ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸಿನಿಮಾವು ಜಾಗತಿಕವಾಗಿ ಭಾರತಕ್ಕೆ ತನ್ನದೇ ಆದ ವಿಶೇಷ ಗುರುತನ್ನು ಸೃಷ್ಟಿಸಿದೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್


ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದ ಕೇಂದ್ರ ಸಚಿವರು “ಮುಂಬೈನಲ್ಲಿ ನೋಡಲೇಬೇಕಾದ ಆಕರ್ಷಣೀಯ ಕೇಂದ್ರವಾಗಿದೆ” ಎಂದರು

प्रविष्टि तिथि: 21 APR 2022 3:17PM by PIB Bengaluru

ಮುಂಬೈನ ಪೆಡ್ಡರ್ ರಸ್ತೆಯ  ಫಿಲ್ಮ್ಸ್ ಡಿವಿಷನ್ ಕಾಂಪ್ಲೆಕ್ಸ್ ನಲ್ಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯನ್ ಸಿನಿಮಾಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ  ಸಚಿವ ಶ್ರೀ ಅನುರಾಗ್ ಠಾಕೂರ್ ಅವರ ಭೇಟಿ 

19 ನೇ ಶತಮಾನದ ಪಾರಂಪರಿಕ ಸಂರಚನೆಯಾದ ಗುಲ್ಶನ್ ಮಹಲ್ ಮತ್ತು ಅನುಕೂಲಕರವಾಗಿ ನಿರ್ಮಿತ ನೂತನ  ಮ್ಯೂಸಿಯಂ ಕಟ್ಟಡ – ವಸ್ತುಸಂಗ್ರಹಾಲಯವಿರುವ ಈ ಎರಡು ಕಟ್ಟಡಗಳೂ ಕೇಂದ್ರ ಮಾಹಿತಿ ಮತ್ತು ಪ್ರಸಾರ  ಸಚಿವರ ವಿಶೇಷ ಗಮನ ಸೆಳೆದವು. ವಸ್ತುಸಂಗ್ರಹಾಲಯದ ಸಂದರ್ಶನದ ನಂತರ, " ಚಲನಚಿತ್ರಗಳಲ್ಲಿ ವಿಶೇಷವಾಗಿ ಭಾರತೀಯ ಚಲನಚಿತ್ರಗಳಲ್ಲಿ ಆಸಕ್ತಿ ಹೊಂದಿರುವವರು ಕಡ್ಡಾಯವಾಗಿ ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು; ನೀವು ಮುಂಬೈನಲ್ಲಿರುವಾಗ ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡದಿದ್ದರೆ ನಿಮ್ಮ ಮುಂಬೈ ಭೇಟಿಯು ಅಪೂರ್ಣವಾಗಿರುತ್ತದೆ.” ಎಂದು  ಪ್ರಶಂಸಿಸಿ ಶ್ಲಾಘಿಸಿದರು.

