ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಪಾಕಿಸ್ತಾನದ ಸುಳ್ಳು ಸುದ್ದಿ ಕಾರ್ಖಾನೆಗಳ ಮೇಲೆ ಭಾರತದ ತೀವ್ರ ದಾಳಿ
ಪಾಕಿಸ್ತಾನದ ಆರ್ಥಿಕ ನೆರವಿನ ಸುಳ್ಳು ಸುದ್ದಿ ಜಾಲಗಳನ್ನು ನಿರ್ಬಂಧಿಸಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಭಾರತ ವಿರೋಧಿ ಸುಳ್ಳು ಸುದ್ದಿ ಹರಡುತ್ತಿದ್ದ 35 ಯೂಟ್ಯೂಬ್ ವಾಹಿನಿಗಳು, 2 ಅಂತರ್ಜಾಲ ತಾಣಗಳ ನಿರ್ಬಂಧ
Posted On:
21 JAN 2022 6:10PM by PIB Bengaluru
ಡಿಜಿಟಲ್ ಮಾಧ್ಯಮದ ಮೂಲಕ ವ್ಯವಸ್ಥಿತವಾಗಿ ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ 35 ಯೂಟ್ಯೂಬ್ ಆಧಾರಿತ ಸುದ್ದಿ ವಾಹಿನಿಗಳು ಮತ್ತು 2 ಅಂತರ್ಜಾಲ ತಾಣಗಳನ್ನು ನಿರ್ಬಂಧಿಸುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆದೇಶಿಸಿದೆ. ಸಚಿವಾಲಯವು ನಿರ್ಬಂಧಿಸಿರುವ ಯೂಟ್ಯೂಬ್ ಖಾತೆಗಳು ಒಟ್ಟು 1 ಕೋಟಿ 20 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದು, ಅವುಗಳ ವೀಡಿಯೊಗಳು 130 ಕೋಟಿಯಷ್ಟು ವೀಕ್ಷಣೆಯಾಗಿದ್ದವು. ಇದರ ಜೊತೆಗೆ, ಅಂತರ್ಜಾಲದ ಮೂಲಕ ವ್ಯವಸ್ಥಿತವಾಗಿ ಭಾರತ ವಿರೋಧಿ ತಪ್ಪು ಮಾಹಿತಿಯನ್ನು ಹರಡುವ ಕಾರ್ಯದಲ್ಲಿ ತೊಡಗಿದ್ದ ಎರಡು ಟ್ವಿಟರ್ ಖಾತೆಗಳು, ಎರಡು ಇನ್ಸ್ಟಾ ಗ್ರಾಂ ಖಾತೆಗಳು ಮತ್ತು ಒಂದು ಫೇಸ್ ಬುಕ್ ಖಾತೆಯನ್ನೂ ಸರ್ಕಾರವು ನಿರ್ಬಂಧಿಸಿದೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮ 2021ರ ನಿಯಮ 16ರ ಅಡಿಯಲ್ಲಿ ಹೊರಡಿಸಲಾದ ಐದು ಪ್ರತ್ಯೇಕ ಆದೇಶಗಳ ಅನ್ವಯ, ಪಾಕಿಸ್ತಾನ ಮೂಲದ ಈ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಅಂತರ್ಜಾಲ ತಾಣಗಳನ್ನು ನಿರ್ಬಂಧಿಸಲು ಸಚಿವಾಲಯವು ಆದೇಶಿಸಿದೆ. ಈ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ಅಂತರ್ಜಾಲ ತಾಣಗಳ ಮೇಲೆ ನಿಕಟ ನಿಗಾ ಇಟ್ಟಿದ್ದ ಭಾರತೀಯ ಗುಪ್ತಚರ ಸಂಸ್ಥೆಗಳು, ತುರ್ತು ಕ್ರಮಕ್ಕಾಗಿ ಅವುಗಳನ್ನು ಸಚಿವಾಲಯಕ್ಕೆ ವರದಿ ಮಾಡಿದ್ದವು.
