ಜಲ ಶಕ್ತಿ ಸಚಿವಾಲಯ

ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರಾ ಮತ್ತು ಹಿಮಾಚಲ ಪ್ರದೇಶಗಳು ಜಲ ಜೀವನ್‌ ಮಿಷನ್‌ ಅಡಿಯಲ್ಲಿ2021-22 ರ ಕಾರ್ಯಕ್ಷ ಮತೆಯ ಪ್ರೋತ್ಸಾಹಕ ಅನುದಾನಕ್ಕಾಗಿ ಅರ್ಹತೆ ಪಡೆದಿವೆ

Posted On: 30 MAR 2022 5:50PM by PIB Bengaluru

 ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರಾ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಒಟ್ಟು ಆರು ರಾಜ್ಯಗಳು 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿನೀರು ಪೂರೈಕೆಯನ್ನು ಒದಗಿಸಲು ಜಲ ಜೀವನ್‌ ಮಿಷನ್‌ (ಜೆಜೆಎಂ) - ಹರ್‌ ಘರ್‌ ಜಲ್‌ ಅಡಿಯಲ್ಲಿ2021-22ರ ಕಾರ್ಯಕ್ಷ ಮತೆಯ ಪ್ರೋತ್ಸಾಹಕ ಅನುದಾನಕ್ಕೆ ಅರ್ಹತೆ ಪಡೆದಿವೆ.
ಕೇಂದ್ರ ಜಲ ಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌ ಅವರು, ಈ ರಾಜ್ಯಗಳಿಗೆ ಕಾರ್ಯಕ್ಷ ಮತೆಯ ಪ್ರೋತ್ಸಾಹಕವಾಗಿ 1,982 ಕೋಟಿ ರೂಪಾಯಿ ಮಂಜೂರು ಮಾಡಿದ್ದಾರೆ. ಇದರಲ್ಲಿಅರುಣಾಚಲ ಪ್ರದೇಶಕ್ಕೆ 542 ಕೋಟಿ ರೂ., ಮಣಿಪುರಕ್ಕೆ 120 ಕೋಟಿ ರೂ., ಮೇಘಾಲಯಕ್ಕೆ 400 ಕೋಟಿ ರೂ., ಸಿಕ್ಕಿಂಗೆ 70 ಕೋಟಿ ರೂ., ತ್ರಿಪುರಾಗೆ 100 ಕೋಟಿ ರೂ. ಮತ್ತು ಹಿಮಾಚಲ ಪ್ರದೇಶಕ್ಕೆ750 ಕೋಟಿ ರೂ.ಲಭಿಸಿದೆ.
ಜಲ ಜೀವನ್‌ ಮಿಷನ್‌ ಅಡಿಯಲ್ಲಿಕಾರ್ಯಕ್ಷ ಮತೆಯ ಪ್ರೋತ್ಸಾಹ ನಿಧಿಯನ್ನು ಒದಗಿಸುವುದು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉಂಟುಮಾಡಿದೆ. ಇದು ಈ ಮಿಷನ್‌ ಅಡಿಯಲ್ಲಿತ್ವರಿತ ಅನುಷ್ಠಾನ ಮತ್ತು ಭರವಸೆಯ ನೀರು ಪೂರೈಕೆಗೆ ಸಹಾಯ ಮಾಡುತ್ತದೆ. 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ನಲ್ಲಿನೀರಿನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಈ ಮಿಷನ್‌ ಹೊಂದಿದೆ.
