ಹಣಕಾಸು ಸಚಿವಾಲಯ
azadi ka amrit mahotsav

ಕೇಂದ್ರ ಬಜೆಟ್ 2022ರ ಘೋಷಣೆಗಳ ಅನುಷ್ಠಾನಕ್ಕೆ ವೇಗ ನೀಡಲು ಹಣಕಾಸು ಸಚಿವಾಲಯವು 'ಪ್ರಗತಿ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗೆ ಹಣಕಾಸು' ಕುರಿತು ಬಜೆಟ್ ನಂತರದ ವೆಬಿನಾರ್ ಆಯೋಜಿಸಲಿದೆ


ಮಾರ್ಚ್ 8, 2022ರಂದು ಮಂಗಳವಾರ ಆರಂಭಿಕ ಸರ್ವಸದಸ್ಯರ ಅಧಿವೇಶನ ಉದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಲಿದ್ದಾರೆ.

16 ಸಚಿವಾಲಯಗಳು, ನೀತಿ ಆಯೋಗ, ಸಾಮರ್ಥ್ಯ ವರ್ಧನೆ ಆಯೋಗ, ರಾಜ್ಯ ಸರ್ಕಾರಗಳು, ನಿಯಂತ್ರಕರು, ಉದ್ಯಮ ಸಂಸ್ಥೆಗಳು ಮತ್ತು ಹೂಡಿಕೆದಾರರು 5 ಪ್ರತ್ಯೇಕ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ

Posted On: 06 MAR 2022 4:37PM by PIB Bengaluru

ಬಜೆಟ್ ಘೋಷಣೆಗಳ ದಕ್ಷ ಮತ್ತು ತ್ವರಿತ ಅನುಷ್ಠಾನಕ್ಕೆ ಅನುಕೂಲವಾಗುವಂತೆ, ಭಾರತ ಸರ್ಕಾರವು ವಿವಿಧ ಪ್ರಮುಖ ವಲಯಗಳಲ್ಲಿ ಸರಣಿ ವೆಬಿನಾರ್‌ಗಳನ್ನು ನಡೆಸುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳು, ಶೈಕ್ಷಣಿಕ ಮತ್ತು ಉದ್ಯಮದ ತಜ್ಞರೊಂದಿಗೆ ಚಿಂತನಮಂಥನ ನಡೆಸುವುದು ಹಾಗೂ ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ನಾನಾ ಪ್ರಸ್ತಾಪಗಳನ್ನು ಅನುಷ್ಠಾನಗೊಳಿಸಲು ಹೇಗೆ ಉತ್ತಮವಾಗಿ ಮುಂದುವರಿಯಬೇಕು ಎಂಬುದರ ಬಗ್ಗೆ ಕಾರ್ಯತಂತ್ರಗಳನ್ನು ಗುರುತಿಸುವುದು ಈ ವೆಬಿನಾರ್‌ ಸರಣಿಯ ಉದ್ದೇಶವಾಗಿದೆ.

ಈ ಸರಣಿಯ ಭಾಗವಾಗಿ, 'ಪ್ರಗತಿ ಮತ್ತು ಮಹತ್ವಾಕಾಂಕ್ಷೆಯ ಆರ್ಥಿಕತೆಗೆ ಹಣಕಾಸು' ಎಂಬ ಶೀರ್ಷಿಕೆಯೊಂದಿಗೆ ಬಜೆಟ್ ನಂತರದ ವೆಬಿನಾರ್ ಅನ್ನು ಭಾರತ ಸರ್ಕಾರದ ಹಣಕಾಸು ಸಚಿವಾಲಯವು ಮಂಗಳವಾರ, ಮಾರ್ಚ್ 8, 2022 ರಂದು ಆಯೋಜಿಸುತ್ತಿದೆ.

ಈ ವೆಬಿನಾರ್‌ನಲ್ಲಿ ಅತ್ಯುನ್ನತ ಮಟ್ಟದಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಾಲ್ಗೊಳ್ಳಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಭಾಷಣ ಮಾಡಲಿದ್ದಾರೆ. ವೆಬಿನಾರ್‌ನಲ್ಲಿ 16 ಸಚಿವಾಲಯಗಳು, ನೀತಿ ಆಯೋಗ, ಸಾಮರ್ಥ್ಯ ವರ್ಧನೆ ಆಯೋಗ ಮತ್ತು ರಾಜ್ಯ ಸರ್ಕಾರಗಳು ಪಾಲ್ಗೊಳ್ಳಲಿವೆ. ಆರ್‌ಬಿಐ, ಸೆಬಿ, ಐಎಫ್‌ಎಸ್‌ಸಿಎ, ಐಆರ್‌ಡಿಎಐ, ಗಿಫ್ಟ್ ಸಿಟಿ, ನಬಾರ್ಡ್ನಂತಹ ನಿಯಂತ್ರಕರು, ಉದ್ಯಮ ಸಂಘಗಳು ಮತ್ತು ವಿಷಯ ತಜ್ಞರು / ಹೂಡಿಕೆದಾರರ ಸಮುದಾಯದ ಪಾಲ್ಗೊಳ್ಳುವಿಕೆಯೂ ಇರಲಿದೆ.

ಈ ಕೆಳಗಿನ ವಿಷಯಾಧಾರಿತ ಐದು ಅಧಿವೇಶನಗಳನ್ನು ವೆಬಿನಾರ್‌ ಹೊಂದಿರುತ್ತದೆ:

ಎ) ಮೂಲಸೌಕರ್ಯಕ್ಕೆ ಹಣಕಾಸು ಒದಗಿಸುವುದು

ಬಿ) ಹೆಚ್ಚಿನ ಉದ್ಯೋಗ ಸಾಮರ್ಥ್ಯ ಹೊಂದಿರುವ ಹಣಕಾಸು ವಲಯಗಳು

ಸಿ) ಮೂಲಸೌಕರ್ಯ ಕಾರ್ಯಸಾಧ್ಯತೆಗಳ ಸೃಷ್ಟಿ

ಡಿ) ಬ್ಯಾಂಕಿಂಗ್ ಮತ್ತು ಹಣಕಾಸಿಗೆ ಡಿಜಿಟಲ್ ಅವಕಾಶಗಳ ಮಾರ್ಗಸೂಚಿ

ಇ) ಹವಾಮಾನ ಮತ್ತು ಸುಸ್ಥಿರ ಹಣಕಾಸು ಹಾಗೂ ಉದಯೋನ್ಮುಖ ವಲಯಗಳಿಗೆ ಹಣಕಾಸು

ಈ ವೆಬಿನಾರ್‌ ಮೂಲಕ, ಹಣಕಾಸು ಸಚಿವಾಲಯವು ಇಲ್ಲಿ ಚರ್ಚಿಸಲಾಗುವ ಅಂಶಗಳ ಅನುಷ್ಠಾನ ವೇಗವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಹಾಗೂ ಇವುಗಳ ಸಾಧನೆಗಾಗಿ ಅಮೂಲ್ಯ ಮಾಹಿತಿ ಪಡೆಯಲು ಪ್ರಯತ್ನಿಸುತ್ತದೆ. ಮಧ್ಯಸ್ಥಗಾರರ ಪರಿಣತಿ ಮತ್ತು ಅನುಭವವನ್ನು ಬಳಸಿಕೊಳ್ಳುವ ಮೂಲಕ, ಅಭಿವೃದ್ಧಿ ಸುಧಾರಣೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು.

***


(Release ID: 1803383) Visitor Counter : 250