ಅಣುಶಕ್ತಿ ಇಲಾಖೆ
ಪರಮಾಣು ಸ್ಥಾವರಗಳಲ್ಲಿಸೈಬರ್ ಭದ್ರತಾ ಉಲ್ಲಂಘನೆ
Posted On:
23 MAR 2022 3:44PM by PIB Bengaluru
ಭಾರತೀಯ ಪರಮಾಣು ಸ್ಥಾಪನೆಯು ಅದರ ಸ್ಥಾಪನೆಗಳಲ್ಲಿಬಳಸುವ ವ್ಯವಸ್ಥೆಗಳ ವಿನ್ಯಾಸ, ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ ಕಠಿಣ ಕಾರ್ಯವಿಧಾನವನ್ನು ನಿಗದಿಪಡಿಸಿದೆ.
ಸುರಕ್ಷ ತೆ ಮತ್ತು ಸುರಕ್ಷ ತಾ ನಿರ್ಣಾಯಕ ವ್ಯವಸ್ಥೆಗಳನ್ನು ಸಂಪ್ರದಾಯವಾಗಿ ನಿರ್ಮಿಸಲಾಗುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಳಸಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಭಿವೃದ್ಧಿಪಡಿಸಲಾಗಿದೆ. ಇವುಗಳನ್ನು ನಿಯಂತ್ರಕ ಪರಿಶೀಲನೆ ಮತ್ತು ಮೌಲ್ಯೀಕರಣಕ್ಕೆ ಒಳಪಡಿಸಲಾಗುತ್ತದೆ. ಇದರಿಂದಾಗಿ ಅವುಗಳನ್ನು ಸೈಬರ್ ಭದ್ರತಾ ಬೆದರಿಕೆಗಳಿಗೆ ನಿರೋಧಕವಾಗಿಸುತ್ತದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯ ನಿರ್ಣಾಯಕ ಮೂಲಸೌಕರ್ಯವನ್ನು ಇಂಟರ್ನೆಟ್‌ನಿಂದ ಪ್ರತ್ಯೇಕಿಸಲಾಗಿದೆ ಮತ್ತು ಅಂತಹ ವ್ಯವಸ್ಥೆಗಳಿಗೆ ಪ್ರವೇಶವನ್ನು ಅಧಿಕೃತ ಸಿಬ್ಬಂದಿಗೆ ನಿರ್ಬಂಧಿಸಲಾಗಿದೆ ಹಾಗೂ ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.
ಪರಮಾಣು ಶಕ್ತಿ ಇಲಾಖೆ (ಡಿಎಇ) ವಿಶೇಷ ಗುಂಪುಗಳನ್ನು ಹೊಂದಿದೆ. ಕಂಪ್ಯೂಟರ್ ಮತ್ತು ಮಾಹಿತಿ ಭದ್ರತಾ ಸಲಹಾ ಗುಂಪು (ಸಿಐಎಸ್‌ಎಜಿ) ಮತ್ತು ಉಪಕರಣಕ್ಕಾಗಿ ಕಾರ್ಯಪಡೆ ಮತ್ತು ನಿಯಮಿತ ಸೈಬರ್ ಭದ್ರತಾ ಆಡಿಟ್ ಸೇರಿದಂತೆ ಡಿಎಇಯ ಇತರ ಘಟಕಗಳ ನಡುವೆ ಎನ್‌ಪಿಸಿಐಎಲ್‌ನ ಸೈಬರ್ ಭದ್ರತೆ/ಮಾಹಿತಿ ಭದ್ರತೆಯನ್ನು ನೋಡಿಕೊಳ್ಳಲು ನಿಯಂತ್ರಣ ಭದ್ರತೆ (ಟಿಎಎಫ್‌ಐಸಿಎಸ್) ಇದೆ.
ಪರಮಾಣು ವಿದ್ಯುತ್ ಸ್ಥಾವರಗಳಲ್ಲಿಮಾಹಿತಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂಟರ್ನೆಟ್ ಮತ್ತು ಆಡಳಿತಾತ್ಮಕ ಇಂಟರ್ನೆಟ್ ಸಂಪರ್ಕವನ್ನು ಗಟ್ಟಿಗೊಳಿಸುವುದು, ತೆಗೆಯಬಹುದಾದ ಮಾಧ್ಯಮದ ಮೇಲಿನ ನಿರ್ಬಂಧ, ವೆಬ್‌ಸೈಟ್‌ಗಳು ಮತ್ತು ಐಪಿಗಳನ್ನು ನಿರ್ಬಂಧಿಸುವುದಾಗಿದೆ.ಡಿಎಇಯ ಸೌಲಭ್ಯಗಳು/ಸ್ಥಾವರಗಳಲ್ಲಿನ ಸೈಬರ್ ಭದ್ರತಾ ಮೂಲಸೌಕರ್ಯವು ಡಿಎಇ ಸಿಐಎಸ್‌ಎಜಿ ಮತ್ತು ಭಾರತದ ಕೇಂದ್ರೀಯ ಸೈಬರ್ ಭದ್ರತಾ ಏಜೆನ್ಸಿಗಳಾದ ಸಿಇಆರ್‌ಟಿ -ಐಎನ್ ಮೂಲಕ ವಿನ್ಯಾಸ ತತ್ವಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ.
ಸ್ಥಾವರ ಬದಿಯಲ್ಲಿ, ಎಲ್ಲಾ ಕಂಪ್ಯೂಟರ್-ಆಧಾರಿತ ವ್ಯವಸ್ಥೆಗಳು ಪರಮಾಣು ಶಕ್ತಿ ನಿಯಂತ್ರಣ ಮಂಡಳಿ ಮತ್ತು ಟಿಎಎಫ್‌ಐಸಿಎಸ್‌ನಿಂದ ರೂಪಿಸಲಾದ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಆಧರಿಸಿವೆ. ಇವುಗಳನ್ನು ಅಂತಿಮವಾಗಿ ಇಂಟರ್‌ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ (ಐಎಇಎ) ಸ್ಥಾಪಿಸಿದ ಮಾನದಂಡಗಳ ಆಧಾರದ ಮೇಲೆ ಹೆಚ್ಚಿನ ಭಾಗದಲ್ಲಿಪಡೆಯಲಾಗಿದೆ.
ಲೋಕಸಭೆಯಲ್ಲಿಂದು ಲಿಖಿತ ಉತ್ತರದಲ್ಲಿಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಮತ್ತು ಪ್ರಧಾನ ಮಂತ್ರಿಗಳ ಕಚೇರಿಯ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.
***
(Release ID: 1808915)