ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಿ.ಪಿ.ಐ. ದತ್ತಾಂಶದ ಪ್ರಕಾರ,  ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಹೆಚ್ಚು ಕಡಿಮೆ ಸ್ಥಿರವಾಗಿದೆ: ಕೇಂದ್ರ ಸರ್ಕಾರ


ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅಗತ್ಯ ಆಹಾರ ಪದಾರ್ಥಗಳ ದರವನ್ನು ಸ್ಥಿರಗೊಳಿಸಲು ಕೇಂದ್ರವು ಕಾಲಕಾಲಕ್ಕೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ

Posted On: 16 MAR 2022 6:52PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ, ಸಿಎಫ್.ಪಿ.ಐ. ಶೇ.7.25ರಷ್ಟು ವೈಟೇಜ್ ಅನ್ನು ಸಿ.ಪಿ.ಐ.ನಲ್ಲಿ ಪಡೆಯುದರಿಂದ, ಗ್ರಾಹಕ ದರ ಸೂಚ್ಯಂಕದಲ್ಲಿ (ಸಿ.ಪಿ.ಐ.) ವರ್ಷದಿಂದ ವರ್ಷದ ಬದಲಾವಣೆಗಳಿಂದ ಅಳೆಯಲಾಗುವ ಚಿಲ್ಲರೆ ಹಣದುಬ್ಬರ ಮತ್ತು ಗ್ರಾಹಕ ಆಹಾರ ಬೆಲೆ ಸೂಚ್ಯಂಕದಲ್ಲಿ (ಸಿ.ಎಫ್.ಪಿ.ಐ.) ವರ್ಷದಿಂದ ವರ್ಷಕ್ಕೆ ಉಂಟಾಗುವ ವ್ಯತ್ಯಾಸಗಳಿಂದ ಅಳೆಯಲಾಗುವ ಆಹಾರ ಬೆಲೆ ಹಣದುಬ್ಬರದ ನಡುವೆ ಬಲವಾದ ಸಂಬಂಧವಿದೆ ಎಂದು ಮಾಹಿತಿ ನೀಡಿದ್ದಾರೆ.   ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಸಿ.ಪಿ.ಐ. ದತ್ತಾಂಶದ ಪ್ರಕಾರ,  ಕಳೆದ ಒಂದು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವು ಹೆಚ್ಚು ಕಡಿಮೆ ಸ್ಥಿರವಾಗಿದೆ.

