ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
azadi ka amrit mahotsav g20-india-2023

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ  ಬಾಂಬೆ ಐಐಟಿ ಮತ್ತು ಬೆಂಗಳೂರಿನ ಜೆಎನ್ ಸಿಎಎಸ್ ಆರ್ ನಲ್ಲಿ ಎರಡು ಕಾರ್ಬನ್  ಶೇಖರಣೆ ಮತ್ತು ಬಳಕೆಯ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಹೊಂದಲಿರುವ ಭಾರತ 

Posted On: 10 FEB 2022 2:28PM by PIB Bengaluru

ಭಾರತದಲ್ಲಿ ಇಂಗಾಲ  ಸಂಗ್ರಹ( ಕ್ಯಾಪ್ಚರ್) ಮತ್ತು ಬಳಕೆಯಲ್ಲಿ ಎರಡು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತದ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಕಾರ್ಬನ್ ಸಂಗ್ರಹ ಮತ್ತು ಬಳಕೆಯ ಎರಡು ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರ (ಎನ್ ಸಿಒಇ-ಸಿಸಿಯು) ಗಳನ್ನು ಮುಂಬೈನಲ್ಲಿರುವ  ಬಾಂಬೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮತ್ತು ಬೆಂಗಳೂರಿನಲ್ಲಿರುವ ಜವಾಹರಲಾಲ್ ನೆಹರು ಅತ್ಯಾಧುನಿಕ ವೈಜ್ಞಾನಿಕ ಸಂಶೋಧನಾ ಕೇಂದ್ರ (ಜೆಎನ್ ಸಿಎಎಸ್ ಆರ್ ) ದಲ್ಲಿ ಸ್ಥಾಪಿಸಲಾಗುತ್ತಿದೆ.

ಶ್ರೇಷ್ಠತಾ ಕೇಂದ್ರಗಳು ವಿಭಾಗದಲ್ಲಿ ಪ್ರಸ್ತುತ ಇರುವ ಸಂಶೋಧನೆ ಮತ್ತು ಅಭಿವೃದ್ಧಿ ಹಾಗು ಹೊಸಶೋಧನೆ ಕುರಿತ ಚಟುವಟಿಕೆಗಳನ್ನು ತಿಳಿಯಲು ಮತ್ತು ಅವುಗಳನ್ನು ಗುರುತಿಸುವ ಕಾರ್ಯವನ್ನು ಸುಗಮಗೊಳಿಸುತ್ತದೆ ಹಾಗು ಪಾಲುದಾರ ಗುಂಪುಗಳು ಮತ್ತು ಸಂಸ್ಥೆಗಳ ನಡುವೆ ಸಮನ್ವಯ, ಸಿನರ್ಜಿಯೊಂದಿಗೆ ಸಂಶೋಧಕರು, ಕೈಗಾರಿಕೆಗಳು ಮತ್ತು ಪಾಲುದಾರರ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸುತ್ತದೆ. ಕೇಂದ್ರಗಳು ಸಿಸಿಯು ವಲಯದಲ್ಲಿ ಅತ್ಯಾಧುನಿಕ ಸಂಶೋಧನೆ ಮತ್ತು ಅಪ್ಲಿಕೇಶನ್-ಆಧಾರಿತ ಉಪಕ್ರಮಗಳಿಗಾಗಿ ಬಹು-ಶಿಸ್ತಿಯ, ದೀರ್ಘಾವಧಿಯ ಸಂಶೋಧನೆ, ವಿನ್ಯಾಸ ಅಭಿವೃದ್ಧಿ, ಸಹಯೋಗ ಮತ್ತು ಸಾಮರ್ಥ್ಯ ವೃದ್ಧಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.

