ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
“ಸ್ತ್ರೀ ಮನೋರಕ್ಷಾ ಯೋಜನೆ”ಗೆ ಚಾಲನೆ ನೀಡಿದ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ
ಭಾರತದಾದ್ಯಂತ 6000 ಏಕ ತಾಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮಾನಸಿಕ ಆರೋಗ್ಯ ತರಬೇತಿಯನ್ನು ನೀಡಲಿರುವ "ಸ್ತ್ರೀ ಮನೋರಕ್ಷಾ ಯೋಜನೆ"
ಏಕ ತಾಣ ಕೇಂದ್ರಗಳ 'ಸಖಿಯರು' ದೇಶದಾದ್ಯಂತ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾವಲುಗಾರರಾಗಿದ್ದಾರೆ: ಶ್ರೀಮತಿ ಸ್ಮೃತಿ ಜುಬಿನ್ ಇರಾನಿ
Posted On:
02 MAR 2022 11:30PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ‘ಆಜಾದಿ ಕಾ ಅಮೃತ ಮಹೋತ್ಸವ’ದ ರಾಷ್ಟ್ರವ್ಯಾಪಿ ಆಚರಣೆಯ ಭಾಗವಾಗಿ 2022ರ ಮಾರ್ಚ್ 1 ರಿಂದ 8 ರವರೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಪ್ತಾಹವನ್ನು ಆಚರಿಸುತ್ತಿದೆ. ವಾರವಿಡೀ ನಡೆಯುವ ಆಚರಣೆಯ ಅಂಗವಾಗಿ, 2ನೇ ದಿನವಾದ ಇಂದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಾರ್ಯಕ್ರಮವನ್ನು ಆಯೋಜಿಸಿತ್ತು, ಬೆಳಗಿನ ಅಧಿವೇಶನದಲ್ಲಿ ನಿಮ್ಹಾನ್ಸ್ ಸಹಯೋಗದೊಂದಿಗೆ ನಡೆದ "ಸ್ತ್ರೀ ಮನೋರಕ್ಷಾ ಯೋಜನೆ" ಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಚಾಲನೆ ನೀಡಿದರು. ಈ ಯೋಜನೆಯು ಭಾರತದಾದ್ಯಂತ 6000 ಏಕ ತಾಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಮಾನಸಿಕ ಆರೋಗ್ಯ ತರಬೇತಿಯನ್ನು ನೀಡುವ ಗುರಿಯನ್ನು ಹೊಂದಿದೆ. ಮಧ್ಯಾಹ್ನದ ಅಧಿವೇಶನದಲ್ಲಿ, ಎನ್.ಎ.ಎಲ್.ಎಸ್.ಎ. ಸಹಯೋಗದೊಂದಿಗೆ ಓ.ಎಸ್.ಸಿ.ಗಳ ಸಾಮರ್ಥ್ಯ ನಿರ್ಮಾಣದ ಕುರಿತು ಸಮಾಲೋಚನಾ ಸಮಾವೇಶವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಅಧಿಕಾರಿಗಳು, ನಿಮ್ಹಾನ್ಸ್, ಎನ್.ಎ.ಎಲ್.ಎಸ್.