ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ದೆಹಲಿ ಪೊಲೀಸ್‌ನ 75ನೇ ಸಂಸ್ಥಾಪನಾ ದಿನ ಕಾರ್ಯಕ್ರಮ ಉದ್ದೇಶಿಸಿ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಷಣ


ದೆಹಲಿ ಪೊಲೀಸ್ ಪರೇಡ್ ನಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಕೇಂದ್ರ ಗೃಹ ಸಚಿವರು ಮತ್ತು ಅತ್ಯುತ್ತಮ ಸೇವೆ ಹಾಗೂ ಶೌರ್ಯಕ್ಕಾಗಿ ದೆಹಲಿ ಪೊಲೀಸರು ಮತ್ತು ಯೋಧರಿಗೆ ಪದಕ ಪ್ರದಾನ

ರೊಹಿನಿಯ ಡಿಸಿಪಿ ಸಂಕಿರ್ಣದಲ್ಲಿ ನಿರ್ಮಿಸಲಾಗಿರುವ ಡಿಸಿಪಿ ಕಚೇರಿ ಸಂಕಿರ್ಣ ಉದ್ಘಾಟಿಸಿದ ಶ್ರೀ ಅಮಿತ್ ಶಾ

ಕಳೆದ ಎರಡು ವರ್ಷಗಳಲ್ಲಿ ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದಾಗ ಮೃತಪಟ್ಟ 79 ಮಂದಿ ದೆಹಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವರಿಂದ ಶ್ರದ್ಧಾಂಜಲಿ

ದೆಹಲಿ ಪೊಲೀಸರು ತೋರಿದ ಸೇವೆ ಮತ್ತು ಭಕ್ತಿ ಭಾವನೆ ದೆಹಲಿಯಷ್ಟೇ ಅಲ್ಲದೇ ದೇಶಾದ್ಯಂತ ಪೊಲೀಸ್ ಪಡೆಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿ ನೀಡುತ್ತದೆ

ಸ್ವಾತಂತ್ರ್ಯ ಪೂರ್ವದ ಪೊಲೀಸ್ ವ್ಯವಸ್ಥೆಯು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಮತ್ತು ಬ್ರಿಟಿಷ್ ಅಧಿಕಾರ ಉಳಿಸಲು ಕೆಲಸ ಮಾಡಿತು

ಸ್ವಾತಂತ್ರ್ಯೋತ್ತರದಲ್ಲಿ ದೆಹಲಿ ಪೊಲೀಸ್ ವ್ಯವಸ್ಥೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು ಮತ್ತು ನಂತರ ದೆಹಲಿ ಪೊಲೀಸರು ಶಾಂತಿ, ಸೇವೆ ಮತ್ತು ನ್ಯಾಯದ ದ್ಯೇಯ ವಾಕ್ಯದೊಂದಿಗೆ ಕೆಲಸ ಮಾಡಲು ಆರಂಭಿಸಿದರು

ಸ್ವಾತಂತ್ರ್ಯದ ನಂತರ ದೆಹಲಿ ಪೊಲೀಸ್ ಗೆ ಹೊಸ ರೂಪ ಮತ್ತು ಅವರ ಬಗ್ಗೆ ಉತ್ತಮ ಭಾವನೆ ಜನರಲ್ಲಿ ಅಚ್ಚೊತ್ತಿದೆ

Posted On: 16 FEB 2022 6:24PM by PIB Bengaluru

ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರಿಗೆ ಹಲವಾರು ಗುರಿಗಳನ್ನು ನಿಗದಿಪಡಿಸಿದ್ದಾರೆ

ಆಜಾದಿ ಕಾ ಅಮೃತ ಮಹೋತ್ಸವದ ಮೊದಲ ಉದ್ದೇಶ 1857 ರಿಂದ 1947 ಆಗಸ್ಟ್ 15 ವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿಯ ಉಜ್ವಲ ಇತಿಹಾಸವನ್ನು ಯುವ ಸಮೂಹಕ್ಕೆ ಪರಿಚಯಿಸುವುದು ಮತ್ತು ಅವರಿಂದ ಸ್ಪೂರ್ತಿ ಪಡೆಯುವುದಾಗಿದೆ: ನವ ಮತ್ತು ಬಲಿಷ್ಠ ಬಾರತಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದಾಗಿದೆ

ಎರಡನೇ ಉದ್ದೇಶವೆಂದರೆ ಆಜಾದಿ ಕಾ ಅಮೃತ ಮಹೋತ್ಸವ ರಾಷ್ಟ್ರದ ಸಂಕಲ್ಪದ ವರ್ಷವಾಗಬೇಕು ಮತ್ತು 130 ಕೋಟಿ ನಾಗರಿಕರು ವರ್ಷದಲ್ಲಿ ಸಂಕಲ್ಪ ಮಾಡಬೇಕು. ದೇಶವನ್ನು ಬಲಪಡಿಸಿ ಸಮೃದ್ಧ, ಸುಶಿಕ್ಷಿತ ಮತ್ತು ಆರೋಗ್ಯಕರ ದೇಶವನ್ನಾಗಿ ಮಾಡಬೇಕು 