ಕಾರ್ಯಾಚರಣೆ ವಿಧಾನ: ವ್ಯವಸ್ಥಿತ ತಪ್ಪು ಮಾಹಿತಿ ಜಾಲಗಳು
ಸಚಿವಾಲಯವು ನಿರ್ಬಂಧಿಸಿರುವ 35 ಖಾತೆಗಳು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿದ್ದು, ಇವು ನಾಲ್ಕು ವ್ಯವಸ್ಥಿತ ತಪ್ಪು ಮಾಹಿತಿ ಜಾಲಗಳ ಭಾಗವೆಂದು ಗುರುತಿಸಲಾಗಿದೆ. ಇವುಗಳಲ್ಲಿ 14 ಯೂಟ್ಯೂಬ್ ವಾಹಿನಿಗಳನ್ನು ನಿರ್ವಹಿಸುತ್ತಿರುವ ಅಪ್ನಿ ದುನಿಯಾ ಜಾಲ ಮತ್ತು 13 ಯೂಟ್ಯೂಬ್ ವಾಹಿನಿಗಳನ್ನು ನಿರ್ವಹಿಸುತ್ತಿರುವ ತಲ್ಹಾ ಫಿಲ್ಮ್ಸ್ ಜಾಲ ಸೇರಿವೆ. ನಾಲ್ಕು ವಾಹಿನಿಗಳ ಒಂದು ಗುಂಪು, ಮತ್ತು ಇತರ ಎರಡು ವಾಹಿನಿಗಳ ಒಂದು ಗುಂಪು ಸಹ ಪರಸ್ಪರ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ.
ಭಾರತೀಯ ಪ್ರೇಕ್ಷಕರ ನಡುವೆ ನಕಲಿ ಸುದ್ದಿಗಳನ್ನು ಹರಡುವ ಏಕೈಕ ಗುರಿಯೊಂದಿಗೆ ಈ ಎಲ್ಲಾ ಜಾಲಗಳು ಕಾರ್ಯನಿರ್ವಹಿಸುತ್ತಿರುವುದು ಕಂಡು ಬಂದಿದೆ. ಈ ಜಾಲದ ಭಾಗವಾಗಿದ್ದ ವಾಹಿನಿಗಳು ಸಮಾನಸ್ವರೂಪದ ಹ್ಯಾಶ್ ಟ್ಯಾಗ್ ಗಳು ಮತ್ತು ಎಡಿಟಿಂಗ್ ಶೈಲಿಗಳನ್ನು ಬಳಸುತ್ತಿದ್ದವು, ಶ್ರೀಸಾಮನ್ಯರಿಂದ ನಿರ್ವಹಿಸಲ್ಪಡುತ್ತಿದ್ದವು ಮತ್ತು ವಸ್ತುವಿಷಯವನ್ನು ಪರಸ್ಪರ ಉತ್ತೇಜಿಸುತ್ತಿದ್ದವು. ಕೆಲವು ಯೂಟ್ಯೂಬ್ ವಾಹಿನಿಗಳನ್ನು ಪಾಕಿಸ್ತಾನದ ಟಿವಿಗಳ ಸುದ್ದಿ ವಾಹಿನಿಗಳ ನಿರೂಪಕರೇ ನಿರ್ವಹಿಸುತ್ತಿದ್ದರು.
ವಸ್ತು ವಿಷಯದ ಸ್ವರೂಪ
ಸಚಿವಾಲಯವು ನಿರ್ಬಂಧಿಸಿರುವ ಯೂಟ್ಯೂಬ್ ವಾಹಿನಿಗಳು, ಅಂತರ್ಜಾಲ ತಾಣಗಳು ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತಂತೆ ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಲು ಪಾಕಿಸ್ತಾನ ಬಳಸುತ್ತಿತ್ತು. ಇವುಗಳಲ್ಲಿ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ರಾಷ್ಟ್ರಗಳೊಂದಿಗೆ ಭಾರತದ ವಿದೇಶಾಂಗ ಸಂಬಂಧಗಳಂತಹ ವಿಷಯಗಳೂ ಸೇರಿದ್ದವು. ಮಾಜಿ ರಕ್ಷಣಾ ಪಡೆಗಳ ಮುಖ್ಯಸ್ಥ ದಿವಂಗತ ಜನರಲ್ ಬಿಪಿನ್ ರಾವತ್ ಅವರ ನಿಧನಕ್ಕೆ ಸಂಬಂಧಿಸಿದಂತೆ ಯೂಟ್ಯೂಬ್ ವಾಹಿನಿಗಳ ಮೂಲಕ ವ್ಯಾಪಕವಾದ ಸುಳ್ಳು ಸುದ್ದಿಗಳನ್ನು ಹರಡಲಾಗಿತ್ತು ಎಂಬುದನ್ನು ಗುರುತಿಸಲಾಗಿದೆ. ಈ ಯೂಟ್ಯೂಬ್ ವಾಹಿನಿಗಳು ಮುಂಬರುವ ಐದು ರಾಜ್ಯಗಳ ಚುನಾವಣೆಗಳ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವಂತಹ ವಸ್ತು ವಿಷಯವನ್ನು ಹಾಕಲು ಪ್ರಾರಂಭಿಸಿದ್ದವು.