ಎ. ಪ್ರತಿನಿಧಿಗಳು ಮತ್ತು ದೇಶಾದ್ಯಂತದ ಏಕ ತಾಣ ಕೇಂದ್ರ ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕೇಂದ್ರ ಸಚಿವೆ ಶ್ರೀಮತಿ. ಸ್ಮೃತಿ ಜುಬಿನ್ ಇರಾನಿ ಅವರು ಬೆಳಗಿನ ಅಧಿವೇಶನದಲ್ಲಿ ಎಲ್ಲಾ ಏಕ ತಾಣ ಕೇಂದ್ರದ 'ಸಖಿ'ಯರನ್ನು ಸ್ವಾಗತಿಸಿ, ಅವರನ್ನು ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾವಲುಗಾರರು ಎಂದು ಬಣ್ಣಿಸಿದರು. ಇಂದು ನಾವು ನಿಮ್ಹಾನ್ಸ್ ನೊಂದಿಗೆ ಚರ್ಚಿಸುತ್ತಿರುವ ಯೋಜನೆಯನ್ನು ಕೇವಲ ಒಂದು ಯೋಜನೆಯಾಗಿ ನಾವು ನೋಡಿದರೆ, ಆಡಳಿತಾತ್ಮಕ ಚೌಕಟ್ಟಿಗೆ ಸೀಮಿತವಾಗುತ್ತೇವೆ ಎಂದು ಶ್ರೀಮತಿ ಇರಾನಿ ಹೇಳಿದರು, ಆದರೆ ಈ ಯೋಜನೆಯು ಮಹಿಳೆಯರಿಗೆ ಜೀವನ ಮತ್ತು ಘನತೆಯನ್ನು ನೀಡುವ ಉದ್ದೇಶವನ್ನು ಹೊಂದಿದ್ದು, ಹಿಂಸೆಯ ಪುನರಾವರ್ತನೆ"ಯನ್ನು ತಡೆಯುತ್ತದೆ ಎಂದರು. ಸೂಕ್ತ ಕೌಟುಂಬಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಪ್ರಾಮುಖ್ಯ ಮತ್ತು ಅದರ ಪರಿಣಾಮವನ್ನು ವಿವರಿಸಿದ ಕೇಂದ್ರ ಸಚಿವರು, ಮಗುವು ಮನೆಯಲ್ಲಿ ಅಂತಹ ಹಿಂಸಾಚಾರಗಳನ್ನು ಕಂಡಾಗ ಮನೆಯಿಂದಲೇ ಹೇಗೆ ಹಿಂಸೆಯ ಚಕ್ರ ಪ್ರಾರಂಭವಾಗುತ್ತದೆ ಎಂಬುದನ್ನು ವಿವರಿಸಿದರು, ಆದರೆ ಸೂಕ್ತವಾದ ಕೌಟುಂಬಿಕ ಮೌಲ್ಯಗಳು ಮನೆಯಲ್ಲಿ ಮಗುವಿಗೆ ಸೂಕ್ತ ಮೌಲ್ಯಗಳನ್ನು ನೀಡುವ ಮೂಲಕ ಮಹಿಳೆಯರನ್ನೂ ಸಬಲಗೊಳಿಸುತ್ತದೆ ಎಂದರು.
ಮಹಿಳೆಯೊಬ್ಬರು ಏಕ ತಾಣ ಕೇಂದ್ರಕ್ಕೆ ಬಂದಾಗ, ಹೊರಗೆ ಬಂದು ತಾನು ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿಕೊಳ್ಳಲು ಅಪರಿಮಿತ ಧೈರ್ಯ ಬೇಕಾಗುತ್ತದೆ ಎಂದು ಶ್ರೀಮತಿ. ಸ್ಮೃತಿ ಇರಾನಿ ಹೇಳಿದರು. ಆದ್ದರಿಂದ, ಏಕ ತಾಣ ಕೇಂದ್ರದಲ್ಲಿ ಸಲಹೆಗಾರರಿಂದ ಹಿಡಿದು ಕಾವಲುಗಾರರವರೆಗೆ ಮತ್ತು ಮೇಲ್ವಿಚಾರಕರವರೆಗೆ ಎಲ್ಲಾ ಸಿಬ್ಬಂದಿಗೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ತರಬೇತಿ ನೀಡಬೇಕು ಎಂದು ಶ್ರೀಮತಿ ಇರಾನಿ ಆಗ್ರಹಿಸಿದರು. ನಿಮ್ಹಾನ್ಸ್ ನಿಂದ ಸೂಕ್ಷ್ಮವಾಗಿ ರೂಪಿಸಲಾದ ತರಬೇತಿ ಘಟಕವು ಸಂಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ಮತ್ತು ಸ್ವಯಂ-ಆರೈಕೆ ತಂತ್ರಗಳನ್ನು ಒದಗಿಸಲು ಕಾರ್ಯನಿರ್ವಹಿಸುವವರಿಗೆ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಎನ್.