ನೀತಿ ಆಯೋಗ
azadi ka amrit mahotsav

ನೀತಿ ಆಯೋಗದ ಐದನೇ ಆವೃತ್ತಿಯ ಭಾರತ ಪರಿವರ್ತನಾ ಮಹಿಳಾ ಪ್ರಶಸ್ತಿಗಳನ್ನು ಕರ್ನಾಟಕದ 21 ಸ್ಫೂರ್ತಿದಾಯಕ ಮಹಿಳೆಯರು ಗೆದ್ದಿದ್ದಾರೆ


ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ 75 ಮಹಿಳೆಯರನ್ನು ಗೌರವಿಸಲಾಯಿತು

Posted On: 23 MAR 2022 5:03PM by PIB Bengaluru

ಭಾರತವನ್ನು ‘ಸಶಕ್ತ್ ಔರ್ ಸಮರ್ಥ ಭಾರತ’ ವನ್ನಾಗಿ ಪರಿವರ್ತಿಸುವಲ್ಲಿ ಮಹಿಳೆಯರು ಸತತವಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಈ ಮಹಿಳೆಯರ ಗಮನಾರ್ಹ ಸಾಧನೆಗಳನ್ನು ಗುರುತಿಸಿ ನೀತಿ ಆಯೋಗವು ಭಾರತವನ್ನು ಪರಿವರ್ತಸಿದ ಮಹಿಳೆಯರು (ವುಮೆನ್ ಟ್ರಾನ್ಸ್‌ಫಾರ್ಮಿಂಗ್ ಇಂಡಿಯಾ) ಪ್ರಶಸ್ತಿಗಳನ್ನು ಸ್ಥಾಪಿಸಿದೆ.
ಈ ವರ್ಷ, ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ, 75 ಮಹಿಳಾ ಸಾಧಕರಿಗೆ ಈ  ಪ್ರಶಸ್ತಿಗಳನ್ನು ನೀಡಲಾಯಿತು. ಈ 75 ಪ್ರಶಸ್ತಿ ಪುರಸ್ಕೃತರಲ್ಲಿ ಕರ್ನಾಟಕ ರಾಜ್ಯದ 21 ಮಹಿಳೆಯರನ್ನು ಗೌರವಿಸಲಾಯಿತು. 

Click here to know more about the other awardees.
 
ಅಲೀನಾ ಆಲಂ, ಬೆಂಗಳೂರು
ಮಿಟ್ಟಿ ಸೋಶಿಯಲ್ ಇನಿಶಿಯೇಟಿವ್ಸ್ ಫೌಂಡೇಶನ್
ಮಿಟ್ಟಿ ಕೆಫೆಯು ಕೆಫೆಗಳ ಸರಣಿಯಾಗಿದ್ದು ಅದು ದೈಹಿಕ, ಬೌದ್ಧಿಕ ಮತ್ತು ಮಾನಸಿಕ ಅಸಾಮರ್ಥ್ಯ ಹೊಂದಿರುವ ವಯಸ್ಕರಿಗೆ ತರಬೇತಿ ಮತ್ತು ಉದ್ಯೋಗವನ್ನು ಒದಗಿಸುತ್ತದೆ. ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಅಂಗವೈಕಲ್ಯ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಅಲೀನಾ ಆಲಂ ಇದನ್ನು ಸ್ಥಾಪಿಸಿದ್ದಾರೆ. ಭಾರತದಾದ್ಯಂತ 16 ಕ್ಕೂ ಹೆಚ್ಚು ಕೆಫೆಗಳೊಂದಿಗೆ, ವಿಶೇಷ ಅಗತ್ಯವುಳ್ಳ ನೂರಾರು ವಯಸ್ಕರು ನಾಲ್ಕು ವರ್ಷಗಳ ಅವಧಿಯಲ್ಲಿ 5 ಮಿಲಿಯನ್‌ಗಿಂತಲೂ ಹೆಚ್ಚು ಊಟಗಳನ್ನು ಬಡಿಸಿದ್ದಾರೆ. 
ವಿಶೇಷ ಸಾಮರ್ಥ್ಯಗಳನ್ನು ಹೊಂದಿರುವವರಿಗೆ ಆರ್ಥಿಕವಾಗಿ ಸ್ವತಂತ್ರವಾದ, ಆತ್ಮವಿಶ್ವಾಸದ ಮತ್ತು ಘನತೆಯ ಜೀವನವನ್ನು ಒದಗಿಸುವ ಮೂಲಕ ಅವರನ್ನು ಸಕ್ರಿಯಗೊಳಿಸುತ್ತಿದ್ದಾರೆ ಮತ್ತು ಸಶಕ್ತಗೊಳಿಸುತ್ತಿದ್ದಾರೆ. 
ಮಿಟ್ಟಿ ಕೆಫೆಯು ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನು ಉತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಅವರ ಅಪಾರ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿದೆ.
 
ನೇಹಾ ಸತಕ್, ಬೆಂಗಳೂರು 
ಆಸ್ಟ್ರೋಮ್ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್
ನೇಹಾ ಸತಕ್ ಅವರು ಸರಣಿ ಉದ್ಯಮಿ ಮತ್ತು ಆಸ್ಟ್ರೋಮ್ ಟ್ರಾನ್ಸ್‌ಪಾಂಡರ್‌ಗಳನ್ನು ಸಾಗಿಸುವ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಇಂಟರ್ನೆಟ್ ಅನ್ನು ಪ್ರಸಾರ ಮಾಡಲು ಬಯಸುತ್ತಿರುವ ಸಂಶೋಧಕರಾಗಿದ್ದಾರೆ. ಅವರ ಡೀಪ್ ಟೆಕ್ ಸ್ಟಾರ್ಟಪ್ ತನ್ನ ಪೇಟೆಂಟ್ ಪಡೆದ ಮಿಲಿಮೀಟರ್ ತರಂಗ ಇ-ಬ್ಯಾಂಡ್ ರೇಡಿಯೋಗಳು ಮತ್ತು ಉಪಗ್ರಹ ಸಂವಹನ ಉತ್ಪನ್ನಗಳ ಮೂಲಕ 5G ಮತ್ತು ಬ್ಯಾಕ್‌ಹಾಲ್ ದೂರಸಂಪರ್ಕ ಮೂಲಸೌಕರ್ಯಗಳನ್ನು ವೇಗಗೊಳಿಸುತ್ತಿದೆ. ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಟೆಲಿಕಾಂ ಮೂಲಸೌಕರ್ಯಗಳ ಮೇಲೆ ಅದು ಬೀರಿರುವ ಪ್ರಭಾವಕ್ಕಾಗಿ ಆಸ್ಟ್ರೋಮ್ ಅನೇಕ ಪ್ರಶಸ್ತಿಗಳನ್ನು ಪಡೆದಿದೆ. ಉದ್ಯಮಿಗಳನ್ನು ಬೆಂಬಲಿಸಲು ಸಂಶೋಧನೆ ಮತ್ತು ಕಾರ್ಪೊರೇಟ್ ವಲಯಗಳು ಒಟ್ಟಾಗಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಸಿಸ್ಕೊ, ಅನಲಾಗ್ ಡಿವೈಸಸ್ ಮತ್ತು ಐಇಎಸ್ಎ ಯಂತಹ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಆಸ್ಟ್ರೋಮ್, ಭಾರತದ ಪ್ರಮುಖ ಆರ್ & ಡಿ ಶಾಲೆಯಾದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇನ್ಕ್ಯುಬೇಟ್ ಆದ ಸಂಸ್ಥೆಯಾಗಿದೆ.
ಹಾರ್ದಿಕಾ ಶಾ, ಬೆಂಗಳೂರು
ಕಿನಾರಾ ಕ್ಯಾಪಿಟಲ್
 
