ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಭಾರತವು 2020-21ರಲ್ಲಿ ಉಕ್ರೇನ್‌ನಿಂದ 17.44 ಎಲ್‌ಎಮ್‌ಟಿ ಮತ್ತು ರಷ್ಯಾದಿಂದ 3.48 ಎಲ್‌ಎಮ್‌ಟಿ ಖಾದ್ಯ ತೈಲವನ್ನು ಆಮದು ಮಾಡಿಕೊಂಡಿದೆ.

ಅಡುಗೆ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರವು ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕವನ್ನು ಶೇ.2.5 ರಿಂದ ಶೂನ್ಯಕ್ಕೆ ಇಳಿಸಿದೆ.

ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಪ್ರಸ್ತುತ 32.5% ರಿಂದ 17.5% ಕ್ಕೆ ಇಳಿಸಲಾಗಿದೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಮೂಲ ಸುಂಕವನ್ನು 17.5% ರಿಂದ 12.5% ಕ್ಕೆ ಇಳಿಸಲಾಗಿದೆ.

Posted On: 23 MAR 2022 3:33PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವರಾದ  ಶ್ರೀಮತಿ ಸಾಧ್ವಿ ನಿರಂಜನ್ ಜ್ಯೋತಿ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ರಷ್ಯಾ ಮತ್ತು ಉಕ್ರೇನ್‌ನಿಂದ ಕಳೆದ ಮೂರು ವರ್ಷಗಳಲ್ಲಿ ಖಾದ್ಯ ತೈಲಗಳ ಆಮದಿನ ವಿವರಗಳನ್ನು ನೀಡಿದರು:

ವರ್ಷ

(ಏಪ್ರಿಲ್-ಮಾರ್ಚ್)

ಉಕ್ರೇನ್‌ನಿಂದ ಖಾದ್ಯ ತೈಲಗಳ ಆಮದು

(ಎಲ್‌ಎಮ್‌ಟಿ ಯಲ್ಲಿ)

ರಷ್ಯಾದಿಂದ ಖಾದ್ಯ ತೈಲಗಳ ಆಮದು

(ಎಲ್‌ಎಮ್‌ಟಿ ಯಲ್ಲಿ)

2018-19

24.87

0.46

2019-20

19.77

3.81

2020-21

17.44

3.48


ಮೂಲ: ವಾಣಿಜ್ಯ ಇಲಾಖೆ

ಖಾದ್ಯ ತೈಲಗಳ ಆಮದು, ಮುಕ್ತ ಸಾಮಾನ್ಯ ಪರವಾನಗಿ (ಒಜಿಎಲ್) ಅಡಿಯಲ್ಲಿದೆ. ಖಾಸಗಿ ಉದ್ಯಮವು ವಿದೇಶದಿಂದ ಅಗತ್ಯ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಸರ್ಕಾರವು ಖಾಸಗಿ ಉದ್ಯಮ/ಖಾದ್ಯ ತೈಲ ‌ ಸಂಸ್ಥೆಗಳೊಂದಿಗೆ ಸಭೆಗಳನ್ನು ನಡೆಸಿದೆ.

ಭಾರತ ಸರ್ಕಾರವು 2018-19 ರಿಂದ ಸಸ್ಯಜನ್ಯ ಎಣ್ಣೆಗಳ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಖಾದ್ಯ ತೈಲಗಳ ಆಮದನ್ನು ಕಡಿಮೆ ಮಾಡಲು ಹಾಗೂ ಬೀಜಗಳ ಉತ್ಪಾದಕತೆ ಮತ್ತು ದೇಶದಲ್ಲಿ  ತಾಳೇ ಎಣ್ಣೆ ಮತ್ತು ಮರದಿಂದ ದೊರಕುವ ಎಣ್ಣೆಕಾಳುಗಳ ಕ್ಷೇತ್ರ ವಿಸ್ತರಣೆಗಾಗಿ  ಕೇಂದ್ರೀಯ ಪ್ರಾಯೋಜಿತ ಯೋಜನೆ, ರಾಷ್ಟ್ರೀಯ  ಆಹಾರ ಭದ್ರತಾ ಮಿಷನ್- ಎಣ್ಣೆಬೀಜಗಳು ಮತ್ತು ತಾಳೆ ಎಣ್ಣೆ ಮಿಷನ್‌ (ಎನ್‌ಎಫ್‌ಎಸ್‌ಎಮ್-ಒಎಸ್&ಒಪಿ) ಅನ್ನು ಅನುಷ್ಠಾನಗೊಳಿಸುತ್ತಿದೆ.  

ಈಗ, ಸರ್ಕಾರವು ತಾಳೆ ಎಣ್ಣೆಗಾಗಿ ಪ್ರತ್ಯೇಕ ಮಿಷನ್ ಅನ್ನು ಪ್ರಾರಂಭಿಸಿದೆ, ಇದು ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ (ಆಯಿಲ್ ಪಾಮ್)- ಎನ್‌ಎಮ್‌ಇಒ (ಒಪಿ) ಆಗಿದ್ದು  ದೇಶವನ್ನು ಖಾದ್ಯ ತೈಲಗಳಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು  ತಾಳೆ ಕೃಷಿಯನ್ನು ಉತ್ತೇಜಿಸಲು ಈಶಾನ್ಯ ರಾಜ್ಯಗಳು ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ವಿಶೇಷ ಗಮನವನ್ನು ನೀಡುತ್ತದೆ.