75 ರಿಂದ 100 ವರ್ಷಗಳ ಅವಧಿಯನ್ನು ಪ್ರಧಾನಮಂತ್ರಿಯವರು ಅಮೃತ ಕಾಲ ಎಂದು ಹೇಳಿದ್ದಾರೆ ಮತ್ತು 25 ವರ್ಷಗಳಲ್ಲಿ ನಾವು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಬೇಕು ಮತ್ತು ಪ್ರತಿ ಕ್ಷೇತ್ರದಲ್ಲೂ ಜಾಗತಿಕವಾಗಿ ಮೊದಲ ಸ್ಥಾನದಲ್ಲಿರಬೇಕು 

25 ವರ್ಷಗಳು ಸಂಕಲ್ಪ ಸಾಧಿಸುವ 25 ವರ್ಷಗಳಾಗಿರಬೇಕು. ಇದು ನಮ್ಮ ಪ್ರಯತ್ನಗಳ ಪರಕಾಷ್ಠೆ ಮತ್ತು ಗುರಿಗಳ ಸಾಧನವಾಗಬೇಕು

ಕಳೆದ ಎಂಟು ದಶಕಗಳಲ್ಲಿ ದೆಹಲಿ ಪೊಲೀಸರು ಹಲವಾರು ಉನ್ನತ ಶ‍್ರೇಣಿಯನ್ನು ತಲುಪಿದ್ದಾರೆ, ಕಷ್ಟದ ಸಮಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಸವಾಲುಗಳನ್ನು ಸ್ವೀಕರಿಸುವ ಮೂಲಕ ಸ್ವತಃ ಮಹತ್ತರವಾಗಿ ರೂಪಾಂತರಗೊಂಡಿದ್ದಾರೆ

ಇದು ದಹಲಿ ಪೊಲೀಸರ ವರ್ಷ, ಎರಡು ಗುರಿಗಳನ್ನು ನಿಗದಿಪಡಿಸುವ ವರ್ಷವಾಗಿದೆ

75 ರಿಂದ 80 ವರ್ಷಗಳ ಅವಧಿಯಲ್ಲಿ ದೆಹಲಿ ಪೊಲೀಸ್ ಪ್ರತಿಯೊಂದು ವಲಯದಲ್ಲಿ ಯಾವುದೇ ಕೊರತೆಯನ್ನು ತುಂಬುವ ಸಾಮರ್ಥ್ಯ ಹೊಂದುವಂತಾಗಿದೆ

ಎರಡನೇಯದಾಗಿ ದೆಹಲಿ ಪೊಲೀಸ್ ತನ್ನ ಸ್ಥಾಪನೆಯ ಶತಮಾನೋತ್ಸವ ವರ್ಷದಲ್ಲಿ ತನ್ನನ್ನು ಎಲ್ಲಿ ನೋಡಬೇಕು ಎಂಬುದನ್ನು ನಿರ್ಧರಿಸಲಿದೆ

ದೆಹಲಿ ಪೊಲೀಸರು ಐದು ವರ್ಷ ಮತ್ತು 25 ವರ್ಷಗಳ ಗುರಿಯನ್ನು ಸಮಯಕ್ಕೆ ಅನುಗುಣವಾಗಿ ಮತ್ತು ಮಾರ್ಗಸೂಚಿಯೊಂದಿಗೆ ರೂಪಿಸಬೇಕಾಗಿದೆ

ಕೋವಿಡ್-19 ಸಮಯದಲ್ಲಿ ಮತ್ತು ದೆಹಲಿ ಗಲಭೆಗಳಲ್ಲಿ, ವಿಶೇಷವಾಗಿ ದೆಹಲಿ ಗಲಭೆಗಳ ತನಿಖೆ ಮತ್ತು ಗಲಭೆಕೋರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಪ್ರಶಂಸೆಗೆ ಅರ್ಹರಾಗಿದ್ದಾರೆ

ದೆಹಲಿ ಪೊಲೀಸರು ದೇಶದ ರಾಜಧಾನಿಯ ಪೊಲೀಸರು, ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಗಣ್ಯರನ್ನು ರಕ್ಷಿಸುವ ಹುದ್ದೆಯಲ್ಲಿದ್ದಾರೆ

ಪ್ರಮುಖವಾಗಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಒಳಗೊಂಡ ಕಾರ್ಯಕ್ರಮಗಳನ್ನು ಸುರಕ್ಷಿತವಾಗಿ ನಡೆಸುವ ಮತ್ತು ವಿದೇಶಿ ಅತಿಥಿಗಳು ಒಳಗೊಂಡಂತೆ ಎಲ್ಲರ ಬಗ್ಗೆಯೂ ವಿಶೇಷ ಕಾಳಜಿ ಹೊಂದಿದವರಾಗಿದ್ದಾರೆ

ದೇಶದ ರಾಜಧಾನಿಯಾಗಿ, ಭಯೋತ್ಪಾದನೆ, ಮಾದಕ ದ್ರವ್ಯ ಮತ್ತು ರಾಜತಾಂತ್ರಿಕ ಸಿಬ್ಬಂದಿಯ ಭದ್ರತೆಯೂ ಕೂಡ ದೆಹಲಿ ಪೊಲೀಸರ ಜವಾಬ್ದಾರಿಯಾಗಿದೆ

