ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

25 ಎನ್‌ಎಮ್-ಐಸಿಪಿಎಸ್‌ ಮೂಲಕ ದೇಶದಾದ್ಯಂತ ಟೆಕ್ನಾಲಜಿ ಇನ್ನೋವೇಶನ್ ಹಬ್‌ಗಳು (ತಂತ್ರಜ್ಞಾನ ಆವಿಷ್ಕಾರ ಕೇಂದ್ರ) ರಾಷ್ಟ್ರೀಯ ಉಪಕ್ರಮಗಳಿಗೆ ಶಕ್ತಿ ನೀಡಲು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತಿವೆ

Posted On: 23 FEB 2022 2:55PM by PIB Bengaluru

ನ್ಯಾಷನಲ್ ಮಿಷನ್ ಆನ್ ಇಂಟರ್ ಡಿಸಿಪ್ಲಿನರಿ ಸೈಬರ್-ಫಿಸಿಕಲ್ ಸಿಸ್ಟಮ್ಸ್ ( ಎನ್ಎಮ್-ಐಸಿಪಿಎಸ್ ) ಮೂಲಕ ದೇಶಾದ್ಯಂತ ಸ್ಥಾಪಿಸಲಾದ 25 ಟೆಕ್ನಾಲಜಿ ಇನ್ನೋವೇಶನ್ ಹಬ್‌ಗಳು (ತಂತ್ರಜ್ಞಾನ ಹೊಸತನದ ಶೋಧ ಕೇಂದ್ರ - ಟಿಐಹೆಚ್) ಪ್ರಮುಖ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಉಪಕ್ರಮಗಳಿಗೆ ಶಕ್ತಿ ನೀಡಲು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳನ್ನು ಉತ್ತೇಜಿಸುತ್ತಿವೆ. ಜನರ ಸಮಸ್ಯೆಗಳಿಗೆ ಅದು ಹಲವಾರು ತಾಂತ್ರಿಕ ಪರಿಹಾರಗಳನ್ನು ಹೊರತರುತ್ತಿದೆ. ಮಿಷನ್ ಅಡಿಯಲ್ಲಿ ಸ್ಥಾಪಿಸಲಾದ ಹಲವಾರು ತಂತ್ರಜ್ಞಾನಗಳು ಮತ್ತು ತಂತ್ರಜ್ಞಾನ ವೇದಿಕೆಗಳು  ಹಲವಾರು ಕ್ಷೇತ್ರಗಳಿಗೆ   ನೆರವಾಗಿವೆ.

ಹಬ್‌ ಗಳ ಮೂಲಕ 46 ಹೊಸ ತಂತ್ರಜ್ಞಾನಗಳನ್ನು ಒಳಗೊಂಡಂತೆ ಒಟ್ಟು 496 ತಾಂತ್ರಿಕ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೋವಿಡ್-19, ಔಷಧಿಗಳು, ರಕ್ತದ ಮಾದರಿಗಳು, ಆಹಾರ ಮತ್ತು ಡೈರಿ ಉತ್ಪನ್ನಗಳು, ಮಾಂಸ ಉತ್ಪನ್ನಗಳು ಮತ್ತು ಪ್ರಾಣಿಗಳ ವೀರ್ಯ ಸೇರಿದಂತೆ ಲಸಿಕೆಗಳ ಸಾಗಣೆಯ ಸಮಯದಲ್ಲಿ ತಾಪಮಾನವನ್ನು ನೋಡಿಕೊಳ್ಳುವ  ಮೊದಲ ರೀತಿಯ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಸಾಧನವನ್ನು ಅವು ಒಳಗೊಂಡಿವೆ ಇದನ್ನು ಐಐಟಿ, ರೊಪಾರ್‌  ಟೆಕ್ನಾಲಜಿ ಇನ್ನೋವೇಶನ್ ಹಬ್ಅವದ್‌  ಮತ್ತು ಅದರ ಸ್ಟಾರ್ಟ್ಅಪ್ (ನವೋದ್ಯಮಸ್ಕ್ರಾಚ್-ನೆಸ್ಟ್‌ (ScratchNest) ನಲ್ಲಿ ಸಂಶೋಧಕರು ಅಭಿವೃದ್ಧಿ ಪಡೆಸಿದ್ದಾರೆ. ಇದಲ್ಲದೇ, ಐಐಟಿ ಬಾಂಬೆಯ ವಿಜ್ಞಾನಿಗಳ ತಂಡವು ಐಐಟಿ ಜೋಧ್‌ಪುರದ ತಂತ್ರಜ್ಞಾನ ಆವಿಷ್ಕಾರ ಕೇಂದ್ರದಿಂದ (ಟಐಹೆಚ್) ಬೆಂಬಲಿತ ಪ್ರಯತ್ನದ ಪರಿಹಾರ ಕ್ರಮ ಮತ್ತು ಕೋವಿಡ್-19 (RAKSHAK- ರಕ್ಷಕ್) ಸಮಗ್ರ ವಿಶ್ಲೇಷಣೆಯ ಅಡಿಯಲ್ಲಿ ಕೋವಿಡ್-19 ಅನ್ನು ಪರೀಕ್ಷಿಸಲು ಟೇಪ್‌ಸ್ಟ್ರೀ  ವಿಧಾನವನ್ನು ಅಭಿವೃದ್ಧಿಪಡಿಸಿದೆ. .

