂಗಳೂರಿನಲ್ಲಿ ಐ ಇ ಎಸ್ ಎ ಸಿಇಒ ಶ್ರೀ ಕೆ ಕೃಷ್ಣ ಮೂರ್ತಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಭಾರತದಲ್ಲಿನ ಉದ್ಯಮವನ್ನು ವೇಗವರ್ಧನೆ ಮಾಡುವುದು ಮತ್ತು ಹೂಡಿಕೆದಾರರಿಗೆ ಎಲೆಕ್ಟ್ರಾನಿಕ್ಸ್‌ನ ರಾಷ್ಟ್ರೀಯ ನೀತಿಯ ಅಡಿಯಲ್ಲಿ ಸೆಮಿಕಂಡಕ್ಟರ್ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವುದನ್ನು ಮತ್ತು ಗುರಿಗಳನ್ನು ಸಾಧಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಹೂಡಿಕೆದಾರರನ್ನು ಬೆಂಬಲಿಸುವುದು ಈ ಚರ್ಚೆಯ ದೃಷ್ಟಿಕೋನವಾಗಿದೆ.
ಎಸ್ ಇ ಎಂ ಐ ಅಮೆರಿಕಾದ ಕ್ಯಾಲಿಫೋರ್ನಿಯಾದ ಮಿಲ್ಪಿಟಾಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ, ಇದು ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಪೂರೈಕೆ ಸರಪಳಿಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳನ್ನು ಒಳಗೊಂಡಿರುವ ಪ್ರಮುಖ ಜಾಗತಿಕ ಉದ್ಯಮ ಸಂಘವಾಗಿದೆ. ಇದು ಎಲೆಕ್ಟ್ರಾನಿಕ್ಸ್ ವಲಯದ 2,500 ಕ್ಕೂ ಹೆಚ್ಚು ಸದಸ್ಯ ಕಂಪನಿಗಳು ಮತ್ತು ವಿಶ್ವದಾದ್ಯಂತ 1.3 ಮಿಲಿಯನ್ ವೃತ್ತಿಪರರನ್ನು ಒಟ್ಟುಗೂಡಿಸದೆ.
ಐ ಇ ಎಸ್ ಎ ಭಾರತೀಯ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ತಯಾರಿಕೆ (ಇ ಎಸ್ ಡಿ ಎಂ) ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಬದ್ಧವಾಗಿರುವ ಪ್ರಮುಖ ವ್ಯಾಪಾರ ಸಂಸ್ಥೆಯಾಗಿದೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಗಮ್ಯಸ್ಥಾನವಾಗಿ ವಿಶ್ವಾದ್ಯಂತ ಗುರುತಿಸಲ್ಪಡುವ "ಬ್ರಾಂಡ್ ಇಂಡಿಯಾ" ವನ್ನು ಸ್ಥಾಪಿಸುವ ಕನಸಿಗೆ ಇಂಬು ನೀಡುತ್ತಿದೆ, ಐ ಇ ಎಸ್ ಎ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಶ್ವಾಸಾರ್ಹ ಜ್ಞಾನ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ, ಇ ಎಸ್ ಡಿ ಎಂ ಉದ್ಯಮವು ಭಾರತದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಲು ನೀತಿಗಳು ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತದೆ. 1.3 ಶತಕೋಟಿ ಭಾರತೀಯರ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸಲು ತಂತ್ರಜ್ಞಾನದ ಪರಿಹಾರಗಳನ್ನು ಉತ್ತೇಜಿಸುವುದು ಐ ಇ ಎಸ್ ಎ ಯ ಪ್ರಮುಖ ಗುರಿಯಾಗಿದೆ, ಇದು ಮಾರುಕಟ್ಟೆಗೆ ನವೀನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ವೇಗವಾಗಿ ತರಲು ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಈ ಗುರಿಯನ್ನು ಸಾಧಿಸುತ್ತದೆ. ಐ ಇ ಎಸ್ ಎ ಗೆ ಶ್ರೀ ಕೆ ಕೃಷ್ಣ ಮೂರ್ತಿ ಅಧ್ಯಕ್ಷ ಮತ್ತು ಸಿಇಒ ಆಗಿದ್ದಾರೆ.
ಎರಡು ಸಂಸ್ಥೆಗಳು ಸಹಯೋಗವನ್ನು ಬೆಳೆಸಲು ಮತ್ತು ಮುಂಬರುವ ಸೆಮಿಕಂಡಕ್ಟರ್ ಮತ್ತು ಮೈಕ್ರೋಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಸಂಭಾವ್ಯ ಅವಕಾಶಗಳನ್ನು ಗುರುತಿಸಲು ಒಪ್ಪಿಕೊಂಡಿವೆ ಮತ್ತು ಸಾಮರ್ಥ್ಯವನ್ನು ಬಳಸಿಕೊಳ್ಳಲು ಕೆಲಸ ಮಾಡುತ್ತವೆ.