ದೆಹಲಿ ಪೊಲೀಸ್ ತನ್ನ ಮುಂದೆ ಇರುವ ಸಮಯ ಮತ್ತು ಸವಾಲುಗಳೊಂದಿಗೆ ತನ್ನನ್ನು ಸಜ್ಜುಗೊಳಿಸಿಕೊಂಡಿದೆ ಮತ್ತು ಬದಲಾವಣೆ ಮಾಡಿಕೊಂಡಿದೆ. ಅದಕ್ಕಾಗಿಯೇ ಇಂದು ದೆಹಲಿ ಪೊಲೀಸರು ವಿಶ್ವದಾದ್ಯಂತ ಗೌರವಿಸಲ್ಪಡುತ್ತಾರೆ

ಕೋವಿಡ್19 ಸಾಂಕ್ರಾಮಿಕ ಸಮಯದಲ್ಲಿ ದೆಹಲಿ ಪೊಲೀಸರು ಮಾಡಿದ ಕೆಲಸವನ್ನು ಯಾವುದೇ ಪೊಲೀಸ್ ತಂಡ ಮಾಡಲಿಲ್ಲ

ಇದೇ ಅವಧಿಯಲ್ಲಿ ಅನೇಕ ಘಟನೆಗಳು ನಡೆಯುವ ಮೊದಲು ದೆಹಲಿ ಪೊಲೀಸರು ಬಹಳ ಬೇಗನೆ ತಡೆಯುವ ಸಾಮರ್ಥ್ಯ ಹೊಂದಿದ್ದಾರೆ; ಇದರಿಂದ ನಾವು ಸುರಕ್ಷಿತವಾಗಿದ್ದೇವೆ

ಮಾದಕ ದ್ರವ್ಯ, ಭಯೋತ್ಪಾದನೆ, ಸೈಬರ್ ದಾಳಿ, ನಕಲಿ ಕರೆನ್ಸಿ ಮತ್ತು ದೈನಂದಿನ ಅಪರಾಧಗಳಂತಹ ಸವಾಲುಗಳನ್ನು ದೆಹಲಿ ಪೊಲೀಸರು ಉತ್ತಮವಾಗಿ ನಿಭಾಯಿಸಿದ್ದಾರೆ

ದೆಹಲಿ ಪೊಲೀಸರ ಸುಧಾರಣೆಗಾಗಿ ಹಲವು ಹಂತಗಳು ಪ್ರಗತಿಯಲ್ಲಿವೆ, ದೆಹಲಿ ಪೊಲೀಸ್ ವ್ಯವಸ್ಥೆಯಲ್ಲಿ ವಿಶೇಷವಾಗಿ ಗ್ರಹಿಕೆ ನಿರ್ವಹಣಾ ವಿಭಾಗವನ್ನು ರಚಿಸಲಾಗಿದೆ

ಗ್ರಹಿಕೆ ನಿರ್ವಹಣಾ ವಿಭಾಗ ಪೊಲೀಸ್ ಇಲಾಖೆಯಲ್ಲಿನ ತೊಂದರೆಗಳನ್ನು ಸಾರ್ವಜನಿಕರ ಮುಂದೆ ಇಡುವುದಲ್ಲದೇ ಕಷ್ಟಕರವಾದ ಜೀವನ ಶೈಲಿಯಿಂದಾಗಿ ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಹೇಗೆ ನಿರ್ವಹಿಸಬಹುದು ಎನ್ನುವ ಕುರಿತು ಮಾರ್ಗದರ್ಶನ  ಮಾಡಲಿದೆ

ನಾವು ಪೊಲೀಸರ ಕರ್ತವ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕಾಗಿದೆ, ಕೆಲವು ಯಶೋಗಾಥೆಗಳು ಮತ್ತು ತ್ಯಾಗ, ತಪ್ಪಸ್ಸು ಮತ್ತು ಅವರ ಕರ್ತವ್ಯದ ಗುರಿಗಳ ಈಡೇರಿಕೆಯ ಗಂಭೀರತೆಯನ್ನು ನಾವು ನಿರ್ಲಕ್ಷಿಸಬಾರದು.

ರಕ್ಷಾ ಬಂಧನ್ ಸಂದರ್ಭದಲ್ಲಿ ಮಹಿಳೆಯರು ರಾಖಿ ಕಟ್ಟುವಾಗ ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ದೇಶದ ಇತರ ರಾಜ್ಯಗಳ ಪೊಲೀಸ್ ಪಡೆಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸುತ್ತವೆ

ನಾವು ಹೋಳಿ, ದೀಪಾವಳಿ ಮತ್ತು ಹಬ್ಬ ಆಚರಿಸುವಾಗಲೂ ಪೊಲೀಸ್ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೆಚ್ಚುವರಿ ಸಮಯ ಮತ್ತು ಕರ್ತವ್ಯದಲ್ಲಿ ನಿರತವಾಗಲಿದೆ

