ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ವಲಯದಲ್ಲಿ ಗಣಿ ಅಪಘಾತ ವರದಿ ಮಾಡಲು ವೆಬ್ ಪೋರ್ಟಲ್ ಗೆ ಚಾಲನೆ ನೀಡಿದ ಶ್ರೀ ಪ್ರಲ್ಹಾದ್ ಜೋಶಿ


ಕಲ್ಲಿದ್ದಲು ಗಣಿಗಳಲ್ಲಿ ಸುರಕ್ಷತೆ ಕುರಿತ ಸ್ಥಾಯಿ ಸಮಿತಿಯ 47ನೇ ಸಭೆ ಉದ್ದೇಶಿಸಿ ಭಾಷಣ

Posted On: 13 APR 2022 6:14PM by PIB Bengaluru

ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸುವ ಅಪಘಾತಗಳ ಕುರಿತಂತೆ ತತ್ ಕ್ಷಣವೇ ವರದಿ ಮಾಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕಲ್ಲಿದ್ದಲು ಸಚಿವಾಲಯ ಅಭಿವೃದ್ಧಿಪಡಿಸಿರುವ ವೆಬ್ ಪೋರ್ಟಲ್ ಗೆ ಇಂದು ಇಲ್ಲಿ ಚಾಲನೆ ನೀಡಿದರು. ಭಾರತೀಯ ಕಲ್ಲಿದ್ದಲು ನಿಗಮ (ಕೋಲ್ ಇಂಡಿಯಾ ಲಿಮಿಟೆಡ್ -ಸಿಐಎಲ್) ಈ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದ್ದು, ಅಪಘಾತಗಳಿಗೆ ಕಾರಣವಾಗುವ ಅಂಶಗಳನ್ನು ನಿವಾರಿಸುವುದನ್ನು ಖಚಿತಪಡಿಸಿಕೊಳ್ಳಲು, ಮೂಲ ಕಾರಣ ವಿಶ್ಲೇಷಣೆ ತಂತ್ರಗಳನ್ನು ಬಳಸಿಕೊಂಡು ಅಪಘಾತ ತನಿಖೆ ಮಾಡಲು ಅವಕಾಶ ಕಲ್ಪಿಸುತ್ತದೆ. ಇಂತಹ ಘಟನೆಗಳನ್ನು ತಗ್ಗಿಸುವ ಉದ್ದೇಶದಿಂದ ವಿವಿಧ ವಿಚಾರಣೆಗಳ ಶಿಫಾರಸುಗಳ ಆಧಾರದ ಮೇಲೆ ಕಲ್ಲಿದ್ದಲು ಕಂಪನಿಗಳು ತೆಗೆದುಕೊಳ್ಳಬೇಕಾದ ಕ್ರಮಗಳ ಮೇಲ್ವಿಚಾರಣೆಗೆ ಈ ಪೋರ್ಟಲ್ ಅನುಕೂಲ ಮಾಡಿಕೊಡುತ್ತದೆ.