ಐ ಇ ಎಸ್ ಎ ಕುರಿತು:
ಐ ಇ ಎಸ್ ಎ ಭಾರತೀಯ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ತಯಾರಿಕೆ (ಇ ಎಸ್ ಡಿ ಎಂ) ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಬದ್ಧವಾಗಿರುವ ಪ್ರಮುಖ ವ್ಯಾಪಾರ ಸಂಸ್ಥೆಯಾಗಿದೆ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಗಮ್ಯಸ್ಥಾನವಾಗಿ ವಿಶ್ವಾದ್ಯಂತ ಗುರುತಿಸಲ್ಪಡುವ "ಬ್ರಾಂಡ್ ಇಂಡಿಯಾ" ವನ್ನು ಸ್ಥಾಪಿಸುವ ಕನಸಿಗೆ ಇಂಬು ನೀಡುತ್ತಿದೆ, ಐ ಇ ಎಸ್ ಎ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ವಿಶ್ವಾಸಾರ್ಹ ಜ್ಞಾನ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತದೆ, ಇ ಎಸ್ ಡಿ ಎಂ ಉದ್ಯಮವು ಭಾರತದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಲು ನೀತಿಗಳು ಮತ್ತು ಪ್ರೋತ್ಸಾಹಕಗಳನ್ನು ನೀಡುತ್ತದೆ. 1.3 ಶತಕೋಟಿ ಭಾರತೀಯರ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸಲು ತಂತ್ರಜ್ಞಾನದ ಪರಿಹಾರಗಳನ್ನು ಉತ್ತೇಜಿಸುವುದು ಐ ಇ ಎಸ್ ಎ ಯ ಪ್ರಮುಖ ಗುರಿಯಾಗಿದೆ, ಇದು ಮಾರುಕಟ್ಟೆಗೆ ನವೀನ ಆವಿಷ್ಕಾರಗಳನ್ನು ಮಾರುಕಟ್ಟೆಗೆ ವೇಗವಾಗಿ ತರಲು ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಈ ಗುರಿಯನ್ನು ಸಾಧಿಸುತ್ತದೆ. ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಪಾಲುದಾರಿಕೆಗಳನ್ನು (ಭಾರತದಲ್ಲಿ ಮತ್ತು ಅಂತರಾಷ್ಟ್ರೀಯವಾಗಿ) ಸುಗಮಗೊಳಿಸುವುದು ಮತ್ತು ಭಾರತದೊಂದಿಗೆ ಸುಲಭವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡುವುದು ಐ ಇ ಎಸ್ ಎ ಯ ಪ್ರಮುಖ ಕೇಂದ್ರೀಕೃತ ಕ್ಷೇತ್ರಗಳಾಗಿವೆ. https://iesaonline.org/
ಎಸ್ ಇ ಎಂ ಐ ಕುರಿತು:
ಎಸ್ ಇ ಎಂ ಐ 2,500 ಕ್ಕೂ ಹೆಚ್ಚು ಸದಸ್ಯರು ಮತ್ತು 1.3 ಮಿಲಿಯನ್ ವೃತ್ತಿಪರರನ್ನು ವಿಶ್ವದಾದ್ಯಂತ ಸಂಪರ್ಕಿಸುವ ಸೆಮಿಕಂಡಕ್ಟರ್, ಎಲೆಕ್ಟ್ರಾನಿಕ್ಸ್ ವಿನ್ಯಾಸ ಮತ್ತು ಉತ್ಪಾದನಾ ಪೂರೈಕೆ ಸರಪಳಿಯಲ್ಲಿ ತೊಡಗಿರುವ ಕಂಪನಿಗಳನ್ನು ಒಳಗೊಂಡಿರುವ ಪ್ರಮುಖ ಜಾಗತಿಕ ಉದ್ಯಮ ಸಂಘವಾಗಿದೆ.
