ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತ ಸರ್ಕಾರದ 38 ಸಚಿವಾಲಯಗಳು ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬೆಂಬಲವನ್ನು ಕೋರಿವೆ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್

ವೈಜ್ಞಾನಿಕ ಅಪ್ಲಿಕೇಶನ್‌ಗಳು ಮತ್ತು ತಾಂತ್ರಿಕ ಬೆಂಬಲ ಮತ್ತು ಪರಿಹಾರಗಳಿಗಾಗಿ 38 ಸಚಿವಾಲಯಗಳು/ ಇಲಾಖೆಗಳಿಂದ 200 ಕ್ಕೂ ಹೆಚ್ಚು ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿದೆ

ಪೃಥ್ವಿ ಭವನದಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ಇಲಾಖೆಗಳ ಉನ್ನತ ಮಟ್ಟದ ಜಂಟಿ ಸಭೆಯ ಅಧ್ಯಕ್ಷತೆಯನ್ನು ಸಚಿವರು ವಹಿಸಿದ್ದರು

ಬಾಹ್ಯಾಕಾಶ ಅವಶೇಷಗಳ ನಿರ್ವಹಣೆಗೆ ಸಾಫ್ಟ್‌ವೇರ್ ಪರಿಹಾರಗಳ ಮೇಲೆ ಕೆಲಸ ಮಾಡುವ ಬಾಹ್ಯಾಕಾಶ ಕ್ಷೇತ್ರದ ನವೋದ್ಯಮಗಳು ಜಾಗತಿಕ ಪ್ರಭಾವವನ್ನು ಹೊಂದಿವೆ: ಡಾ. ಜಿತೇಂದ್ರ ಸಿಂಗ್

Posted On: 16 FEB 2022 5:14PM by PIB Bengaluru

ಕೇಂದ್ರ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ವಿಜ್ಞಾನ ಮತ್ತು ತಂತ್ರಜ್ಞಾನ; ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ಭೂ ವಿಜ್ಞಾನ; ಪ್ರಧಾನ ಮಂತ್ರಿ ಕಾರ್ಯಾಲ ಯರಾಜ್ಯ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ, ಡಾ ಜಿತೇಂದ್ರ ಸಿಂಗ್ ಅವರು ಇಂದು ಮಾಹಿತಿ ನೀಡಿದರುಇದುವರೆಗೆ, ಭಾರತ ಸರ್ಕಾರದ 38 ಸಚಿವಾಲಯಗಳು ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬೆಂಬಲವನ್ನು ಕೋರಿವೆ. ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸೇರಿದಂತೆ ಎಲ್ಲಾ ಆರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳಿಂದ ವೈಜ್ಞಾನಿಕ ಅಪ್ಲಿಕೇಶನ್‌ಗಳು ಮತ್ತು ತಾಂತ್ರಿಕ ಬೆಂಬಲ ಮತ್ತು ಪರಿಹಾರಗಳಿಗಾಗಿ 38  ಸಚಿವಾಲಯಗಳು/ಇಲಾಖೆಗಳಿಂದ 200 ಕ್ಕೂ ಹೆಚ್ಚು ಪ್ರಸ್ತಾವನೆಗಳು/ಅವಶ್ಯಕತೆಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಹೇಳಿದರು.