ವಾಟ್ಸಾಪ್‌ ಮೂಲಕ ಕಳುಹಿಸಲಾದ ಚಿತ್ರಗಳ ಎದೆಯ ಎಕ್ಸ್-ರೇ ವಿವರಗಳಿಗೆ ಸಹಾಯ ಮಾಡುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಚಾಲಿತ ವೇದಿಕೆಯನ್ನು (ARTPARK- ಎಆರ್‌ಟಿಪಿಎಆರ್‌ಕೆ) ಭಾರತೀಯ ವಿಜ್ಞಾನ ಸಂಸ್ಥೆ  ಬೆಂಗಳೂರಿನಲ್ಲಿ ಅಭಿವೃದ್ಧಿಪಡಿಸಿದೆ. ಇದು ಕೋವಿಡ್ 19 ಕ್ಷಿಪ್ರ ಸ್ಕ್ರೀನಿಂಗ್ ಮೂಲಕ, ಎಕ್ಸ್-ರೇ ಯಂತ್ರಗಳ ದೊರಕುವಿಕೆ ಇಲ್ಲದ ವೈದ್ಯರಿಗೆ ಸಹಾಯ ಮಾಡಿತು.

ಐಐಟಿಎಂ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ ಮತ್ತು ಡೀಪ್ ಟೆಕ್ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಐದು ಇತರ ಉದ್ಯಮಶೀಲ ಸ್ಟಾರ್ಟ್-ಅಪ್ ಕಂಪನಿಗಳು ಪ್ರಾರಂಭಿಸಿರುವ ಒಕ್ಕೂಟವನ್ನು -ಎಸ್‌ಟಿಎಸಿ.ಡಿಬಿ - ಇಂಡಿಯನ್ ಸ್ಪೇಸ್ ಟೆಕ್ನಾಲಜೀಸ್ ಅಂಡ್ ಅಪ್ಲಿಕೇಷನ್ಸ್ ಕನ್ಸೋರ್ಟಿಯಂ ಡಿಸೈನ್ ಬ್ಯೂರೋ ಅಡಿಯಲ್ಲಿ ಸ್ಥಾಪಿಸಲಾಗಿದೆ.

ಹಬ್‌ ಗಳು 13 ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್ (ಟಿಬಿಐ), 54 ಸ್ಟಾರ್ಟ್-ಅಪ್‌ಗಳು ಮತ್ತು ಸ್ಪಿನ್-ಆಫ್ ಕಂಪನಿಗಳ ಸ್ಥಾಪನೆಗೆ ಕಾರಣವಾಗಿವೆ ಮತ್ತು ಸುಮಾರು 928 ಉದ್ಯೋಗಗಳ ಸೃಷ್ಟಿಗೆ ಕಾರಣವಾಗಿವೆ. 1083 ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡಂತೆ 2024 ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗಿದೆ ಮತ್ತು 32 ಅಂತರರಾಷ್ಟ್ರೀಯ ಸಹಯೋಗಗಳನ್ನು ಪ್ರಾರಂಭಿಸಲಾಗಿದೆ. ಉಪಕ್ರಮವು 191 ಪ್ರಕಟಣೆಗಳು, ಐಪಿಆರ್‌ ಮತ್ತು ಇತರ ಬೌದ್ಧಿಕ ಚಟುವಟಿಕೆಗಳು, ಹಾಗೆಯೇ 1073 ವಾಣಿಜ್ಯೋದ್ಯಮ ಅಭಿವೃದ್ಧಿ ಚಟುವಟಿಕೆಗಳಿಗೆ ಕಾರಣವಾಗಿದೆ.