ಪ್ರತ್ಯೇಕತಾವಾದವನ್ನು ಪ್ರೋತ್ಸಾಹಿಸಲು, ಭಾರತವನ್ನು ಧರ್ಮ ಆಧಾರದಲ್ಲಿ ವಿಭಜಿಸಲು ಮತ್ತು ಭಾರತೀಯ ಸಮಾಜದ ವಿವಿಧ ವರ್ಗಗಳಲ್ಲಿ ದ್ವೇಷವನ್ನು ಹುಟ್ಟುಹಾಕಲು ವಾಹಿನಿಗಳು ಇಂತಹ ವಸ್ತುವಿಷಯವನ್ನು ಪ್ರಚಾರ ಮಾಡುತ್ತಿದ್ದವು. ಅಂತಹ ಮಾಹಿತಿಯು ದೇಶದ ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಹ ಅಪರಾಧಗಳಿಗೆ ಪ್ರೇಕ್ಷಕರನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿದ್ದವು ಎಂದು ಶಂಕಿಸಲಾಗಿತ್ತು.
ಇಂತಹ ಭಾರತ ವಿರೋಧಿ ಸುಳ್ಳು ಸುದ್ದಿ ಜಾಲಗಳ ವಿರುದ್ಧ ಕ್ರಮ ಜರುಗಿಸಲು 2021ರ ಡಿಸೆಂಬರ್ ನಲ್ಲಿ ಐಟಿ ನಿಯಮಗಳು- 2021ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಮೊದಲ ಬಾರಿಗೆ ಬಳಸಿ, 20 ಯೂಟ್ಯೂಬ್ ವಾಹಿನಿಗಳು ಮತ್ತು 2 ಅಂತರ್ಜಾಲ ತಾಣಗಳನ್ನು ನಿರ್ಬಂಧಿಸಿದ್ದು, ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮವಾಗಿತ್ತು. ಭಾರತದಲ್ಲಿ ಒಟ್ಟಾರೆಯಾಗಿ ಮಾಹಿತಿ ಪರಿಸರವನ್ನು ಸುಭದ್ರಪಡಿಸುವ ನಿಟ್ಟಿನಲ್ಲಿ ಗುಪ್ತಚರ ಸಂಸ್ಥೆಗಳು ಮತ್ತು ಸಚಿವಾಲಯವು ಆಪ್ತವಾಗಿ ಕಾರ್ಯ ನಿರ್ವಹಿಸುತ್ತಿವೆ.
ಅನುಬಂಧ
ಭಾರತ ವಿರೋಧಿ ವಸ್ತು ವಿಷಯ ಪ್ರಸಾರ ಮಾಡುತ್ತಿದ್ದ ಯೂಟ್ಯೂಬ್ ವಾಹಿನಿಗಳು ಮತ್ತು ಅಂತರ್ಜಾಲ ತಾಣಗಳು
ಒಟ್ಟಾರೆ ಅಂಕಿ ಅಂಶ
ಒಟ್ಟು ಚಂದಾದಾರರು : 1,21,23,500
ಒಟ್ಟು ವೀಕ್ಷಣೆ : 132,04,26,964
ನಿರ್ಬಂಧಿತ ಯೂಟ್ಯೂಬ್ ವಾಹಿನಿಗಳ ಜಾಲಗಳಿಗೆ ಸಂಬಂಧಿಸಿದ ವಿವರಗಳು
ಜಾಲ 1
ಕ್ರ.ಸಂ.
|
ಯೂಟ್ಯೂಬ್ ವಾಹಿನಿಗಳು
|
ವಾಹಿನಿಗಳು ಪ್ರಸಾರ ಮಾಡಿದ ಸುಳ್ಳು ವಸ್ತು ವಿಷಯದ ಉದಾಹರಣೆಗಳು
|
ಮಾಧ್ಯಮ ಅಂಕಿ ಅಂಶಗಳು
|
-
|
ಖಬರ್ ವಿತ್ ಫ್ಯಾಕ್ಟ್ಸ್