ಎಸ್ ಇ ಎಂ ಐ ಸದಸ್ಯರು ವಸ್ತುಗಳು, ವಿನ್ಯಾಸ, ಉಪಕರಣಗಳು, ಸಾಫ್ಟ್‌ವೇರ್, ಸಾಧನಗಳು ಮತ್ತು ಸೇವೆಗಳಲ್ಲಿನ ನಾವೀನ್ಯತೆಗಳಿಗೆ ಜವಾಬ್ದಾರರಾಗಿರುತ್ತಾರೆ, ಅದು ಚುರುಕಾದ, ವೇಗವಾದ, ಹೆಚ್ಚು ಶಕ್ತಿಯುತ ಮತ್ತು ಹೆಚ್ಚು ಕೈಗೆಟುಕುವ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಸಕ್ರಿಯಗೊಳಿಸುತ್ತದೆ. 1970 ರಿಂದ, ಎಸ್ ಇ ಎಂ ಐ ತನ್ನ ಸದಸ್ಯರಿಗೆ ಅಭಿವೃದ್ಧಿ ಹೊಂದಲು, ಹೊಸ ಮಾರುಕಟ್ಟೆಗಳನ್ನು ರಚಿಸಲು ಮತ್ತು ಸಾಮಾನ್ಯ ಉದ್ಯಮ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುವ ಸಂಪರ್ಕಗಳನ್ನು ನಿರ್ಮಿಸಿದೆ. ಹೆಚ್ಚಿನ ಮೌಲ್ಯದ ಉತ್ಪನ್ನಗಳು, ಸೇವೆಗಳು ಮತ್ತು ಪರಿಹಾರಗಳನ್ನು ನಿರಂತರವಾಗಿ ಪರಿಕಲ್ಪನೆ, ಅಭಿವೃದ್ಧಿ ಮತ್ತು ಒದಗಿಸುವ ಮೂಲಕ ತನ್ನ ಸದಸ್ಯ ಕಂಪನಿಗಳ ಪರಿಸರ ವ್ಯವಸ್ಥೆಗಳ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಮುನ್ನಡೆಸುವುದು ಎಸ್ ಇ ಎಂ ಐ ನ ಉದ್ದೇಶವಾಗಿದೆ. ಉಚಿತ ಮತ್ತು ಮುಕ್ತ ಜಾಗತಿಕ ಮಾರುಕಟ್ಟೆಯನ್ನು ಎಸ್ ಇ ಎಂ ಐ ಪ್ರತಿಪಾದಿಸುತ್ತದೆ, ಕಾರ್ಯಪಡೆಯ ಅಭಿವೃದ್ಧಿಯ ಪ್ರಯತ್ನಗಳನ್ನು ಮುನ್ನಡೆಸುತ್ತದೆ, ಉನ್ನತ-ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ಹೊಸ ವ್ಯಾಪಾರ ಅವಕಾಶಗಳಿಗೆ ಸದಸ್ಯರನ್ನು ಸಂಪರ್ಕಿಸುತ್ತದೆ, ಸ್ಪರ್ಧಾತ್ಮಕ ಸಹಯೋಗವನ್ನು ಪೋಷಿಸುತ್ತದೆ ಮತ್ತು ನಾವೀನ್ಯತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
ಎಸ್ ಇ ಎಂ ಐ ಸದಸ್ಯ ಉದ್ಯಮಗಳು ಸೆಮಿಕಂಡಕ್ಟರ್‌ಗಳು, ಫೋಟೋವೋಲ್ಟಾಯಿಕ್ ಪ್ಯಾನೆಲ್ ಗಳು, ಎಲ್ ಇ ಡಿ ಮತ್ತು ಫ್ಲಾಟ್ ಪ್ಯಾನಲ್ ಡಿಸ್‌ಪ್ಲೇಗಳು, ಮೈಕ್ರೋ-ಎಲೆಕ್ಟ್ರೋಮೆಕಾನಿಕಲ್ ಸಿಸ್ಟಮ್‌ಗಳು), ಮುದ್ರಿತ ಮತ್ತು ಹೊಂದಿಕೊಳ್ಳುವ ಎಲೆಕ್ಟ್ರಾನಿಕ್ಸ್ ಮತ್ತು ಸಂಬಂಧಿತ ಸೂಕ್ಷ್ಮ ಮತ್ತು ನ್ಯಾನೊ-ತಂತ್ರಜ್ಞಾನಗಳ ತಯಾರಿಕೆಗೆ ಉಪಕರಣಗಳು, ಸಾಮಗ್ರಿಗಳು ಮತ್ತು ಸೇವೆಗಳನ್ನು ಒದಗಿಸುತ್ತವೆ. ಸೆಮಿಕಂಡಕ್ಟರ್ ಉಪಕರಣಗಳು ಮತ್ತು ಸಾಮಗ್ರಿಗಳ ಮೇಲೆ ಅದರ ಮೂಲ ಗಮನವನ್ನು ಕೇಂದ್ರೀಕರಿಸಿರುವ ಎಸ್ ಇ ಎಂಐ ಈಗ ಎಲೆಕ್ಟ್ರಾನಿಕ್ಸ್ ವಲಯದ ಅಗತ್ಯಗಳನ್ನು ಪೂರೈಸುತ್ತಿದೆ. ಇದರಲ್ಲಿ ಸೆಮಿಕಂಡಕ್ಟರ್‌ಗಳು, ಎಲೆಕ್ಟ್ರಾನಿಕ್ಸ್ ಮತ್ತು ಇಮೇಜಿಂಗ್ ಸಿಸ್ಟಮ್‌ಗಳು, ಇಂಟರ್ನೆಟ್ ಆಫ್ ಥಿಂಗ್ಸ್, ಎಂಇಎಂಎಸ್, ಸಂವೇದಕಗಳು, ಸಾಧನಗಳು, ಪ್ರದರ್ಶನ ಪರಿಕರಗಳು ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಬಳಸಲಾಗುವ ಇತರ ಡಿಜಿಟಲ್ ತಂತ್ರಜ್ಞಾನಗಳು ಸೇರಿವೆ. ಇದರ 'ಸ್ಮಾರ್ಟ್ ಉಪಕ್ರಮಗಳು' ಮೊಬಿಲಿಟಿ, ಮೆಡ್‌ಟೆಕ್, ಉತ್ಪಾದನೆ ಮತ್ತು ಡೇಟಾವನ್ನು ಒಳಗೊಂಡಿವೆ.
https://www.semi.org/en
***
(Release ID: 1821651)
Visitor Counter : 198