ದೇಶಾದ್ಯಂತ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಮತ್ತು ದೇಶದ ಆಂತರಿಕ ಭದ್ರತೆ ನಿರ್ವಹಿಸುವಾಗ ಎಲ್ಲಾ ರಾಜ್ಯಗಳ ಸಿ.ಆರ್.ಪಿ.ಎಫ್ ಪಡೆಗಳ 35,000 ಸಿಬ್ಬಂದಿ ಹುತಾತ್ಮರಾಗಿದ್ದಾರೆ

ವಸತಿ ತೃಪ್ತಿದಾಯಕ ಅನುಪಾತ 2019 ರಲ್ಲಿ ಶೇ 19 ರಷ್ಟಿತ್ತು. 2024 ವೇಳೆಗೆ ಪ್ರಮಾಣವನ್ನು ಶೇ 40 ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ

ಸ್ವಾತಂತ್ರ್ಯೋತ್ಸವದ ಶತಮಾನೋತ್ಸವವನ್ನು ಆಚರಿಸುವಾಗ ದೆಹಲಿ ಪೊಲೀಸರು ವಿಶ್ವದ ಅತ್ಯುತ್ತಮ ಪೊಲೀಸ್ ಪಡೆ ಎಂಬ ಖ್ಯಾತಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಾರೆ

 

ನವದೆಹಲಿಯಲ್ಲಿಂದು ದೆಹಲಿ ಪೊಲೀಸ್ 75ನೇ ಸಂಸ್ಥಾಪನಾ ದಿನದ ಸಮಾರಂಭ ಉದ್ದೇಶಿಸಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಷಣ ಮಾಡಿದರು. ದೆಹಲಿ ಪೊಲೀಸ್ ಪರೇಡ್ ನಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಕೇಂದ್ರ ಗೃಹ ಸಚಿವರು, ಅತ್ಯುತ್ತಮ ಸೇವೆ ಹಾಗೂ ಶೌರ್ಯಕ್ಕಾಗಿ ದೆಹಲಿ ಪೊಲೀಸರು ಮತ್ತು ಯೋಧರಿಗೆ ಪದಕ ಪ್ರದಾನ ಮಾಡಿದರು. ರೊಹಿನಿಯ ಡಿಸಿಪಿ ಸಂಕಿರ್ಣದಲ್ಲಿ ನಿರ್ಮಿಸಲಾಗಿರುವ ಡಿಸಿಪಿ ಕಚೇರಿ ಸಂಕಿರ್ಣವನ್ನು ಶ್ರೀ ಅಮಿತ್ ಶಾ ಉದ್ಘಾಟಿಸಿದರು. ಕೇಂದ್ರ ಸಚಿವ ದೇವು ಸಿನ್ಹಾ ಚೌಹಾಣ್, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ದೆಹಲಿ ಪೊಲೀಸ್ ಆಯುಕ್ತರು ಒಳಗೊಂಡಂತೆ ಹಲವು ಪ್ರಮುಖರು ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಕಳೆದ ಎರಡು ವರ್ಷಗಳಲ್ಲಿ ಕೋವಿಡ್19 ಸಾಂಕ್ರಾಮಿಕ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದಾಗ ಮೃತಪಟ್ಟ 79 ಮಂದಿ ದೆಹಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವರು ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಕೇಂದ್ರ ಗೃಹ ಸಚಿವರು ತಮ್ಮ ಭಾಷಣದಲ್ಲಿ ದೆಹಲಿ ಪೊಲೀಸರು 75 ವರ್ಷಗಳ ಕಾಲ ದೇಶದ ರಾಜಧಾನಿಯನ್ನು ಸುರಕ್ಷಿತವಾಗಿರಿಸಿದ್ದಾರೆ ಮತ್ತು ಅದರ ಬದಲಾಗುತ್ತಿರುವ ಸ್ವಭಾವಕ್ಕೆ ಅನುಗುಣವಾಗಿ ತನ್ನನ್ನು ತಾನು ಬದಲಾಯಿಸಿಕೊಂಡ ರೀತಿಯನ್ನು ಇಂದಿನ ಪರೇಡ್ ನಲ್ಲಿ ನೋಡಿದ್ದೇನೆ ಎಂದು ಹೇಳಿದರು.

ವಿಶಿಷ್ಟ ಸೇವೆ ಮತ್ತು ಶೌರ್ಯಕ್ಕಾಗಿ ಪದಕ ಪಡೆದ ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಯೋಧರನ್ನು ಅಭಿನಂದಿಸಿದ ಶ್ರೀ ಅಮಿತ್ ಶಾ, ಯಾವುದೇ ಶಕ್ತಿಯಲ್ಲಿ ಉತ್ತಮವಾದದ್ದನ್ನು ಸ್ವೀಕರಿಸಿರುವುದು ಇಡೀ ಶಕ್ತಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್19 ಸಾಂಕ್ರಾಮಿಕ ಸಂದರ್ಭದಲ್ಲಿ ಸಾರ್ವಜನಿಕ ಸೇವೆಯಲ್ಲಿದ್ದಾಗ ಮೃತಪಟ್ಟ 79 ಮಂದಿ ದೆಹಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವರು ಶ್ರದ್ಧಾಂಜಲಿ ಸಲ್ಲಿಸಿದರು. ದೆಹಲಿ ಪೊಲೀಸರು ತೋರಿದ ಸೇವೆ ಮತ್ತು ಭಕ್ತಿ ಮನೋಭಾವನೆ ದೆಹಲಿಯಷ್ಟೇ ಅಲ್ಲದೇ ದೇಶಾದ್ಯಂತ ಪೊಲೀಸ್ ಪಡೆಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.

ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ದೆಹಲಿ ಪೊಲೀಸ್ 75 ನೇ ಸಂಸ್ಥಾಪನಾ ದಿನ ಆಚರಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು.

ದೆಹಲಿ ಪೊಲೀಸರು ತೋರಿದ ಸೇವೆ ಮತ್ತು ಭಕ್ತಿ ಮನೋಭಾವನೆ ದೆಹಲಿಯಷ್ಟೇ ಅಲ್ಲದೇ ದೇಶಾದ್ಯಂತ ಪೊಲೀಸ್ ಪಡೆಗಳಿಗೆ ಮಾರ್ಗದರ್ಶನ ಮತ್ತು ಸ್ಪೂರ್ತಿ ನೀಡುತ್ತದೆ. ಸ್ವಾತಂತ್ರ್ಯಪೂರ್ವದ ಪೊಲೀಸ್ ವ್ಯವಸ್ಥೆಯು ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕಲು ಮತ್ತು ಬ್ರಿಟಿಷ್ ಅಧಿಕಾರ ಉಳಿಸಲು ಕೆಲಸ ಮಾಡಿತು.

ಸ್ವಾತಂತ್ರ್ಯೋತ್ತರದಲ್ಲಿ ದೆಹಲಿ ಪೊಲೀಸ್ ವ್ಯವಸ್ಥೆಯನ್ನು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಯಿತು ಮತ್ತು ನಂತರ ದೆಹಲಿ ಪೊಲೀಸರು ಶಾಂತಿ, ಸೇವೆ ಮತ್ತು ನ್ಯಾಯದ ದ್ಯೇಯ ವಾಕ್ಯದೊಂದಿಗೆ ಕೆಲಸ ಮಾಡಲು ಆರಂಭಿಸಿದರು. ಸ್ವಾತಂತ್ರ್ಯ ಪಡೆದ ನಂತರ ದೆಹಲಿ ಪೊಲೀಸರ ಹೊಸ ರೂಪ ಮತ್ತು ಉತ್ತಮ ಭಾವನೆಯೊಂದಿಗೆ ಕೆಲಸ ಮಾಡಿದ್ಉದ, ಇದು ಜನರಲ್ಲಿ ಉತ್ತಮ ಭಾವನೆ ಮೂಡಿಸಿದೆ ಎಂದರು.

ಆಜಾದಿ ಕಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರಿಗೆ ಹಲವಾರು ಗುರಿಗಳನ್ನು ನಿಗದಿಪಡಿಸಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವದ ಮೊದಲ ಉದ್ದೇಶ 1857 ರಿಂದ 1947 ಆಗಸ್ಟ್ 15 ವರೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿಯ ಉಜ್ವಲ ಇತಿಹಾಸವನ್ನು ಯುವ ಸಮೂಹಕ್ಕೆ ಪರಿಚಯಿಸುವುದು ಮತ್ತು ಅವರಿಂದ ಸ್ಪೂರ್ತಿ ಪಡೆಯುವುದಾಗಿದೆ. ನವ ಮತ್ತು ಬಲಿಷ್ಠ ಬಾರತಕ್ಕಾಗಿ ಜನತೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಾಗಿದೆ ಎಂದರು.

ಎರಡನೇ ಉದ್ದೇಶವೆಂದರೆ ಆಜಾದಿ ಕಾ ಅಮೃತ ಮಹೋತ್ಸವ ರಾಷ್ಟ್ರದ ಸಂಕಲ್ಪದ ವರ್ಷವಾಗಬೇಕು ಮತ್ತು ಅದರ 130 ಕೋಟಿ ನಾಗರಿಕರು ವರ್ಷದಲ್ಲಿ ಸಂಕಲ್ಪ ಮಾಡಬೇಕು. ದೇಶವನ್ನು ಬಲಪಡಿಸಿ ಅದನ್ನು ಸಮೃದ್ಧ, ಸುಶಿಕ್ಷಿತ ಮತ್ತು ಆರೋಗ್ಯಕರವಾಗಿಸಬೇಕು. 75 ರಿಂದ 100 ವರ್ಷಗಳ ಅವಧಿಯನ್ನು ಪ್ರಧಾನಮಂತ್ರಿಯವರು ಅಮೃತ ಕಾಲ ಎಂದು ಹೇಳಿದ್ದಾರೆ ಮತ್ತು 25 ವರ್ಷಗಳಲ್ಲಿ ನಾವು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಬೇಕು ಮತ್ತು ಪ್ರತಿ ಕ್ಷೇತ್ರದಲ್ಲೂ ಜಾಗತಿಕವಾಗಿ ಮೊದಲ ಸ್ಥಾನದಲ್ಲಿರುವಂತಾಗಬೇಕು ಎಂದು ಹೇಳಿದರು.

