ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ನವೀಕರಿಸಬಹುದಾದ ಇಂಧನ ಕುರಿತು ಆಸಿಯಾನ್-ಭಾರತ ಉನ್ನತ ಮಟ್ಟದ ಸಮ್ಮೇಳನ ಪ್ರಾರಂಭ


"ಸಮಗ್ರ ನವೀಕರಿಸಬಹುದಾದ ಮಾರುಕಟ್ಟೆಗಾಗಿ ಅನುಭವ ಮತ್ತು ನಾವೀನ್ಯತೆಗಳು": ವಿಷಯದ ಮೇಲೆ ಕೇಂದ್ರೀಕರಿಸಿದ ಸಮ್ಮೇಳನ

ಆಸಿಯಾನ್ ಪವರ್ ಗ್ರಿಡ್ ಅಭಿವೃದ್ಧಿಗಾಗಿ ಆಸಿಯಾನ್ ಪ್ರಯತ್ನಗಳನ್ನು ಶ್ಲಾಘಿಸಿದ ಇಂಧನ ಮತ್ತು ಎನ್.ಆರ್.ಇ. ಸಚಿವ

"ಜ್ಞಾನ ವಿನಿಮಯ, ಸಾಮರ್ಥ್ಯ ನಿರ್ಮಾಣ ಮತ್ತು ತಾಂತ್ರಿಕ ಸಹಾಯವನ್ನು ಉತ್ತೇಜಿಸುವ ನವೀಕರಿಸಬಹುದಾದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಆಸಿಯಾನ್ ಒಟ್ಟಾಗಿ ಕೆಲಸ ಮಾಡಬಹುದು; ಮತ್ತು ಈ ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗಾಗಿ ಜಂಟಿ ಉಪಕ್ರಮಗಳನ್ನು ಅನ್ವೇಷಿಸಬಹುದು": ಶ್ರೀ ಆರ್.ಕೆ ಸಿಂಗ್

ಸಮಗ್ರ ಪ್ರದೇಶಗಳು ಮತ್ತು ಉಪಕ್ರಮಗಳನ್ನು ಗುರುತಿಸಲು ಮತ್ತು ನವೀಕರಿಸಬಹುದಾದ ವಲಯದಲ್ಲಿ ಹೆಚ್ಚಿನ ಸಹಕಾರಕ್ಕಾಗಿ ಕರೆ ನೀಡಿದ ಪಾಲ್ಗೊಂಡ ಸಚಿವರು

Posted On: 07 FEB 2022 6:31PM by PIB Bengaluru

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳು 2022 ಫೆಬ್ರವರಿ 7-8ರಂದು ಆಯೋಜಿಸಿರುವ  ನವೀಕರಿಸಬಹುದಾದ ಇಂಧನ ಕುರಿತ ಆಸಿಯಾನ್ಭಾರತ ಉನ್ನತ ಮಟ್ಟದ ಸಮ್ಮೇಳನ ಇಂದು ಆರಂಭಗೊಂಡಿತುಎರಡು ದಿನಗಳ ಕಾಲ ನಡೆವ ಉನ್ನತ ಮಟ್ಟದ ಸಮ್ಮೇಳನ "ಸಮಗ್ರ ನವೀಕರಿಸಬಹುದಾದ ಮಾರುಕಟ್ಟೆಗಾಗಿ ಅನುಭವ ಮತ್ತು ನಾವೀನ್ಯತೆಗಳು" ಎಂಬ ವಿಷಯದ ಬಗ್ಗೆ ಕೇಂದ್ರೀಕರಿಸಲಿದೆ.