"ಇಲ್ಲಿ ಸ್ವಲ್ಪ ಸಮಯವನ್ನು ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕಳೆಯಿರಿ ಮತ್ತು ವಸ್ತುಸಂಗ್ರಹಾಲಯವು ನಿಮ್ಮನ್ನು 100 ವರ್ಷಗಳ ಹಿಂದೆ ಕೊಂಡೊಯ್ಯುತ್ತದೆ, ಅಂದಿನ ಕಾಲಘಟ್ಟದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ ಅಥವಾ ಉಪಕರಣಗಳಿಲ್ಲದೆ ಚಲನಚಿತ್ರವನ್ನು ನಿರ್ಮಿಸಲಾಯಿತು. ಇಂದು ನಾವು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗ್ರಾಫಿಕ್ಸ್ ಮತ್ತು ಗೇಮಿಂಗ್, ತಂತ್ರಜ್ಞಾನದ ಬಗ್ಗೆ ಮಾತನಾಡುತ್ತೇವೆ, ಆದರೆ ಇವುಗಳ ಅನುಪಸ್ಥಿತಿಯಲ್ಲಿ ಆ ದಿನಗಳಲ್ಲಿ ಚಲನಚಿತ್ರಗಳನ್ನು ಹೇಗೆ ನಿರ್ಮಿಸಲಾಯಿತು ಮತ್ತು ಇಂದಿನವರೆಗೆ ಯಾವ ಪ್ರಗತಿಯನ್ನು ಸಾಧಿಸಲಾಗಿದೆ ಎಂಬುದನ್ನು ನಾವು ಇಲ್ಲಿ ನೋಡುತ್ತೇವೆ" " ಎಂದು ಹೇಳಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಭಾರತೀಯ ಚಿತ್ರರಂಗದ ಇತಿಹಾಸ ಮತ್ತು ಅದರ ವಿಕಾಸದ ಬಗ್ಗೆ ತಿಳಿಯಲು ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಒಮ್ಮೆ ಭೇಟಿ ನೀಡುವಂತೆ ದೇಶದಾದ್ಯಂತದ ಚಲನಚಿತ್ರ ಆಸಕ್ತರು ಮತ್ತು ಚಲನಚಿತ್ರ ಪ್ರೇಮಿಗಳನ್ನು ಪ್ರೇರೇಪಿಸಿ ಆಹ್ವಾನಿಸಿದರು.  ಆ ಕಾಲಘಟ್ಟದ ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರು ಅನಾನುಕೂಲಕರ, ಪ್ರತಿಕೂಲಕರ ಹಾಗೂ ಒರಟಾದ ಭೂಪ್ರದೇಶದಲ್ಲಿ ಚಲನಚಿತ್ರಗಳನ್ನು ಚಿತ್ರೀಕರಿಸಲು ಇಂತಹ ದೊಡ್ಡ ಕ್ಯಾಮೆರಾಗಳನ್ನು ಕೊಂಡೊಯ್ಯಲು ಅನುಭವಿಸಿದ ನೋವು ಬವಣೆಗಳನ್ನು ಹಾಗೂ ಅಧುನಿಕ ತಂತ್ರಜ್ಞಾನವು ಮಾನವನ ಜೀವನಕ್ಕೆ ಮತ್ತು ಚಲನಚಿತ್ರ ತಯಾರಿಕೆಗೆ ಹೇಗೆ ಸುಲಭಸಾಧ್ಯ ವ್ಯವಸ್ಥೆಗಳನ್ನು ಸಾಧ್ಯವಾಗಿಸಿದೆ ಎಂದು ಸಚಿವರು ವಿವರಿಸಿದರು.

ಗುಲ್ಶನ್ ಮಹಲ್ ಹೆರಿಟೇಜ್ ಕಟ್ಟಡದಲ್ಲಿ ವಿವಿಧ ಗಾತ್ರದ ಎಂಟು ವಿಭಿನ್ನ ಸಭಾಂಗಣಗಳಲ್ಲಿ ಹರಡಿಕೊಂಡಿರುವ ವಸ್ತುಪ್ರದರ್ಶನಗಳು ನಿಶ್ಯಬ್ದತೆಯ ಮೂಕ ಯುಗದಿಂದ ಹೊಸ ಅಲೆಯವರೆಗೆ ಭಾರತೀಯ ಚಲನಚಿತ್ರದ ಇತಿಹಾಸವನ್ನು ತೆರೆಟ್ಟಲ್ಲಿ, ನೂತನ ನ್ಯೂ ಮ್ಯೂಸಿಯಂ ಕಟ್ಟಡವು ಹೆಚ್ಚಾಗಿ ಚಲನಚಿತ್ರರಂಗದ ಸಂವಾದಾತ್ಮಕ ಪ್ರದರ್ಶನಗಳನ್ನು ಹೊಂದಿದೆ.

ಚಲನಚಿತ್ರ ಸಂಪತ್ತು(ಆಸ್ತಿ)ಗಳು, ನಿರ್ದಿಷ್ಟ ಕಾಲಘಟ್ಟವನ್ನು ಪ್ರತಿನಿಧಿಸುವ ಪುರಾತನ (ವಿಂಟೇಜ್ ) ಉಪಕರಣಗಳು, ಭಿತ್ತಿಪತ್ರ(ಪೋಸ್ಟರ್)ಗಳು, ಪ್ರಮುಖ ಚಲನಚಿತ್ರಗಳ ಪ್ರತಿಗಳು, ಪ್ರಚಾರದ ಕರಪತ್ರಗಳು, ಧ್ವನಿ ಟ್ರ್ಯಾಕ್ ಗಳು, ಟ್ರೇಲರ್ ಗಳು, ಪಾರದರ್ಶಕ ಹಾಳೆಗಳು, ಹಳೆಯ ಸಿನಿಮಾ ನಿಯತಕಾಲಿಕೆಗಳು, ಚಲನಚಿತ್ರ ತಯಾರಿಕೆ ಮತ್ತು ವಿತರಣೆಯನ್ನು ಒಳಗೊಂಡ ಅಂಕಿಅಂಶಗಳು ಇತ್ಯಾದಿಗಳನ್ನು ಕಾಲಾನುಕ್ರಮದಲ್ಲಿ ಅನುಕ್ರಮಣಿಕವಾಗಿ ಭಾರತೀಯ ಚಲನಚಿತ್ರದ ಇತಿಹಾಸವನ್ನು ಚಿತ್ರಿಸುವ ವ್ಯವಸ್ಥಿತ ರೀತಿಯಲ್ಲಿ ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ. ವಸ್ತುಸಂಗ್ರಹಾಲಯದ ಅವಲೋಕನಾ ಮಾಹಿತಿಯನ್ನು ಕೇಂದ್ರ ಸಚಿವರಿಗೆ ಚಲನಚಿತ್ರ ವಿಭಾಗದ ಮಹಾನಿರ್ದೇಶಕ ಶ್ರೀ ರವೀಂದ್ರ ಭಾಕರ್ ಅವರು ವಿವರಣೆಗಳ ಮೂಲಕ ನೀಡಿದರು.   