25 ವರ್ಷಗಳು ಸಂಕಲ್ಪ ಸಾಧಿಸುವ 25 ವರ್ಷಗಳಾಗಿರಬೇಕು. ನಮ್ಮ ಪ್ರಯತ್ನಗಳ ಪರಕಾಷ್ಠೆ ಮತ್ತು ಗುರಿಗಳ ಸಾಧನೆಯಾಗಬೇಕು. ಕಳೆದ ಎಂಟು ದಶಕಗಳಲ್ಲಿ ದೆಹಲಿ ಪೊಲೀಸರು ಹಲವಾರು ಉನ್ನತ ಶ‍್ರೇಣಿಯನ್ನು ತಲುಪಿದ್ದಾರೆ, ಕಷ್ಟದ ಸಮಯದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಮತ್ತು ಸವಾಲುಗಳನ್ನು ಸ್ವೀಕರಿಸುವ ಮೂಲಕ ಸ್ವತಃ ಮಹತ್ತರವಾಗಿ ರೂಪಾಂತರಗೊಂಡಿದ್ದಾರೆ. ವರ್ಷ ದಹಲಿ ಪೊಲೀಸರ ವರ್ಷ, ಎರಡು ಗುರಿಗಳನ್ನು ನಿಗದಿಪಡಿಸುವ ವರ್ಷವಾಗಿದೆ. 75 ರಿಂದ 80 ವರ್ಷಗಳ ಅವಧಿಯಲ್ಲಿ ದೆಹಲಿ ಪೊಲೀಸ್ ಪ್ರತಿಯೊಂದು ವಲಯದಲ್ಲಿ ಯಾವುದೇ ಕೊರತೆಯನ್ನು ತುಂಬುವ ಸಾಮರ್ಥ್ಯವನ್ನು ಇಲ್ಲಿನ ಪೊಲೀಸರು ಹೊಂದಿದ್ದಾರೆ ಎಂದು ಹೇಳಿದರು.

ಎರಡನೇಯದಾಗಿ ದೆಹಲಿ ಪೊಲೀಸ್ ತನ್ನ ಸ್ಥಾಪನೆಯ ಶತಮಾನೋತ್ಸವ ವರ್ಷದಲ್ಲಿ ತನ್ನನ್ನು ಎಲ್ಲಿ ನೋಡಬೇಕು ಎಂಬುದನ್ನು ನಿರ್ಧರಿಸಬೇಕು. ದೆಹಲಿ ಪೊಲೀಸರು ಐದು ವರ್ಷ ಮತ್ತು 25 ವರ್ಷಗಳ ಗುರಿಯನ್ನು ಸಮಯಕ್ಕೆ ಅನುಗುಣವಾಗಿ ಮತ್ತು ಮಾರ್ಗಸೂಚಿಯೊಂದಿಗೆ ರೂಪಿಸಬೇಕು ಎಂದರು

