ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಡಿಯಲ್ಲಿ “ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವ - ಹೊಸ  ಸೀಮಾರೇಖೆಗಳು: ನವೀಕರಿಸಬಹುದಾದ  ಇಂಧನದ  ಕಾರ್ಯಕ್ರಮ” ವನ್ನು ಆಯೋಜಿಸಿದೆ


ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು

ಎನರ್ಜಿ ಕಾಂಪ್ಯಾಕ್ಟ್‌ಗಳನ್ನು ಸಲ್ಲಿಸಿದ ಉದ್ಯಮದ ನಾಯಕರಿಗೆ ಸಚಿವರು ಮತ್ತು ಸಚಿವಾಲಯವು ಅನುಕೂಲ ಮಾಡಿಕೊಡುವುದು

Posted On: 16 FEB 2022 7:44PM by PIB Bengaluru

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯಕ್ರಮಹೊಸ ಸೀಮಾರೇಖೆಗಳು: ನವೀಕರಿಸಬಹುದಾದ ಇಂಧನದ ಕಾರ್ಯಕ್ರಮವು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವಎನ್ನುವ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಅಧಿಕಾರಿಗಳು, ಸಿಇಒ ಗಳು, ಸಿಎಮ್‍ಡಿ ಗಳು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ದೆಹಲಿಯ ಪ್ರಮುಖ ವಿಶ್ವವಿದ್ಯಾಲಯಗಳು/ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 300ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ರಾಯಭಾರಿಗಳು ಮತ್ತು ಹಲವಾರು ಪಾಲುದಾರ ರಾಷ್ಟ್ರಗಳ ರಾಯಭಾರ ಕಚೇರಿಗಳ ಹಿರಿಯ ಪ್ರತಿನಿಧಿಗಳು ಮತ್ತು ಭಾರತ ಸರ್ಕಾರದ ಉನ್ನತ ಮಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಸಹ ಸಮಾರಂಭದಲ್ಲಿ ಭಾಗವಹಿಸಿದರು.

ಸಚಿವಾಲಯದ ಕಾರ್ಯದರ್ಶಿಯವರು ಸ್ವಾಗತವನ್ನು ಕೋರಿದರು ಮತ್ತು ಆಶಯ ಭಾಷಣವನ್ನು ಮಾಡಿದರು. ಇಂಧನ ಕಾರ್ಯದರ್ಶಿಯವರು ಭಾರತದ ಇಂಧನ ಪರಿವರ್ತನೆಯ ಕಾರ್ಯಸೂಚಿಯ ಬಗ್ಗೆ ವಿಶೇಷ ಭಾಷಣ ಮಾಡಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾದ ಶ್ರೀ ಭಗವಂತ ಖೂಬಾ ಅವರು ಸಮಗ್ರ ಭಾಷಣ ಮಾಡಿದರು. ಶ್ರೀ ಖೂಬಾ ಅವರು ಭಾರತದ ಇಂಧನ ಪರಿವರ್ತನೆಯ ಬದ್ಧತೆಗಳು ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು; ಪರಿವರ್ತನೆಯ ನಾಗರಿಕ-ಕೇಂದ್ರಿತ ಸ್ವರೂಪ ಮತ್ತು ಇಂಧನ 2021 ಉನ್ನತ ಮಟ್ಟದ ಸಂವಾದಕ್ಕಾಗಿ  ವಿಶ್ವಸಂಸ್ಥೆಗೆ ಸಲ್ಲಿಸಲಾದ ಭಾರತ ಸರ್ಕಾರದ ಇಂಧನದ ಕಾಂಪ್ಯಾಕ್ಟ್‌ (ಯೋಜನೆ)ಗಳ ಬಗ್ಗೆ ಮಾತನಾಡಿದರು.