ಭಾರತದಲ್ಲಿ ಸಣ್ಣ ವ್ಯಾಪಾರದ ಸಾಲವನ್ನು ಬೆಂಬಲಿಸಲು ಕಿನಾರಾ ಕ್ಯಾಪಿಟಲ್ ಅನ್ನು ಪ್ರಾರಂಭಿಸುವ ಮೂಲಕ ಹಾರ್ದಿಕಾ ಷಾ ಹಿಂದುಳಿದ ಉದ್ಯಮಿಗಳನ್ನು ಬೆಂಬಲಿಸುವ ಕಡೆ ದೃಷ್ಟಿ ಹಾಯಿಸಿದರು. ಅವರ ದೃಷ್ಟಿ ಮತ್ತು ನಾಯಕತ್ವದ ಅಡಿಯಲ್ಲಿ, ಕಿನಾರಾ ಎಂಎಸ್ಎಂಇ ವಲಯದಲ್ಲಿ ಆರ್ಥಿಕ ಸೇರ್ಪಡೆಯನ್ನು ಮುಂದುವರೆಸುತ್ತಿದೆ. ಇದು 700 ಕೋಟಿ ರೂ.ಗಳ ಆದಾಯಕ್ಕೆ ಕಾರಣವಾಗಿದೆ ಮತ್ತು ಸ್ಥಳೀಯ ಆರ್ಥಿಕತೆಗಳಲ್ಲಿ 250,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಬೆಂಬಲಿಸಿದೆ. AI/ML ಡೇಟಾ-ಚಾಲಿತ ಕ್ರೆಡಿಟ್ ನಿರ್ಧಾರದೊಂದಿಗೆ, ಇದು ಎಂಎಸ್ಎಂಇಗಳಿಗೆ ಮೇಲಾಧಾರ ಮುಕ್ತ ವ್ಯಾಪಾರ ಸಾಲಗಳನ್ನು ನೀಡುತ್ತದೆ. ಅವರ "myKinara" ಅಪ್ಲಿಕೇಶನ್ 24 ಗಂಟೆಗಳಲ್ಲಿಯೇ ಸಾಲ ವಿತರಣೆಯ ಭರವಸೆ ನೀಡುತ್ತದೆ. ಹಾಗೆಯೇ "HerVikas" ಕಾರ್ಯಕ್ರಮವು ಮಹಿಳಾ ಉದ್ಯಮಿಗಳಿಗೆ ಸ್ವಯಂಚಾಲಿತ ರಿಯಾಯಿತಿಯನ್ನು ಒದಗಿಸುತ್ತದೆ.
ಭಾರತದಲ್ಲಿನ ಸಣ್ಣ ವ್ಯಾಪಾರ ಉದ್ಯಮಿಗಳಿಗೆ ಮೇಲಾಧಾರಗಳಿಲ್ಲದೆ ವೇಗದ ಮತ್ತು ಹೊಂದಾಣಿಕೆಯ ಸಾಲಗಳನ್ನು ನೀಡುವ ಮೂಲಕ ಕಿನಾರಾ ಕ್ಯಾಪಿಟಲ್ ಜೀವನ, ಜೀವನೋಪಾಯಗಳು ಮತ್ತು ಸ್ಥಳೀಯ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ.
 
ಜೋ ಅಗರ್ವಾಲ್, ಬೆಂಗಳೂರು 
ಟಚ್ಕಿನ್ ಇ ಸರ್ವೀಸ್ ಪ್ರೈವೇಟ್ ಲಿಮಿಟೆಡ್ (ವೈಸಾ)
ಜೋ ಅಗರ್ವಾಲ್ ಅವರು ತಮ್ಮ ಖಿನ್ನತೆಯೊಂದಿಗೆ ಹೋರಾಟ ನಡೆಸಿದ ನಂತರ 2016 ರಲ್ಲಿ ಚಾಟ್‌ಬಾಟ್ 'ವೈಸಾ' ವನ್ನು ಪ್ರಾರಂಭಿಸಿದರು. ಕಲಿಯಬೇಕಾದ ಕೌಶಲ್ಯವಾದ ಬೌದ್ಧಿಕ ಚಟುವಟಿಕೆಯ ನಡವಳಿಕೆ ತರಬೇತಿ (ಕಾಗ್ನಿಟಿವ್ ಬಿಹೇವಿಯರ್ ಟ್ರೈನಿಂಗ್‌) ಯ ಶಕ್ತಿಯನ್ನು ಅವರು ಅರಿತುಕೊಂಡರು. 'ವೈಸಾ' ಎಂಬ ಹೆಸರು ಎಲಿಜಾದಿಂದ ಬಂದಿದೆ, ಇದು ಮೊದಲು ರಚಿಸಿದ ಚಾಟ್‌ಬಾಟ್ ಆಗಿದೆ. ಐದು ವರ್ಷಗಳು ಮತ್ತು 700 ಪುನರಾವೃತ್ತಿಗಳ ನಂತರ, ವೈಸಾ 4 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಸಹಾಯ ಮಾಡಿದೆ. ಅವರಲ್ಲಿ ಹೆಚ್ಚಿನವರಿಗೆ ಬೇರೆ ಯಾವುದೇ ಮಾನಸಿಕ ಆರೋಗ್ಯ ಬೆಂಬಲ ದೊರೆತಿರಲಿಲ್ಲ. ವೈಸಾ ದೊಂದಿಗೆ ಮಾತನಾಡಿದ ನಂತರ ಜನರು ಹಂಚಿಕೊಂಡ ಸಾವಿರಾರು ಪರಿವರ್ತನೆಯ ಕಥೆಗಳು ವೈಯಕ್ತಿಕವಾಗಿ ತಂಡಕ್ಕೆ ಅತ್ಯಂತ ಅರ್ಥಪೂರ್ಣವಾದ ಕಲಿಕೆಯಾಗಿದೆ.
ವೈಸಾ ಮಾನಸಿಕ ಆರೋಗ್ಯಕ್ಕೆ ಬೆಂಬಲವನ್ನು ನೀಡುತ್ತಿದೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಮತ್ತು ಒಬ್ಬರಿಂದ ಒಬ್ಬರಿಗೆ ಸಂಪರ್ಕವನ್ನು ಸ್ಥಾಪಿಸುವ ಮೂಲಕ ಜೀವನವನ್ನು ಪರಿವರ್ತಿಸುತ್ತಿದೆ.
 