ಕೋವಿಡ್19 ಸಮಯದಲ್ಲಿ ಮತ್ತು ದೆಹಲಿ ಗಲಭೆಗಳ ಸಮಯದಲ್ಲಿ, ವಿಶೇಷವಾಗಿ ದೆಹಲಿ ಗಲಭೆಗಳ ತನಿಖೆ ಮತ್ತು ಗಲಭೆಕೋರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ದೆಹಲಿ ಪೊಲೀಸರು ವಹಿಸಿದ ಪಾತ್ರಕ್ಕಾಗಿ ಪ್ರಶಂಸೆಗೆ ಅರ್ಹರು, ದೆಹಲಿ ಪೊಲೀಸರು ದೇಶದ ರಾಜಧಾನಿಯ ಪೊಲೀಸರು, ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಗಣ್ಯರನ್ನು ರಕ್ಷಿಸುವ ಹುದ್ದೆಯಲ್ಲಿದ್ದಾರೆ. ದೆಹಲಿ ಪೊಲೀಸರು ಹಲವು ಬಾರಿ ಸಮಸ್ಯೆಗಳನ್ನು ಎದುರಿಸಿದರೂ ಸಹ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ದೆಹಲಿ ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಸವಾಲುಗಳೊಂದಿಗೆ ಎದುರಿಸಿದ್ದಾರೆ. ಆದರೆ ದೆಹಲಿ ಪೊಲೀಸರು ದೇಶದ ರಾಜಧಾನಿಯ ಪೊಲೀಸರು, ಇವರದ್ದು ಸಾಂವಿಧಾನಿಕ ಸ್ಥಾನಮಾನ ಹೊಂದಿರುವ ಗಣ್ಯರನ್ನು ರಕ್ಷಿಸುವ ಹುದ್ದೆಗಳಾಗಿವೆ. ಪ್ರಮುಖವಾಗಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯೋತ್ಸವ ಒಳಗೊಂಡ ಕಾರ್ಯಕ್ರಮಗಳನ್ನು ಸುರಕ್ಷಿತವಾಗಿ ನಡೆಸುವ ಮತ್ತು ವಿದೇಶಿ ಅತಿಥಿಗಳು ಒಳಗೊಂಡಂತೆ ಎಲ್ಲರ ಬಗ್ಗೆಯೂ ವಿಶೇಷ ಕಾಳಜಿ ಹೊಂದಿದ್ದಾರೆ. ದೇಶದ ರಾಜಧಾನಿಯಾಗಿ, ಭಯೋತ್ಪಾದನೆ, ಮಾದಕ ದ್ರವ್ಯ ಮತ್ತು ರಾಜತಾಂತ್ರಿಕ ಸಿಬ್ಬಂದಿಯ ಭದ್ರತೆಯೂ ಕೂಡ ದೆಹಲಿ ಪೊಲೀಸರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಾದಕ ದ್ರವ್ಯ, ಭಯೋತ್ಪಾದನೆ, ಸೈಬರ್ ದಾಳಿ, ನಕಲಿ ಕರೆನ್ಸಿ ಮತ್ತು ದೈನಂದಿನ ಅಪರಾಧಗಳಂತಹ ಸವಾಲುಗಳನ್ನು ದೆಹಲಿ ಪೊಲೀಸರು ಉತ್ತಮವಾಗಿ ನಿಭಾಯಿಸಿದ್ದಾರೆ. ದೆಹಲಿ ಪೊಲೀಸರ ಸುಧಾರಣೆಗಾಗಿ ಹಲವು ಹಂತಗಳ ಕಾರ್ಯಕ್ರಮಗಳು ಪ್ರಗತಿಯಲ್ಲಿವೆ, ದೆಹಲಿ ಪೊಲೀಸರಲ್ಲಿ ಗ್ರಹಿಕೆ ನಿರ್ವಹಣಾ ವಿಭಾಗವನ್ನು ರಚಿಸಲಾಗಿದೆ.ಗ್ರಹಿಕೆ ನಿರ್ವಹಣಾ ವಿಭಾಗ ಪೊಲೀಸ್ ಇಲಾಖೆಯಲ್ಲಿನ ತೊಂದರೆಗಳನ್ನು ಸಾರ್ವಜನಿಕರ ಮುಂದೆ ಇಡುವುದಲ್ಲದೇ ಕಷ್ಟಕರವಾದ ಜೀವನ ಶೈಲಿಯಿಂದಾಗಿ ಪ್ರಕೃತಿಯಲ್ಲಿನ ಬದಲಾವಣೆಗಳನ್ನು ಹೇಗೆ ನಿರ್ವಹಿಸಬಹುದು ಎನ್ನುವ ಕುರಿತು ಸಲಹೆ ನೀಡಲಿದೆ ಎಂದರು

ಇಂದು ನಾವು ಹಿಂತಿರುಗಿ ನೋಡಿದರೆ ದೆಹಲಿ ಪೊಲೀಸರ ಮೂಲವನ್ನು ಕಂಡು ಹಿಡಿಯುವುದು ತುಂಬಾ ಕಷ್ಟ. ಆದರೆ  ಬದಲಾವಣೆಯಿಂದಾಗಿ ದೆಹಲಿ ಪೊಲೀಸರು ಇಂದು ಸವಾಲುಗಳ ಮುಂದೆ ನಿಂತಿದ್ದಾರೆ ಮತ್ತು ಇಂದು ಅವರು ಇರುವ ಸ್ಥಳವನ್ನು  ತಲುಪಲು ಸಹಾಯ ಮಾಡಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.

ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಮತ್ತು ತಮ್ಮನ್ನು ತಾವು ಬದಲಾಯಿಸಿಕೊಳ್ಳದವರಿಗೆ ಸಮಯ ಮತ್ತು ಸವಾಲುಗಳು ಕಾಯುವುದಿಲ್ಲ. ಕೇಂದ್ರ ಗೃಹ ಸಚಿವನಾಗಿ ದೆಹಲಿ ಪೊಲೀಸರು ಸನ್ನದ್ಧವಾಗಿದ್ದಾರೆ ಮತ್ತು ಕಾಲಾನುಕಾಲಕ್ಕೆ ಬದಲಾವಣೆಯಾಗಿದ್ದಾರೆ. ಇದಕ್ಕಾಗಿ ದೆಹಲಿ ಪೊಲೀಸರು ಜಗತ್ತಿನಾದ್ಯಂತ ಗೌರವಿಸಲ್ಪಡುತ್ತಾರೆ ಎಂದರು. ಸಾಂಕ್ರಾಮಿಕ ಸಮಯದಲ್ಲಿ ದಹಲಿ ಪೊಲೀಸರು ಮಾಡಿದ ಕೆಲವನ್ನು ಬೇರೆ ಯಾವುದೇ ಪೊಲೀಸ್ ತಂಡ ಮಾಡುತ್ತಿರಲಿಲ್ಲ. ಇದೇ ರೀತಿಯಲ್ಲಿ ದೆಹಲಿ ಪೊಲೀಸರು ಬಹಳ ಬೇಗ ಘಟಿಸುವ ಹಲವು ಘಟನೆಗಳನ್ನು ತಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಇದರಿಂದಾಗಿ ಇಂದು ನಾವು ಸುರಕ್ಷಿತವಾಗಿದ್ದೇವೆ ಎಂದರು.