ಎ.ಎಲ್.ಎಸ್.ಎ. ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಧ್ಯಾಹ್ನದ ಅಧಿವೇಶನದಲ್ಲಿ, ಓ.ಎಸ್.ಸಿ.ಗಳಲ್ಲಿ ಸಂತ್ರಸ್ತ ಮಹಿಳೆಯರಿಗೆ ಸಹಾಯ ಮಾಡುವಲ್ಲಿ ಬಹಳ ದೂರ ಸಾಗಿರುವ ಎಸ್.ಎಲ್.ಎಸ್.ಎ. ಮತ್ತು ಎನ್.ಎ.ಎಲ್.ಎಸ್.ಎ. ಯ ದೇಶಾದ್ಯಂತದ ವಕೀಲರ ಪ್ರಯತ್ನಗಳನ್ನು ಕೇಂದ್ರ ಸಚಿವರು ಶ್ಲಾಘಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎನ್.ಎ.ಎಲ್.ಎಸ್.ಎ. ಸಹಾಯದಿಂದ ಪ್ರಾಯೋಗಿಕವಾಗಿ ‘ನಾರಿ ಅದಾಲತ್’ ಅನ್ನು ಎದಿರು ನೋಡುತ್ತಿದೆ, ಇದರಿಂದ ಸಂತ್ರಸ್ತ ಮಹಿಳೆಯರಿಗೆ ತ್ವರಿತ ನ್ಯಾಯ ಸಿಗುತ್ತದೆ ಎಂದು ಅವರು ಪ್ರಕಟಿಸಿದರು. ಶ್ರೀಮತಿ. ಇರಾನಿ ಅವರು ತಮ್ಮ ಸೇವಾ ಸ್ಥಿತಿಗತಿಗಳ ಬಗ್ಗೆ ಏಕ ತಾಣ ಕೇಂದ್ರಗಳ ಸಿಬ್ಬಂದಿಯ ಅನುಕೂಲಕ್ಕಾಗಿ ಎಲ್ಲಾ ಏಕ ತಾಣ ಕೇಂದ್ರಗಳ ಸಿಬ್ಬಂದಿಯನ್ನು ವಿಮಾ ಯೋಜನೆಯ ವ್ಯಾಪ್ತಿಗೆ ತರಲಾಗುವುದು ಎಂದರು.
ಈ ಕಾರ್ಯಕ್ರಮ ದೇಶದಲ್ಲಿನ ಪ್ರಸ್ತುತ ಬೆಳವಣಿಗೆಗಳು ಮತ್ತು ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸುವುದಕ್ಕಾಗಿ ಎಂ.ಡಬ್ಲ್ಯು.ಸಿ.ಡಿ. ಮೂಲಕ ಜಾರಿಗೊಳಿಸಲಾದ ಉಪಕ್ರಮಗಳನ್ನು ಎತ್ತಿ ತೋರಿಸಿತು. ಕಾರ್ಯಕ್ರಮದಲ್ಲಿ ಜಾಗೃತಿ ಮೂಡಿಸಲು ಸ್ತ್ರೀ ಮನೋರಕ್ಷಾ ಯೋಜನೆ ಮತ್ತು ಎನ್.ಎ.ಎಲ್.ಎಸ್.ಎ ಮೂಲಕ ನೆರವು ಕುರಿತ ಚಲನಚಿತ್ರಗಳನ್ನು ಪ್ರದರ್ಶಿಸಲಾಯಿತು. ಏಕ ತಾಣ ಕೇಂದ್ರಗಳ ಸಹಾಯದಿಂದ ಮಹಿಳೆಯರು ಸಹ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಓ.ಎಸ್.ಸಿ.ಗಳ ಫಲಾನುಭವಿಗಳು ಮತ್ತು ಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.
2 ದಿನದ ಕಾರ್ಯಕ್ರಮದಲ್ಲಿ, ಬಿಪಿಆರ್ ಮತ್ತು ಡಿ, ನಿಮ್ಹಾನ್ಸ್ ಮತ್ತು ಎನ್.ಎ.ಎಲ್.ಎಸ್.ಎ ನಂತಹ ವಿವಿಧ ಸಂಸ್ಥೆಗಳೊಂದಿಗೆ ಕೈಗೊಳ್ಳಬೇಕಾದ ಸಹಕಾರ ಮತ್ತು ಏಕೀಕೃತ ಮಾರ್ಗಗಳು ಮತ್ತು ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಸಮಗ್ರ ಕ್ರಮದ ಹಂತಗಳ ಬಗ್ಗೆ ಒತ್ತಿ ಹೇಳಲಾಯಿತು.