ಶ್ರೀ ರಾಜ್ ಕುಮಾರ್ ಸಿಂಗ್, ಕೇಂದ್ರ ಸಚಿವರು, ವಿದ್ಯುತ್ ಮತ್ತು ಹೊಸ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಅವರು ಚರ್ಚೆಯಲ್ಲಿ ಭಾಗವಹಿಸಿದರು, ಇದರಲ್ಲಿ ಅವರು ವಿದ್ಯಾರ್ಥಿಗಳಿಂದ ಸೇರಿದಂತೆ ಇಂಧನ ಪರಿವರ್ತನೆ ಮತ್ತು ಹವಾಮಾನ ಕ್ರಿಯೆಯ ವಿವಿಧ ಅಂಶಗಳನ್ನು ಒಳಗೊಂಡ ಪ್ರಶ್ನೆಗಳನ್ನು ಪಡೆದುಕೊಂಡರು ಮತ್ತು ಸಭಿಕರೊಂದಿಗೆ ತಮ್ಮ ಅಮೂಲ್ಯವಾದ ಒಳನೋಟಗಳನ್ನು ಹಂಚಿಕೊಂಡರು. ಸಚಿವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ನವೀಕರಿಸಬಹುದಾದ ಇಂಧನ ಗುರಿಗಳು, ಸೌರಶಕ್ತಿ, ಎಲ್ಲರಿಗೂ 24x7 ನಿರಂತರ ವಿದ್ಯುತ್, ನವೀಕರಿಸಬಹುದಾದ ಶಕ್ತಿಯೊಂದಿಗೆ ದೆಹಲಿಯ ಪ್ರಾಂತ್ಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದು, ಕೃಷಿ ವಲಯದಲ್ಲಿನ ಡೀಸೆಲ್ ಪಂಪ್‌ಗಳನ್ನು ಬದಲಾಯಿಸಿ ಸೌರ ಕೃಷಿ ಪಂಪ್‌ಗಳ ಬಳಕೆ, ಇವಿ  ವಲಯ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗಳು,ಅವಕಾಶಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.

ಸಂವಾದದಲ್ಲಿ ಮಾತನಾಡಿದ ಸಚಿವರು, ಎಲ್ಲಾ ಮನೆಗಳಿಗೆ ನಿರಂತರ 24x7 ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಕಳೆದ 7 ವರ್ಷಗಳಲ್ಲಿ, ಭಾರತವು ತನ್ನ ಸ್ಥಾಪಿತ ಸಾಮರ್ಥ್ಯವನ್ನು 395,000 ಮೆಗಾವ್ಯಾಟ್‍ಗೆ ಹೆಚ್ಚಿಸಿದೆ ಆದರೆ ನಮ್ಮ ಗರಿಷ್ಠ ಬೇಡಿಕೆ 200,000 ಮೆಗಾವ್ಯಾಟ್‍ ಆಗಿದೆ. ಭಾರತವು ಈಗ ಸಮಗ್ರ ರಾಷ್ಟ್ರೀಯ ಗ್ರಿಡ್ ಅನ್ನು ಹೊಂದಿದೆ. ನಿರಂತರ ವಿದ್ಯುತ್ ಸರಬರಾಜಿಗೆ ಎರಡು ಪ್ರಮುಖ ಅವಶ್ಯಕತೆಗಳೆಂದರೆ ಉತ್ತಮ ವಿತರಣಾ ವ್ಯವಸ್ಥೆ ಮತ್ತು ಡಿಸ್ಕಮ್‌ಗಳ ಕಾರ್ಯಸಾಧ್ಯತೆ ಎಂದು ಸಚಿವರು ಒತ್ತಿ ಹೇಳಿದರು. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಭಾರತವು ಅತ್ಯಂತ ಆಕರ್ಷಕ ತಾಣವಾಗಿದೆ ಎಂದು ಸಚಿವರು ಹೇಳಿದರು.

