ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಆದಿವಾಸಿಗಳ ಕರಕುಶಲ ಕಲೆ, ಸಂಸ್ಕೃತಿ, ಆಹಾರ ಮತ್ತು ವಾಣಿಜ್ಯದ ಉತ್ಸಾಹ ಆಚರಣೆಯ ಆದಿ ಬಜಾರ್ ಭೋಪಾಲ್ ನ ಭೋಪಾಲ್ ಹಾತ್ ನಲ್ಲಿ ಉದ್ಘಾಟನೆ
Posted On:
22 MAR 2022 6:45PM by PIB Bengaluru
ಆಜಾದಿ ಕಾ ಅಮೃತ ಮಹೋತ್ಸವದ ವರ್ಷವಿಡೀ ಆಚರಣೆಯನ್ನು ಮುಂದುವರಿಸುವುದು ಮತ್ತು ಕೋವಿಡ್ -19 ಸಾಂಕ್ರಾಮಿಕದ ಮೂರನೇ ಅಲೆ ತಗ್ಗಿರುವುದರ ಪ್ರಯೋಜನ ಪಡೆಯುವುದು ಮತ್ತು ಪರಿಸ್ಥಿತಿಗೆ ಸಹಜ ಸ್ಥಿತಿಗೆ ಮರಳಿಸಲು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಆದಿವಾಸಿ ಸಹಕಾರ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟ ಲಿಮಿಟೆಡ್ (ಟ್ರೈಫೆಡ್ ) ‘ಆದಿ ಬಜಾರ್’ ರೂಪದಲ್ಲಿ ಬುಡಕಟ್ಟು ಕಲೆ ಮತ್ತು ಕರಕುಶಲ ಪ್ರದರ್ಶನವನ್ನು ಪುನರುಜ್ಜೀವನಗೊಳಿಸುತ್ತಿದೆ.
ಸಾವಯವ ಬುಡಕಟ್ಟು ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಒಳಗೊಂಡ ಅದ್ಬುತ ಪ್ರದರ್ಶನ ಆದಿ ಬಜಾರ್ ಅನ್ನು 2022ರ ಮಾರ್ಚ್ 21 ರಂದು ಟ್ರೈಫೆಡ್ ಅಧ್ಯಕ್ಷ ಶ್ರೀ ರಾಮ್‌ಸಿಂಹ ರಥ್ವಾ ಅವರು ಟ್ರಫೆಡ್ ಉಪಾಧ್ಯಕ್ಷ ಶ್ರೀ ಪವಿತ್ರ ಕುಮಾರ್ ಕನ್ಹರ್ ಮತ್ತು ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರ್.ಜಯಾ ಮತ್ತು ಟ್ರೈಫೆಡ್ ನ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವರ್ಚುವಲ್ ರೂಪದಲ್ಲಿ ಉದ್ಘಾಟಿಸಿದರು. 2022ರ ಮಾರ್ಚ್ 21 ರಿಂದ ಮಾರ್ಚ್ 30ರವರೆಗೆ ಭೋಪಾಲ್‌ನ ಭೋಪಾಲ್ ಹಾತ್‌ನಲ್ಲಿ ನಡೆಯಲಿರುವ ಈ 10 ದಿನಗಳ ಪ್ರದರ್ಶನವು ದೇಶಾದ್ಯಂತ 15 ರಾಜ್ಯಗಳ ಪ್ರತಿನಿಧಿಸುವ 70 ಕ್ಕೂ ಅಧಿಕ ಮಳಿಗೆಗಳನ್ನು ಒಳಗೊಂಡಿದೆ.