ವಿಕ್ಟೋರಿಯಾ ಜೋಸ್ಲಿನ್ ಡಿ'ಸೋಜಾ, ಬೆಂಗಳೂರು 
ಸ್ವಚ್ಛ ಇಕೊ ಸಲ್ಯೂಷನ್ಸ್ ಪ್ರೈ. ಲಿಮಿಟೆಡ್
ಶ್ರೀಮತಿ ವಿಕ್ಟೋರಿಯಾ ಜೋಸ್ಲಿನ್ ಡಿಸೋಜಾ ಅವರು 2008 ರಲ್ಲಿ ಸ್ಥಾಪಿಸಿದ ಸ್ವಚ್ಛ, ತ್ಯಾಜ್ಯ ನಿರ್ವಹಣೆಯ ಬದಲಾಗುತ್ತಿರುವ ಸನ್ನಿವೇಶದಲ್ಲಿ ಬದಲಾವಣೆಯನ್ನು ತರುವ ಉದ್ದೇಶವನ್ನು ಹೊಂದಿದೆ. ಕರ್ನಾಟಕದ ಮೊದಲ ಒಣ ತ್ಯಾಜ್ಯ ಸಂಸ್ಕರಣಾ ಕೇಂದ್ರವನ್ನು ಸ್ಥಾಪಿಸಲು ಅವರು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಯೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ಬೆಂಗಳೂರಿನ 54 ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮರುಬಳಕೆಗಾಗಿ ಒಣ ತ್ಯಾಜ್ಯವನ್ನು ಸಂಗ್ರಹಿಸಲು ಕಾರಣವಾಗಿದೆ. ತ್ಯಾಜ್ಯ ನಿರ್ವಹಣಾ ಉದ್ಯಮಕ್ಕೆ ಸಂಬಂಧಿಸಿದ ಪ್ರವೃತ್ತಿಗಳು, ನಿಬಂಧನೆಗಳು ಮತ್ತು ಅನುಸರಣೆಯನ್ನು ಅವರು ಎಂದಿಗೂ ಕಳೆದುಕೊಳ್ಳುವುದಿಲ್ಲ ಎಂದು ಸ್ವಚ್ಛ ತಂಡವು ಖಚಿತಪಡಿಸುತ್ತದೆ. ಇದುವರೆಗೆ 28,871 ಟನ್‌ಗಳಷ್ಟು ತ್ಯಾಜ್ಯವನ್ನು ಮರುಬಳಕೆಗಾಗಿ ಯಶಸ್ವಿಯಾಗಿ ತಿರುಗಿಸಿದೆ.
ಸ್ವಚ್ಛ ಪ್ರತಿಯೊಬ್ಬರಿಗೂ ಸ್ವಚ್ಛ, ಹಸಿರು ಮತ್ತು ಸುಸ್ಥಿರ ಭವಿಷ್ಯದ ಭರವಸೆ ನೀಡುತ್ತದೆ.
ಅನುರಾಧಾ ಪರೇಖ್, ಬೆಂಗಳೂರು 
ವಿಕಾರ ಸರ್ವಿಸಸ್ ಪ್ರೈ. ಲಿಮಿಟೆಡ್ (ದಿ ಬೆಟರ್ ಇಂಡಿಯಾ)
ಅನುರಾಧಾ ಪರೇಖ್ ಲಕ್ಷಾಂತರ ಭಾರತೀಯರನ್ನು ಸಮಸ್ಯೆಯ ಭಾಗವಾಗಿ ಉಳಿಯುವ ಬದಲು ಪರಿಹಾರದ ಭಾಗವಾಗುವಂತೆ ಪ್ರಭಾವಿಸಿದ್ದಾರೆ. ಅವರ ಉಪಕ್ರಮ 'ದಿ ಬೆಟರ್ ಇಂಡಿಯಾ' ಮಾಹಿತಿ, ಅರಿವು ಮತ್ತು ಭರವಸೆಗೆ ಪ್ರವೇಶವನ್ನು ಒದಗಿಸಿದ್ದು, ಓದುಗರನ್ನು ತಮ್ಮದೇ ಆದ ರೀತಿಯಲ್ಲಿ ಬದಲಾವಣೆ ಮಾಡಲು ಸಶಕ್ತಗೊಳಿಸುತ್ತದೆ. ಇದು ಸರ್ಕಾರದ ನೀತಿಗಳನ್ನು ಧನಾತ್ಮಕವಾಗಿ ಪ್ರಭಾವಿಸಿದ ಕಥೆಗಳನ್ನು ಹಂಚಿಕೊಳ್ಳುತ್ತದೆ, ಬಡತನದಿಂದ ರೈತರನ್ನು ಹೊರತಂದಿದೆ, ನಗರ ಕೊಳಗೇರಿ ಶಾಲೆಗಳಿಗೆ ಹಣ ಪಡೆಯಲು ಸಹಾಯ ಮಾಡಿದೆ, ಹಳ್ಳಿಗಳಲ್ಲಿ ನೀರು ಮತ್ತು ನೈರ್ಮಲ್ಯವನ್ನು ತಂದಿದೆ. ಇವು ಹೆಸರಿಸಬಹುದಾದ ಕೆಲವು. ಅವರು ದೇಶದ ಮಾಧ್ಯಮ ಕ್ಷೇತ್ರದ ಮಾದರಿಗೆ ಸವಾಲು ಹಾಕಿದ್ದಾರೆ ಮತ್ತು ಹತಾಶೆ ಮತ್ತು ನಿರಾಸಕ್ತಿಯ ನಿರೂಪಣೆಯನ್ನು ಸ್ಫೂರ್ತಿದಾಯಕ ಮತ್ತು ಕ್ರಿಯೆ ಆಧಾರಿತಕ್ಕೆ ಬದಲಾಯಿಸಿದ್ದಾರೆ.
ಬೆಟರ್ ಇಂಡಿಯಾ ಜನರನ್ನು ಸಮಸ್ಯೆಯ ಭಾಗವೆಂದು ಪರಿಗಣಿಸುವ ಮನಸ್ಥಿತಿಯಿಂದ ಪರಿಹಾರದ ಭಾಗವಾಗಲು ಬಯಸುವ ಮನಸ್ಥಿತಿಗೆ ಬದಲಾಯಿಸುತ್ತಿದೆ.
ಛಾಯಾ ನಂಜಪ್ಪ, ಮಂಡ್ಯ 
ಅಮೃತ ತಾಜಾ
ಛಾಯಾ ನಂಜಪ್ಪ ಅವರು ಗ್ರಾಮೀಣ ಸಾಮಾಜಿಕ ಉದ್ಯಮಿ ಮತ್ತು ಅವರ ಬ್ರ್ಯಾಂಡ್ ನೆಕ್ಟರ್ ಫ್ರೆಶ್ ಕಳೆದ 13 ವರ್ಷಗಳಿಂದ ಬುಡಕಟ್ಟು ಜನಾಂಗದವರು, ಗ್ರಾಮೀಣ ಸಮುದಾಯಗಳು ಮತ್ತು ಸಣ್ಣ ರೈತರನ್ನು ಸಬಲೀಕರಣಗೊಳಿಸುತ್ತಿದೆ. ಇಂದು, ನೆಕ್ಟರ್ ಫ್ರೆಶ್ 'ಗುಣಮಟ್ಟ' ಪದಕ್ಕೆ ಸಮಾನಾರ್ಥಕವಾಗಿದೆ ಮತ್ತು ಗುಣಮಟ್ಟದ ಕೇಳುವ ಮಾರುಕಟ್ಟೆಗಳಿಗೆ ಆದ್ಯತೆಯ ಬ್ರ್ಯಾಂಡ್ ಆಗಿದೆ. ಇದು ಸ್ಥಳೀಯ ಸಮುದಾಯಗಳಲ್ಲಿ ಹೂಡಿಕೆ ಮಾಡಿದೆ, ಅಂತರರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಲು ಅವರಿಗೆ ತರಬೇತಿ ನೀಡುತ್ತದೆ. ಫಾರ್ಮ್ ಗೇಟ್ (ಜಮೀನು ಹತ್ತಿರದ) ಸಂಸ್ಕರಣಾ ಘಟಕವಾಗಿ, ಇದು ಹಲವಾರು ರೈತರಿಗೆ ಅವರ ಉತ್ಪನ್ನಗಳು ಹಾಳಾಗುವುದನ್ನು ತಪ್ಪಿಸಲು ಸಹಾಯ ಮಾಡಿದೆ. ಸ್ಥಳೀಯ ರೈತರು ಮತ್ತು ಪ್ಯಾಕೇಜಿಂಗ್ ಸಾಮಗ್ರಿಗಳ ಸ್ಥಳೀಯ ತಯಾರಕರನ್ನು ಬೆಂಬಲಿಸುವ ಛಾಯಾ ಅವರ ಉಪಕ್ರಮವು ನೆಕ್ಟರ್ ಫ್ರೆಶ್‌ನ ವೆಚ್ಚವನ್ನು ಕಡಿಮೆ ಮಾಡಲು ಅಪಾರವಾಗಿ ಸಹಾಯ ಮಾಡಿತು.
ಗುಣಮಟ್ಟದ ಉತ್ಪನ್ನಗಳಲ್ಲಿ ಮಾರುಕಟ್ಟೆಯ ಮುಂಚೂಣಿಯಲ್ಲಿರುವ ನೆಕ್ಟರ್ ಫ್ರೆಶ್, ಬಲವಾದ ವ್ಯಾಪಾರ ನೀತಿಗಳಿಗೆ ಕಟ್ಟುನಿಟ್ಟಾದ ಅನುಸರಣೆಯ ಮೂಲಕ ಅಪೇಕ್ಷಣೀಯ ಉಪಸ್ಥಿತಿಯನ್ನು ಸೃಷ್ಟಿಸುತ್ತಿದೆ. ಅವರು ಸಣ್ಣ ರೈತರನ್ನು ಬೆಂಬಲಿಸುವ ಮತ್ತು ಬುಡಕಟ್ಟು ಮತ್ತು ಗ್ರಾಮೀಣ ಸಮುದಾಯಗಳನ್ನು ಸಬಲೀಕರಣಗೊಳಿಸುವ ತಮ್ಮ ಮೂಲತತ್ವಗಳಿಗೆ ಬದ್ಧರಾಗಿದ್ದಾರೆ.
 
ರಿಚಾ ಸಿಂಗ್, ಬೆಂಗಳೂರು
ಯುವರ್‌ದೋಸ್ತ್ ಹೆಲ್ತ್ ಸೊಲ್ಯೂಷನ್ಸ್ ಪ್ರೈ.ಲಿ. ಲಿಮಿಟೆಡ್
ರಿಚಾ ಅವರ ಎಂಜಿನಿಯರಿಂಗ್ ದಿನಗಳಲ್ಲಿ ಆತ್ಮಹತ್ಯೆಗೆ ಶರಣಾದ ಸ್ನೇಹಿತನನ್ನು ಕಳೆದುಕೊಂಡ ವೈಯಕ್ತಿಕ ನಷ್ಟವು ಟೆಕ್ ಆಧಾರಿತ ಅನಾಮಧೇಯ ಪರಿಹಾರವನ್ನು ನಿರ್ಮಿಸುವ ಕಲ್ಪನೆಗೆ ನಾಂದಿಯಾಯಿತು. ಅವರ ಕಂಪನಿ, YourDOST, ಭಾರತದ ಅತಿದೊಡ್ಡ ಭಾವನಾತ್ಮಕ ಸ್ವಾಸ್ಥ್ಯ ವೇದಿಕೆಗಳಲ್ಲಿ ಒಂದಾಗಿದೆ. ಅದರ ಸಮಗ್ರ ವಿಧಾನದ ಮೂಲಕ, ಇದು ಸಹಾನುಭೂತಿ ಮತ್ತು ಉನ್ನತ ಕಾರ್ಯನಿರ್ವಹಣೆಯ ಸಂಸ್ಕೃತಿಯನ್ನು ರಚಿಸಲು ವೈಯಕ್ತಿಕ, ತಂಡ ಮತ್ತು ನಾಯಕತ್ವದ ಹಂತಗಳಲ್ಲಿ ನೆರವು ಒದಗಿಸುತ್ತದೆ. ತಂತ್ರಜ್ಞಾನ ವೇದಿಕೆಯು 900ಕ್ಕೂ ಮನಶ್ಶಾಸ್ತ್ರಜ್ಞರು ಮತ್ತು ತರಬೇತುದಾರರೊಂದಿಗೆ ಮುಖಾಮುಖಿ ಸಮಾಲೋಚನೆ, ಸ್ವ-ಸಹಾಯ ಪರಿಕರಗಳು, ತರಬೇತಿ, ಮೌಲ್ಯಮಾಪನಗಳು ಇತ್ಯಾದಿಗಳಿಗೆ ಪ್ರವೇಶವನ್ನು ಒದಗಿಸುತ್ತದೆ.
ಯುವರ್ ದೋಸ್ತ್, ಒಂದೇ ಸಮಯದಲ್ಲಿ ಒಂದು ನಗುವಿನಿಂದ ಹಲವಾರು ನಗುವಿನ ಸಂತೋಷದ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ.
 