ಬಿಪಿಆರ್ ಮತ್ತು ಡಿ ಜೊತೆ ಸಹಯೋಗ: ಬಿಪಿಆರ್ ಮತ್ತು ಡಿ ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ದೇಶದಲ್ಲಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನೋಡಲ್ ಸಂಸ್ಥೆಯಾಗಿದೆ. ಪೋಲೀಸ್ ಆಧುನೀಕರಣ, ತರಬೇತಿ ಮತ್ತು ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಷನ್ ಅಧಿಕಾರಿಗಳು ಇತ್ಯಾದಿಗಳ ಸಾಮರ್ಥ್ಯ ವೃದ್ಧಿಗಾಗಿ ಸರ್ಕಾರಕ್ಕೆ ಸಹಾಯ ಮತ್ತು ಸಲಹೆ ನೀಡುವ ಪ್ರಮುಖ ಸಂಸ್ಥೆಯಾಗಿದೆ. ನಿರ್ಭಯಾ ನಿಧಿಯ ಅಡಿಯಲ್ಲಿ, ಬಿಪಿಆರ್ ಮತ್ತು ಡಿ 19000ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿಯನ್ನು ನೀಡಿದೆ. ಅವರಿಗೆ ಲೈಂಗಿಕ ದೌರ್ಜನ್ಯದ ಸಾಕ್ಷಿಗಳ ಸಂಗ್ರಹಣೆ ಕಿಟ್ ಗಳನ್ನು (ಎಸ್.ಎ.ಇ.ಸಿ. ಕಿಟ್) ಬಳಸುವ ಬಗ್ಗೆ ತರಬೇತಿ ನೀಡಲಾಗಿದೆ. ಅವರು ಸೈಬರ್ ಅಪರಾಧವನ್ನು ನಿರ್ವಹಿಸಲು ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಬಿಪಿಆರ್ ಮತ್ತು ಡಿ ಮಹಿಳಾ ಪೊಲೀಸ್ ಡೆಸ್ಕ್ ಗಳು ಮತ್ತು ಮಾನವ ಕಳ್ಳಸಾಗಣೆ ನಿಗ್ರಹ ಘಟಕಗಳ ಸಾಮರ್ಥ್ಯವರ್ಧನೆಗೆ ತರಬೇತಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಿದೆ. ಈ ಸಂದರ್ಭದಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಬಿಪಿಆರ್ ಮತ್ತು ಡಿ ಸಹಯೋಗದೊಂದಿಗೆ ದೇಶಾದ್ಯಂತ ಏಕ ತಾಣ ಕೇಂದ್ರ ಕಾರ್ಯನಿರ್ವಹಣಾಧಿಕಾರಿಗಳ ಸಾಮರ್ಥ್ಯ ವರ್ಧನೆಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ ಇದರಿಂದ ಅವರು ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳನ್ನು ಎದುರಿಸಲು ಸುಸಜ್ಜಿತರಾಗಿದ್ದಾರೆ. ಇದಲ್ಲದೆ, ಎಂ.ಡಬ್ಲ್ಯು.ಸಿ.ಡಿ. ಬಿಪಿಆರ್ ಮತ್ತು ಡಿ ಸಹಯೋಗದೊಂದಿಗೆ ಎನ್.ಐ.ಪಿಸಿಸಿಡಿ ಮೂಲಕ ಸ್ವಯಂ ರಕ್ಷಣಾ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತಿದೆ.
