ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

33 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 3204 ಬ್ಲಾಕ್ ಗಳಲ್ಲಿ ಕಳೆದ ಒಂದು ವಾರದಲ್ಲಿ ಆಯೋಜಿಸಲಾದ ಆಯುಷ್ಮಾನ್ ಭಾರತ್ ಬ್ಲಾಕ್ ಮಟ್ಟದ ಆರೋಗ್ಯ ಮೇಳಗಳಲ್ಲಿ 27.31 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದಾರೆ


3.66 ಲಕ್ಷಕ್ಕೂ ಹೆಚ್ಚು ಎ.ಬಿ.ಹೆಚ್.ಎ ಹೆಲ್ತ್ ಐಡಿಗಳನ್ನು ರಚಿಸಲಾಗಿದೆ; 1.17 ಲಕ್ಷ ಪಿ.ಎಂ.ಜೆ.ಎ.ವೈ. ಗೋಲ್ಡನ್ ಕಾರ್ಡಗಳನ್ನು ವಿತರಿಸಲಾಗಿದೆ, 1.76 ಲಕ್ಷ ದೂರಸಂಪರ್ಕ ಮೂಲಕ ಸಲಹೆಗಳು; 6.75 ಲಕ್ಷ ಅಧಿಕ ರಕ್ತದೊತ್ತಡ ತಪಾಸಣೆ ; 6.11 ಲಕ್ಷ ಮಧುಮೇಹ ತಪಾಸಣೆ; ಮತ್ತು ಒಂದು ವಾರದಲ್ಲಿ 2.05 ಲಕ್ಷ ಕಣ್ಣಿನ ಪೊರೆ ತಪಾಸಣೆ ಮಾಡಲಾಗಿದೆ

Posted On: 26 APR 2022 6:45PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಬಿ-ಹೆಚ್.ಡಬ್ಲೂ.ಸಿ.)ಗಳ 4 ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 16 ರಿಂದ 22 ಏಪ್ರಿಲ್ 2022 ರವರೆಗೆ ಆಚರಿಸಿದೆ. 18ನೇ ಏಪ್ರಿಲ್ 2022 ರಂದು ಭಾರತದಾದ್ಯಂತ 33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರೋಗ್ಯ ಮೇಳಗಳು ಪ್ರಾರಂಭವಾಯಿತು. ಈ ಆರೋಗ್ಯ ಮೇಳಗಳು ಏಪ್ರಿಲ್,2022 ಅಂತ್ಯದವರೆಗೆ ಮುಂದುವರಿಯುತ್ತವೆ. ಅಗತ್ಯ ಔಷಧಗಳು ಮತ್ತು ರೋಗನಿರ್ಣಯ ಸೇವೆಗಳೊಂದಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯಲು ಸಾವಿರಾರು ಜನರನ್ನು ಆಕರ್ಷಿಸಲು ಈ ಆರೋಗ್ಯ ಮೇಳಗಳು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಆರೋಗ್ಯ ಮೇಳವು ಆರೋಗ್ಯ ಕುರಿತು ಶಿಕ್ಷಣ, ಉತ್ತಮ ಜೀವನಶೈಲಿಯ ಮಾಹಿತಿ, ಆರೋಗ್ಯ ಸಲಹೆ ಮತ್ತು ಇತರ ಆರೋಗ್ಯ ಸೇವೆಗಳ ಜೊತೆಗೆ ರೋಗಗಳ ಆರಂಭಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಸೇವೆ ಒದಗಿಸುವ ಮಾಧ್ಯಮ(ಕೊಂಡಿ)ಗಳಾಗಿ ಕಾರ್ಯ ನಿರ್ವಹಿಸುತ್ತವೆ. 