|
1. ಹಮ್ಮಾಸ್ ತನ್ನ ಡ್ರೋನ್ ಗಳನ್ನು ಭಾರತದ ಮೇಲೆ ಬಳಸಿತು, ನರೇಂದ್ರ ಮೋದಿ ಸಹಾಯಕ್ಕಾಗಿ ನಾಫ್ತಾಲಿ ಬೆನೆಟ್ ಅವರನ್ನು ಸಂಪರ್ಕಿಸಿದರು | ಇಸ್ರೇಲ್, ಗಾಜಾ
2. ಮಹಮೂದ್ ಘಜ್ನವಿ ಬಯಕೆಯ ಈಡೇರಿಸಲು ಅನಾಸ್ ಹಕಾನಿಯಿಂದ ತಲೀಬಾನ್ ಪಡೆಗಳಿಗೆ ಆದೇಶ | ಬಾಬ್ರಿ ಮಸ್ಜಿದ್
3. ನರೇಂದ್ರ ಮೋದಿ ಮುಸ್ಲಿಮರ ಕುರಿತಂತೆ ಹೊಸ ಆದೇಶ ಹೊರಡಿಸುತ್ತಿದ್ದಂತೆ ಭಾರತೀಯ ಸೇನೆಯಿಂದ ಕಟ್ಟೆಚ್ಚರ| ಅಮಿತ್ ಶಾ, ಅನಾಸ್ ಹಕಾನಿ
4. ತಯ್ಯಿಪ್ ಎರ್ಡೋಗನ್ ನಿಂದ ಬಾಬ್ರಿ ಮಸೀದಿ ಬಗ್ಗೆ ಹೊಸ ನಿರ್ಧಾರ, ಯೋಗಿಗೆ ಎಚ್ಚರಿಕೆ | ರಾಮ ಮಂದಿರ
5. ಅನಾಸ್ ಹಕಾನಿ ತಲೀಬಾನ್ ಗಳು ಜಾಂಗ್ಜುಸ್ ಗೆ ಆದೇಶ ನೀಡಿದ್ದು, ಯೋಗಿಗೆ ಭಾರಿ ಅಚ್ಚರಿ ನೀಡಲು ಸಿದ್ಧರಾಗಿದ್ದಾರೆ | ಮೋದಿ
6. ಮೋದಿ ಆದೇಶ ನೀಡುತ್ತಿದ್ದಂತೆ ಭಾರತೀಯ ಪೈಲಟ್ ಗಳು ಆಫ್ಘನ್ ಜಾಂಗ್ಜುಗಳ ಮೇಲೆ ದಾಳಿ ಪ್ರಾರಂಭಿಸುತ್ತಾರೆ, ಭಾರತೀಯ ಸೇನೆ ದೊಡ್ಡ ತೊಂದರೆಯಲ್ಲಿದೆ | ಕಾಬೂಲ್
7. ತ್ರಿಪುರಾ ಮುಸ್ಲಿಮರ ಮೇಲೆ ದಾಳಿ ನಂತರ ಹಿಂದೂ ದೇವಾಲಯದ ಬಗ್ಗೆ ಹೊಸ ನಿರ್ಧಾರ ಕೈಗೊಂಡ ಶಾ ಸಲ್ಮಾನ್ | ಕತಾರ್, ಕುವೈತ್
8. ಹಿಂದೂಗಳನ್ನು ಗಡಿಪಾರು ಮಾಡಲು ಕತಾರ್ ರಾಜಕುಮಾರ ನಿರ್ಧಾರ ಮಾಡಿದ್ದು, ಹಸಿನಾ ವಾಜಿದ್ ಗೆ ಮಹತ್ವದ ಸಂದೇಶ ರವಾನೆ | ಬಾಂಗ್ಲಾದೇಶ
9. ಯೋಗಿ ಆದಿತ್ಯನಾಥ್ ಗೆ ಮುಜಾಹಿದ್ದೀನ್ ನಿಂದ ಭಾರಿ ಶಾಕ್ | ಬಾಬ್ರಿ ಮಸೀದಿ, ರಾಮ ಮಂದಿರ
|
ಚಂದಾದಾರರು: NA
ಒಟ್ಟು ವೀಕ್ಷಣೆ: 8,93,148
|
-
|
ಖಬರ್ ತೇಜ್
|
1. ಸೌದಿ ಅರೇಬಿಯಾದಿಂದ ಮರಳಲು ಭಾರತೀಯ ಸೇನೆಗೆ ಆದೇಶ ನೀಡಿದ ಶಾ ಸಲ್ಮಾನ್ | ಮುಹಮ್ಮದ್ ಬಿನ್ ಸಲ್ಮಾನ್, ಮೋದಿ
2. ಸೌದಿ ಅರೇಬಿಯಾದಿಂದ ಭಾರತದ ಮೇಲೆ ನಿರ್ಬಂಧ, ಇಮ್ರಾನ್ ಖಾನ್ ಗೆ ಮಹತ್ವದ ಸಂದೇಶ ಕಳುಹಿಸಿದ ಶಾ ಸಲ್ಮಾನ್