ನಿಮ್ಹಾನ್ಸ್ ನೊಂದಿಗೆ ಸಹಯೋಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಪ್ತಾಹದ ಎರಡನೇ ದಿನದಂದು ನಿಮ್ಹಾನ್ಸ್ ಬೆಂಗಳೂರಿನ ಸಹಯೋಗದೊಂದಿಗೆ ‘ಸ್ತ್ರೀ ಮನೋರಕ್ಷಾ ಯೋಜನೆ’ಯನ್ನು ಪ್ರಾರಂಭಿಸಿತು. ಈ ಯೋಜನೆಯು ಮಾನಸಿಕ ಸಾಮಾಜಿಕ ಯೋಗಕ್ಷೇಮಕ್ಕೆ ಒತ್ತು ನೀಡಿದ್ದು ಭಾರತದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಏಕ ತಾಣ ಕೇಂದ್ರಗಳನ್ನು ಸಂಪರ್ಕಿಸುವ ಮಹಿಳೆಯರ ಪ್ರಕರಣಗಳನ್ನು ನಿರ್ದಿಷ್ಟವಾಗಿ ಹಿಂಸಾಚಾರ ಮತ್ತು ಸಂಕಷ್ಟಕ್ಕೆ ಒಳಗಾದ ಮಹಿಳೆಯರನ್ನು ಸರಿಯಾದ ಸೂಕ್ಷ್ಮತೆ ಮತ್ತು ಕಾಳಜಿಯೊಂದಿಗೆ ಹೇಗೆ ನಿರ್ವಹಿಸುವುದು ಎಂಬುದರ ಕುರಿತು ಸಾಧನಗಳು ಮತ್ತು ತಂತ್ರಗಳ ಕುರಿತು ಏಕ ತಾಣ ಕೇಂದ್ರಗಳ ಕಾರ್ಯನಿರ್ವಾಹಕರ ಸಾಮರ್ಥ್ಯವನ್ನು ಹೆಚ್ಚಿಸುವುದರ ಮೇಲೆ ಯೋಜನೆಯು ಕೇಂದ್ರೀಕರಿಸುತ್ತದೆ. ಯೋಜನೆಯು ಏಕ ತಾಣ ಕೇಂದ್ರಗಳ ಸಿಬ್ಬಂದಿ ಮತ್ತು ಸಲಹೆಗಾರರಿಗೆ ಸ್ವಯಂ-ಆರೈಕೆ ತಂತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಸಚಿವಾಲಯವು ಯೋಜಿಸಿರುವ ಅಗತ್ಯಗಳ ಆಧಾರದ ಮೇಲೆ ನಿಮ್ಹಾನ್ಸ್ ನಿಖರವಾಗಿ ವಿವರಿಸಿರುವ ಯೋಜನೆಯನ್ನು ಎರಡು ಸ್ವರೂಪಗಳಲ್ಲಿ ನೀಡಲಾಗುತ್ತದೆ. ಭದ್ರತಾ ಸಿಬ್ಬಂದಿ, ಅಡುಗೆಯವರು, ಸಹಾಯಕರು, ಕೇಸ್ ವರ್ಕರ್ ಗಳು, ಸಲಹೆಗಾರರು, ಕೇಂದ್ರ ನಿರ್ವಾಹಕರು, ಅರೆ ವೈದ್ಯಕೀಯ ಸಿಬ್ಬಂದಿ ಇತ್ಯಾದಿ ಸೇರಿದಂತೆ ಏಕ ತಾಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ಮೂಲಭೂತ ತರಬೇತಿಯ ಮೇಲೆ ಒಂದನೇ ಸ್ವರೂಪದಲ್ಲಿ ಗಮನಹರಿಸಲಾಗುತ್ತದೆ. ಎರಡನೆಯ ಸ್ವರೂಪವು ಬಹುವಿಧಕ್ಕೆ ಸಂಬಂಧಿಸಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಪೀಳಿಗೆಯ ಮೇಲಾಗುವ ಪರಿಣಾಮಗಳು ಮತ್ತು ಜೀವಿತಾವಧಿಯ ಆಘಾತ; ಲೈಂಗಿಕ ಹಿಂಸೆಯ ಸಂದರ್ಭದಲ್ಲಿ ಆಘಾತವನ್ನು ನಿರ್ವಹಿಸುವಲ್ಲಿ ಮಾರ್ಗದರ್ಶಿ ತತ್ವಗಳು ಮತ್ತು ಸವಾಲುಗಳು; ಮಾನಸಿಕ ಯಾತನೆ, ಅಸ್ವಸ್ಥತೆಗಳು ಮತ್ತು ಆತ್ಮಹತ್ಯಾ ಪ್ರವೃತ್ತಿ ಮತ್ತು ಸಮಾಲೋಚನೆಯಲ್ಲಿ ನೈತಿಕ ಮತ್ತು ವೃತ್ತಿಪರ ತತ್ವಗಳ ಮೌಲ್ಯಮಾಪನ ಇತ್ಯಾದಿ ಮುಂದುವರಿದ ಕೋರ್ಸ್ ಗಳಿಗೆ ಒತ್ತು ನೀಡುತ್ತದೆ. ಈ ನಿಟ್ಟಿನಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವರು, ಏಕ ತಾಣ ಕೇಂದ್ರಗಳ ಸಮಾಲೋಚಕರುಗಳಿಗಾಗಿ ಮುಂದುವರಿದ ಪ್ರಮಾಣಪತ್ರ ಕೋರ್ಸ್ ಗೆ ಚಾಲನೆ ನೀಡಿದರು ಮತ್ತು ಏಕ ತಾಣ ಕೇಂದ್ರಗಳ ಸಿಬ್ಬಂದಿಯ ಸಾಮರ್ಥ್ಯ ನಿರ್ಮಾಣಕ್ಕಾಗಿ ಸಂಪನ್ಮೂಲ ಸಾಮಗ್ರಿಗಳನ್ನು ಬಿಡುಗಡೆ ಮಾಡಿದರು.