ಪೂಜಾ ಶರ್ಮಾ ಗೋಯಲ್, ಬೆಂಗಳೂರು 
ಬಿಲ್ಡಿಂಗ್ ಬ್ಲಾಕ್ಸ್ ಲರ್ನಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಲಿಮಿಟೆಡ್
ಬಿಲ್ಡಿಂಗ್ ಬ್ಲಾಕ್ಸ್ ಲರ್ನಿಂಗ್ ಸೊಲ್ಯೂಷನ್ಸ್ ಪ್ರೈ.ಲಿ. ಮುಂದಿನ ಪೀಳಿಗೆಯ ತಂತ್ರಜ್ಞಾನ ಕೌಶಲ್ಯಗಳನ್ನು ಬಳಸಿಕೊಂಡು ನಾವೀನ್ಯತೆ ಪಡೆಯಲು ಮಕ್ಕಳು ಮತ್ತು ಶಾಲೆಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಹ ಸಂಸ್ಥಾಪಕಿಯಾಗಿ, ಪೂಜಾ ಅವರು ಪ್ರಾಯೋಗಿಕ ಕಲಿಕೆಯಲ್ಲಿ ದೀರ್ಘಕಾಲ ಚಾಂಪಿಯನ್ ಆಗಿದ್ದಾರೆ, ಇದು ಮಕ್ಕಳು ಸಮಸ್ಯೆಗಳನ್ನು ಪರಿಹರಿಸುವವರಾಗಲು, ನಿರ್ಮಾಣ ಮಾಡುವವರಾಗಲು ಮತ್ತು ಸಂಕೀರ್ಣ ನೈಜ ಪ್ರಪಂಚದ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ನಿರ್ಭೀತರಾಗಲು ಪ್ರೇರೇಪಿಸುತ್ತದೆ. ಅವರ ಕಿಟ್‌ಗಳು ಮತ್ತು ಕೋರ್ಸ್‌ಗಳು ಅವಿಷ್ಕಾರ್ ಬ್ರಾಂಡ್ ಹೆಸರಿನಡಿಯಲ್ಲಿ 5-18 ವರ್ಷಗಳ ನಡುವಿನ ಮಕ್ಕಳಿಗೆ ಕಂಪ್ಯೂಟೇಶನಲ್ ಥಿಂಕಿಂಗ್, ಮೆಕ್ಯಾನಿಕಲ್ ಡಿಸೈನ್ ಮತ್ತು ಡಿಸೈನ್ ಥಿಂಕಿಂಗ್‌ನಂತಹ ನಿರ್ಣಾಯಕ 21 ನೇ ಶತಮಾನದ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ. ಅವರು ಪ್ರಬಲವಾದ ವರ್ಚುವಲ್ ರೊಬೊಟಿಕ್ಸ್ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುತ್ತಿದ್ದಾರೆ, ಅದು ಭಾರತದ ಪ್ರತಿ ಮಗುವಿಗೆ ಈ ನಿರ್ಣಾಯಕ ತಂತ್ರಜ್ಞಾನ ಕೌಶಲ್ಯಗಳನ್ನು ಕಲಿಯಲು ಅನುವು ಮಾಡಿಕೊಡುತ್ತದೆ.
ಪ್ರತಿ ಕುತೂಹಲಿ ಮಗುವು ತನ್ನೊಳಗೆ ಹೊಸತನವನ್ನು ಅಡಗಿಸಿಕೊಂಡಿರುತ್ತದೆ ಮತ್ತು ಮುಂದಿನ ಪೀಳಿಗೆಯ ನಾವೀನ್ಯಕಾರರನ್ನು ಸೃಷ್ಟಿಸಲು ತಾವು ಬೆಂಬಲಿಸುತ್ತೇವೆ ಎಂದು ಆವಿಷ್ಕಾರ್ ತಂಡ ನಂಬುತ್ತದೆ.
 
ನೀಲಂ ಚಿಬ್ಬರ್, ಬೆಂಗಳೂರು
ಇಂಡಸ್ ಟ್ರೀ ಕ್ರಾಫ್ಟ್ಸ್ ಫೌಂಡೇಶನ್
ಅತ್ಯಂತ ದುರ್ಬಲ ಸಮುದಾಯಗಳ ಮಹಿಳೆಯರ ಸಾಮಾಜಿಕ-ಆರ್ಥಿಕ ಪರಿವರ್ತನೆಗಾಗಿ ಕೆಲಸ ಮಾಡುತ್ತಿರುವ ನೀಲಂ ಚಿಬ್ಬರ್ ಇಂಡಸ್ ಟ್ರೀ ಅನ್ನು ಸಹ ಸಂಸ್ಥಾಪಕಿ. ಅವರ ಕೆಲಸವು ಭಾರತೀಯ ಮತ್ತು ಜಾಗತಿಕ ಕುಶಲಕರ್ಮಿಗಳ ಉತ್ಪಾದನಾ ವ್ಯವಸ್ಥೆಗಳು ಮುಂದಿನ ಪುನರುತ್ಪಾದಕ ಆರ್ಥಿಕತೆಗೆ ಪ್ರಮುಖವಾದುದು ಎಂದು ಮರುವ್ಯಾಖ್ಯಾನಿಸುತ್ತಿವೆ. ಇದು ಸುಸ್ಥಿರ ಜೀವನೋಪಾಯಕ್ಕಾಗಿ ಸ್ವಯಂ-ಮಾಲೀಕತ್ವದ ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರಾಯೋಗಿಕ ಮಾದರಿಯನ್ನು ರೂಪಿಸುತ್ತದೆ. ಈ ಮಾದರಿಯು ಕೃಷಿಯೇತರ ವೃತ್ತಿಗಳಲ್ಲಿ ತಮ್ಮ ಕೌಶಲ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವ ಮೂಲಕ ಮತ್ತು ಸೃಜನಶೀಲ ವಲಯದಲ್ಲಿ ಅವರನ್ನು ಸಂಯೋಜಿಸುವ ಮೂಲಕ ಕುಶಲಕರ್ಮಿಗಳ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿದೆ. ಅವರ ಪ್ರಭಾವವು ಭಾರತ ಮತ್ತು ಆಫ್ರಿಕಾದಾದ್ಯಂತ 500,000 ಜನರಿಗೆ ವಿಸ್ತರಿಸಿದೆ ಮತ್ತು ಐಕೆಇಎ, ಫ್ಯೂಚರ್ ಗ್ರೂಪ್, ಫ್ಯಾಬ್‌ಇಂಡಿಯಾ ಇತ್ಯಾದಿಗಳಲ್ಲಿ ಒಟ್ಟು 58 ಮಿಲಿಯನ್ ಡಾಲರ್ ಮಾರುಕಟ್ಟೆಗಳನ್ನು ನಿರ್ಮಿಸಿದೆ.
ಪುನರುತ್ಪಾದಕ ಉತ್ಪಾದನಾ ಅಭ್ಯಾಸಗಳಲ್ಲಿ ಸುಸ್ಥಿರ ಜೀವನೋಪಾಯವನ್ನು ನಿರ್ಮಿಸುವ ಮೂಲಕ ಲಕ್ಷಾಂತರ ಉತ್ಪಾದಕರು ಬಡತನದಿಂದ ಹೊರಬರುವ ಜಗತ್ತನ್ನು ಇಂಡಸ್ ಟ್ರೀ ರೂಪಿಸುತ್ತಿದೆ.
 