ಡಿಸೆಂಬರ್ 2018 ರಲ್ಲಿ ಒಟ್ಟು ರೂ.3660 ಕೋಟಿ ವೆಚ್ಚದಲ್ಲಿ ಕೇಂದ್ರ ಕ್ಯಾಬಿನೆಟ್ ಅನುಮೋದಿಸಿರುವ ಆರೋಗ್ಯ, ಶಿಕ್ಷಣ, ಶಕ್ತಿ, ಪರಿಸರ, ಕೃಷಿ, ಕಾರ್ಯತಂತ್ರ ಮತ್ತು ಭದ್ರತೆಕೈಗಾರಿಕೆ 4.0 (ನಾಲ್ಕನೇ ಕೈಗಾರಿಕಾ ಕ್ರಾಂತಿ)ರಲ್ಲಿ ತಾಂತ್ರಿಕ ಪರಿಹಾರಗಳನ್ನು ಉತ್ತೇಜಿಸುವ ಎನ್‌ಎಮ್-ಐಸಿಪಿಎಸ್‌ ಅನ್ನು ಉನ್ನತ ಶೈಕ್ಷಣಿಕ ಮತ್ತು ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಲ್ಲಿ ಸ್ಥಾಪಿಸಲಾದ 25 ತಂತ್ರಜ್ಞಾನ ಹೊಸತನದ ಶೋಧ ಕೇಂದ್ರ (ಹಬ್‌) ಗಳ  ಮೂಲಕ ಕಾರ್ಯಗತಗೊಳಿಸಲಾಗುತ್ತಿದೆಎಲ್ಲಾ ಕೇಂದ್ರಗಳು ಜನರ ಸಮಸ್ಯೆಗಳಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿವೆ.

ಕೇಂದ್ರಗಳು ಕೆಳಗಿನವುಗಳನ್ನು ಒಳಗೊಂಡಿವೆ:

