ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಏಪ್ರಿಲ್ 18 ರಂದು ನಡೆದ ಬ್ಲಾಕ್ ಮಟ್ಟದ ಆಯುಷ್ಮಾನ್ ಭಾರತ್ ಆರೋಗ್ಯ ಮೇಳಗಳಲ್ಲಿ ಒಟ್ಟಾರೆ 3 ಲಕ್ಷ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು; ದೇಶದಾದ್ಯಂತ 464 ಬ್ಲಾಕ್‌ ಗಳು ಮೊದಲ ದಿನದ ಆರೋಗ್ಯ ಮೇಳಗಳನ್ನು ಆಯೋಜಿಸಿವೆ


64000 ಕ್ಕೂ ಹೆಚ್ಚು ಎ.ಬಿ.ಹೆಚ್.ಎ. ಹೆಲ್ತ್ ಗುರುತು ಚೀಟಿಗಳನ್ನು ರಚಿಸಲಾಗಿದೆ; 17000 ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ ಸುವರ್ಣ ಚೀಟಿಗಳನ್ನು ನೀಡಲಾಗಿದೆ

Posted On: 19 APR 2022 6:59PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ಅಡಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ 4 ನೇ ವಾರ್ಷಿಕೋತ್ಸವವನ್ನು ಏಪ್ರಿಲ್ 16 ರಿಂದ ಏಪ್ರಿಲ್ 22, 2022 ರವರೆಗೆ ಆಚರಿಸುತ್ತಿದೆ. ದೇಶದಾದ್ಯಂತ ಅತ್ಯಂತ ಹುರುಪು ಮತ್ತು ಉತ್ಸಾಹದಿಂದ ಆಚರಣೆ ರೀತಿಯಲ್ಲಿ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವರು, ರಾಜ್ಯಗಳ/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಸಂಸದರು, ಶಾಸಕರು, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಪ್ರಧಾನ ಆರೋಗ್ಯ ಕಾರ್ಯದರ್ಶಿಗಳು/ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು, ರಾಜ್ಯ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರತಿನಿಧಿಗಳು ಮತ್ತು ಸ್ಥಳೀಯ ಗಣ್ಯರು ಭೇಟಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಕೈಗೆಟಕುವ ಮತ್ತು ಸುಲಭದಲ್ಲಿ ಲಭ್ಯವಾಗಬಹುದಾದ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಒದಗಿಸುವಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ಪ್ರಾಮುಖ್ಯತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ ಒಂದು ಬ್ಲಾಕ್‌ ನಲ್ಲಿ “ಬ್ಲಾಕ್ ಮಟ್ಟದ ಆರೋಗ್ಯ ಮೇಳ”ದಂತೆ ದೇಶದಾದ್ಯಂತ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ಜಿಲ್ಲೆಗಳಲ್ಲೂ ಏಪ್ರಿಲ್ 18 ರಿಂದ 22, 2022 ರವರೆಗೆ, ಒಟ್ಟಾರೆಯಾಗಿ ಒಂದು ಲಕ್ಷಕ್ಕೂ ಹೆಚ್ಚು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ ಬ್ಲಾಕ್ ಮಟ್ಟದ ಆರೋಗ್ಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರತಿ ಬ್ಲಾಕ್ ಗಳನ್ನು ಮೇಳ ಾಯೋಜನೆಯಲ್ಲಿ ಒಳಗೊಳ್ಳಲಾಗಿದ್ದು, ಪ್ರತಿ ಬ್ಲಾಕ್ ಮಟ್ಟದ ಆರೋಗ್ಯ ಮೇಳವು ಒಂದು ದಿನದ ಅವಧಿ ಹೊಂದಿರುತ್ತದೆ.

ರಾಷ್ಟ್ರೀಯ ಆರೋಗ್ಯ ನೀತಿ 2017 ರ ಉದ್ದೇಶವನ್ನು ಸಾಕಾರಗೊಳಿಸಲು, ಸಾರ್ವತ್ರಿಕ ಆರೋಗ್ಯ ಸುರಕ್ಷತೆ(ಯುನಿವರ್ಸಲ್ ಹೆಲ್ತ್ ಕವರೇಜ್)ಯನ್ನು ಸಾಧಿಸಲು ಭಾರತ ಸರ್ಕಾರವು ಫೆಬ್ರವರಿ 2018 ರ ಆಯವ್ಯಯದಲ್ಲಿ 1,50,000 ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿತು.

ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು  - ಪ್ರಚಾರಾತ್ಮಕ (ಪ್ರಮೋಟಿವ್), ತಡೆಯಾತ್ಮಕ(ಪ್ರಿವೆಂಟಿವ್), ಗುಣಪಡಿಸುವ(ಕ್ಯುರೇಟಿವ್), ಪುನರ್ವಸತಿ ಮತ್ತು ಉಪಶಾಮಕ ಆರೈಕೆಯನ್ನು ಒಳಗೊಂಡಂತೆ ಆಯ್ದ ಸಮಗ್ರ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಪ್ರಮುಖ ಬದಲಾವಣೆ ವ್ಯವಸ್ಥೆಯಾಗಿದೆ; ರೋಗ-ಕೇಂದ್ರಿತದಿಂದ ಕ್ಷೇಮ ಕೇಂದ್ರಕ್ಕೆ ಬದಲಾವಣೆ; ಮತ್ತು ಸಂಪೂರ್ಣ-ಸಮಾಜದ ಆರೋಗ್ಯ ವಿಧಾನವಾಗಿದೆ; ಅಂತರಾಷ್ಟ್ರೀಯ 'ಹೆಲ್ತ್ ಇನ್ ಆಲ್' ವಿಧಾನದೊಂದಿಗೆ ಹೊಂದಾಣಿಕೆಯಲ್ಲಿ 'ಎಲ್ಲರಿಗೂ ಆರೋಗ್ಯ'ಕ್ಕೆ ಪೂರಕವಾಗಿ ಹೊರಹೊಮ್ಮುತ್ತಿರುವ ಇಂಟರ್ಸೆಕ್ಟೋರಲ್ ಸಮನ್ವಯವನ್ನು ಸಾಂಸ್ಥಿಕಗೊಳಿಸುತ್ತದೆ.

ಆರೋಗ್ಯ ಮೇಳದ ಮೊದಲ ದಿನ, ಸುಮಾರು 3 ಲಕ್ಷ 50 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಮತ್ತು ದೇಶಾದ್ಯಂತ ಸುಮಾರು 464 ಬ್ಲಾಕ್‌ಗಳು ಆರೋಗ್ಯ ಮೇಳಗಳನ್ನು ಆಯೋಜಿಸಿದ್ದವು. ಇದಲ್ಲದೆ, ಅಧಿಕ ರಕ್ತದೊತ್ತಡ, ಮಧುಮೇಹ ಇತ್ಯಾದಿಗಳಿಗೆ ಸಾವಿರಾರು ತಪಾಸಣೆಗಳ ಜೊತೆಗೆ 64000 ಎ.ಬಿ.ಹೆಚ್.ಎ. ಆರೋಗ್ಯ ಗುರುತು ಚೀಟಿಗಳನ್ನು ಸೃಷ್ಟಿಸಲಾಗಿದೆ ಮತ್ತು 17000 ಪಿ.ಎಂ.ಜೆ.ಎ.ವೈ.  ಗೋಲ್ಡನ್ ಕಾರ್ಡ್‌ ಗಳನ್ನು ಕೂಡಾ ಸೃಷ್ಠಿಸಿ  ನೀಡಲಾಗಿದೆ.

ಇ-ಸಂಜೀವನಿ ಪ್ಲಾಟ್‌ಫಾರ್ಮ್ ಮೂಲಕ ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಲ್ಲಿ 16ನೇ ಏಪ್ರಿಲ್ 2022 ರಂದು, ಕೇವಲ ಏಕದಿನದಂದು, ದಾಖಲೆಯ 3 ಲಕ್ಷ ಆರೋಗ್ಯ ಸಲಹಾಕಾರ್ಯ ( ಟೆಲಿಕನ್ಸಲ್ಟೇಶನ್‌ )ಗಳನ್ನು ನಡೆಸಿಕೊಡಲಾಗಿದೆ.  ಆರೋಗ್ಯ ಕುರಿತ 1.8 ಲಕ್ಷ ದೂರಸಂಪರ್ಕಗಳ ಕರೆಗಳು ಬಂದಿದ್ದು, ಈ ಹಿಂದಿನ ಎಲ್ಲಾ ಏಕದಿನದ ದಾಖಲೆಗಳನ್ನೂ ಈ ಬ್ಲಾಕ್ ಆರೋಗ್ಯ ಮೇಳ ದಿನ ಮೀರಿಸಿದೆ.

ರಾಜ್ಯವಾರು ಬ್ಲಾಕ್ ಆರೋಗ್ಯ ಮೇಳಗಳ ವರದಿಯು (18.04.2022 ರಂದು ಸಂಜೆ 6:30 ಕ್ಕೆ ಅನ್ವಯಿಸುವಂತೆ ) ಕೆಳಕಂಡಂತಿದೆ:

***



(Release ID: 1818431) Visitor Counter : 130