3. 15 ಮಸೀದಿಗಳ ಕುರಿತಂತೆ ಮೋದಿ ವಿರುದ್ಧ ಸೇಡು ತೀರಿಸಿಕೊಳ್ಳಲು ಆಫ್ಘನ್ ಜಾಂಗ್ಜುಗಳು ನಿರ್ಧಾರ | ರಾಮ ಮಂದಿರ, ಯೋಗಿ
4. ಕಾಶ್ಮೀರ್ರಿ ಮುಜಾಹಿದ್ದೀನ್ ಗೆ ಬೆಂಬಲ ನೀಡಲು 100 ಆಫ್ಘನ್ ಜಾಂಗ್ಜು ಪಡೆಗಳು ಮಕ್ಬೋಜಾ ಕಣಿವೆ ಪ್ರವೇಶ
5. ಮೋದಿ ವಿರುದ್ಧ ಬಾಬ್ರಿ ಮಸೀದಿಯ ಸೇಡು ತೀರಿಸಿಕೊಳ್ಳುವುದಾಗಿ ಕತಾರ್ ಮತ್ತು ಆಫ್ಘನ್ ಜಾಂಗ್ಜುಗಳು ಸರ್ಕಾರದ ಘೋಷಣೆ
6. ಆಫ್ಘಾನ್ ಜಾಂಗ್ಜುಗಳ ಎಚ್ಚರಿಕೆಯ ಬಳಿಕ ಮಕ್ಬೋಜಾ ಕಣಿವೆಯಿಂದ ಹಿಂದೆ ಸರಿಯುವಂತೆ ಭಾರತೀಯ ಸೇನೆಗೆ, ಮೋದಿ ಹೊಸ ಆದೇಶ
7. ಕಾಶ್ಮೀರ್ರಿ ಮುಜಾಹಿದ್ದೀನ್ ಭೀತಿಯಿಂದ ಭಾರತೀಯ ಸೈನಿಕರಿಂದ ಕರ್ತವ್ಯದ ವೇಳೆ ಆತ್ಮಹತ್ಯೆ ಪ್ರಯತ್ನ ಪ್ರಾರಂಭಿಸಿದ್ದಾರೆ
8. ಕಾಶ್ಮೀರ್ರಿ ಕಿರಿಯರ ಮೇಲೆ ಭಾರತೀಯ ಸೇನೆಯಿಂದ ಶಸ್ತ್ರಾಸ್ತ್ರ ಬಳಕೆ ಪ್ರಾರಂಭ, ಸೇಡು ತೀರಿಸಿಕೊಳ್ಳಲು ಮುಜಾಹಿದ್ದೀನ್ ನಿರ್ಧಾರ
9. 40 ಭಾರತೀಯ ಏಜೆಂಟರನ್ನು ಹಿಡಿದು ಕಾಬೂಲ್ ನಲ್ಲಿ ಗಲ್ಲಿಗೇರಿಸಿದ ಆಫ್ಘನ್ ಜಾಂಗ್ಜಸ್
10. ಬಾಬ್ರಿ ಮಸೀದಿ ನಿರ್ಮಿಸಲು ಮತ್ತು ರಾಮ ಮಂದಿರವನ್ನು ಕೆಡವಲು ಅಯೋಧ್ಯೆಗೆ ಹೋಗಲು ತಾಲೇಬನ್ ಪಡೆಗಳು ಸಜ್ಜು| ಯೋಗಿ
11. ಚೀನಾ ಸೇನೆಗೆ ಸಹಾಯ ಮಾಡಲು ಲಡಾಖ್ ತಲುಪಿದ ಉತ್ತರ ಕೊರಿಯಾ ಸೇನೆ, ಮೋದಿಗೆ ಆಘಾತ | ಕಿಮ್ ಜಾಂಗ್ ಉನ್, ಕ್ಸಿ ಜಿನ್ ಪಿಂಗ್
12. ಚೀನಾ ಪಡೆಗಳು ಮತ್ತು ಜಾಂಗ್ಜುಗಳು ಕಣಿವೆ ಪ್ರವೇಶಿಸಿದ್ದು, ಮಕ್ಬೋಜಾ ಕಣಿವೆಯಲ್ಲಿ ದೊಡ್ಡ ತೊಂದರೆಯಲ್ಲಿರುವ ಭಾರತೀಯ ಸೇನೆಯ ಯೋಧರು
13. ಭಾರತಕ್ಕೆ ತೈಲ ಪೂರೈಕೆ ನಿಲ್ಲಿಸಿದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಕ್ಷಮೆ ಕೋರಿದ ಮೋದಿ | ಎಂ.ಬಿ.ಎಸ್.