ಕಳೆದ ಎರಡು ವರ್ಷಗಳಲ್ಲಿಕೋವಿಡ್‌-19 ಸಾಂಕ್ರಾಮಿಕ ಮತ್ತು ಪರಿಣಾಮಕಾರಿ ಲಾಕ್‌ಡೌನ್‌ಗಳು ಹಾಗೂ ಅಡಚಣೆಗಳ ಹೊರತಾಗಿಯೂ, ಜಲ ಜೀವನ್‌ ಮಿಷನ್‌ ಅನುಷ್ಠಾನವು ಸುಗಮವಾಗಿ ನಡೆಯುತ್ತಿದೆ ಮತ್ತು ಆರ್ಥಿಕ ವರ್ಷದಲ್ಲಿ, 2.05 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನಲ್ಲಿನೀರಿನ ಸಂಪರ್ಕವನ್ನು ಒದಗಿಸಲಾಗಿದೆ. ಪ್ರಸ್ತುತ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್‌ ಮತ್ತು ದಿಯು, ಗೋವಾ, ಹರಿಯಾಣ, ಪುದುಚೇರಿ ಮತ್ತು ತೆಲಂಗಾಣ ‘ಹರ್‌ ರ್ಘ ಜಲ್‌’ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಟ್ಟಿವೆ ಮತ್ತು ದೇಶದ 106 ಜಿಲ್ಲೆಗಳು ಮತ್ತು 1.44 ಲಕ್ಷ  ಹಳ್ಳಿಗಳಲ್ಲಿಪ್ರತಿ ಕುಟುಂಬವು  ನಲ್ಲಿನೀರು ಸರಬರಾಜು ಹೊಂದಿದೆ.
2019ರ ಆಗಸ್ಟ್‌ 15ರಂದು ಜಲ ಜೀವನ್‌ ಮಿಷನ್‌ ಘೋಷಿಸಿದಾಗಿನಿಂದ ಇಲ್ಲಿಯವರೆಗೆ, 6.10 ಕೋಟಿಗೂ ಹೆಚ್ಚು ಮನೆಗಳಿಗೆ ನಲ್ಲಿನೀರು ಸಂಪರ್ಕಗಳನ್ನು ಒದಗಿಸಲಾಗಿದೆ. ಹೀಗಾಗಿ  ನಲ್ಲಿನೀರು ಪೂರೈಕೆಯನ್ನು 3.23 ಕೋಟಿ (ಶೇ.17 ) ಯಿಂದ 9.34 ಕೋಟಿ (ಶೇ. 48.3) ಕ್ಕಿಂತ ಹೆಚ್ಚು ದೇಶದ ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿಸಲಾಗಿದೆ. 
2022-23ರ ಸಾಲಿನಲ್ಲಿಜಲ ಜೀವನ್‌ ಮಿಷನ್‌ಗೆ ಬಜೆಟ್‌ಅನ್ನು  60,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಈ ಪ್ರಮಾಣದಲ್ಲಿ, ನೀರು ಸರಬರಾಜು ಕಾರ್ಯವನ್ನು ಯೋಜಿಸಲು ಮತ್ತು ಸಿದ್ಧಪಡಿಸಲು ಹಾಗೂ ಮುಂದಿನ ಹಾದಿಯಲ್ಲಿಪಾಲುದಾರರನ್ನು ಮೌಲ್ಯಮಾಪನ ಮಾಡುವ ಕುರಿತು 2022ರ ಫೆಬ್ರವರಿ 23 ರಂದು, ಬಜೆಟ್‌ ನಂತರದ ವೆಬಿನಾರ್‌ನಲ್ಲಿಚರ್ಚಿಸಲಾಯಿತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಜಲಶಕ್ತಿ ಸಚಿವ ಶ್ರೀ ಗಜೇಂದ್ರ ಸಿಂಗ್‌ ಶೇಖಾವತ್‌, ರಾಜ್ಯ ಸಚಿವ ಶ್ರೀ ಪ್ರಹ್ಲಾದ್‌ ಸಿಂಗ್‌ ಪಟೇಲ್‌ ಮತ್ತು ಕೈಗಾರಿಕೆ, ಶೈಕ್ಷ ಣಿಕ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ವಾಶ್‌ ತಜ್ಞರು ಅನುಷ್ಠಾನವನ್ನು ತ್ವರಿತಗೊಳಿಸುವ ಮಾರ್ಗಗಳ ಕುರಿತು ತಮ್ಮ ಅಭಿಪ್ರಾಯಗಳನ್ನು/ಸೂಚನೆಗಳನ್ನು ಹಂಚಿಕೊಂಡರು.