ದೇಶಾದ್ಯಂತ ಸಂಭ್ರಮ ಮತ್ತು ಉತ್ಸಾಹದಿಂದ ವಿವಿಧ ಆಚರಣೆಗಳ ಮೂಲಕ ಆರೋಗ್ಯ ಮೇಳವನ್ನು ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವರು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಸಂಸದರು, ಶಾಸಕರು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು/ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆಗಳ ಕಾರ್ಯದರ್ಶಿಗಳು, ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಸ್ಥಳೀಯ ಗಣ್ಯರು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಬಿ-ಹೆಚ್.ಡಬ್ಲೂ.ಸಿ.)ಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಜನಸಾಮಾನ್ಯರ ಕೈಗೆಟಕುವ ಮತ್ತು ಸುಲಭದಲ್ಲಿ ಲಭ್ಯವಾಗಬಹುದಾದ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ (ಎಬಿ-ಹೆಚ್.ಡಬ್ಲೂ.ಸಿ.)ಗಳ ಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಿ ಸಾರ್ವಜನಿಕರಲ್ಲಿ ಈ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

A collage of peopleDescription automatically generated with medium confidence

ಈ ಆರೋಗ್ಯ ಮೇಳಗಳ ಅನುಷ್ಠಾನದ ಏಳು ದಿನಗಳ (18ನೇ ಏಪ್ರಿಲ್ 2022 ರಿಂದ) ಸಂಚಿತ ವರದಿಯ ಪ್ರಕಾರ ಲಭ್ಯ ಮಾಹಿತಿ ಹೀಗಿದೆ. 3204 ಬ್ಲಾಕ್ ಗಳಲ್ಲಿ ಬ್ಲಾಕ್ ಆರೋಗ್ಯ ಮೇಳಗಳನ್ನು ನಡೆಸಲಾಗಿದೆ. ಈ ಏಳು ದಿನಗಳಲ್ಲಿ ದೇಶದಾದ್ಯಂತ ನಡೆಯುವ ಈ ಮೇಳಗಳ ಕೆಲವು ಪ್ರಮುಖ ಚಟುವಟಿಕೆಗಳನ್ನು ಕೆಳಗೆ ವಿವರಿಸಲಾಗಿದೆ. (18ನೇ - 24ನೇ ಏಪ್ರಿಲ್ 2022): - 

 

  • 33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜರುಗಿದ 3204 ಬ್ಲಾಕ್ ಆರೋಗ್ಯ ಮೇಳಗಳಲ್ಲಿ ಒಟ್ಟು 27.31 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿನೀಡಿದ್ದಾರೆ
  • ಭಾರತದಾದ್ಯಂತ 3.66 ಲಕ್ಷಕ್ಕೂ ಹೆಚ್ಚು ಎ.ಬಿ.ಹೆಚ್.ಎ. ಗುರುತು ಚೀಟಿ (ಐಡಿ)ಗಳನ್ನು ರಚಿಸಲಾಗಿದೆ, ಮಹಾರಾಷ್ಟ್ರದಲ್ಲಿ ಗರಿಷ್ಠ (56,321) ರಚಿಸಲಾಗಿದೆ
  • ಭಾರತದಾದ್ಯಂತ 1.17 ಲಕ್ಷಕ್ಕೂ ಹೆಚ್ಚು ಪಿ.ಎಂ.ಜೆ.ಎ.ವೈ. ಗೋಲ್ಡನ್ ಕಾರ್ಡಗಳನ್ನು ರಚಿಸಲಾಗಿದೆ, ಕರ್ನಾಟಕದಲ್ಲಿ ಗರಿಷ್ಠವಾಗಿ ರಚಿಸಲಾಗಿದೆ (22,091)
  • ಭಾರತದಾದ್ಯಂತ 1.76 ಲಕ್ಷಕ್ಕೂ ಹೆಚ್ಚು ದೂರಸಂಪರ್ಕ ಕರೆಗಳ ಮೂಲಕ ಆರೋಗ್ಯ ಸಲಹೆಕಾರ್ಯಗಳನ್ನು ನಡೆಸಲಾಗಿದೆ
  • 6.75 ಲಕ್ಷ ಅಧಿಕ ರಕ್ತದೊತ್ತಡ ತಪಾಸಣೆ, 6.11 ಲಕ್ಷ ಮಧುಮೇಹ ತಪಾಸಣೆ, 2.05 ಲಕ್ಷ ಕಣ್ಣಿನ ಪೊರೆ ತಪಾಸಣೆ ಮಾಡಲಾಗಿದೆ
  • ಸುಮಾರು 1,009 ಬ್ಲಾಕ್  ಆರೋಗ್ಯ ಮೇಳಗಳು ರಕ್ತದಾನ ಶಿಬಿರಗಳನ್ನು ಹೊಂದಿದ್ದವು ಮತ್ತು 519 ಅಂಗಾಂಗ ದಾನ ನೋಂದಣಿಯನ್ನು ಕೂಡಾ ಹೊಂದಿದ್ದವು\
  • ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಹಂಚಿಕೊಂಡ ಮಾಹಿತಿಯ ಪ್ರಕಾರ, ಚುನಾಯಿತ ಪ್ರತಿನಿಧಿಗಳಾದ ಸಂಸತ್ ಸದಸ್ಯರು, ವಿಧಾನಸಭೆಯ ಸದಸ್ಯರು ಮತ್ತು ಸರಪಂಚ್ ಗಳು ಹಾಗೂ ಉಪ ಆಯುಕ್ತರು, ಮುಖ್ಯ ವೈದ್ಯಕೀಯ ಅಧಿಕಾರಿಗಳು ಮತ್ತು ಸಿವಿಲ್ ಸರ್ಜನ್ ಗಳು ಮುಂತಾದವರಿಂದ ಬ್ಲಾಕ್ ಆರೋಗ್ಯ ಮೇಳಗಳನ್ನು ಉದ್ಘಾಟಿಸಲಾಗಿದೆ.