ಪಳೆಯುಳಿಕೆ ಇಂಧನದಿಂದ ಪಳೆಯುಳಿಕೆಯೇತರ ಇಂಧನ ವ್ಯವಸ್ಥೆಗೆ ಬದಲಾವಣೆಯಾಗುವಲ್ಲಿ ಜಗತ್ತಿಗೆ ಶಕ್ತಿಯ ಪರಿವರ್ತನೆಯ ಅಗತ್ಯವಿದೆ ಎಂದು ಶ್ರೀ ಸಿಂಗ್ ಹೇಳಿದ್ದಾರೆ. ಇಂಧನದ ಶೇಖರಣಾ ಸಾಧನಗಳ ಬೆಲೆ ಕಡಿಮೆಯಾದರೆ ಪರಿವರ್ತನೆಯು ವೇಗವಾಗಿ ಸಂಭವಿಸುತ್ತದೆ. ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್‌ಗಳಿಗಾಗಿ ಪಿಎಲ್‍ಐ  ಯೋಜನೆಯಡಿ, ಹಣಕಾಸು ಸಚಿವಾಲಯವು ಹೆಚ್ಚುವರಿ 19,500 ಕೋಟಿ ರೂ. ನೀಡಲಿದೆ

 

ಆರ್ಥಿಕತೆಯನ್ನು ವಿದ್ಯುದ್ದೀಕರಿಸುವುದು ಮತ್ತು ವಿದ್ಯುತ್ ಮಿಶ್ರಣದಲ್ಲಿ ನವೀಕರಣಸಾಧ್ಯ ಇಂಧನದ ಪಾಲನ್ನು ಹೆಚ್ಚಿಸುವುದು ಮುಖ್ಯ ಎಂದು ಸಚಿವರು ಒತ್ತಿ ಹೇಳಿದರು. ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಸೇರ್ಪಡೆ ದೆಹಲಿ ಎನ್‌ಸಿಆರ್‌ನಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಾರಿಗೆಯ ಭವಿಷ್ಯವಾಗಿದೆ ಎಂದು ಅವರು ಹೇಳಿದರು. ಸಣ್ಣ ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಬದಲಿಸುವ ಅವಶ್ಯಕತೆಯಿದೆ.

2024 ವೇಳೆಗೆ ಕೃಷಿ ಕ್ಷೇತ್ರದಲ್ಲಿ ಡೀಸೆಲ್ ಪಂಪ್‌ಗಳ ಬದಲಿಗೆ ಸೋಲಾರ್ ಪಂಪ್‌ಗಳನ್ನು ಅಳವಡಿಸಲಾಗುವುದು ಎಂದು ಸಚಿವರು ಹೇಳಿದರು. ನಿಟ್ಟಿನಲ್ಲಿ ರೈತರುಪಿಎಂ ಕುಸುಮ್ಅನ್ನು ಬಳಸಿಕೊಳ್ಳಬಹುದು ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಿಡ್‌ಗಳನ್ನು ಸುಗಮಗೊಳಿಸಲು ಸರ್ಕಾರವು ಪಾರದರ್ಶಕ ಬಿಡ್ಡಿಂಗ್ ವ್ಯವಸ್ಥೆ ಮತ್ತು ಪಾವತಿ ಭದ್ರತಾ ಕಾರ್ಯವಿಧಾನವನ್ನು ಜಾರಿಗೆ ತಂದಿದೆ ಎಂದು ಶ್ರೀ ಸಿಂಗ್ ಹೇಳಿದರು.

ಎಲ್ಲಾ  ಉದ್ದಿಮೆಗಳು  ಮತ್ತು ಕಂಪನಿಗಳು ತಮ್ಮ ಒಟ್ಟು ಇಂಧನ ಅಗತ್ಯತೆಗಳಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಲು ಶ್ರಮಿಸಬೇಕು ಎಂದು ಶ್ರೀ ಸಿಂಗ್ ಸಮಾರೋಪದಲ್ಲಿ ಹೇಳಿದರು.

ಶ್ರೀ ಸಿಂಗ್ ಮತ್ತು ಶ್ರೀ ಖೂಬಾ ಅವರು 2021 ಇಂಧನದ ಮೇಲಿನ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಂವಾದದ ಸಮಯದಲ್ಲಿ ತಮ್ಮ ಸ್ವಯಂಪ್ರೇರಿತ ಬದ್ಧತೆಗಳನ್ನು ಶಕ್ತಿಯ ಕಾಂಪ್ಯಾಕ್ಟ್‌ (ಯೋಜನೆ)ಗಳ ರೂಪದಲ್ಲಿ ಸಲ್ಲಿಸಿದ ಸಂಸ್ಥೆಗಳ ಸಿಎಮ್‍ಡಿ ಮತ್ತು ಸಿಇಒ ಗಳನ್ನು ಅಭಿನಂದಿಸಿದರು. ಅವರು ಭಾರತದಿಂದ ಸಲ್ಲಿಸಿದ ಎಲ್ಲಾ ಶಕ್ತಿಯ ಕಾಂಪ್ಯಾಕ್ಟ್‌ಗಳ ಸಂಕಲನಕ್ಕೆ ಚಾಲನೆ ನೀಡಿದರು.

ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ಶ್ರೀ ದಿನೇಶ್ ಜಗದಾಳೆ ಅವರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿ ವಂದನಾರ್ಪಣೆ ಭಾಷಣ ಮಾಡಿದರುಕಾರ್ಯಕ್ರಮವನ್ನು ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಯಿತು.

ಎನರ್ಜಿ ಕಾಂಪ್ಯಾಕ್ಟ್‌ಗಳ (ಶಕ್ತಿ ಯೋಜನೆ) ಬಗ್ಗೆ

ಎನರ್ಜಿ ಕಾಂಪ್ಯಾಕ್ಟ್‌ಗಳು ಎಸ್‍ಡಿಜಿ7 ಸಾಧನೆಯ ಪ್ರಗತಿಯನ್ನು ಹೆಚ್ಚಿಸಲು ನಿರ್ದಿಷ್ಟ ಗುರಿಗಳು ಮತ್ತು ಟೈಮ್‌ಲೈನ್‌ಗಳೊಂದಿಗೆ, ಎಲ್ಲರಿಗೂ ಶುದ್ಧ, ಕೈಗೆಟುಕುವ ಇಂದನಕ್ಕಾಗಿ ಕ್ರಿಯೆಯನ್ನು ವೇಗಗೊಳಿಸಲು ಸ್ವಯಂಪ್ರೇರಿತ ಕ್ರಿಯೆಯ ಬದ್ಧತೆಗಳಾಗಿವೆ. ಕಂಪನಿಗಳು, ಪ್ರಾದೇಶಿಕ/ಸ್ಥಳೀಯ ಸರ್ಕಾರಗಳು, ಎನ್‌ಜಿಒಗಳು ಮತ್ತು ಇತರ ಸದಸ್ಯ ರಾಷ್ಟ್ರಗಳು ಮತ್ತು ರಾಜ್ಯೇತರ ಭಾಗವಹಿಸುವವರು ಸೇರಿದಂತೆ ಎಲ್ಲಾ ಸಂಬಂಧಿತ ಪಾಲುದಾರರಿಗೆ ಶಕ್ತಿಯ ಕಾಂಪ್ಯಾಕ್ಟ್‌ಗಳ ಸಲ್ಲಿಕೆಯು ಮುಕ್ತವಾಗಿದೆ. ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಸಲ್ಲಿಸಿದ ರಾಷ್ಟ್ರೀಯ ಕಾಂಪ್ಯಾಕ್ಟ್‌ಗೆ ಹೆಚ್ಚುವರಿಯಾಗಿ ಸರ್ಕಾರಿ ಉದ್ದಿಮೆಗಳು, ಕಾರ್ಪೊರೇಟ್‌ಗಳು ಮತ್ತು ಸ್ಮಾರ್ಟ್ ಸಿಟಿಗಳಿಂದ ಇಪ್ಪತ್ತೆರಡು ಕಾಂಪ್ಯಾಕ್ಟ್‌ಗಳನ್ನು ಭಾರತದಿಂದ ಸಲ್ಲಿಸಲಾಗಿದೆ.

ಹೆಚ್ಚಿನ ವಿವರಗಳಿಗಾಗಿ: UN HLDE 2021 ಮತ್ತು ಎನರ್ಜಿ ಕಾಂಪ್ಯಾಕ್ಟ್‌ಗಳನ್ನು ಇಲ್ಲಿ ಕಾಣಬಹುದು: https://www.un.org/en/conferences/energy2021

***



(Release ID: 1798960) Visitor Counter : 303


Read this release in: English , Urdu , Hindi