ದೇಶಾದ್ಯಂತ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶ ಆಡಳಿತಗಳು ಕೇಂದ್ರ ನೆರವಿನೊಂದಿಗೆ ಸ್ಥಾಪಿಸಿರುವ 179 ಬೆಲೆ ನಿಗಾ ಕೇಂದ್ರಗಳು ಸಲ್ಲಿಸುವ 22 ಅಗತ್ಯ ಆಹಾರ ಪದಾರ್ಥಗಳ  ದೈನಂದಿನ ಚಿಲ್ಲರೆ ಮತ್ತು ಸಗಟು ಬೆಲೆಗಳನ್ನು ಗ್ರಾಹಕ ವ್ಯವಹಾರಗಳ ಇಲಾಖೆ ಮೇಲ್ವಿಚಾರಣೆ ಮಾಡುತ್ತದೆ.
ಬೆಲೆ ಪ್ರವೃತ್ತಿಗಳನ್ನು ಗಣನೆಗೆ ತೆಗೆದುಕೊಂಡು, ದೇಶೀಯ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಅಗತ್ಯ ಆಹಾರ ಸರಕುಗಳ ಬೆಲೆಗಳನ್ನು ಸ್ಥಿರಗೊಳಿಸಲು ಸರ್ಕಾರವು ಕಾಲಕಾಲಕ್ಕೆ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ಕ್ರಮಗಳು, ಬೆಲೆ ಹೆಚ್ಚಾಗದಂತೆ ಮಾಡಲು ಕಾಪು ದಾಸ್ತಾನಿನಿಂದ ಬಿಡುಗಡೆ, ದಾಸ್ತಾನು ಮಿತಿ ಹೇರುವುದು, ಅನಗತ್ಯ ಸಂಗ್ರಹಣೆಗೆ ತಡೆಯಲು  ಘಟಕಗಳು ಘೋಷಿಸಿದ ದಾಸ್ತಾನುಗಳ ಮೇಲ್ವಿಚಾರಣೆ ಮತ್ತು ಆಮದು ಸುಂಕ ತರ್ಕಬದ್ಧಗೊಳಿಸುವಿಕೆ, ಆಮದು ಕೋಟಾದಲ್ಲಿನ ಬದಲಾವಣೆಗಳು, ಸರಕುಗಳ ರಫ್ತಿನ ಮೇಲಿನ ನಿರ್ಬಂಧಗಳು ಇತ್ಯಾದಿ ವ್ಯಾಪಾರ ನೀತಿ ಸಾಧನಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವುದೂ ಒಳಗೊಂಡಿವೆ.
ಅಗತ್ಯ ಆಹಾರ ಸರಕುಗಳ ಬೆಲೆಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಗತ್ಯ ಸರಕುಗಳ ಕಾಯ್ದೆ, 1955ರ ಅಡಿಯಲ್ಲಿ ಗಿರಣಿ ಮಾಲಿಕರುಗಳು, ಆಮದುದಾರರು ಮತ್ತು ವ್ಯಾಪಾರಿಗಳು ಹೊಂದಿರುವ ಬೇಳೆಕಾಳುಗಳ ದಾಸ್ತಾನುಗಳನ್ನು ಬಹಿರಂಗಪಡಿಸಿರುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ  2021 ಮೇ ನಲ್ಲಿ ಸಲಹೆಗಳನ್ನು ನೀಡಲಾಯಿತು.  ಹೆಸರುಬೇಳೆ ಹೊರತುಪಡಿಸಿ ಎಲ್ಲಾ ಬೇಳೆಕಾಳುಗಳ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಲು 2.7.21ರಂದು ಅಧಿಸೂಚನೆ ಹೊರಡಿಸಲಾಯಿತು. ತದನಂತರ, 31.10.2021ರ ವರೆಗಿನ ಅವಧಿಗೆ ತೊಗರಿ, ಉದ್ದಿನಬೇಳೆ, ಮಸೂರ್, ಕಡೆಲೆಕಾಳು ಎಂಬ ನಾಲ್ಕು ಬೇಳೆ ಕಾಳುಗಳ ಮೇಲೆ ದಾಸ್ತಾನು ಮಿತಿಗಳನ್ನು ಹೇರಿ 19.7.21 ರಂದು ತಿದ್ದುಪಡಿ ಮಾಡಿದ ಆದೇಶವನ್ನು ಹೊರಡಿಸಲಾಯಿತು.