ಎನ್.ಎ.ಎಲ್.ಎಸ್.ಎ. ನೊಂದಿಗೆ ಸಹಯೋಗ: ಈ ಕಾರ್ಯಕ್ರಮದ ಬಳಿಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಎನ್.ಎ.ಎಲ್.ಎಸ್.ಎ.ಯ ಜಂಟಿ ಸಹಭಾಗಿತ್ವದಲ್ಲಿ ಏಕ ತಾಣ ಕೇಂದ್ರಗಳ ಸಾಮರ್ಥ್ಯ ವರ್ಧನೆಗಾಗಿ ಸಮಾಲೋಚನಾ ಸಮಾವೇಶವನ್ನು ಆಯೋಜಿಸಲಾಗಿದೆ. ಕಾನೂನು ಸೇವೆಗಳ ಪ್ರಾಧಿಕಾರಗಳ (ಎಲ್.ಎಸ್.ಎ.) ಕಾಯಿದೆ, 1987 ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುತ್ತದೆ, ಆರ್ಥಿಕ ಅಥವಾ ಇತರ ಅಂಗವೈಕಲ್ಯಗಳ ಕಾರಣದಿಂದ ಯಾವುದೇ ನಾಗರಿಕರಿಗೆ ನ್ಯಾಯವನ್ನು ಪಡೆಯುವ ಅವಕಾಶಗಳನ್ನು ನಿರಾಕರಿಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ. ಕಾನೂನು ವ್ಯವಸ್ಥೆಯ ಕಾರ್ಯಾಚರಣೆಯು ಸಮಾನ ಅವಕಾಶಗಳ ಆಧಾರದ ಮೇಲೆ ನ್ಯಾಯವನ್ನು ಉತ್ತೇಜಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಎನ್.ಎ.ಎಲ್.ಎಸ್.ಎ. ಲೋಕ ಅದಾಲತ್ ಗಳನ್ನು ಆಯೋಜಿಸುತ್ತದೆ. ಈ ಉದ್ದೇಶಕ್ಕಾಗಿ, ಜಿಲ್ಲೆ/ರಾಜ್ಯ/ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರಗಳಂತಹ ಕಾನೂನು ಸೇವಾ ಸಂಸ್ಥೆಗಳನ್ನು ತಾಲೂಕು ನ್ಯಾಯಾಲಯ ಮಟ್ಟದಿಂದ ಸುಪ್ರೀಂ ಕೋರ್ಟ್ ವರೆಗೆ ಸ್ಥಾಪಿಸಲಾಗಿದೆ.
ಇದರ ಜೊತೆಗೆ, ಎಲ್.ಎಸ್.ಎ. ಕಾಯಿದೆ, 1987 ರ ಸೆಕ್ಷನ್ 12 ರ ಅಡಿಯಲ್ಲಿ ಉಚಿತ ಕಾನೂನು ನೆರವು ಪಡೆಯಲು ಅರ್ಹರಾಗಿರುವ ವ್ಯಕ್ತಿಗಳನ್ನು ವಕೀಲರೊಂದಿಗೆ ಸಂಪರ್ಕಿಸಲು ಸರ್ಕಾರವು ನ್ಯಾಯ ಬಂಧು (ಪ್ರೊ-ಬೊನೊ ಕಾನೂನು ಸೇವೆಗಳು) ಕಾರ್ಯಕ್ರಮವನ್ನು ಜಾರಿಗೊಳಿಸುತ್ತದೆ. ಟೆಲಿ-ಕಾನೂನು ಕಾರ್ಯಕ್ರಮವು, ಎಲ್.ಎಸ್.ಎ. ಕಾಯಿದೆ, 1987 ರ ಸೆಕ್ಷನ್ 12 ರ ಅಡಿಯಲ್ಲಿ ವ್ಯಾಜ್ಯ ಪೂರ್ವ ಹಂತದಲ್ಲಿ ಪಂಚಾಯತ್ ಗಳಲ್ಲಿ 75,000 ಸಾಮಾನ್ಯ ಸೇವಾ ಕೇಂದ್ರಗಳ (ಸಿ.ಎಸ್.