ಈ ಆದಿ ಬಜಾರ್‌ಗಳು, ಕಳೆದ ಎರಡು ವರ್ಷಗಳಲ್ಲಿ ಪ್ರಮುಖವಾಗಿ ಹಿಂದುಳಿದ ಬುಡಕಟ್ಟು ಜನಾಂಗದವರ ಜೀವನೋಪಾಯ ಸುಧಾರಿಸಲು ಟ್ರೈಫೆಡ್ ನ ತೀವ್ರವಾದ ಪ್ರಯತ್ನಗಳ ಪರಿಣಾಮವಾಗಿ ಆಗಿರುವ ಸುಧಾರಣೆಗಳ ಒಂದು ಭಾಗ ಈ ಆದಿ ಬಜಾರ್ ಗಳಾಗಿವೆ. “ಭಾರತದ ಆದಿವಾಸಿಗಳ ಜೀವನೋಪಾಯ ವೃದ್ಧಿಗೆ ಟ್ರೈಫೆಡ್ ಈ ಉಪಕ್ರಮವನ್ನು ಕೈಗೊಂಡಿರುವುದಕ್ಕೆ ನನಗೆ ಸಂತಸವಾಗಿದೆ. ಇಂತಹ ಬಜಾರ್‌ಗಳು ಬುಡಕಟ್ಟು ಸಂಸ್ಕೃತಿಯನ್ನು ದೇಶದಾದ್ಯಂತ ಹೆಚ್ಚಿನ ಜನರಿಗೆ ತಲುಪಿಸಲು ಸಹಾಯ ಮಾಡುತ್ತದೆ’’ ಎಂದು ಟ್ರೈಫೆಡ್ ಅಧ್ಯಕ್ಷ ಶ್ರೀ ರಾಮಸಿಂಹ ರಥ್ವಾ ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಿದ ನಂತರ ಸಮಾರಂಭದಲ್ಲಿ ಹೇಳಿದರು.
ಮುಂಬರುವ ದಿನಗಳಲ್ಲಿ ಏಕತಾ ನಗರ, ಏಕತಾ ಪ್ರತಿಮೆ, ಗುಜರಾತ್, ಬೀಚ್ ರೋಡ್, ಪುದುಚೇರಿ ಮತ್ತು ಒಡಿಶಾದ ರೂರ್ಕೆಲಾದಲ್ಲಿ ಇದೇ ರೀತಿಯ ಆದಿ ಬಜಾರ್‌ಗಳನ್ನು ಆಯೋಜಿಸಲು ಯೋಜಿಸಲಾಗಿದೆ. "ಇಂತಹ ಪ್ರದರ್ಶನಗಳು ದೇಶದ ಸಾಂಪ್ರದಾಯಿಕ ಕಲೆ ಮತ್ತು ಕರಕುಶಲ ಮತ್ತು ಸಾಂಸ್ಕೃತಿಕ ಪರಂಪರೆ ಹಾಗೂ ಭಾರತದ ಆದಿವಾಸಿಗಳು ವೈವಿಧ್ಯತೆ ಮತ್ತು ಶ್ರೀಮಂತಿಕೆಗೆ ಒತ್ತು ನೀಡುವುದನ್ನು ಮತ್ತು ಅದನ್ನು ಬಿಂಬಿಸಲು ಸಹಾಯ ಮಾಡುತ್ತದೆ. ಇದನ್ನು ನೋಡಲು ನನಗೆ ಸಂತೋಷವಾಗುತ್ತಿದೆ’’ ಎಂದು ಉದ್ಘಾಟನಾ ಸಮಾರಂಭದ ನಂತರ ಮಾತನಾಡಿದ ಶ್ರೀ ಪವಿತ್ರ ಕುಮಾರ್ ಕನ್ಹರ್ ಹೇಳಿದರು.
ಬುಡಕಟ್ಟು ಕುಶಲಕರ್ಮಿಗಳ ಜೀವನಮಟ್ಟ ಸುಧಾರಿಸಲು ಟ್ರೈಫೆಡ್ ನ ಪ್ರಯತ್ನಗಳ ಕುರಿತಂತೆ ಮಾತನಾಡಿದ ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕಿ ಶ್ರೀಮತಿ ಆರ್ ಜಯಾ “ಆದಿ ಬಜಾರ್‌ಗಳಂತಹ ಪ್ರದರ್ಶನಗಳು ಬುಡಕಟ್ಟು ಜನಸಂಖ್ಯೆಯ ಸಾಮಾಜಿಕ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಪ್ರದರ್ಶನಗಳು ಬುಡಕಟ್ಟು ಕುಶಲಕರ್ಮಿಗಳನ್ನು ಬೃಹತ್ ಹಾಗೂ ಹಿಂದೆಂದೂ ಕಾಣದಂತಹ ಮಾರುಕಟ್ಟೆಗಳ ಜೊತೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ’’ ಎಂದರು.