ಎಂ.ಎನ್.ಆರ್.. ಕಾರ್ಯದರ್ಶಿಯವರು ಆಸಿಯಾನ್ ಸದಸ್ಯ ರಾಷ್ಟ್ರಗಳ ಉನ್ನತ ಮಟ್ಟದ ನಿಯೋಗದ ಗಣ್ಯರನ್ನು ಸಚಿವರ ಮಟ್ಟದ ಉದ್ಘಾಟನಾ ಸಭೆಗೆ ಸ್ವಾಗತಿಸಿ, ಸಮ್ಮೇಳನಕ್ಕೆ ಭೂಮಿಕೆ ಸಜ್ಜುಗೊಳಿಸಿದರು. ಪ್ರಸಕ್ತ ಆಸಿಯಾನ್ ಅಧ್ಯಕ್ಷತೆ ವಹಿಸಿರುವ  ಕಾಂಬೋಡಿಯಾದ ಗಣಿ ಮತ್ತು ಇಂಧನ ಸಚಿವಾಲಯದ ಸಹಾಯಕ ಸಚಿವ ಘನತೆವೆತ್ತ ಶ್ರೀ ಟುನ್ ಲೀನ್ ಮತ್ತು ಭಾರತ ಸರ್ಕಾರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಘನತೆವೆತ್ತ ಶ್ರೀ ಭಗವಂತ ಖೂಬಾ ವಿಶೇಷವಾಗಿ ಭಾಷಣ ಮಾಡಿದರು. ಅದರಲ್ಲಿ ಅವರು ಭಾರತ ಮತ್ತು ಆಸಿಯಾನ್ ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ಸಾಧನೆಗಳ ಬಗ್ಗೆ ಮಾತನಾಡಿ, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಇಂಧನ ಪರಿವರ್ತನೆಯನ್ನು ಶಕ್ತಗೊಳಿಸಲು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತಆಸಿಯಾನ್ ಸಹಕಾರವನ್ನು ಮುಂದುವರಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಆಸಿಯಾನ್ ಸದಸ್ಯ ರಾಷ್ಟ್ರಗಳ ಇಂಧನ ಸಚಿವರು ಮತ್ತು ಅವರ ಹಿರಿಯ ಪ್ರತಿನಿಧಿಗಳು ಸಚಿವರ ಮಟ್ಟದ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ನವೀಕರಿಸಬಹುದಾದ ಇಂಧನ ಮಹತ್ವಾಕಾಂಕ್ಷೆಗಳು, ಆಗಿರುವ ಪ್ರಗತಿ ಮತ್ತು ತಮ್ಮ ದೇಶಗಳ ಆದ್ಯತೆಯ ಕ್ಷೇತ್ರಗಳ ಕುರಿತು ಗಣ್ಯರು ಮಾತನಾಡಿದರು ಮತ್ತು ವಲಯದಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಮುಂದೆ ತೆಗೆದುಕೊಂಡು ಹೋಗುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಅಂತಾರಾಷ್ಟ್ರೀಯ ಸೌರ ಸಹಯೋಗ (.ಎಸ್..) ಮಹಾ ನಿರ್ದೇಶಕರು, .ಎಸ್.. ದೂರದೃಷ್ಟಿ ಮತ್ತು ಯೋಜನೆಗಳು ಮತ್ತು ಆಸಿಯಾನ್ ಸದಸ್ಯ ರಾಷ್ಟ್ರಗಳಿಗೆ ಒಕ್ಕೂಟ ಸೇರುವ ಸಂಭಾವ್ಯ ಪ್ರಯೋಜನಗಳ ಕುರಿತು ಸಚಿವರುಗಳಿಗೆ ವಿವರಿಸಿದರು.