 

ಲಕ್ಷದ್ವೀಪ: ರಂಜಾನ್ ತಿಂಗಳಲ್ಲಿ ರಾತ್ರಿ ಮೇಳಗಳನ್ನು ನಡೆಸುವ ಮೂಲಕ  ಬ್ಲಾಕ್ ಹೆಲ್ತ್ ಮೇಳಕ್ಕೆ ನಾವಿನ್ಯತೆಯ ಅವಕಾಶ ಕಲ್ಪಿಸಲಾಗಿದೆ

ಬ್ಲಾಕ್ ಹೆಲ್ತ್ ಮೇಳದಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರಾಜ್ಯಗಳ ವಿಶಿಷ್ಟ ಉಪಕ್ರಮಗಳು ಹೀಗಿವೆ:

ಗೋವಾ: ವಾಹಕದಿಂದ ಹರಡುವ ರೋಗಗಳ ಕುರಿತು ಮಕ್ಕಳಿಗೆ ರೇಖಾಚಿತ್ರ ಮೂಲಕ ವಿವರಿಸುವಿಕೆ
ಲಡಾಖ್: ಸೇನಾ ವೈದ್ಯಕೀಯ ದಳವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣೆಯಲ್ಲಿ ಪಾಲ್ಗೊಂಡಿದೆ
ಉತ್ತರಪ್ರದೇಶ: ಎಫ್.ಎಸ್.ಎಸ್.ಎ.ಐ. ನಿಂದ ಚಕ್ರಗಳಲ್ಲಿ ಆಹಾರ ಸುರಕ್ಷತೆ ಮಾಹಿತಿ
ಚಂಡೀಗಢ: ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಟ್ಯಾಟೂ ತಯಾರಿಕೆ ಚಟುವಟಿಕೆ
ಪಂಜಾಬ್: ಆರೋಗ್ಯ ಜಾಗೃತಿಯ ಮೇಲೆ ಬೀದಿ ನಾಟಕ (ನುಕ್ಕಡ್ ನಾಟಕ).

A picture containing various, different, several, crowdDescription automatically generated

26.04.2022 ರಂತೆ ರಾಜ್ಯವಾರು ಬ್ಲಾಕ್ ಹೆಲ್ತ್ ಮೇಳಗಳ ವರದಿಯು ಕೆಳಕಂಡಂತಿದೆ:

***

 



(Release ID: 1821295) Visitor Counter : 243


Read this release in: English , Urdu , Hindi , Manipuri