ಬುಡಕಟ್ಟು ಜೀವನದ ಮೂಲ ತತ್ವಗಳನ್ನು ಪ್ರತಿನಿಧಿಸುವ, 10 ದಿನಗಳ ಉತ್ಸವವು ದೇಶದ 15 ರಾಜ್ಯಗಳ ಬುಡಕಟ್ಟು ಕರಕುಶಲ ವಸ್ತುಗಳು, ಕಲೆ, ವರ್ಣಚಿತ್ರಗಳು, ಬಟ್ಟೆ, ಆಭರಣಗಳ ಪ್ರದರ್ಶನ ಮತ್ತು ಮಾರಾಟ ಒಳಗೊಂಡಿದೆ.
ಆದಿ ಬಜಾರ್‌ಗಳಿಗೆ ಭೇಟಿ ನೀಡುವವರು ಭಾರತದ ಆದಿವಾಸಿ ಕುಶಲಕರ್ಮಿಗಳು ಮತ್ತು ಬುಡಕಟ್ಟು ಕುಶಲಕರ್ಮಿಗಳು ನೀಡುವ ಅತ್ಯುತ್ತಮ ಮಾದರಿಗಳನ್ನು ಮಾಡಬಹುದು - ಮಧ್ಯಪ್ರದೇಶದ ಪ್ರಸಿದ್ಧ ಮಾಹೇಶ್ವರಿ ಸೀರೆಗಳಿಂದ ಲಡಾಕ್ ಮತ್ತು ಹಿಮಾಚಲ ಪ್ರದೇಶದ ಬೆಚ್ಚಗಿನ ಉಣ್ಣೆಯ ಬಟ್ಟೆಗಳ ತನಕ, ರೋಗನಿರೋಧಕ ಶಕ್ತಿ ವೃದ್ಧಿಸುವ ನಾನಾ ಗಿಡಮೂಲಿಕೆಗಳು ಮತ್ತು ತಮಿಳುನಾಡಿನ ಆದಿವಾಸಿಗಳಿಂದ ಮಸಾಲೆ ಪದಾರ್ಥಗಳನ್ನು, ಈಶಾನ್ಯ ಭಾರತದಿಂದ ವಿಶೇಷ ಜೇನುತುಪ್ಪ ಮತ್ತು ಸಾವಯವ ಉತ್ಪನ್ನಗಲೂ; ಹೆಸರಾಂತ ತೋಡಾ ಕಸೂತಿಯಿಂದ ಅಸ್ಸಾಂನ ಮೊಗಾ ರೇಷ್ಮೆ ಮತ್ತು ನಾಗಾಲ್ಯಾಂಡ್‌ನ ಕಪ್ಪು ಮಡಿಕೆಗಳವರೆಗೆ ನಾನಾ ಬಗೆಯ ಉತ್ಪನ್ನಗಳನ್ನು ವೀಕ್ಷಿಸಬಹುದು ಮತ್ತು ಖರೀದಿಸಬಹುದು.
ಬುಡಕಟ್ಟು ಸಬಲೀಕರಣದ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನೋಡಲ್ ಏಜೆನ್ಸಿಯಾಗಿರುವ ಟ್ರೈಫೆಡ್, ಬುಡಕಟ್ಟು ಜನರ ಜೀವನ ಮತ್ತು ಸಂಪ್ರದಾಯವನ್ನು ಸಂರಕ್ಷಿಸುವ ಜೊತೆಗೆ ಅವರ ಆದಾಯ ಮತ್ತು ಜೀವನೋಪಾಯ ಸುಧಾರಿಸಲು ಸಹಾಯ ಮಾಡುವ ಹಲವಾರು ಉಪಕ್ರಮಗಳನ್ನು ಜಾರಿಗೆ ತರುತ್ತಿದೆ. ಆದಿ ಬಜಾರ್ ಅಂತಹ ಒಂದು ಉಪಕ್ರಮವಾಗಿದ್ದು, ಈ ಸಮುದಾಯಗಳ ಆರ್ಥಿಕ ಕಲ್ಯಾಣ ಉತ್ತಮಗೊಳಿಸಲು ಮತ್ತು ಮುಖ್ಯವಾಹಿನಿಯ ಅಭಿವೃದ್ಧಿ ಸನಿಹಕ್ಕೆ ಅವರನ್ನು ಕರೆತರಲು ಇದು ಸಹಾಯಕವಾಗುತ್ತದೆ.
***
(Release ID: 1808734)
Visitor Counter : 507