ಯೋಜಿತ ಕಾಮಗಾರಿಗಳನ್ನು ಮತ್ತಷ್ಟು ಹೆಚ್ಚಿಸಲು, ಕೇಂದ್ರ ಸಚಿವರು ರಾಜ್ಯಗಳಿಗೆ ಭೇಟಿ ನೀಡುತ್ತಿದ್ದಾರೆ ಮತ್ತು ಕಾಮಗಾರಿಗಳನ್ನು ತ್ವರಿತಗೊಳಿಸಲು ರಾಜ್ಯಗಳೊಂದಿಗೆ ಚರ್ಚಿಸುತ್ತಿದ್ದಾರೆ. ಶ್ರೀ ಶೇಖಾವತ್‌ ಅವರ ಅಧ್ಯಕ್ಷ ತೆಯಲ್ಲಿ3 ಪ್ರಾದೇಶಿಕ ಸಮ್ಮೇಳನಗಳು ಇತ್ತೀಚೆಗೆ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿವಿವಿಧ ಪ್ರದೇಶಗಳಲ್ಲಿನಡೆಸಿ, ಯಾವುದಾದರೂ ಸವಾಲುಗಳನ್ನು ಬಗೆಹರಿಸುವುದು ಮತ್ತು ಜೆಜೆಎಂ ನ ವಿಕೇಂದ್ರೀಕರಣ, ಸಮುದಾಯ-ನಿರ್ವಹಣೆಯ ಮತ್ತು ಬೇಡಿಕೆ-ಚಾಲಿತ ಕಾರ್ಯಕ್ರಮ ಕಾರ್ಯಗತಗೊಳಿಸುವುದರ ಮೇಲೆ ಕೇಂದ್ರೀಕರಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಪೋ›ತ್ಸಾಹಿಸಲಾಯಿತು. ಹಾಗೆಯೇ ಅನುಷ್ಠಾನದಲ್ಲಿನ ವಿವಿಧ ಅಡೆತಡೆಗಳನ್ನು ಪರಿಹರಿಸಲು ಮಧ್ಯಸ್ಥಗಾರರ ಸಮಾಲೋಚನೆಗಳನ್ನು ಸಹ ನಡೆಸಲಾಗುತ್ತಿದೆ.
ಹಿಮಾಚಲ ಪ್ರದೇಶ ಸರ್ಕಾರ ಗ್ರಾಮೀಣ ಮನೆಗಳಿಗೆ ಖಚಿತವಾದ ನಲ್ಲಿನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ತೀವ್ರವಾದ ಗ್ರಾಮವಾರು ಯೋಜನೆ ಮತ್ತು ಅನುಷ್ಠಾನಕ್ಕೆ ಮುಂದಾಗಿದೆ. ಈಶಾನ್ಯ ರಾಜ್ಯಗಳು, ಗುಡ್ಡಗಾಡು ಪ್ರದೇಶ ಮತ್ತು ಅರಣ್ಯ ಪ್ರದೇಶಗಳ ಹೊರತಾಗಿಯೂ, ವೇಗ ಮತ್ತು ಪ್ರಮಾಣದಲ್ಲಿ ಜೆಜೆಎಂಅನ್ನು ಜಾರಿಗೆ ತಂದಿವೆ. 5 ಎನ್‌ಇ (ಈಶಾನ್ಯ ರಾಜ್ಯಗಳು) ರಾಜ್ಯಗಳು ಕಾರ್ಯಕ್ಷ ಮತೆಯ ಪೋ›ತ್ಸಾಹಕ ಅನುದಾನಕ್ಕೆ ಅರ್ಹತೆ ಪಡೆದಿವೆ. ಕೇಂದ್ರ ಸಚಿವ ಶೇಖಾವತ್‌ ಅವರು ಹಲವಾರು ಪರಿಶೀಲನಾ ಸಭೆಗಳನ್ನು ನಡೆಸಿದರು ಮತ್ತು ಅನುಷ್ಠಾನವನ್ನು ತ್ವರಿತಗೊಳಿಸಲು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದರು. ರಾಷ್ಟ್ರೀಯ ಜಲ ಜೀವನ್‌ ಮಿಷನ್‌ ಹಲವಾರು ಬಹು-ಶಿಸ್ತಿನ ತಜ್ಞರ ತಂಡವನ್ನು ಈ ರಾಜ್ಯಗಳಿಗೆ ಉತ್ತಮವಾಗಿ ಯೋಜಿಸಲು ಮತ್ತು ವೇಗವಾಗಿ ಕಾರ್ಯಗತಗೊಳಿಸಲು ಸಹಾಯ ಮಾಡಲು ಕಳುಹಿಸಿದೆ.

**



(Release ID: 1811819) Visitor Counter : 157