14. ಕಾಶ್ಮೀರಿಗಳಿಗೆ ಸ್ವಾತಂತ್ರ್ಯ ಕೊಡಿಸಲು, ಭಾರತೀಯ ಸೇನೆ ನಿಭಾಯಿಸಲು ಕಾಶ್ಮೀರ ಪ್ರವೇಶಿಸಿದ ಚೀನಾ ಪಡೆಗಳು | ಇಮ್ರಾನ್ ಖಾನ್, ಮೋದಿ
15. ನರೇಂದ್ರ ಮೋದಿ ಆದೇಶವನ್ನು ನಿರಾಕರಿಸಿದ ಭಾರತೀಯ ಜನರಲ್ ಗಳು, ಭಾರತೀಯ ಸೇನೆಯಲ್ಲಿ ದಂಗೆ ಪರಿಸ್ಥಿತಿ| ಎಂಎಂ ನರವಾಣೆ
|
ಚಂದಾದಾರರು: 5,550
ಒಟ್ಟು ವೀಕ್ಷಣೆ: 4,92,967
|
-
|
ಗ್ಲೋಬಲ್ ಟ್ರೂತ್
|
1. ಕೃತಿಕಾ ಮತ್ತು ತಾರಿಣಿ ರಾವತ್ ಇಡೀ ನೆರೆಯ ರಾಷ್ಟ್ರಪಾಕಿಸ್ತಾನದ ದೇಶಕ್ಕೆ ದೊಡ್ಡ ಅಚ್ಚರಿ ನೀಡಿದ್ದಾರೆ
2. ಇಸ್ಲಾಂ ಧರ್ಮವನ್ನು ಒಪ್ಪಿಕೊಂಡ ಮಗಳು (ಸಿಡಿಎಸ್ ಜನರಲ್ ರಾವತ್)
3. ಆರ್.ಎಸ್.ಎಸ್ ಕಾರ್ಯಕರ್ತರ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಮೋದಿ ಆಫ್ಘಾನ್ ತಾಲೇಬನ್ಸ್ ನಾಯಕರೊಂದಿಗೆ ಹೊಸ ಒಪ್ಪಂದ ಅನಾಸ್ ಹಕ್ಕಾನಿ
4. ಎಂಐ-17 ಹೆಲಿಕಾಪ್ಟರ್ ದುರಂತದ ನಂತರ ಮೊದಲ ಬಾರಿಗೆ ಕೃತಿಕಾ ಮತ್ತು ತಾರಿಣಿ ರಾವತ್ ಪಾಕಿಸ್ತಾನಕ್ಕೆ ಭೇಟಿ | ಮೋದಿ, ಇಮ್ರಾನ್ ಖಾನ್
|
ಚಂದಾದಾರರು:
NA
ಒಟ್ಟು ವೀಕ್ಷಣೆ: 1,767,238
|
-
|
ನ್ಯೂ ಗ್ಲೋಬಲ್ ಫ್ಲ್ಯಾಕ್ಸ್ಟ್
|
1. ಭದ್ರತಾ ಸಿಬ್ಬಂದಿ ಸಿಎಂ ಅನ್ನು ಗುರಿಯಾಗಿಸಲು ಪ್ರಯತ್ನಿಸುತ್ತಿದ್ದು, ಮುಜಾಹಿದ್ದೀನ್ ಯೋಜನೆಗಳು ಯಶಸ್ಸು ಪಡೆಯುತ್ತಿವೆ
2. ಸೌದಿ ಅರೇಬಿಯಾ ಪ್ರವೇಶಿಸಲು ಯೋಗಿ ಆದಿತ್ಯನಾಥ್ ಮೇಲೆ ನಿರ್ಬಂಧ ವಿಧಿಸಿದ ಶಾ ಸಲ್ಮಾನ್ | ಎಂಬಿಎಸ್, ಮೋದಿ
3. ಭಾರತೀಯ ಸೇನೆ ಗುರಿಯಾಗಿಸಿದ ಮಣಿಪುರ ಸ್ವಾತಂತ್ರ್ಯ ಹೋರಾಟಗಾರರು, ಪ್ರತ್ಯೇಕ ರಾಷ್ಟ್ರಕ್ಕೆ ಬೇಡಿಕೆಯಿಟ್ಟ ಭಾರತದ 7ನೇ ದೊಡ್ಡ ರಾಜ್ಯ.