ಖಾಸಗಿ ಕಂಪನಿಯವರಿಗೆ  ಬಾಹ್ಯಾಕಾಶ ವಲಯವನ್ನು ತೆರದ  ನಂತರ, ಅನ್ವೇಷಿಸದ ಸಾಮರ್ಥ್ಯವನ್ನು ಅನ್ವೇಷಿಸಲು ನವೀನ ನವೋದ್ಯಮಗಳು  ದೊಡ್ಡ ರೀತಿಯಲ್ಲಿ ಬರುತ್ತಿವೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಬಾಹ್ಯಾಕಾಶ ಕ್ಷೇತ್ರದಲ್ಲಿ 50 ಕ್ಕೂ ಹೆಚ್ಚು ನವೋದ್ಯಮಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳಲ್ಲಿ ಸುಮಾರು 10 ಕ್ಕೂ ಹೆಚ್ಚು ರೂ 50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ನಿಧಿಯನ್ನು ಪ್ರತ್ಯೇಕವಾಗಿ ಹೊಂದಿವೆ ಎಂದು ಅವರು ಹೇಳಿದರು. ಎನ್ಎವಿಐಸಿ (ನಾವಿಕ್ಆಧಾರಿತ ಅಪ್ಲಿಕೇಶನ್‌ಗಳ ಹೊರತಾಗಿ, ನವೋದ್ಯಮಗಳು ಜಾಗತಿಕ ಪ್ರಭಾವವನ್ನು ಹೊಂದಿರುವ ಬಾಹ್ಯಾಕಾಶದಲ್ಲಿ ಅವಶೇಷಗಳ  ನಿರ್ವಹಣೆಗಾಗಿ ಸಾಫ್ಟ್‌ವೇರ್ ಪರಿಹಾರಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಸಂತೋಷಪಟ್ಟರು.

ಇಲ್ಲಿನ ಪೃಥ್ವಿ ಭವನದಲ್ಲಿ ಎಲ್ಲಾ ವಿಜ್ಞಾನ ಸಚಿವಾಲಯಗಳು ಮತ್ತು ವಿಜ್ಞಾನ ಇಲಾಖೆಗಳ ಉನ್ನತ ಮಟ್ಟದ ಜಂಟಿ ಸಭೆಯ ಅಧ್ಯಕ್ಷತೆಯನ್ನು ಸಚಿವರು ವಹಿಸಿದ್ದರು. ಸಭೆಯಲ್ಲಿ ಪ್ರಧಾನ ಮಂತ್ರಿಗಳ ಸಲಹೆಗಾರರಾದ ಶ್ರೀ ಭಾಸ್ಕರ್ ಖುಲ್ಬೆ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಕೆ ವಿಜಯರಾಘವನ್, ಸಿಎಸ್ಐಆರ್ ಕಾರ್ಯದರ್ಶಿ ಡಾ ಶೇಖರ್ ಮಾಂಡೆ, ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಎಂ.ರವಿಚಂದ್ರನ್ ಕಾರ್ಯದರ್ಶಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಎಸ್.ಚಂದ್ರಶೇಖರ್ಕಾರ್ಯದರ್ಶಿ ಜೈವಿಕ ತಂತ್ರಜ್ಞಾನ ಇಲಾಖೆ ಡಾ ರಾಜೇಶ್ ಗೋಖಲೆ, ಕಾರ್ಯದರ್ಶಿ ಬಾಹ್ಯಾಕಾಶ ಮತ್ತು ಇಸ್ರೋ ಅಧ್ಯಕ್ಷ ಶ್ರೀ ಎಸ್. ಸೋಮನಾಥ್, ಕಾರ್ಯದರ್ಶಿ ಪರಮಾಣು ಶಕ್ತಿ, ಡಾ ಕೆ.ಎನ್. ವ್ಯಾಸ್, ಕಾರ್ಯದರ್ಶಿ ಸಾಮರ್ಥ್ಯ ನಿರ್ಮಾಣ ಆಯೋಗ ಹೇಮಂಗ್ ಜಾನಿ, ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕೃಷಿ, ಭೂ ಮ್ಯಾಪಿಂಗ್, ಡೈರಿ, ಆಹಾರ, ಶಿಕ್ಷಣ, ಕೌಶಲ್ಯ, ರೈಲ್ವೆ, ರಸ್ತೆಗಳು, ಜಲಶಕ್ತಿ, ವಿದ್ಯುತ್, ಕಲ್ಲಿದ್ದಲು ಮತ್ತು ಚರಂಡಿ ಶುದ್ಧೀಕರಣದಂತಹ ಇತರ ಅನ್ಯ ಕ್ಷೇತ್ರಗಳಿಗೆ ವಿವಿಧ ವೈಜ್ಞಾನಿಕ ಪರಿಹಾರಗಳನ್ನು ಅನ್ವಯಿಸುವ ಕೆಲಸದಲ್ಲಿ ಸಂಬಂಧಪಟ್ಟ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಹಿಂದಿನ ಸಭೆಗಳ ಆಧಾರದ ಮೇಲೆ, ಸಚಿವಾಲಯಗಳ ಪ್ರಸ್ತಾವನೆಗಳು ಮತ್ತು ಸಮಸ್ಯೆಗಳಿಗೆ ವೈಜ್ಞಾನಿಕ ಅಪ್ಲಿಕೇಶನ್‌ಗಳ ಗುರುತಿಸುವಿಕೆಯನ್ನು ತೀವ್ರಗೊಳಿಸಲು ವಿಜ್ಞಾನ ಇಲಾಖೆಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳ ನಡುವೆ ಜಂಟಿ ಕಾರ್ಯ ಗುಂಪುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಡಾ ಜಿತೇಂದ್ರ ಸಿಂಗ್ ಅವರು, ಸಾಮರ್ಥ್ಯ ನಿರ್ಮಾಣ ಆಯೋಗದ ಸಹಾಯದಿಂದ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ವಿಷಯಾಧಾರಿತ ಚರ್ಚೆಗಳನ್ನು ಸ್ಥಳದಿಂದ ಸ್ಥಳಕ್ಕೆ ತೆಗೆದುಕೊಳ್ಳಲು ನೀಲನಕ್ಷೆಯನ್ನೂ ಸಹ ಸಿದ್ಧಪಡಿಸಲಾಗುತ್ತಿದೆ. ಕೇಂದ್ರ ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಜ್ಞಾನ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಳಗೊಂಡ ಮೊದಲ ಸುತ್ತಿನ ಸಭೆಗಳು ಪೂರ್ಣಗೊಂಡಿವೆ ಮತ್ತು ವೈಜ್ಞಾನಿಕ ಪರಿಹಾರಗಳಿಗಾಗಿ ರಾಜ್ಯಗಳಿಂದ ಬೇಡಿಕೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು. ಅವರು ಹೇಳಿದರು, ವಿವಿಧ ರಾಜ್ಯಗಳು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿವೆ ಆದರೆ ಅವೆಲ್ಲವೂ ಆರ್ & ಡಿ, ಇನ್ನೋವೇಶನ್ ಮತ್ತು ಎಸ್‌ಟಿಐ ಪರಿಸರ ವ್ಯವಸ್ಥೆಯಲ್ಲಿ ಕೇಂದ್ರದೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಸಿದ್ಧವಾಗಿವೆ.

ಡಾ ಜಿತೇಂದ್ರ ಸಿಂಗ್ ಅವರು ಗುಜರಾತ್, ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ & ಟಿ) ನೀತಿಯನ್ನು ಹೊಂದಿರುವ ದೇಶದ ಏಕೈಕ ರಾಜ್ಯವಾಗಿದೆ ಎಂದು ಮಾಹಿತಿ ನೀಡಿದರು, ಆದರೆ ಕಳೆದ ನಾಲ್ಕು ತಿಂಗಳುಗಳ ಚಿಂತನ-ಮಂಥನ ಅಧಿವೇಶನಗಳ ನಂತರ, ಸಿಕ್ಕಿಂ, ಮಣಿಪುರ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಇನ್ನೂ 11 ರಾಜ್ಯಗಳು ತಮ್ಮ ಎಸ್ & ಟಿ ನೀತಿಯನ್ನು ಸಿದ್ಧಪಡಿಸುತ್ತಿವೆ. ಪ್ರತಿಯೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಮಾನ್ಯ ಜನರಿಗೆ ಸುಲಭವಾಗಿ ಬದುಕಲು ಸಾಧ್ಯವಾಗುವಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ತಾಂತ್ರಿಕ ಮಧ್ಯಸ್ಥಿಕೆಗಳು ಸಹಾಯ ಮಾಡುವ ಪ್ರದೇಶಗಳನ್ನು ಗುರುತಿಸಲು ಕೇಳಲಾಗಿದೆ ಎಂದು ಅವರು ಹೇಳಿದರು. ಉದಾಹರಣೆಗೆ, ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಸರ್ಕಾರಕ್ಕೆ ಇತ್ತೀಚಿನ ಹಿಮ ತೆರವು ತಂತ್ರಜ್ಞಾನದ ಮೂಲಕ ಸಹಾಯ ಮಾಡಲಾಗುವುದು ಮತ್ತು ಪುದುಚೇರಿ ಮತ್ತು ತಮಿಳುನಾಡು ಸಮುದ್ರ-ದಂಡೆಯ ಮರುಸ್ಥಾಪನೆ ಮತ್ತು ನವೀಕರಣದಲ್ಲಿ ಸಹಾಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ವಿಜ್ಞಾನ ಪ್ರಸಾರವನ್ನು ಸಂಪೂರ್ಣವಾಗಿ ನವೀಕರಿಸಲಾಗುತ್ತಿದೆ ಮತ್ತು ಇದು ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸೇರಿದಂತೆ ಆರು ಎಸ್ & ಟಿ ಇಲಾಖೆಗಳ ಸಂವಹನ ಅಗತ್ಯಗಳನ್ನು ಪೂರೈಸುತ್ತದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಅರೋಮಾ ಮಿಷನ್, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಅಳವಡಿಸಲಾಗಿರುವ ಯುವಿ ತಂತ್ರಜ್ಞಾನ, ನೀರಿನ ನಿರ್ವಹಣೆಗಾಗಿ ಹೆಲಿ-ಬೋರ್ನ್ ಸಮೀಕ್ಷೆ, ವ್ಯಾಪಕ ಪ್ರಸಾರಕ್ಕಾಗಿ ಯಾಂತ್ರೀಕೃತ ಒಳಚರಂಡಿ ಶುಚಿಗೊಳಿಸುವ ವ್ಯವಸ್ಥೆ ಮುಂತಾದ ಯಶಸ್ಸಿನ ಕಥೆಗಳ ಕುರಿತು ಸಣ್ಣ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು   ವಿಜ್ಞಾನ ಪ್ರಸಾರವನ್ನು ಕೇಳಲಾಗಿದೆ ಎಂದು ಅವರು ಹೇಳಿದರು.