ಬಾಂಬೆ ಐಐಟಿಯಲ್ಲಿನ ಎನ್ ಸಿಒಇ-ಸಿಸಿಯು ಭಾರತದಲ್ಲಿ ಉದ್ಯಮ-ಆಧಾರಿತ ಸಿಸಿಯು  ಆವಿಷ್ಕಾರಕ್ಕಾಗಿ ಮೈಲಿಗಲ್ಲುಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಉಪಕ್ರಮಗಳನ್ನು ವ್ಯಾಖ್ಯಾನಿಸುತ್ತದೆ, ಜೊತೆಗೆ ಸಿಸಿಯುನಲ್ಲಿ ತಂತ್ರಜ್ಞಾನದ ಸಿದ್ಧತೆಯನ್ನು ಸುಧಾರಿಸಲು ನವೀನ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಇದು ಇಂಗಾಲವನ್ನು ಹಿಡಿದಿಡುವುದು ಮತ್ತು ಬಳಕೆಯ ವಿಧಾನಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯತ್ನಗಳನ್ನು ವೇಗಗೊಳಿಸುತ್ತದೆ. ಹಿಡಿದಿಡಲಾದ ಇಂಗಾಲದ ಆಮ್ಲವನ್ನು ರಾಸಾಯನಿಕಗಳಾಗಿ ಪರಿವರ್ತಿಸುವುದು, ಸಿಒ2 ಸಾಗಣೆ, ಸಮ್ವರ್ಧನೆ ಮತ್ತು ಬಳಕೆ, ಹಾಗೆಯೇ ವರ್ಧಿತ ಹೈಡ್ರೋಕಾರ್ಬನ್ ಮರುಪಡೆಯುವಿಕೆ ಮೊದಲಾದ ಇತರ ಪ್ರಯೋಜನಗಳನ್ನು ಪಡೆಯುವುದರ ಕುರಿತೂ ಕೇಂದ್ರವು ಕೆಲಸ ಮಾಡುತ್ತದೆ. ಎನ್ ಸಿಒಇ-ಸಿಸಿಯು ವಿದ್ಯುತ್ ಸ್ಥಾವರ ಮತ್ತು ಜೈವಿಕ ಅನಿಲ ಸ್ಥಾವರದ ಹೊರಸೂಸುವಿಕೆಯಿಂದ ಪರಿಣಾಮಕಾರಿಯಾಗಿ ಸಿಒ2 ಹಿಡಿದಿಡುವಿಕೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಪ್ರದರ್ಶಿಸುತ್ತದೆ.

ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನಲ್ಲಿರುವ ಎನ್‌ಸಿಸಿಯು ಸಂಬಂಧಿತ ವಸ್ತುಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸುವ ಮೂಲಕ ಇಂಗಾಲ ಶೇಖರಣೆ ಮತ್ತು ಪರಿವರ್ತನೆಯನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಗುರಿಯನ್ನು ಹೊಂದಿದೆಹೈಡ್ರೋಕಾರ್ಬನ್‌ಗಳು, ಓಲಿಫೈನ್‌ಗಳು ಮತ್ತು ಇತರ ಮೌಲ್ಯವರ್ಧಿತ ರಾಸಾಯನಿಕಗಳು ಮತ್ತು ಇಂಧನಗಳನ್ನು ಉತ್ಪಾದಿಸಲು ಪ್ರಕ್ರಿಯೆಗಳನ್ನು ಪ್ರಾಯೋಗಿಕ ಮಾದರಿಯನ್ನು ವೃದ್ಧಿಸಲಾಗುತ್ತಿದೆ. ಇದರಿಂದ ಉದ್ಯಮದ ಹಂತದಲ್ಲಿ ವಾಣಿಜ್ಯ ಅಗತ್ಯಗಳಿಗೆ ಸಮನಾಗಿ ತಂತ್ರಜ್ಞಾನದ ತಯಾರಿ ಮಟ್ಟವನ್ನು ತಲುಪಲು ಕೆಲಸ ಮಾಡುತ್ತದೆ. ಕೇಂದ್ರವು ಸಿಸಿಯು ಸಂಶೋಧನೆಯನ್ನು ಉತ್ತೇಜಿಸುತ್ತದೆ, ತರಬೇತಿ ಮತ್ತು ಸಮಾಲೋಚನೆಯನ್ನು ನೀಡುತ್ತದೆ ಜತೆಗೆ ಜಾಗತಿಕ ಆರ್ಥಿಕ ಮತ್ತು ಸಾಮಾಜಿಕ ಪ್ರಭಾವದೊಂದಿಗೆ ಅದರ ಸಂಶೋಧನಾ ಶ್ರೇಷ್ಠತೆಯನ್ನು ಪರಿಹಾರಗಳಾಗಿ ಪರಿವರ್ತಿಸುತ್ತದೆ.