4. ಮೋದಿ ದೊಡ್ಡ ತಪ್ಪು, ಭಾರತೀಯ ಸೈನಿಕರನ್ನು ಜೈಲಿಗೆ ಕಳುಹಿಸಲು ಶಾ ಸಲ್ಮಾನ್ ಆದೇಶ, | ಮುಹಮ್ಮದ್ ಬಿನ್ ಸಲ್ಮಾನ್
5. ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಭಾರತಕ್ಕೆ ತೈಲ ಪೂರೈಕೆಯನ್ನು ನಿಲ್ಲಿಸುವುದಾಗಿ ಸೌದಿ ಅರೇಬಿಯಾ ಪ್ರಕಟಣೆ| ಶಾ ಸಲ್ಮಾನ್, ಎಂಬಿಎಸ್
6. ಐತಿಹಾಸಿಕ ಸೇಡು ತೀರಿಸಿಕೊಂಡ ಮುಹಮ್ಮದ್ ಬಿನ್ ಸಲ್ಮಾನ್, ಸಮುದ್ರದಲ್ಲಿ ಭಾರತೀಯ ತೈಲ ಹಡಗು ನಾಶ| ಶಾ ಸಲ್ಮಾನ್
7. ಖತಾರ್ ಮತ್ತು ಕುವೈತ್ ಭಾರತೀಯ ಮುಸ್ಲಿಂರಿಗೆ ಸಹಾಯ ಮಾಡಲು ಮುಂದೆ ಬಂದಿದ್ದು, ಮೋದಿಗೆ ಭಾರಿ ಅಚ್ಚರಿ ನೀಡಿದ, ಶಾ ಸಲ್ಮಾನ್
8. ಹೆಲಿಕಾಪ್ಟರ್ ಅಪಘಾತದ ನಂತರ ತೊಂದರೆಯಲ್ಲಿರುವ ಪ್ರಸಿದ್ಧ ವ್ಯಕ್ತಿ | ರಾಜನಾಥ್ ಸಿಂಗ್
9. ಪುರ ಖಾಂಡನ್ ಚೀಖ್ ಉತಾದ ರವಾತ್ ಮನೆ ಬಳಿ ಭದ್ರತೆಯ ಕಟ್ಟೆಚ್ಚರ
10. ಎಂಐ-17 ಹೆಲಿಕಾಪ್ಟರ್ ದುರಂತದ ನಂತರ ತಾರಿಣಿ ರಾವತ್ ಇಸ್ಲಾಂ ಧರ್ಮಕ್ಕೆ | ಇಮ್ರಾನ್ ಖಾನ್
|
ಚಂದಾದಾರರು: 3,01,000
ಒಟ್ಟು ವೀಕ್ಷಣೆಗಳು: 4,35,71,169
|
|
|
|
|
|
ಜಾಲ 2
ಕ್ರ.ಸಂ.
|
ಯೂಟ್ಯೂಬ್ ವಾಹಿನಿಗಳು
|
ವಾಹಿನಿಗಳು ಪ್ರಸಾರ ಮಾಡಿದ ಸುಳ್ಳು ವಸ್ತು ವಿಷಯದ ಉದಾಹರಣೆಗಳು
|
ಮಾಧ್ಯಮ ಅಂಕಿ ಅಂಶಗಳು
|
-
|
ಇನ್ ಫರ್ಮೇಷನ್ ಹಬ್
|
1. ಇಸ್ರ್ ಚಿನ್ ಕೆ ಖಿಲಾಫ್ ಖ್ರೇ ಹೋ ಗೇ...!!
2. ಟರ್ಕಿ ಕಾ ವಾರ್ ಲಗತಾರ್ 10 ಜನವರಿ 2022...!!
3. ಚಿನ್ ಪಾಕ್ ನೈ ಚಿಖಿಯೆನ್ ನಿಕಾಲ್ ದೇನ್.......!!
4. 1050 ಟಂಕನ್ ಸೆ ಹಮ್ಲಾ.......!!
5. ತಯ್ಯಿಪ್ ಕೆ ಡ್ರೋನ್ಸ್ ಚಾ ಗಯೇ...!!
|
ಚಂದಾದಾರರು: 7,29,000
ಒಟ್ಟು ವೀಕ್ಷಣೆ: 10,17,73,426
|
-
|
ಫ್ಲ್ಯಾಶ್ ನೌ
|
1. ಭರತ್ ಕೆ ಖಿಲಾಫ್ ಬಾರಾ ಫೈಸ್ಲಾ ಹೋ ಗಯಾ...!!.
2. ಬಾಂಗ್ಲಾದೇಶಕಾ ಖಬ್ಜಾ...!!
|
ಚಂದಾದಾರರು: 2,22,000
ಒಟ್ಟು ವೀಕ್ಷಣೆ: 2,28,53,072
|
ಅಪ್ನಿ ದುನಿಯಾ ನೆಟ್ ವರ್ಕ್
ಕ್ರ.ಸಂ.