ಸಿ.) ಮೂಲಕ ಪ್ಯಾನಲ್ ವಕೀಲರಿಂದ ಉಚಿತ ಕಾನೂನು ನೆರವಿಗಾಗಿ ಅರ್ಹರಾಗಿರುವ ವ್ಯಕ್ತಿಗಳನ್ನು ಒಳಗೊಂಡಂತೆ ಸಾರ್ವಜನಿಕರಿಗೆ ಕಾನೂನು ಸಲಹೆಯನ್ನು ಒದಗಿಸಲಾಗುತ್ತಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಎನ್.ಎ.ಎಲ್.ಎಸ್.ಎ. ಸಹಯೋಗದೊಂದಿಗೆ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಕಾನೂನಿನಡಿಯಲ್ಲಿ ಕಾನೂನು ನಿಬಂಧನೆಗಳ ಬಗ್ಗೆ ದೇಶಾದ್ಯಂತ ಏಕ ತಾಣ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮರ್ಥ್ಯ ಮತ್ತು ತರಬೇತಿಯನ್ನು ನಿರ್ಮಿಸಲು ನಿರ್ಧರಿಸಿದೆ, ಮಹಿಳೆಯರ ಪರವಾದ (ಪ್ರೊ ಬೋನೋ) ಕಾನೂನು ನೆರವು ಕುರಿತು ಜಾಗೃತಿಗೆ ಎನ್.ಎ.ಎಲ್.ಎಸ್.ಎ. ಮತ್ತು ಸಂತ್ರಸ್ತೆಯರ ಪರಿಹಾರ ಯೋಜನೆ ಮೂಲಕ, ಅವರ ಪಾತ್ರ ಮತ್ತು ಆಯಾ ಪ್ರದೇಶಗಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗ ಮತ್ತು ಮಹಿಳೆಯರಿಗೆ ಕಾನೂನು ಸಲಹೆ ಮತ್ತು ಸಮಾಲೋಚನೆ ಪಡೆಯಲು ಸಹಾಯ ಮಾಡುವಲ್ಲಿ ಓ.ಎಸ್.ಸಿ. ಕಾರ್ಯನಿರ್ವಾಹಕರು ವಹಿಸಬೇಕಾದ ಪಾತ್ರದ ಜಾಗೃತಿ ಮೂಡಿಸುತ್ತದೆ. ಓ.ಎಸ್.ಸಿ.ಗಳಲ್ಲಿ ಕಾರ್ಯನಿರ್ವಹಿಸುವವರು ಸಹಾಯಕ್ಕಾಗಿ ಓ.ಎಸ್.ಸಿ.ಗಳನ್ನು ಸಂಪರ್ಕಿಸುವ ಮಹಿಳೆಯರು ಮತ್ತು ಬಾಲಕಿಯರಿಗೆ ಸಹಾಯ ಮಾಡುತ್ತಾರೆ ಮತ್ತು ಅವರಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ.
ಈ ಕಾರ್ಯಕ್ರಮ, ವ್ಯವಸ್ಥೆಯನ್ನು ಬಲಪಡಿಸುವ, ಸಾಮರ್ಥ್ಯ ವರ್ಧನೆ ಮಾಡುವ, ಪ್ರಕ್ರಿಯೆಗಳನ್ನು ಸುಧಾರಿಸುವ ಮತ್ತು ಕಷ್ಟಕರ ಸಂದರ್ಭಗಳಲ್ಲಿ ಮಹಿಳೆಯರಿಗೆ ಸಹಾಯ ಮಾಡುವ ಸಮಗ್ರ ಸಹಯೋಗದ ಕ್ರಿಯೆಯ ಅಂಶಗಳೊಂದಿಗೆ ಸಮಾರೋಪಗೊಂಡಿತು. ಕಾರ್ಯಕ್ರಮದ ಒಟ್ಟಾರೆ ಉದ್ದೇಶವು ಸುರಕ್ಷತೆ ಪರಿಸರ, ಸುರಕ್ಷತೆ ಮತ್ತು ಮಹಿಳೆಯರ ಮಾನಸಿಕ ಯೋಗಕ್ಷೇಮವನ್ನು ಸಕ್ರಿಯಗೊಳಿಸುವುದಾಗಿತ್ತು.
***
(Release ID: 1802630)
Visitor Counter : 497