ಭಾರತದ ಬಹುದೊಡ್ಡ  ಆರ್ಥಿಕ – ಸಾಮಾಜಿಕ ಶಕ್ತಿಯೆಂದರೆ  ಅದು ಭಾರತೀಯ ಚಲನಚಿತ್ರವಾಗಿದೆ.

ಸಿನಿಮಾದ ಪಾತ್ರದ ಬಗ್ಗೆ ಮಾತನಾಡುತ್ತಾ, "ಭಾರತೀಯ ಸಿನಿಮಾ ನಮ್ಮ ದೇಶದ ಬಹುದೊಡ್ಡ ಆರ್ಥಿಕ-ಸಾಮಾಜಿಕ ಶಕ್ತಿಯಾಗಿದ್ದು ಅದು ಪ್ರಪಂಚದಾದ್ಯಂತದ ಲಕ್ಷಾಂತರ ಜನರ ಹೃದಯವನ್ನು ಆಳುತ್ತದೆ.  ಮನರಂಜನೆಯ ಮೂಲಕ ಭಾರತೀಯ ಚಿತ್ರರಂಗ ವಿಶ್ವದಲ್ಲಿ ಭಾರತಕ್ಕೆ ವಿಶೇಷ ಗುರುತನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಸಿನಿಮಾಗಳು ಭಾರತದಲ್ಲಿ ತಯಾರಾಗುತ್ತಿವೆ.” ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ  ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು.

ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಆವರಣದಲ್ಲಿ ಕೇಂದ್ರ ಸಚಿವರು ಸಸಿ ನೆಟ್ಟರು. ಚಲನಚಿತ್ರ ವಿಭಾಗ, ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಹಾಗೂ ಎನ್.ಎಫ್.ಡಿ.ಸಿ. ಅಧಿಕಾರಿಗಳೊಂದಿಗೆ ಕೇಂದ್ರ ಸಚಿವರು ಪರಿಶೀಲನಾ ಸಭೆ ನಡೆಸಿದರು. ಅತ್ಯಾಧುನಿಕ ಆಡಿಟೋರಿಯಂಗಳನ್ನು ಒಳಗೊಂಡಿರುವ ಭಾರತೀಯ ಸಿನಿಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಕಾಂಪ್ಲೆಕ್ಸ್ ನಲ್ಲಿ ಸಾಕ್ಷ್ಯಚಿತ್ರ, ಕಿರುಚಿತ್ರಗಳು ಮತ್ತು ಅನಿಮೇಷನ್ ಫಿಲ್ಮ್ಸ್ ಗಳ 17 ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಇದೇ ಮೇ, 2022ರಲ್ಲಿ ಆಯೋಜಿಸಲಾಗುತ್ತದೆ.

ಇಂದು ಪೂರ್ವಾಹ್ನ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಟೈಮ್ಸ್ ಗ್ರೂಪ್ ನ ಇಂಡಿಯಾ ಎಕನಾಮಿಕ್ ಕಾನ್ ಕ್ಲೇವ್ ಅನ್ನು ಉದ್ಘಾಟಿಸಿದರು ಮತ್ತು ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.


ಹೆಚ್ಚುವರಿ ಫೋಟೋಗಳು

 

****

 


(रिलीज़ आईडी: 1818765) आगंतुक पटल : 188
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Punjabi , Tamil