ಕೇಂದ್ರಗಳು ದೇಶದ ಸಾಮೂಹಿಕ ಶಕ್ತಿಯನ್ನು ಒಟ್ಟುಗೂಡಿಸಲು ಸಹಾಯ ಮಾಡುತ್ತವೆ ಮತ್ತು ಸೂಕ್ತವಾದ ಮತ್ತು ಕಾರ್ಯಸಾಧ್ಯವಾದ ಸಂಶೋಧನಾ ಮತ್ತು ಅಭಿವೃದ್ಧಿ ಹಾಗೂ ನಾವೀನ್ಯತೆ ಮಾರ್ಗಸೂಚಿಯ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಕೇಂದ್ರಗಳು ಅಂತಾರಾಷ್ಟ್ರೀಯ ಟ್ರೆಂಡ್ ಗಳ ಮೇಲೆ ನಿಗಾ ಇಡುತ್ತವೆ ಮತ್ತು ಸಂಭವನೀಯ ಸಹಭಾಗಿತ್ವದ ಸಂಭವನೀಯ ಪ್ರಯತ್ನಗಳನ್ನು ಸೂಚಿಸುತ್ತವೆ.

ಕಟ್ಟುನಿಟ್ಟಾದ ಹವಾಮಾನದ ವ್ಯವಸ್ಥೆಯಲ್ಲಿ, ಇಂಗಾಲ ಹೊರಸೂಸುವಿಕೆ ಕಡಿತ ತಂತ್ರಜ್ಞಾನಗಳಲ್ಲಿ  ಸರಿಯಾದ ಸಮತೋಲನವನ್ನು ಗುರುತಿಸುವುದು ಮತ್ತು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಕಾರ್ಬನ್ ಕ್ಯಾಪ್ಚರ್ ಮತ್ತು ಬಳಕೆ (ಸಿಸಿಯು), ಹೆಚ್ಚುತ್ತಿರುವ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಅತ್ಯಂತ ವೇಗದ ಸಮರ್ಥನೀಯವಾದ ಒಂದು ಪ್ರಮುಖ ಮಾರ್ಗವಾಗಿದೆ. ಕಾರ್ಬನ್ ಕ್ಯಾಪ್ಚರ್ ಮತ್ತು ಬಳಕೆ -ಸಿಸಿಯು, ಹದಿನೇಳು ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (ಎಸ್ ಡಿಜಿಗಳಲ್ಲಿ) ಐದರ ಜೊತೆ ಹೊಂದಾಣಿಕೆಯಾಗುತ್ತದೆ, ಅವುಗಳೆಂದರೆ, ಹವಾಮಾನ ಕ್ರಿಯೆ; ಶುದ್ಧ ಇಂಧನ, ಕೈಗಾರಿಕೆ, ನಾವೀನ್ಯತೆ ಮತ್ತು ಮೂಲಸೌಕರ್ಯ; ಜವಾಬ್ದಾರಿಯುತ ಬಳಕೆ ಮತ್ತು ಉತ್ಪಾದನೆ; ಮತ್ತು ಗುರಿಗಳ ಸಾಧನೆಗೆ ಸಹಭಾಗಿತ್ವ ಸಾಧಿಸುವುದು.

Description: DiagramDescription automatically generated

***(Release ID: 1797255) Visitor Counter : 212


Read this release in: English , Urdu , Marathi , Hindi