ಸುಚೇತಾ ಭಟ್, ಬೆಂಗಳೂರು
ಡ್ರೀಮ್ ಎ ಡ್ರೀಮ್
ಸುಚೇತಾ ಅವರು 2007 ರಲ್ಲಿ ಡ್ರೀಮ್ ಎ ಡ್ರೀಮ್‌ಗೆ ಸ್ವಯಂಸೇವಕಿಯಾಗಿ ಸೇರಿದರು. ಕೆಲವು ವರ್ಷಗಳು, ಅವರು ಸಂಸ್ಥೆಯ ಪ್ರಮಾಣ ಮತ್ತು ಕಾರ್ಯತಂತ್ರದ ನಿರ್ದೇಶನವನ್ನು ನಡೆಸುತ್ತಿದ್ದರು. ಇಂದು, ಡ್ರೀಮ್ ಎ ಡ್ರೀಮ್‌ನ ಸಿಇಒ ಆಗಿ, ಅವರು ಯುವ ವ್ಯಕ್ತಿಯ ಪ್ರಯಾಣದ ಬಗ್ಗೆ ಸಾಟಿಯಿಲ್ಲದ ತಿಳಿವಳಿಕೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಅವರು ಹೊಸ ಸಮಗ್ರ ಪಠ್ಯಕ್ರಮಗಳನ್ನು ಪರಿಚಯಿಸಲು, ಶಿಕ್ಷಕರ ತರಬೇತಿ/ಕಲಿಕೆಯ ಅಭ್ಯಾಸಗಳನ್ನು ಪರಿವರ್ತಿಸಲು, ಕಲಿಕೆಗೆ ಶಿಕ್ಷಣ ವಿಧಾನಗಳನ್ನು ಬದಲಿಸಲು, ಪಠ್ಯಕ್ರಮದ ಚೌಕಟ್ಟುಗಳನ್ನು ಮರುವಿನ್ಯಾಸಗೊಳಿಸಲು ಮತ್ತು ಶಿಕ್ಷಣದ ಮುಖ್ಯ ಉದ್ದೇಶವಾಗಿ 'ಪ್ರತಿ ಮಗುವಿಗೆ, ಅಭಿವೃದ್ಧಿ ಹೊಂದುತ್ತಿರುವ ಜೀವನ' ಕಡೆಗೆ ಮನಸ್ಸು ಬದಲಾಯಿಸಲು ಪರಿಸರ ವ್ಯವಸ್ಥೆಯನ್ನು ಪ್ರೇರೇಪಿಸಿದ್ದಾರೆ. ಇದು ಭಾರತದಲ್ಲಿ 3 ಮಿಲಿಯನ್ ಮಕ್ಕಳನ್ನು ತಲುಪಲು ಸಹಾಯ ಮಾಡಿದೆ.
ಡ್ರೀಮ್ ಎ ಡ್ರೀಮ್ ನಿರೂಪಣೆಯನ್ನು ಶೈಕ್ಷಣಿಕ ಕೇಂದ್ರೀಕೃತ ಶಿಕ್ಷಣ ಮಾದರಿಯಿಂದ ವೈಯಕ್ತಿಕಗೊಳಿಸಿದ, ಸಂದರ್ಭೋಚಿತ ಮಾದರಿಗೆ ಬದಲಾಯಿಸಲು ಕೆಲಸ ಮಾಡುತ್ತಿದೆ. ಇದು ಸಮಾನತೆ, ಘನತೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ.
 
ಮಯೂರಾ ಬಾಲಸುಬ್ರಮಣಿಯನ್, ಬೆಂಗಳೂರು 
ಕ್ರಾಫ್ಟಿಜನ್ ಫೌಂಡೇಶನ್
ಮಯೂರಾ ಸಂಪೂರ್ಣ ಕರಕುಶಲ ಮೌಲ್ಯ ಸರಪಳಿಯಲ್ಲಿ ಸೋರ್ಸಿಂಗ್, ತಳಮಟ್ಟದ ಸಾಮರ್ಥ್ಯ ನಿರ್ಮಾಣ ಮತ್ತು ವಿನ್ಯಾಸ ಅಭಿವೃದ್ಧಿಯಿಂದ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಬಹು ಚಾನೆಲ್‌ಗಳಲ್ಲಿ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು ಪರಿಣತಿಯನ್ನು ಹೊಂದಿದ್ದಾರೆ. ಅವರ ಸಂಸ್ಥೆ, ಕ್ರಾಫ್ಟಿಜನ್ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವಯಸ್ಕರು ಮತ್ತು ನಗರ, ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶಗಳಲ್ಲಿನ ಹಿಂದುಳಿದ ಮಹಿಳೆಯರು ಸೇರಿದಂತೆ. ಮುಖ್ಯವಾಹಿನಿಯ ಆದಾಯ ಗಳಿಕೆಯ ಪ್ರವೇಶವನ್ನು ಹೊಂದಿಲ್ಲದ ಸಮಾಜದ ಹಿಂದುಳಿದ ವರ್ಗಗಳಿಗೆ ಕೌಶಲ್ಯ ನೀಡುತ್ತಿದೆ. ಅವರು ಕರಕುಶಲ ಮೌಲ್ಯ ಸರಪಳಿಯಾದ್ಯಂತ ಬೆಂಬಲವನ್ನು ಒದಗಿಸುತ್ತಿದ್ದಾರೆ. 
ಕ್ರಾಫ್ಟಿಜನ್ ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಲಕ್ನೋದಾದ್ಯಂತ 2,500 ಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಪರಿಣಾಮ ಬೀರುವ 30 ಕ್ಕೂ ಹೆಚ್ಚು ವಿವಿಧ ಕರಕುಶಲ ಕೌಶಲ್ಯಗಳಿಂದ 250 ಕ್ಕೂ ಹೆಚ್ಚು ಅನನ್ಯ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಿದೆ. ಕ್ರಾಫ್ಟ್-ಆಧಾರಿತ ಜೀವನೋಪಾಯಕ್ಕಾಗಿ ಸಿ ಎಸ್ ಆರ್ ಕಾರ್ಯಕ್ರಮಗಳು, ಕಸ್ಟಮೈಸ್ ಮಾಡಿದ ಸರಕುಗಳ ಪರಿಹಾರಗಳು, ಕಾರ್ಯಾಗಾರಗಳು ಮತ್ತು ಉದ್ಯೋಗಿಗಳನ್ನು ಒಳಗೊಂಡಂತೆ ಕ್ರಾಫ್ಟಿಜನ್ ಹಲವಾರು ಉಪಕ್ರಮಗಳನ್ನು ಹೊಂದಿದೆ.
ಕ್ರಾಫ್ಟಿಜನ್, ಭಾರತೀಯ ಕರಕುಶಲತೆ ಮತ್ತು ಕುಶಲಕರ್ಮಿಗಳ ಕೌಶಲಗಳನ್ನು ಸಂರಕ್ಷಿಸುವ ಮತ್ತು ವಿಕಸನಗೊಳಿಸುವ ಮೂಲಕ ನಮ್ಮ ಸಾಂಸ್ಕೃತಿಕತೆಯ ಅವಿಭಾಜ್ಯ ಅಂಗವಾಗಿ ಉಳಿಯುವಂತೆ ಮಾಡುತ್ತಿದೆ.
 