  • ಐಐಟಿ ಖರಗ್‌ಪುರದಲ್ಲಿ ಎಐ4ಐಸಿಪಿಎಸ್‌ -ಹಬ್‌ ಫೌಂಡೇಶನ್ (ಟಿಐಹೆಚ್) -  ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಬಾಂಬೆಯಲ್ಲಿ ಐಒಟಿ ಮತ್ತು ಐಒಇಗಾಗಿ ಟಿಐಹೆಚ್ ಫೌಂಡೇಶನ್, ಟೆಕ್ನಾಲಜೀಸ್ ಫಾರ್ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಇಂಟರ್ನೆಟ್ ಆಫ್ ಎವೆರಿಥಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಹೈದರಾಬಾದ್‌ನಲ್ಲಿ ಐಐಟಿ- ಎಚ್‌ ಡೇಟಾ -ಹಬ್ ಫೌಂಡೇಶನ್, ದತ್ತಾಂಶ (ಡೇಟಾ) ಬ್ಯಾಂಕ್‌ಗಳು ಮತ್ತು ದತ್ತಾಂಶ ಸೇವೆಗಳು, ದತ್ತಾಂಶ ವಿಶ್ಲೇಷಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಭಾರತೀಯ ವಿಜ್ಞಾನ ಸಂಸ್ಥೆ ಬೆಂಗಳೂರಿನಲ್ಲಿ ರೋಬೋಟಿಕ್ಸ್ ಮತ್ತು ಅಟಾನಮಸ್ ಸಿಸ್ಟಮ್ಸ್ ಇನ್ನೋವೇಶನ್ ಫೌಂಡೇಶನ್‌ಗಾಗಿ -ಹಬ್, ರೊಬೊಟಿಕ್ಸ್ ಮತ್ತು ಅಟಾನಮಸ್ ಸಿಸ್ಟಮ್ಸ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಕಾನ್ಪುರದಲ್ಲಿ ಐಹಬ್‌ ಎನ್‌ಟಿಐಹೆಚ್‌ಎಸಿ ಫೌಂಡೇಶನ್, ಸೈಬರ್ ಸೆಕ್ಯುರಿಟಿ ಮತ್ತು ಸೈಬರ್ ಸೆಕ್ಯುರಿಟಿ ಫಾರ್ ಫಿಸಿಕಲ್ ಇನ್ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಜೋಧ್‌ಪುರದಲ್ಲಿ ಐಹಬ್‌  ದೃಷ್ಟಿ ಫೌಂಡೇಶನ್, ಕಂಪ್ಯೂಟರ್ ವಿಷನ್, ಆಗ್ಮೆಂಟೆಡ್ ಮತ್ತು ವರ್ಚುವಲ್ ರಿಯಾಲಿಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ರೂರ್ಕಿಯಲ್ಲಿ ಡಿವೈಸಸ್ ಮೆಟೀರಿಯಲ್ಸ್ ಮತ್ತು ಟೆಕ್ನಾಲಜಿ ಫೌಂಡೇಶನ್‌ಗಾಗಿ ದಿವ್ಯಸಂಪರ್ಕ್ ಐಎಚ್‌ಯುಬಿ ರೂರ್ಕಿ, ಡಿವೈಸ್ ಟೆಕ್ನಾಲಜಿ ಮತ್ತು ಮೆಟೀರಿಯಲ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಟಿ ಪಾಟ್ನಾದಲ್ಲಿ ಐಐಟಿ ಪಾಟ್ನಾ ವಿಶ್ಲೇಷಣ್ -ಹಬ್ ಫೌಂಡೇಶನ್, ಭಾಷಣ, ವಿಡಿಯೋ ಮತ್ತು ಪಠ್ಯ ವಿಶ್ಲೇಷಣೆಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಶನ್ ಐಐಟಿ ಮದ್ರಾಸ್, ಸೆನ್ಸರ್‌ಗಳು, ನೆಟ್‌ವರ್ಕಿಂಗ್, ಆಕ್ಟಿವೇಟರ್ ಮತ್ತು ನಿಯಂತ್ರಣಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಹೈದರಾಬಾದ್‌ನಲ್ಲಿ ಸ್ವಾಯತ್ತ ನ್ಯಾವಿಗೇಷನ್ ಫೌಂಡೇಶನ್ (ಟಿಹಾನ್) ಮೇಲೆ ಎನ್‌ಎಂಐಸಿಪಿಎಸ್ ಟೆಕ್ನಾಲಜಿ ಇನ್ನೋವೇಶನ್ ಹಬ್  ಅಟಾನಮಸ್  ನ್ಯಾವಿಗೇಷನ್ ಮತ್ತು ಡೇಟಾ ಸ್ವಾಧೀನ ವ್ಯವಸ್ಥೆಗಳ (ಯುಎವಿ, ರೋವೆಟ್ಸಿ) ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಭುವನೇಶ್ವರ ದಲ್ಲಿ -ಡಿಎಪಿಟಿ-ಹಬ್ ಫೌಂಡೇಶನ್, ಡೇಟಾ ಅನಾಲಿಟಿಕ್ಸ್ & ಪ್ರಿಡಿಕ್ಟಿವ್ ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಗುವಾಹಟಿಯಲ್ಲಿ ಐಐಟಿ ಗುವಾಹಟಿ ಟೆಕ್ನಾಲಜಿ ಇನ್ನೋವೇಶನ್ ಮತ್ತು ಡೆವಲಪ್‌ಮೆಂಟ್ ಫೌಂಡೇಶನ್, ನೀರೊಳಗಿನ ಪರಿಶೋಧನೆಗಾಗಿ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಟಿ ಮಂಡಿ -ಹಬ್ ಮತ್ತು ಹೆಚ್‌ ಸಿಐ ಫೌಂಡೇಶನ್ ಐಐಟಿ ಮಂಡಿಯಲ್ಲಿ, ಮಾನವ-ಕಂಪ್ಯೂಟರ್ ಸಂವಹನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ದೆಹಲಿಯಲ್ಲಿ -ಹಬ್  ಫೌಂಡೇಷನ್‌ ಫಾರ್‌ ಕೋಬೊಟಿಕ್ಸ್‌ (ಐಹೆಚ್‌ ಎಫ್‌ಸಿ), ಕೋಬೊಟಿಕ್ಸ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ರೋಪಾರ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಫೌಂಡೇಶನ್ ಐಐಟಿ ರೋಪರ್, ಕೃಷಿ ಮತ್ತು ನೀರಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಟಿ (ಐಎಸ್‌ಎಂ) ಧನ್‌ ಬಾದ್‌ನಲ್ಲಿ ಎಕ್ಸ್‌ಪ್ಲೋರೇಷನ್ ಮತ್ತು ಮೈನಿಂಗ್ ಫೌಂಡೇಶನ್‌ನಲ್ಲಿ ತಂತ್ರಜ್ಞಾನದ ಆವಿಷ್ಕಾರ, ಗಣಿಗಾರಿಕೆಗೆ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಟಿ ಪಾಲಕ್ಕಾಡ್ ಟೆಕ್ನಾಲಜಿ -ಹಬ್ ಫೌಂಡೇಶನ್, ಇಂಟೆಲಿಜೆಂಟ್ ಕೊಲ್ಯಾಬೊರೇಟಿವ್ ಸಿಸ್ಟಮ್ಸ್ ಪ್ರದೇಶದಲ್ಲಿ ಕೆಲಸ ಮಾಡುತ್ತಿದೆ.
  • ಐಐಐಟಿ ಬೆಂಗಳೂರಿನಲ್ಲಿ ಐಐಐಟಿಬಿ ಕಾಮೆಟ್ ಫೌಂಡೇಶನ್, ಸುಧಾರಿತ ಸಂವಹನ ವ್ಯವಸ್ಥೆಯ ಕ್ಷೇತ್ರ, ಬಿಐಟಿಎಸ್‌ (BITS) ಪಿಲಾನಿಯಲ್ಲಿ ಬಿಐಟಿಎಸ್‌ (BITS BioCYTiH) ಬೈಯೋಸಿಂತ್ ಫೌಂಡೇಶನ್, ಬಯೋ-ಸಿಪಿಎಸ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಡಿಇಎಎಸ್- ಇನ್‌ಸ್ಟಿಟ್ಯೂಟ್ ಆಫ್ ಡೇಟಾ ಇಂಜಿನಿಯರಿಂಗ್, ಐಎಸ್‌ ಕೋಲ್ಕತ್ತಾದಲ್ಲಿ ಅನಾಲಿಟಿಕ್ಸ್ ಮತ್ತು ಸೈನ್ಸ್ ಫೌಂಡೇಶನ್, ಡೇಟಾ ಸೈನ್ಸ್, ಬಿಗ್ ಡೇಟಾ ಅನಾಲಿಟಿಕ್ಸ್ ಮತ್ತು ಡೇಟಾ ಕ್ಯುರೇಶನ್, ಇತ್ಯಾದಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಇಂದೋರ್‌ನಲ್ಲಿ ಐಐಟಿಐ ದೃಷ್ಟಿ ಸಿಪಿಎಸ್ ಫೌಂಡೇಶನ್, ಸಿಸ್ಟಂ ಸಿಮ್ಯುಲೇಶನ್, ಮಾಡೆಲಿಂಗ್ ಮತ್ತು ದೃಶ್ಯೀಕರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಹಬ್‌  ಅನುಭೂತಿ-ಐಐಐಟಿಡಿ ಫೌಂಡೇಶನ್ ದೆಹಲಿಯ ಐಐಐಟಿ ಯಲ್ಲಿ, ಕಾಗ್ನಿಟಿವ್ ಕಂಪ್ಯೂಟಿಂಗ್ ಮತ್ತು ಸಾಮಾಜಿಕ ಸೆನ್ಸಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಎಸ್‌ಇಆರ್‌  ಪುಣೆಯಲ್ಲಿ -ಹಬ್‌ ಕ್ವಾಂಟಂ ಟೆಕ್ನಾಲಜಿ ಫೌಂಡೇಷನ್, ಕ್ವಾಂಟಂ  ತಂತ್ರಜ್ಞಾನ   ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.
  • ಐಐಟಿ ತಿರುಪತಿಯಲ್ಲಿ ಐಐಟಿ ತಿರುಪತಿ ನವವಿಷ್ಕರ್ -ಹಬ್ ಫೌಂಡೇಶನ್, ಸ್ಥಾನೀಕರಣ ಮತ್ತು ನಿಖರ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
  • ಐಐಟಿ ಭಿಲಾಯಿ ಇನ್ನೋವೇಶನ್ ಮತ್ತು ಟೆಕ್ನಾಲಜಿ ಫೌಂಡೇಶನ್ ಐಐಟಿ ಭಿಲಾಯ್, ಹಣಕಾಸು ವಲಯಕ್ಕೆ (ಫಿನ್‌ಟೆಕ್) ಟೆಕ್ನಾಲಜೀಸ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದೆ.

Description: https://nmicps.gov.in/Content/img/Tihmap.png

ದೇಶದಲ್ಲಿರುವ ಹಬ್‌ಗಳ ವಿವರ

***



(Release ID: 1800593) Visitor Counter : 236