2014ರಿಂದ ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸೇರಿದಂತೆ ಎಲ್ಲಾ ಆರು ಎಸ್ & ಟಿ ಇಲಾಖೆಗಳು ಕೈಗೊಂಡಿರುವ ಸುಧಾರಣೆಗಳ ಸಾಮಾನ್ಯ ಪುಸ್ತಿಕವನ್ನು ಸಂಕಲಿಸಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು. ದ್ವಂದ್ವವನ್ನು ತಪ್ಪಿಸಲು ಮತ್ತು ನೀತಿ ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಿನ ಹೊಂದಿಕೆಯನ್ನು ಸಾಧಿಸಲು ಬಾಹ್ಯಾಕಾಶ ಮತ್ತು ಪರಮಾಣು ಶಕ್ತಿ ಸೇರಿದಂತೆ ಎಲ್ಲಾ ಆರು ಎಸ್ & ಟಿ ಇಲಾಖೆಗಳಿಗೆ ಸಾಮಾನ್ಯ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸುವ ಕೆಲಸವೂ ವೇಗವಾಗಿ ಪ್ರಗತಿಯಲ್ಲಿದೆ ಎಂದು ಸಚಿವರು ಮಾಹಿತಿ ನೀಡಿದರು.

***(Release ID: 1798958) Visitor Counter : 119


Read this release in: Urdu , English , Hindi , Tamil