ಕಲ್ಲಿದ್ದಲು ಗಣಿಗಳ ಸುರಕ್ಷತೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ 47ನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀ ಜೋಶಿ ಅವರು, ಕಲ್ಲಿದ್ದಲು ವಲಯದಲ್ಲಿ ಸುರಕ್ಷತೆಗೆ ಮೊದಲ ಆದ್ಯತೆ ಎಂದು ಪುನರುಚ್ಚರಿಸಿದರು ಮತ್ತು ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ನಿಧಿಯ ಕೊರತೆಯಾಗದಂತೆ ನೋಡಿಕೊಳ್ಳುವಂತೆ ಎಲ್ಲಾ ಕಲ್ಲಿದ್ದಲು ಕಂಪನಿಗಳಿಗೆ ಸಲಹೆ ನೀಡಿದರು. ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ದೀರ್ಘಾವಧಿವರೆಗಿನ ಮಳೆಗಾಲದಿಂದ ಉದ್ಭವಿಸಿದ ಸವಾಲುಗಳ ಹೊರತಾಗಿಯೂ ಕಲ್ಲಿದ್ದಲು ಉತ್ಪಾದನೆಯಲ್ಲಿ ಈ ವರ್ಷ  ಅತ್ಯುತ್ತಮ ಸಾಧನೆ ಮಾಡಿರುವುದಕ್ಕಾಗಿ ಅವರು ಕಲ್ಲಿದ್ದಲು ಕಂಪನಿಗಳನ್ನು ಶ್ಲಾಘಿಸಿದರು, ಭಾರತದ ಕಲ್ಲಿದ್ದಲು ವಲಯವು 2020-21ರ ಸಾಲಿನಲ್ಲಿನ 716 ದಶಲಕ್ಷ ಟನ್ ಉತ್ಪಾದನೆಗೆ ಹೋಲಿಸಿದರೆ 2021-22ರ ಆರ್ಥಿಕ ವರ್ಷದಲ್ಲಿ 777.23 ದಶಲಕ್ಷ ಟನ್ (ಎಂ.ಟಿ.) ದಾಖಲೆ ಮಾಡಿದ್ದು, ಶೇಕಡ 8.55 ರಷ್ಟು ವೃದ್ಧಿ ಸಾಧಿಸಿದೆ ಎಂದು ಶ್ರೀ ಜೋಶಿ ಉಲ್ಲೇಖಿಸಿದರು. ಅದೇ ವೇಳೆ, ಕಲ್ಲಿದ್ದಲು ಸಾಗಣೆ 2020-21 ರಲ್ಲಿದ್ದ 690.71 ದಶಲಕ್ಷ ಟನ್ ಗಳಿಂದ 2021-22 ರ ಹಣಕಾಸು ವರ್ಷದಲ್ಲಿ 818.04 ದಶಲಕ್ಷ ತನ್ ಗೆ ಹೆಚ್ಚಾಗಿದ್ದು, ಶೇಕಡ 18.43 ರಷ್ಟು ಹೆಚ್ಚಳವಾಗಿದೆ. ಕಲ್ಲಿದ್ದಲು ಗಣಿಗಳಲ್ಲಿನ ಸುರಕ್ಷತೆಯ ಸ್ಥಿತಿಗತಿ ಮತ್ತು ಪರಸ್ಪರ ಸಹಕಾರ ಮತ್ತು ವಿಚಾರಗಳು ಹಾಗೂ ಸಲಹೆಗಳನ್ನು ಹಂಚಿಕೊಳ್ಳುವ ಮನೋಭಾವದೊಂದಿಗೆ ಅಸ್ತಿತ್ವದಲ್ಲಿರುವ ಕ್ರಮಗಳ ಸಮರ್ಪಕತೆಯನ್ನು ಪರಿಶೀಲಿಸುವ ಸ್ಥಾಯಿ ಸಮಿತಿಯು ರಾಷ್ಟ್ರಮಟ್ಟದಲ್ಲಿ ಅತ್ಯುನ್ನತ ತ್ರಿಪಕ್ಷೀಯ ಸಮಿತಿಯಾಗಿದೆ. ಸಭೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯದ ಅಧಿಕಾರಿಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ವಿವಿಧ ಕಲ್ಲಿದ್ದಲು ಕಂಪನಿಗಳ ಸಿಎಂಡಿಗಳು ಮತ್ತು ಸಿಇಒಗಳು ಭಾಗವಹಿಸಿದ್ದರು.

 ಸಚಿವ ಶ್ರೀ ಜೋಶಿಯವರು ಈ ಕೆಳಗಿನ ಕ್ರಮಗಳನ್ನು ಸೂಚಿಸಿದರು:

I. ಕಲ್ಲಿದ್ದಲು ಗಣಿಗಳಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು.

II. ನಮ್ಮ ಉದ್ಯೋಗಿಗಳನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿಡಲು ಔದ್ಯೋಗಿಕ ಆರೋಗ್ಯ ಸೇವೆಗಳ ಮೂಲಸೌಕರ್ಯ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನವನ್ನು ಬಲಪಡಿಸುವುದು.

III. ಉದ್ಯೋಗಿಗಳು ಮತ್ತು ಪಿಎಎಫ್.ಗಳಲ್ಲಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ನೀಡಲು ಸಾಮರ್ಥ್ಯ ವರ್ಧನೆ.

IV. ಪಿಎಸ್.ಯು ಗಣಿಗಳು, ಖಾಸಗಿ ಕಲ್ಲಿದ್ದಲು ಗಣಿಗಳು ಮತ್ತು ಸಲಕರಣೆಗಳನ್ನು ಪಡೆದುಕೊಳ್ಳುವುದು (ಎಚ್.ಓ.ಇ.) ಮತ್ತು ಗಣಿ ಅಭಿವೃದ್ಧಿದಾರರು ಮತ್ತು ಕಾರ್ಯಾಚರಣೆದಾರರ (ಎಂಡಿಒ) ಪ್ಯಾಚ್ ಗಳಲ್ಲಿ ನಿಯೋಜಿಸಲಾದ ಗುತ್ತಿಗೆದಾರ ಕಾರ್ಮಿಕರ ಸುರಕ್ಷತೆ, ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳಲ್ಲಿ ಸುಧಾರಣೆ.

V. ಗಣಿ ಸುರಕ್ಷತೆಯ ಎಲ್ಲಾ ಬಾಧ್ಯಸ್ಥರಲ್ಲಿ ಅರಿವು ಮತ್ತು ಸಂವೇದನಾಶೀಲತೆಯನ್ನು ಹೆಚ್ಚಿಸುವುದು.

****

 



(Release ID: 1816580) Visitor Counter : 154


Read this release in: English , Urdu , Hindi , Tamil