ನಾವು ಪೊಲೀಸರ ಕರ್ತವ್ಯವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕಾಗಿದೆ, ಕೆಲವು ಯಶೋಗಾಥೆಗಳು ಮತ್ತು ತ್ಯಾಗ, ತಪ್ಪಸ್ಸು ಮತ್ತು ಅವರ ಕರ್ತವ್ಯದ ಈಡೇರಿಕೆಯ ಗಂಭೀರತೆಯನ್ನು ನಾವು ನಿರ್ಲಕ್ಷಿಸಬಾರದು. ರಕ್ಷಾ ಬಂಧನ್ ಸಂದರ್ಭದಲ್ಲಿ ಮಹಿಳೆಯರು  ರಾಖಿ ಕಟ್ಟುವಾಗ ದೆಹಲಿ ಪೊಲೀಸ್ ಸಿಬ್ಬಂದಿ ಮತ್ತು ದೇಶದ ಇತರ ರಾಜ್ಯಗಳ ಪೊಲೀಸ್ ಪಡೆಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸುತ್ತವೆ. ನಾವು ಹೋಳಿ, ದೀಪಾವಳಿ ಮತ್ತು ಹಬ್ಬ ಆಚರಿಸುವಾಗಲೂ ಪೊಲೀಸ್ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಹೆಚ್ಚುವರಿ ಸಮಯ ಮತ್ತು ಕರ್ತವ್ಯದಲ್ಲಿ ನಿರತವಾಗುತ್ತವೆ ಎಂದರು.

ಹಬ್ಬ ಆಚರಿಸುವಾಗ ಪೊಲೀಸ್ ಸಿಬ್ಬಂದಿ ತನ್ನ ಕರ್ತವ್ಯ ಮತ್ತು  ಕಾನೂನು ಸುವ್ಯವಸ್ಥೆ ಪರಿಪಾಲನೆ ಬಗ್ಗೆ ಆತಂಕದಲ್ಲಿರುತ್ತದೆ ಎಂದರು.

ದೇಶಾದ್ಯಂತ ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಣೆ ಮಾಡುತ್ತಾರೆ ಮತ್ತು ದೇಶದ ಆಂತರಿಕ ಭದ್ರತೆಯನ್ನು ನಿರ್ವಹಣೆ ಮಾಡುವ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳ ಸಿ.ಆರ್.ಪಿ.ಎಫ್ ಪಡೆಯ 35,000 ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದರು.

ಗ್ರಹಿಕೆ ನಿರ್ವಹಣೆ ವಿಭಾಗ ಪೊಲೀಸ್ ಇಲಾಖೆ ತೊಂದರೆಗಳನ್ನು ಸಾರ್ವಜನಿಕರ ಮುಂದೆ ಇಡುವುದಲ್ಲದೇ ಪೊಲೀಸ್ ಸಿಬ್ಬಂದಿ ಎದುರಿಸುವ ಕಷ್ಟಕರ ಜೀವನ, ಪ್ರಕೃತಿಯಲ್ಲಿನ ಬದಲಾವಣೆಗಳ ಸಮಯದಲ್ಲೂ ಇವರು ಕರ್ತವ್ಯ ನಿರ್ವಹಣೆ ಮಾಡುವಾಗ ಎದುರಿಸುವ ಸವಾಲುಗಳ ಬಗ್ಗೆ ಮಾಹಿತಿ ನೀಡುತ್ತದೆ. ಇವರ ಸಮಸ್ಯೆಗಳನ್ನು ನಿವಾರಿಸಲು ಪೊಲೀಸ್ ತರಬೇತಿ ನಿರ್ದೇಶನಾಲಯವನ್ನು ಸಹ ಸ್ಥಾಪಿಸಲಾಗಿದೆ ಎಂದು ಸಚಿವ ಅಮಿತ್ ಶಾ ಹೇಳಿದರು.

ವಸತಿ ತೃಪ್ತಿದಾಯಕ ಅನುಪಾತ 2019 ರಲ್ಲಿ ಶೇ 19 ರಷ್ಟಿತ್ತು. 2024 ವೇಳೆಗೆ ಪ್ರಮಾಣವನ್ನು ಶೇ 40 ಕ್ಕೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಮಾದಕ ದ್ರವ್ಯ ಸಾಗಣೆ, ಭಯೋತ್ಪಾದನೆ, ಸೈಬರ್ ಅಪರಾದ, ನಕಲಿ ಕರೆನ್ಸಿ ಮತ್ತು ದೈನಂದಿನ ಅಪರಾಧ ಪ್ರಕರಣಗಳನ್ನು ದೆಹಲಿ ಪೊಲೀಸರು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆಸ್ವಾತಂತ್ರ್ಯೋತ್ಸವದ ಶತಮಾನೋತ್ಸವನ್ನು ದೆಹಲಿ ಪೊಲೀಸರು  ಆಚರಿಸುವ ಸಮಯದಲ್ಲಿ ವಿಶ್ವದ ಅತ್ಯುತ್ತಮ ಪೊಲೀಸ್ ಪಡೆ ಎಂಬ ಖ್ಯಾತಿಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ಕೇಂದ್ರ ಗೃಹ ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

***


(Release ID: 1798964) Visitor Counter : 246


Read this release in: English , Urdu , Marathi