ಅಕ್ಷಿತಾ ಸಚ್‌ದೇವ, ಬೆಂಗಳೂರು
ಟ್ರೆಸಲ್ ಲ್ಯಾಬ್ಸ್ ಪ್ರೈ.ಲಿ. ಲಿಮಿಟೆಡ್
ಅಕ್ಷಿತಾ ಸಚ್‌ದೇವ ಅವರು ತಮ್ಮ ಕಂಪನಿಯಾದ ಟ್ರೆಸಲ್ ಲ್ಯಾಬ್‌ನಲ್ಲಿ ಸಹಾಯಕ ತಂತ್ರಜ್ಞಾನ ಪರಿಹಾರಗಳನ್ನು ನಿರ್ಮಿಸುತ್ತಿದ್ದಾರೆ, ಇದು ದೃಷ್ಟಿಹೀನರಿಗೆಗೆ 60 ಕ್ಕೂ ಹೆಚ್ಚು ಜಾಗತಿಕ ಭಾಷೆಗಳಲ್ಲಿ ಯಾವುದೇ ರೀತಿಯ ಮುದ್ರಿತ, ಕೈಬರಹ ಮತ್ತು ಡಿಜಿಟಲ್ ವಿಷಯವನ್ನು ಆಲಿಸಲು, ಭಾಷಾಂತರಿಸಲು ಮತ್ತು ಡಿಜಿಟಲೈಸ್ ಮಾಡಲು ಸಹಾಯ ಮಾಡುತ್ತದೆ. ಅವರ ಪ್ರಮುಖ ನವೀನ ಉತ್ಪನ್ನ, Kibo ಮೂರು ಉತ್ಪನ್ನಗಳನ್ನು ಒಳಗೊಂಡಿದೆ - Kibo ಮೊಬೈಲ್ ಅಪ್ಲಿಕೇಶನ್, Kibo XS ಸಾಧನ ಮತ್ತು Kibo ಡೆಸ್ಕ್ ವೆಬ್ ಸಾಫ್ಟ್‌ವೇರ್ ಬಳಕೆದಾರರ ಜೀವನದ ಜೀವನಶೈಲಿ, ಕಲಿಕೆ ಮತ್ತು ಗಳಿಕೆಯ ಅಂಶಗಳನ್ನು ಪೂರೈಸುತ್ತದೆ.
ಇದನ್ನು ಜುಲೈ 2019 ರಲ್ಲಿ ಪ್ರಾರಂಭಿಸಲಾಯಿತು, ಅವರ ಉತ್ಪನ್ನಗಳು ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ಮತ್ತು ಕೆಲಸದ ಸ್ಥಳಗಳನ್ನು ಒಳಗೊಂಡಿವೆ ಮತ್ತು ವರ್ಧಿತ ಶೈಕ್ಷಣಿಕ ಮತ್ತು ಕೆಲಸದ ಉತ್ಪಾದಕತೆಯೊಂದಿಗೆ 65,000 ಕ್ಕೂ ಹೆಚ್ಚು ಅಂಧ ಮತ್ತು ದೃಷ್ಟಿಹೀನ ವ್ಯಕ್ತಿಗಳನ್ನು ಸಶಸಕ್ತಗೊಳಿಸಿದೆ.
ಟ್ರೆಸಲ್ ಲ್ಯಾಬ್‌, ದೃಷ್ಟಿಹೀನರಿಗೆ ಯಾರದೇ ಅವಲಂಬನೆಯಿಲ್ಲದೇ ಅವರು ಪ್ರವೇಶಿಸಲು, ಓದಲು ಮತ್ತು ಕಲಿಯಲು ಬಯಸುವದನ್ನು ಆಯ್ಕೆ ಮಾಡುವ ಹಕ್ಕನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತಿದೆ.
 
ಡಾ. ಗಾಯತ್ರಿ ವಾಸುದೇವನ್, ಬೆಂಗಳೂರು 
ಲೇಬರ್ ನೆಟ್ ಸರ್ವೀಸಸ್ ಇಂಡಿಯಾ ಪ್ರೈ. ಲಿಮಿಟೆಡ್
ಲೇಬರ್‌ನೆಟ್‌ನ ಸಹ -ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ಡಾ ಗಾಯತ್ರಿ ವಾಸುದೇವನ್ ಅವರು ನಿಜವಾದ ದಾರ್ಶನಿಕರಾಗಿದ್ದಾರೆ. 2021-22 ರಲ್ಲಿ, ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ, ಲೇಬರ್‌ನೆಟ್ 18,000 ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರಿತು, ಅವರು ಅಲ್ಪಾವಧಿಯ ಕೋರ್ಸ್‌ಗಳಿಗೆ ದಾಖಲಾಗಲು ಪ್ರೇರೇಪಿಸಿತು. 27,000 ಹದಿಹರೆಯದವರು ವೃತ್ತಿಪರ ತರಬೇತಿ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದರು ಮತ್ತು 500 ವಿದ್ಯಾರ್ಥಿಗಳು B.Voc ಕಾರ್ಯಕ್ರಮಕ್ಕೆ ದಾಖಲಾದರು.  ಆರ್ ಪಿ ಎಲ್ ಅಡಿಯಲ್ಲಿ 19,000 ಪ್ರಮಾಣೀಕರಣಗಳನ್ನು ನೀಡಲಾಗಿದೆ, ಅವರ ಶಿಷ್ಯವೃತ್ತಿ ಕಾರ್ಯಕ್ರಮದ ಅಡಿಯಲ್ಲಿ 3,000 ಮಂದಿ ಪ್ರಯೋಜನ ಪಡೆದಿದ್ದಾರೆ, 2,000 ಉದ್ಯಮಿಗಳು ತರಬೇತಿಯನ್ನು ಪಡೆದರು ಮತ್ತು 6 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ ವಿರುದ್ಧ ಲಸಿಕೆಯನ್ನು ಪಡೆದರು.
ಅನೌಪಚಾರಿಕ ವಲಯದ ವ್ಯಕ್ತಿಗಳ ಆದಾಯವನ್ನು ಸುಧಾರಿಸುವ ಉದ್ದೇಶದೊಂದಿಗೆ, ಲೇಬರ್ನೆಟ್ ಸರ್ವೀಸಸ್ ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಯೊಂದಿಗೆ ಸುಸ್ಥಿರ ಮಧ್ಯಸ್ಥಿಕೆಗಳನ್ನು ವಿನ್ಯಾಸಗೊಳಿಸುತ್ತಿದೆ.
 
ಡಾ. ಸುಸ್ಮಿತಾ ಮೊಹಂತಿ, ಬೆಂಗಳೂರು 
Earth2Orbit
ಸುಸ್ಮಿತಾ ಮೊಹಂತಿ ಅವರು ಮೂರು ವಿಭಿನ್ನ ಖಂಡಗಳಲ್ಲಿ - ಅಮೆರಿಕಾ, ಯೂರೋಪ್ ಮತ್ತು ಭಾರತ- ಕಂಪನಿಗಳನ್ನು ಪ್ರಾರಂಭಿಸಿದ ವಿಶ್ವದ ಏಕೈಕ ಬಾಹ್ಯಾಕಾಶ ಉದ್ಯಮಿಯಾಗಿದ್ದಾರೆ. ಅವರ ಭಾರತೀಯ ಸಾಹಸೋದ್ಯಮ Earth2Orbit (E2O) ಭಾರತದ ಮೊದಲ ಬಾಹ್ಯಾಕಾಶ ಪ್ರಾರಂಭವಾಗಿದೆ ಮತ್ತು ಸುಮಾರು $420 ಬಿಲಿಯನ್ ಜಾಗತಿಕ ಬಾಹ್ಯಾಕಾಶ ಸ್ಟಾರ್ಟ್ ಅಪ್ ಆಗಿದೆ. ಇದು ಮಾರುಕಟ್ಟೆಯಲ್ಲಿ ಭಾರತವನ್ನು ಮುನ್ನಡೆಸಲು ಸಹಾಯ ಮಾಡಿದೆ. 1998 ರ ಅಮೆರಿಕಾ ನಿರ್ಬಂಧ ಮತ್ತು ಕಟ್ಟುನಿಟ್ಟಾದ ರಫ್ತು ನಿಯಂತ್ರಣ ವ್ಯವಸ್ಥೆಯ ಹೊರತಾಗಿಯೂ ಭಾರತೀಯ ಪಿ ಎಸ್ ಎಲ್ ವಿ ರಾಕೆಟ್‌ಗಾಗಿ ಅಮೆರಿಕಾ ಉಡಾವಣಾ ಮಾರುಕಟ್ಟೆಯನ್ನು ತೆರೆಯುವಲ್ಲಿ E2O ಪ್ರಮುಖ ಪಾತ್ರವನ್ನು ವಹಿಸಿದೆ. 2019 ರಲ್ಲಿ, ಸುಸ್ಮಿತಾ ಬಿಬಿಸಿಯ ಮಹಿಳಾ ನೇತೃತ್ವದ ಭವಿಷ್ಯವನ್ನು ಪ್ರೇರೇಪಿಸುವ ಮತ್ತು ಪ್ರಭಾವ ಬೀರುವ 100 ಮಹಿಳಾ ಪ್ರಶಸ್ತಿ ವಿಜೇತರಲ್ಲಿ ಒಬ್ಬರಾಗಿ ಆಯ್ಕೆಯಾದರು ಮತ್ತು. 2017 ರಲ್ಲಿ, ಅವರು ಫಾರ್ಚೂನ್ ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡರು. ಅವರು ವರ್ಲ್ಡ್ ಎಕನಾಮಿಕ್ ಫೋರಮ್ ಗ್ಲೋಬಲ್ ಫ್ಯೂಚರ್ ಕೌನ್ಸಿಲ್ ಫಾರ್ ಸ್ಪೇಸ್ ಟೆಕ್ನಾಲಜೀಸ್‌ನ ಸದಸ್ಯರಾಗಿದ್ದಾರೆ.
Earth2Orbit ಹೊಸ ಪೀಳಿಗೆಯನ್ನು ಕನಸು ಕಾಣಲು ಪ್ರೇರೇಪಿಸುವ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ ಭಾರತವನ್ನು ಮುನ್ನಡೆಸುತ್ತಿದೆ.
 