ಸ್ಥಳೀಯ ಲಭ್ಯತೆಯನ್ನು ಸುಧಾರಿಸಲು ಮತ್ತು ಖಾದ್ಯ ತೈಲ ಬೆಲೆಗಳನ್ನು ನಿಯಂತ್ರಿಸಲು, ಸಾಮಾನ್ಯ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸರ್ಕಾರವು 2021-22ರ ಅವಧಿಯಲ್ಲಿ ಖಾದ್ಯ ತೈಲದ ಮೇಲಿನ ಸುಂಕ ರಚನೆಯನ್ನು ತರ್ಕಬದ್ಧಗೊಳಿಸುತ್ತಿದೆ. ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:

 

  • ಅಡುಗೆ ತೈಲ ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸುಂಕವನ್ನು ಶೇ.2.5 ರಿಂದ ಶೂನ್ಯಕ್ಕೆ ಇಳಿಸಿದೆ. ಈ ತೈಲಗಳ ಮೇಲಿನ ಕೃಷಿ-ಸೆಸ್ ಅನ್ನುಶೇ. 5 ಕ್ಕೆ ತರಲಾಗಿದೆ.    
  • ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಪ್ರಸ್ತುತ ಶೇ.32.5 ರಿಂದ ಶೇ.17.5 ಕ್ಕೆ ಇಳಿಸಲಾಗಿದೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಗಳ ಮೇಲಿನ ಮೂಲ ಸುಂಕವನ್ನು ಶೇ.17.5 ರಿಂದ ಶೇ.12.5 ​​ಕ್ಕೆ ಇಳಿಸಲಾಗಿದೆ.
  • ಸರ್ಕಾರವು 31.12.2022 ರವರೆಗೆ ಸಂಸ್ಕರಿಸಿದ ತಾಳೆ ಎಣ್ಣೆಗಳ  ಉಚಿತ ಆಮದನ್ನು ವಿಸ್ತರಿಸಿದೆ.
  • ಕಚ್ಚಾ ತಾಳೆ ಎಣ್ಣೆ, ಕಚ್ಚಾ ಸೋಯಾಬೀನ್ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಶೇಕಡಾ ಶೂನ್ಯದ ಆಮದು ಸುಂಕದ ಪ್ರಸ್ತುತ ಮೂಲ ದರವನ್ನು ಸೆಪ್ಟೆಂಬರ್ 30, 2022 ರವರೆಗೆ ವಿಸ್ತರಿಸಲಾಗಿದೆ ಮತ್ತು ಸಂಸ್ಕರಿಸಿದ ತಾಳೆ ಎಣ್ಣೆಯ ಮೇಲಿನ ಆಮದು ಸುಂಕದ ದರವನ್ನು ಶೇ.12.5,ರಷ್ಟು,  ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಶೇ.17.5 ರಷ್ಟು ದರವನ್ನು  ಸಹ 30ನೇ ಸೆಪ್ಟೆಂಬರ್, 2022 ರವರೆಗೆ ವಿಸ್ತರಿಸಲಾಗಿದೆ.
  • ಖಾದ್ಯ ತೈಲಗಳ ಬೆಲೆಗಳನ್ನು ನಿಯಂತ್ರಿಸಲು, ಎನ್‌ಸಿಡಿಇಎಕ್ಸ್‌  ನಲ್ಲಿ ಸಾಸಿವೆ ಎಣ್ಣೆಯ ಫ್ಯೂಚರ್‌ ಟ್ರೇಡಿಂಗ್‌ ವ್ಯವಹಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ದಾಸ್ತಾನು ಮಿತಿಗಳನ್ನು ವಿಧಿಸಲಾಗಿದೆ.

 

ಹೆಚ್ಚುವರಿಯಾಗಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಅಕ್ಟೋಬರ್ 8, 2021 ರಿಂದ ಮಾರ್ಚ್ 31, 2022 ರ ಅವಧಿಗೆ ಖಾದ್ಯ ತೈಲಗಳು ಮತ್ತು ಎಣ್ಣೆಕಾಳುಗಳ ಮೇಲೆ ದಾಸ್ತಾನು ಮಿತಿಗಳನ್ನು ವಿಧಿಸಿದೆ.

ಇದಲ್ಲದೆ, ಫೆಬ್ರವರಿ 03, 2022 ರಿಂದ, ಖಾದ್ಯ ತೈಲ  ಮತ್ತು ಖಾದ್ಯ ತೈಲಗಳ ದಾಸ್ತಾನಿನ ಮಿತಿಗಳ ಪ್ರಮಾಣವನ್ನು ನಿರ್ದಿಷ್ಟಪಡಿಸುವ ಪರಿಷ್ಕೃತ ಆದೇಶ  "ಪರವಾನಗಿ ಅವಶ್ಯಕತೆಗಳು, ದಾಸ್ತಾನಿನ ಮಿತಿಗಳು ಮತ್ತು ಕೆಲವು ಆಹಾರ ಪದಾರ್ಥಗಳ (ತಿದ್ದುಪಡಿ) ಮೇಲಿನ ಚಲನೆಯ ನಿರ್ಬಂಧಗಳ ಆದೇಶ 2022" ಅನ್ನು ತೆಗೆದುಹಾಕಲು ಸೂಚನೆ ನೀಡಲಾಗಿದೆ, ಇದನ್ನು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಜಾರಿಗೊಳಿಸಲಾಗುವುದು. ದೇಶದಲ್ಲಿ ಖಾದ್ಯ ತೈಲ ಮತ್ತು ಎಣ್ಣೆಕಾಳುಗಳ ಸುಗಮವಾದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಆದೇಶವನ್ನು ಹೊರಡಿಸಲಾಗಿದೆ.

*****(Release ID: 1809015) Visitor Counter : 59


Read this release in: Bengali , English , Gujarati