ಭಾರತ ಸರ್ಕಾರದ ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವ ಶ್ರೀ ಆರ್.ಕೆ. ಸಿಂಗ್ ಪ್ರಧಾನ ಭಾಷಣ ಮಾಡಿ, ಭಾರತ ಮತ್ತು ಆಸಿಯಾನ್ ಜ್ಞಾನ ವಿನಿಮಯ, ಸಾಮರ್ಥ್ಯ ನಿರ್ಮಾಣ ಮತ್ತು ತಾಂತ್ರಿಕ ಸಹಾಯವನ್ನು ಉತ್ತೇಜಿಸುವಂತಹ ನವೀಕರಿಸಬಹುದಾದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಆಸಿಯಾನ್ ಒಟ್ಟಾಗಿ ಶ್ರಮಿಸಬಹುದು; ಮತ್ತು ಪ್ರದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗಾಗಿ ಜಂಟಿ ಉಪಕ್ರಮಗಳನ್ನು ಅನ್ವೇಷಿಸಬಹುದು ಎಂದರು. ಆಸಿಯಾನ್ ಪವರ್ ಗ್ರಿಡ್‌ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಆಸಿಯಾನ್ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು ಮತ್ತು "ಒನ್ ಸನ್, ಒನ್ ವರ್ಲ್ಡ್, ಒನ್ ಗ್ರಿಡ್" ಉಪಕ್ರಮಕ್ಕೆ ಅನುಗುಣವಾಗಿ ಆಸಿಯಾನ್‌ ಆಚೆ ಭಾರತೀಯ ಉಪಖಂಡಕ್ಕೆ ಗ್ರಿಡ್ ಏಕೀಕರಣವನ್ನು ವಿಸ್ತರಿಸುವ ಅವಕಾಶಗಳನ್ನು ಭಾರತ ನಿರೀಕ್ಷಿಸುತ್ತದೆ ಎಂದರು. 2022 ರಲ್ಲಿ ಜಿ 20 ಅಧ್ಯಕ್ಷ ಸ್ಥಾನವನ್ನು ಇಂಡೋನೇಷ್ಯಾ ವಹಿಸಿಕೊಂಡಿದ್ದಕ್ಕಾಗಿ ಸಚಿವರು ಅಭಿನಂದಿಸಿದರು ಮತ್ತು  ಜಾಗತಿಕ ಇಂಧನ ಪರಿವರ್ತನೆಗೆ ಅನುಕೂಲವಾಗುವಂತೆ ಮತ್ತು ವೇಗವನ್ನು ನೀಡಲು ಭಾರತವು ಇಂಡೋನೇಷ್ಯಾದ ಅಧ್ಯಕ್ಷತೆಯಲ್ಲಿ ಆಪ್ತವಾಗಿ ಕೆಲಸ ಮಾಡುತ್ತದೆ ಎಂದು ಹೇಳಿದರು. ಆಸಿಯಾನ್ ಮತ್ತು ಭಾರತದ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಅಡಿಪಾಯದ ಆಧಾರದ ಮೇಲೆ ನವೀಕರಿಸಬಹುದಾದ ವಲಯದಲ್ಲಿ ಬಲವಾದ ಬಾಂಧವ್ಯವನ್ನು ಸ್ಥಾಪಿಸಲು ಆಸಿಯಾನ್ ಜೊತೆಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಸಚಿವಮಟ್ಟದಲ್ಲಿ ಭಾಗವಹಿಸಿದ ಎಲ್ಲರೂ, ತಮ್ಮ ಭಾಷಣಗಳಲ್ಲಿ, ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಯನ್ನು ಒಪ್ಪಿಕೊಂಡರು ಮತ್ತು ಸುಸ್ಥಿರ ಭವಿಷ್ಯ ನಿರ್ಮಿಸಲು ನವೀಕರಿಸಬಹುದಾದ ಇಂಧನಗಳಿಗೆ ಪರಿವರ್ತನೆ ಮಾಡುವ ಉದ್ದೇಶವನ್ನು ಪುನರುಚ್ಚರಿಸಿದರು. ನವೀಕರಿಸಬಹುದಾದ ವಲಯದಲ್ಲಿ ಭಾರತ-ಆಸಿಯಾನ್ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು ಮತ್ತು ನಿಟ್ಟಿನಲ್ಲಿ ಸಮಗ್ರ ಪ್ರದೇಶಗಳು ಮತ್ತು ಉಪಕ್ರಮಗಳನ್ನು ಗುರುತಿಸಲು ಸಮ್ಮೇಳನದಲ್ಲಿ ಎದುರು ನೋಡುತ್ತಿರುವುದಾಗಿ ತಿಳಿಸಿದರು.

ಇಂಧನ ಮತ್ತು ಸಂಪನ್ಮೂಲ ಸಂಸ್ಥೆ (ಟಿ..ಆರ್..) ಮಹಾ ನಿರ್ದೇಶಕರಾದ ಡಾ. ವಿಭಾ ಧವನ್ ಅವರ ವಂದನಾರ್ಪಣೆಯೊಂದಿಗೆ ಸಚಿವರುಗಳ ಮಟ್ಟದ ಅಧಿವೇಶನ ಸಮಾರೋಪಗೊಂಡಿತು.

ಸಮ್ಮೇಳನದ ಬಗ್ಗೆ:

ಆಸಿಯಾನ್-ಭಾರತ ಉನ್ನತ ಮಟ್ಟದ ಸಮ್ಮೇಳನವು 5 ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರುತ್ತದೆ, ಇದು ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಭಾರತ ಮತ್ತು ಆಸಿಯಾನ್‌ ತಜ್ಞರ ನಡುವೆ ಪೀರ್ ಟು ಪೀರ್ ಚರ್ಚೆಗಳನ್ನು ಸುಗಮಗೊಳಿಸುತ್ತದೆ. ಅಧಿವೇಶನಗಳು ನೀತಿ ನಿರೂಪಕರು, ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಸೇರಿದಂತೆ ಜಾಗತಿಕ ಪ್ರೇಕ್ಷಕರಿಗೆ ನವೀಕರಿಸಬಹುದಾದವುಗಳಲ್ಲಿ ತಮ್ಮ ಸಹಕಾರವನ್ನು ಮುಂದೆ ತೆಗೆದುಕೊಂಡು ಹೋಗಲು ಭಾರತ-ಆಸಿಯಾನ್ ಯೋಜನೆಗಳ ಇಣುಕು ನೋಟವನ್ನು ನೀಡುತ್ತವೆ.

ಸಮ್ಮೇಳನ ಎಲ್ಲರಿಗೂ ಮುಕ್ತವಾಗಿದೆ. ಆಸಕ್ತರು ಸಮ್ಮೇಳನಕ್ಕೆ ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು

https://aseanindiareconference-teri.webconevents.com/

***


(Release ID: 1796459) Visitor Counter : 257


Read this release in: English , Urdu , Hindi , Telugu