ಖುಷ್ಬೂ ಅವಸ್ತಿ, ಬೆಂಗಳೂರು
ಮಂತ್ರ ಸಮಾಜ ಸೇವೆಗಳು
Mantra4Change, ಖುಷ್ಬೂ ಅವಸ್ಥಿ ಅವರ ಸಹ-ಸ್ಥಾಪಕರಾಗಿರುವ, ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಉತ್ಕೃಷ್ಟವಾದ ಕಲಿಕೆಯ ಅನುಭವವನ್ನು ಸೃಷ್ಟಿಸಲು ಬದ್ಧವಾಗಿರುವ ಲಾಭರಹಿತ ಸಂಸ್ಥೆಯಾಗಿದೆ. ಪ್ರತಿ ಹಂತದಲ್ಲೂ ಸಹಯೋಗವಿಲ್ಲದೆ ಶಿಕ್ಷಣದಲ್ಲಿ ವ್ಯವಸ್ಥಿತ ರೂಪಾಂತರ ಅಸಾಧ್ಯ ಎಂದು ತಂಡವು ದೃಢವಾಗಿ ನಂಬುತ್ತದೆ. 2025 ರ ವೇಳೆಗೆ 1.5 ಲಕ್ಷ ಶಾಲೆಗಳಲ್ಲಿ ಸುಸ್ಥಿರ ಸುಧಾರಣೆಗಳನ್ನು ತರಲು ಶಿಕ್ಷಣದ ನಾಯಕರನ್ನು ಸಕ್ರಿಯಗೊಳಿಸುವುದು ಇವರ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ, ಅವರು ರಾಜ್ಯಗಳಾದ್ಯಂತ ಶಾಲಾ ಶಿಕ್ಷಣ ಇಲಾಖೆಯೊಂದಿಗೆ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಕಾರ್ಯಗತಗೊಳಿಸುತ್ತಾರೆ ಮತ್ತು ವ್ಯವಸ್ಥಿತ ಪರಿವರ್ತನೆಯ ಕಲ್ಪನೆಯನ್ನು ಹೆಚ್ಚಿಸುವ ಸಲುವಾಗಿ ಸಮಾನ ಮನಸ್ಕ ಎನ್‌ಜಿಒಗಳ ಪರಿಸರ ವ್ಯವಸ್ಥೆಯನ್ನು ಆಯೋಜಿಸಿದ್ದಾರೆ.
ಮಂತ್ರವು ಮಕ್ಕಳಿಗೆ ಉತ್ಕೃಷ್ಟವಾದ ಕಲಿಕೆಯ ಅನುಭವವನ್ನು ಸಕ್ರಿಯಗೊಳಿಸುತ್ತದೆ, ನಿರಂತರ ಶಾಲಾ ಸುಧಾರಣೆಗಳನ್ನು ಚಾಲನೆಗೊಳಿಸಲು ಶಿಕ್ಷಣದ ನಾಯಕರೊಂದಿಗೆ ಕೈ ಜೋಡಿಸುತ್ತದೆ.
 
ಅದಿತಿ ಅವಸ್ಥಿ, ಬೆಂಗಳೂರು
ಇಂಡಿಯಾವಿಜುವಲ್ ಲರ್ನಿಂಗ್ ಲಿಮಿಟೆಡ್. (ಎಂಬಿಬ್)
ಎಂಬಿಬ್ ಪ್ರಪಂಚದ ಮೊದಲ ಎಡ್ ಟೆಕ್ ಕಂಪನಿಯಾಗಿದ್ದು ಅದು ನಿಜವಾಗಿಯೂ ಕಲಿಕೆ ಮತ್ತು ಜೀವನದ ಫಲಿತಾಂಶಗಳನ್ನು ನೀಡುತ್ತಿದೆ. ಇದು ಬೋಧನೆಯಲ್ಲಿ ತಂತ್ರಜ್ಞಾನವನ್ನು ಇರಿಸಿದೆ - ಪ್ರತಿ ಮಗುವಿಗೆ ನಿಜವಾದ ವೈಯಕ್ತೀಕರಣವನ್ನು ಅನುಭವಿಸಲು ಸಹಾಯ ಮಾಡಲು ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ಶಿಕ್ಷಣ ಚೌಕಟ್ಟುಗಳನ್ನು ನಿಯಂತ್ರಿಸುತ್ತದೆ. ಕಳೆದ ಒಂಬತ್ತು ವರ್ಷಗಳಲ್ಲಿ, ಸಂಸ್ಥಾಪಕಿ ಅದಿತಿ ಅವಸ್ಥಿ ಅವರ ಮುಕ್ತ ಪ್ರವೇಶದ ಬದ್ಧತೆಯು ನಿಜವಾಗಿಯೂ ಏನು ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಎಂಬಿಬ್ ಗೆ ಅಭೂತಪೂರ್ವ ಡೇಟಾವನ್ನು ನೀಡಿದೆ. ವೇದಿಕೆಯು ಪ್ರತಿಯೊಬ್ಬ ಕಲಿಯುವವರಿಗೆ ಅವರ ಮಾತೃಭಾಷೆಯಲ್ಲಿ ವೈಯಕ್ತೀಕರಿಸಿದ ಸಾಧನೆಯ ಪ್ರಯಾಣವನ್ನು ಎಲ್ಲರಿಗೂ ಪ್ರವೇಶಿಸಬಹುದಾದ ಬೆಲೆಯಲ್ಲಿ ನೀಡುತ್ತದೆ. ಎಂಬಿಬ್ ತನ್ನ ಧ್ಯೇಯವಾಕ್ಯ "ಪ್ರತಿ ಮಗುವೂ ಸಾಧಿಸುತ್ತದೆ" ಎಂಬುದಕ್ಕೆ ಕೆಲಸ ಮಾಡುತ್ತಿದೆ. 
ಎಂಬಿಬ್ ಎನ್ನುವುದು ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಜೀವನದ ಫಲಿತಾಂಶಗಳನ್ನು ತಲುಪಿಸುವ ಆಂದೋಲನವಾಗಿದೆ. ಇದು ಶಿಕ್ಷಕರು ಅತ್ಯುತ್ತಮರಾಗಲು ಅವರನ್ನೂ ಸಹ ಸಬಲೀಕರಣಗೊಳಿಸುತ್ತದೆ.
 
ಮಾಲಿನಿ ಪರ್ಮಾರ್, ಬೆಂಗಳೂರು 
ರೆಕ್ಕೆ ಪರ್ಸನಲ್ ಕೇರ್ ಪ್ರೈ. ಲಿಮಿಟೆಡ್ (Stonesoup.in)
ಮಾಲಿನಿ ಪರ್ಮಾರ್ ಸಮುದಾಯಗಳ ಮೇಲೆ ತ್ಯಾಜ್ಯದ ಪ್ರಭಾವವನ್ನು ಕಡಿಮೆ ಮಾಡುವ ಉದ್ದೇಶದಿಂದ ಸ್ಟೋನ್‌ಸೂಪ್ ಗೆ ಸಹ-ಸ್ಥಾಪಕಿಯಾದರು. ಇದು ಲಾಭರಹಿತ ಕಂಪನಿಯಾಗಿ, ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಇದು ಸ್ಯಾನಿಟರಿ ತ್ಯಾಜ್ಯವನ್ನು ತೊಡೆದುಹಾಕಲು ಪ್ರಾರಂಭಿಸಿತು. ಸ್ವಚ್ಛ ಭಾರತವನ್ನು ಸಾಧಿಸಲು ಸರ್ಕಾರ, ಕಂಪನಿಗಳು ಮತ್ತು ಎನ್‌ಜಿಒಗಳು ಒಟ್ಟಾಗಿ ಕೆಲಸ ಮಾಡಬೇಕಾದ ಪರಿಸರ ವ್ಯವಸ್ಥೆಯ ವಿಧಾನವನ್ನು ತಂಡವು ನಂಬುತ್ತದೆ. ಅವರು ತ್ಯಾಜ್ಯದ ರಾಶಿಯಿಂದ 12 ಮಿಲಿಯನ್ ಪ್ಯಾಡ್‌ಗಳನ್ನು ಹೆಕ್ಕಿದ್ದಾರೆ ಮತ್ತು ಪ್ರತಿದಿನ 10 ಟನ್ ಹಸಿ ತ್ಯಾಜ್ಯವನ್ನು ಅವರ ಕಾಂಪೋಸ್ಟರ್‌ಗಳಲ್ಲಿ ಮಿಶ್ರಗೊಬ್ಬರ ಮಾಡಲಾಗುತ್ತದೆ.
ಶೂನ್ಯ ತ್ಯಾಜ್ಯ ನಗರಗಳನ್ನು ಸೃಷ್ಟಿಸಲು, ಶೂನ್ಯ ತ್ಯಾಜ್ಯ ಮನೆಗಳನ್ನು ಸಾಧಿಸಲು ಸ್ಟೋನ್‌ಸೂಪ್ ಜನರಿಗೆ ಸಹಾಯ ಮಾಡುತ್ತದೆ.
 