ಬೇಳೆಕಾಳುಗಳ ಲಭ್ಯತೆಯನ್ನು ಸುಧಾರಿಸಲು ಮತ್ತು ಬೆಲೆಗಳನ್ನು ಸ್ಥಿರಗೊಳಿಸಲು, ಸರ್ಕಾರವು ತೊಗರಿ, ಉದ್ದು ಮತ್ತು ಹೆಸರು ಬೇಳೆಯನ್ನು 'ಮುಕ್ತ ಪ್ರವರ್ಗ'ದ ಅಡಿಯಲ್ಲಿ 15.5.2021ರಿಂದ ಜಾರಿಗೆ ಬರುವಂತೆ 31.10.2021ರವರೆಗೆ  ಆಮದು ಮಾಡಿಕೊಳ್ಳಲು ಅನುಮತಿ ನೀಡಿತು.  ಆ ನಂತರ ತೊಗರಿ ಮತ್ತು ಉದ್ದಿಗೆ ಸಂಬಂಧಿಸಿದಂತೆ ಮುಕ್ತ ಆಡಳಿತವನ್ನು 31.3.2022 ರವರೆಗೆ ವಿಸ್ತರಿಸಲಾಯಿತು. ಸುಗಮ ಮತ್ತು ತಡೆರಹಿತ ಆಮದುಗಳನ್ನು ಖಚಿತಪಡಿಸಿಕೊಳ್ಳಲು ಈ ನೀತಿ ಕ್ರಮವನ್ನು ಸಂಬಂಧಿತ ಇಲಾಖೆಗಳು/ಸಂಸ್ಥೆಗಳು ಸೌಲಭ್ಯ ಕ್ರಮಗಳು ಮತ್ತು ಅದರ ಅನುಷ್ಠಾನದ ನಿಕಟ ಮೇಲ್ವಿಚಾರಣೆಯೊಂದಿಗೆ ಬೆಂಬಲಿಸಿದವು. ಆಮದು ನೀತಿ ಕ್ರಮಗಳು ಕಳೆದ ಎರಡು ವರ್ಷಗಳಿಂದ ಇದೇ ಅವಧಿಗೆ ಹೋಲಿಸಿದರೆ ತೊಗರಿ, ಉದ್ದು ಮತ್ತು ಹೆಸರಿನ ಆಮದು ಗಣನೀಯ ಹೆಚ್ಚಳವಾಗಲು ಕಾರಣಗಳಾಗಿವೆ. ದೇಶೀಯ ಗ್ರಾಹಕರ ಮೇಲೆ ಹೆಚ್ಚಿನ ಅಂತಾರಾಷ್ಟ್ರೀಯ ಬೆಲೆಗಳ ಪರಿಣಾಮ ಬೀರದಂತೆ ತಡೆಯುವ ಸಲುವಾಗಿ, ಸರ್ಕಾರವು 2022ರ ಸೆಪ್ಟೆಂಬರ್ 30ರವರೆಗೆ ಮಸೂರ್  ಮೇಲಿನ ಸುಂಕವನ್ನು ಶೂನ್ಯಕ್ಕೆ ಇಳಿಸಿತು  ಮತ್ತು 2022ರ ಜೂನ್ 30 ರವರೆಗೆ ಮೂಲ ದೇಶದಲ್ಲಿ ಮೀಥೈಲ್ ಬ್ರೋಮೈಡ್ ನಿಂದ ಫ್ಯೂಮಿಗೇಟ್ ಮಾಡದ ಕಾರಣ ಮೀಥೈಲ್ ಬ್ರೋಮೈಡ್ ನಿಂದ ಬೇಳೆಕಾಳುಗಳ ಆಮದು ಸರಕುಗಳ ಮೇಲಿನ ದಂಡವನ್ನು ಮನ್ನಾ  ಮಾಡಿತು.  ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ಲಭ್ಯತೆಯನ್ನು ಹೆಚ್ಚಿಸಲು,  ಮುಕ್ತ ಮಾರುಕಟ್ಟೆ ಮಾರಾಟದ ಮೂಲಕ ಜೂನ್ ಮತ್ತು ಆಗಸ್ಟ್ 2021 ರ ನಡುವೆ 3 ಲಕ್ಷ ಮೆಟ್ರಿಕ್ ಟನ್ ಕಡಲೆಕಾಳು ದಾಸ್ತಾನನ್ನು ಬಿಡುಗಡೆ ಮಾಡಲಾಗಿದೆ  ಮತ್ತು ಬೆಲೆಗಳನ್ನು ಸ್ಥಿರಗೊಳಿಸಲು, ಕಡಲೆಕಾಳಿನಲ್ಲಿ ಭವಿಷ್ಯದ ವ್ಯಾಪಾರವನ್ನು ಆಗಸ್ಟ್ 16, 2021 ರಿಂದ ಸ್ಥಗಿತಗೊಳಿಸಲಾಗಿದೆ. ರಾಜ್ಯ ಸರ್ಕಾರಗಳಿಗೆ ಅವುಗಳ ಪೌಷ್ಟಿಕತೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಚಾಲ್ತಿಯಲ್ಲಿರುವ ಆಧಾರದ ಮೇಲೆ ಕಾಫು ದಾಸ್ತಾನಿನಿಂದ ಬೇಳೆಕಾಳುಗಳನ್ನು ಪೂರೈಸಲಾಗಿದೆ.
ಈರುಳ್ಳಿಯ ಚಿಲ್ಲರೆ ಬೆಲೆಗಳನ್ನು ಸ್ಥಿರಗೊಳಿಸುವ ಸಲುವಾಗಿ, 2021-22 ರಲ್ಲಿ 2.08 ಎಲ್.ಎಂಟಿ ಕಾಪು ದಾಸ್ತಾನನ್ನು ರೂಪಿಸಲಾಗಿತ್ತು. ಹಿಂದಿನ ತಿಂಗಳುಗಳಲ್ಲಿ ದರಗಳು ಹೆಚ್ಚುತ್ತಿರುವ ರಾಜ್ಯಗಳು/ನಗರಗಳನ್ನು ಗುರಿಯಾಗಿಸಿಕಂಡು, ಕಾಪು ದಾಸ್ತಾನಿನಿಂದ ಈರುಳ್ಳಿಯ ಮುಕ್ತ ಮಾರುಕಟ್ಟೆ ಬಿಡುಗಡೆ ಮಾಡಿತು. ಈ ಪ್ರಮುಖ ಮಂಡಿಗಳಲ್ಲಿ ಲಭ್ಯತೆಯನ್ನು ಹೆಚ್ಚಿಸಲು ಮತ್ತು ಆ ಮೂಲಕ ಚಿಲ್ಲರೆ ಮಾರಾಟ ಬೆಲೆಗಳನ್ನು ತಗ್ಗಿಸಲು ಮೂಲ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಲಾಯಿತು. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಹಿಂದಿನ ದಾಸ್ತಾನು ತಾಣಗಳಿಂದ
ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 21ರೂ.ನಂತೆ ನೀಡುವುದಾಗಿ ತಿಳಿಸಿತು.
ಖಾದ್ಯ ತೈಲಗಳ ದೇಶೀಯ ಲಭ್ಯತೆಯನ್ನು ಉತ್ತಮ ಪಡಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು, ಸರ್ಕಾರವು ಪರಿಣಾಮಕಾರಿಯಾಗಿ ಸುಂಕಗಳನ್ನು ತಗ್ಗಿಸುವ ಮೂಲಕ ಖಾದ್ಯ ತೈಲಗಳ ಮೇಲಿನ ಸುಂಕ ಸ್ವರೂಪವನ್ನು ತರ್ಕಬದ್ಧಗೊಳಿಸಿತು. ದಿನಾಂಕ 14.10.2021ರ ಅಧಿಸೂಚನೆಯ ರೀತ್ಯ, ಕಚ್ಚಾ ತಾಳೆ ಎಣ್ಣೆಯ ಮೇಲಿನ ಒಟ್ಟು ಸುಂಕವನ್ನು ಶೇ.22.5 ರಿಂದ ಶೇ.7.5ಕ್ಕೆ  ಇಳಿಸಲಾಗಿದೆ, ಮತ್ತು ಕಚ್ಚಾ ಸೋಯಾಬೀನ್ ತೈಲ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ, ಸುಂಕವನ್ನು ಶೇ.22.5ರಿಂದ ಶೇ.5ಕ್ಕೆ  ಇಳಿಸಲಾಗಿದೆ. ಆರ್.ಬಿಡಿ ಪಾಮೋಲಿನ್, ಶುದ್ಧೀಕರಿಸಿದ ಸೋಯಾಬೀನ್ ಎಣ್ಣೆ ಮತ್ತು ಶುದ್ಧೀಕರಿಸಿದ ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಸುಂಕವನ್ನು ಶೇ.32.5 ರಿಂದ ಶೇ.17.5ಕ್ಕೆ  ಇಳಿಸಲಾಗಿದೆ.   ತದನಂತರ, ಶುದ್ಧೀಕರಿಸಿದ ತಾಳೆ ಎಣ್ಣೆಯ ಮೇಲಿನ ಮೂಲ ಸುಂಕವನ್ನು 21.12.2021ರಿಂದ ಅನ್ವಯವಾಗುವಂತೆ ಶೇ.17.5 ರಿಂದ ಶೇ.12.5ಕ್ಕೆ  ಇಳಿಸಲಾಗಿದೆ, ಮತ್ತು ಕಚ್ಚಾ ತಾಳೆ ಎಣ್ಣೆಯ ಮೇಲಿನ ಸುಂಕವನ್ನು ಶೇ.7.5  ರಿಂದ ಶೇ.5ಕ್ಕೆ ಇಳಿಸಲಾಗಿದೆ. ಊಹಾತ್ಮಕ ವ್ಯಾಪಾರವನ್ನು ತಡೆಯಲು ಆಹಾರ ಭದ್ರತೆಗೆ ಸಂಬಂಧಿಸಿದ ಅಗತ್ಯ ವಸ್ತುಗಳ ಭವಿಷ್ಯದ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ. ಖಾದ್ಯ ತೈಲಗಳು ಮತ್ತು ಎಣ್ಣೆಕಾಳುಗಳ ಮೇಲಿನ ದಾಸ್ತಾನು ಮಿತಿಗಳನ್ನು 31.3.2022 ರ ವರೆಗಿನ ಅವಧಿಗೆ ವಿಧಿಸಲಾಗಿದೆ.
ಇದರ ಜೊತೆಗೆ, ಕೇಂದ್ರ ನೆರವಿನೊಂದಿಗೆ ರಾಜ್ಯ ಮಟ್ಟದ ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಕಾಪು ಸ್ಥಾಪಿಸಲು ಸರ್ಕಾರ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ ಮತ್ತು ಅಗತ್ಯ ಆಹಾರ ಪದಾರ್ಥಗಳ ಚಿಲ್ಲರೆ ಮಾರಾಟ ಬೆಲೆಗಳು ಹೆಚ್ಚದಂತೆ ನೋಡಿಕೊಳ್ಳಲು ಸೂಕ್ತ ಮಧ್ಯಸ್ಥಿಕೆ ಮಾಡುವಂತೆ ಈಗಾಗಲೇ ನಿಧಿಯನ್ನು ಸ್ಥಾಪಿಸಿರುವ ರಾಜ್ಯಗಳಿಗೆ ಮನವಿ ಮಾಡಲಾಗಿದೆ.

 
                                                               *****

 



(Release ID: 1806776) Visitor Counter : 224


Read this release in: English , Urdu , Hindi , Punjabi