ಡಾ. ಸ್ವಪ್ನಾ ಪ್ರಿಯಾ ಕೆ, ಬೆಂಗಳೂರು
ಫಾರ್ಮ್ಸ್2ಫೋರ್ಕ್ ಟೆಕ್ನಾಲಜೀಸ್ ಪ್ರೈ.ಲಿ. ಲಿಮಿಟೆಡ್
ಡಾ ಸ್ವಪ್ನಾ ಪ್ರಿಯಾ ಕೆ ಅವರು ಅಗ್ರಿ ಟೆಕ್ ಕಂಪನಿ ಫಾರ್ಮ್ಸ್2ಫೋರ್ಕ್ ಟೆಕ್ನಾಲಜೀಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ ಮೇಲೆ ಕಡಿಮೆ ವೆಚ್ಚದ ನೀರಾವರಿ ಸಲಹಾ ಮಾದರಿಯನ್ನು ನಿರ್ಮಿಸುವ ಗುರಿಯನ್ನು ಇದು ಹೊಂದಿದೆ, ಮಣ್ಣಿನ ಕಡಿಮೆ ತೇವಾಂಶವನ್ನು ಪತ್ತೆಹಚ್ಚಲು ಮತ್ತು ಕಡಿಮೆ ವೆಚ್ಚದಲ್ಲಿ ರೈತರಿಗೆ ಎಚ್ಚರಿಕೆ ನೀಡಲು ನೆಲದ ಸಂವೇದಕಗಳು, ಉಪಗ್ರಹ ಮತ್ತು ಹವಾಮಾನ ಡೇಟಾವನ್ನು ಸಂಯೋಜಿಸುತ್ತದೆ.
ಭತ್ತ, ಕಬ್ಬು, ಹತ್ತಿ, ದ್ರಾಕ್ಷಿ, ದಾಳಿಂಬೆ ಮತ್ತು ಬಾಳೆ ರೈತರಿಗೆ ಕೃತಕ ಬುದ್ಧಿಮತ್ತೆ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಚಾಲಿತ ನೀರಾವರಿ ಪರಿಹಾರದೊಂದಿಗೆ ಶೇ.30 ರವರೆಗೆ ಲಾಭವನ್ನು ಹೆಚ್ಚಿಸಲು ಮತ್ತು ಶೇ.50 ರಷ್ಟು ನೀರನ್ನು ಉಳಿಸಲು ಸಹಾಯ ಮಾಡುವುದು ಇವರ ಉದ್ದೇಶವಾಗಿದೆ.
ಫಾರ್ಮ್ಸ್2ಫೋರ್ಕ್, ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್ ಬಳಸುತ್ತಿದೆ.
 
ರಾಜೋಶಿ ಘೋಷ್, ಬೆಂಗಳೂರು 
ಹಸುರಾ
ಹಸುರಾ ಎಂಬುದು ತೆರೆದ ಮೂಲ ಉತ್ಪನ್ನವಾಗಿದ್ದು, ತಕ್ಷಣವೇ ನಿಮ್ಮ ಡೇಟಾದಲ್ಲಿ ಅಂತರ್ನಿರ್ಮಿತ ದೃಢೀಕರಣದೊಂದಿಗೆ GraphQL ಅಥವಾ REST ಎಪಿಐಗಳನ್ನು ಒದಗಿಸುವ ಮೂಲಕ ಡೇಟಾ ಪ್ರವೇಶವನ್ನು ವೇಗಗೊಳಿಸುತ್ತದೆ. ರಾಜೋಶಿ ಅವರು ಹಸುರಾದ ಸಹ-ಸಂಸ್ಥಾಪಕರಾಗಿದ್ದಾರೆ, ಇದು ಭಾರತದಲ್ಲಿನ ಮೊದಲ ಓಪನ್ ಸೋರ್ಸ್ ಯುನಿಕಾರ್ನ್ ಸ್ಟಾರ್ಟ್‌ಅಪ್ ಆಗಿದೆ ಮತ್ತು ಅವರು ಭಾರತದಲ್ಲಿ ಯುನಿಕಾರ್ನ್ ಸ್ಟಾರ್ಟ್‌ಅಪ್‌ನ ಮೊದಲ ಮಹಿಳಾ ಸಂಸ್ಥಾಪಕಿಯಾಗಿದ್ದಾರೆ. ಹಸುರಾ ಈ ವಲಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಓಪನ್ ಸೋರ್ಸ್ ಪ್ರಾಜೆಕ್ಟ್ ಗಳಲ್ಲಿ ಒಂದಾಗಿದೆ ಮತ್ತು ಜಾಗತಿಕವಾಗಿ ಡೆವಲಪರ್‌ಗಳಿಂದ 450 ಮಿಲಿಯನ್ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಹಸುರಾ ಡೆವಲಪರ್‌ಗಳಿಗೆ ಡೇಟಾವನ್ನು ತ್ವರಿತವಾಗಿ ಪ್ರವೇಶಿಸಲು ಎಪಿಐ ಅನ್ನು ಸಕ್ರಿಯಗೊಳಿಸುತ್ತದೆ ಇದರಿಂದ ಅವರು ಮಿಷನ್ ಕ್ರಿಟಿಕಲ್ ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ನಿರ್ಮಿಸಬಹುದು.
ಡೇಟಾ ಪ್ರವೇಶವನ್ನು ವೇಗವಾಗಿ, ಸುರಕ್ಷಿತವಾಗಿ ಮಾಡುವುದು ಹಸುರಾ ಮಿಷನ್‌ ಆಗಿದೆ. ಆಲೋಚನೆಯ ವೇಗದಲ್ಲಿ ಅಪ್ಲಿಕೇಶನ್‌ಗಳನ್ನು ನಿರ್ಮಿಸಲು ಡೆವಲಪರ್‌ಗಳನ್ನು ಸಕ್ರಿಯಗೊಳಿಸುವ ಜಗತ್ತನ್ನು ಇದು ರೂಪಿಸುತ್ತದೆ.
ಸುಗಂಧಾ ಸುಕೃತರಾಜ್, ಬೆಂಗಳೂರು, 
AMBA
ಅಶೋಕ ವಿಶ್ವವಿದ್ಯಾಲಯದ ಫೆಲೋ, ಸುಗಂಧಾ ಸುಕೃತರಾಜ್ ಅವರು AMBA ಎಂಬ ಸಾಮಾಜಿಕ ಉದ್ಯಮವನ್ನು  . ಇದು ಮಧ್ಯಮ/ತೀವ್ರ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವಯಸ್ಕರ ಬಗ್ಗೆ ಮಾದರಿಗಳು/ಮನಸ್ಸುಗಳನ್ನು ಬದಲಾಯಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಅಪಾರ ಕ್ರಿಯಾತ್ಮಕ ಸಾಧ್ಯತೆಗಳನ್ನು ಕಂಡುಹಿಡಿಯುತ್ತದೆ. ಅವರು 475 ACPC ಗಳಲ್ಲಿ (AMBA ಪ್ರಮಾಣೀಕೃತ ಪಾಲುದಾರ ಕೇಂದ್ರಗಳು) ತರಬೇತಿ ಮತ್ತು ಉದ್ಯೋಗವನ್ನು ಸೃಷ್ಟಿಸಲು, ನಿರ್ವಹಿಸಲು ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದ್ದಾರೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಅವರಿಗೆ ಅರ್ಹವಾದ ಘನತೆ ಮತ್ತು ಸ್ವಾತಂತ್ರ್ಯವನ್ನು ನೀಡಿ, .ಈ ವ್ಯಕ್ತಿಗಳಿಗೆ ಕಲಿಕೆ ಮತ್ತು ಗಳಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ, 
AMBA ಭಾರತದಾದ್ಯಂತ ಮಧ್ಯಮ ಮತ್ತು ತೀವ್ರ ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವಯಸ್ಕ ಸಮುದಾಯವನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮೂಲಕ ಅವರ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ.

***


(Release ID: 1809004) Visitor Counter : 330


Read this release in: English , Hindi