|
ಯೂಟ್ಯೂಬ್ ವಾಹಿನಿಗಳು
|
ವಾಹಿನಿಗಳು ಪ್ರಸಾರ ಮಾಡಿದ ಸುಳ್ಳು ವಸ್ತು ವಿಷಯದ ಉದಾಹರಣೆಗಳು
|
ಮಾಧ್ಯಮ ಅಂಕಿ ಅಂಶಗಳು
|
-
|
ಫೈಸಲ್ ತರಾರ್ ಸ್ಪೀಕ್ಸ್
|
1. ಚೀನಾದಿಂದ ಹೀನಾಯವಾಗಿ ಸೋತ ಭಾರತ, ಲಡಾಖ್ ಬಗ್ಗೆ ಮಾತುಕತೆ, ಚೀನಾದಿಂದ ಪ್ರಧಾನಿ ಮೋದಿಗೆ ಎಚ್ಚರಿಕೆ
2. ಗಾಲ್ವಾನ್ ಕಣಿವೆಯಲ್ಲಿ ಚೀನಾದ ಧ್ವಜ, ಪಿಎಂ ಮೋದಿಗೆ ಭಾರತೀಯ ಸೇನೆಯ ಶರಣಾಗತಿ
3. ಆಫ್ಘಾನಿಸ್ತಾನದಲ್ಲಿ ಹೊಸ ಪ್ರಗತಿ ಸಾಧಿಸಿದ ಭಾರತೀಯ ಜೆಟ್ ಗಳು ಮತ್ತು ಘನಿಗೆ ಅಚ್ಚರಿ ನೀಡಿದ ಪಾಕ್
4. ಅಫ್ಘಾನ್ ಗುಂಪಿನ ವಿಜಯ ಮತ್ತು ಆಫ್ಘಾನಿಸ್ತಾನದಲ್ಲಿ ಭಾರತೀಯ ಜೆಟ್ ವಶ
|
ಚಂದಾದಾರರು: 4,76,000
ಒಟ್ಟು ವೀಕ್ಷಣೆ: 7,53,89,895
|
-
|
ಅಪ್ನಿ ದುನಿಯಾ ಟಿವಿ
|
1. ಚೀನಾದಿಂದ ಭಾರತಕ್ಕೆ ಹೀನಾಯ ಸೋಲು, ಲಡಾಖ್ ಬಗ್ಗೆ ಮಾತುಕತೆ
2. ಚೀನಾ ಮತ್ತು ಭಾರತ ವಾಯುಪಡೆ ಮುಖಾಮುಖಿ, ಚೀನಾವನ್ನು ತಡೆಯುವಂತೆ ವಿಶ್ವಕ್ಕೆ ಪ್ರಧಾನಿ ಮೋದಿ ಮನವಿ
3. ವಾಯುನೆಲೆ ಬಳಸಲು ಜೋ ಬಿಡೆನ್ ಗೆ ಮೋದಿ ಅನುಮತಿ
|
ಚಂದಾದಾರರು: 9,96,000
ಒಟ್ಟು ವೀಕ್ಷಣೆ:
11,35,80,030
|
-
|
ಹಕೀಕತ್ ಕಿ ದುನಿಯಾ
|
1. ಖಮರ್ ಬಾಜ್ವಾ ಮುಂದೆ ಭಾರತೀಯ ಸೇನಾ ಮುಖ್ಯಸ್ಥರ ಶರಣಾಗತಿಯೊಂದಿಗೆ ಸಿಯಾಚಿನ್ ನಲ್ಲಿ ಭಾರತೀಯ ಸೇನೆ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು
2. ಅಭಿನಂದನೆಗಳು! ಇಮ್ರಾನ್ ಖಾನ್ ರಿಂದ ಸಾಧನೆಯ ಮೈಲಿಗಲ್ಲು, ಪ್ರಧಾನಿ ಮೋದಿಗೆ ದುಃಸ್ವಪ್ನ
3. ಯುಎಸ್ಎ ನ್ಯಾಟೋಗೆ, ರಷ್ಯಾದಿಂದ ದೊಡ್ಡ ಬೆಳವಣಿಗೆ | ಪಿ.ಎಂ. ಮೋದಿ ಭದ್ರತೆ ಹೆಚ್ಚಿಸಿದ್ದು ಏಕೆ? ಇತ್ತೀಚಿನ ಸುದ್ದಿಗಳು| ಹಕೀಕತ್ ಕಿ ದುನಿಯಾ
4. ಬ್ರೇಕಿಂಗ್! ಸೇನಾ ಮುಖ್ಯಸ್ಥರು ದೊಡ್ಡ ಸಂದೇಶದೊಂದಿಗೆ ಎಚ್ಚರಿಕೆ ಪತ್ರ ಬರೆದಿದ್ದು, ಪ್ರಧಾನಿ ಮೋದಿಗೆ ಆತಂಕದ ಪರಿಸ್ಥಿತಿ
|
ಚಂದಾದಾರರು: 14,90,000
ಒಟ್ಟು ವೀಕ್ಷಣೆ:
20,53,37,557
|
-
|
ಶಹಜಾದ್ ಅಬ್ಬಾಸ್
|
1. ಶಹಜಾದ್ ಅಬ್ಬಾಸ್ ಅವರು ಸಿಂಧೂ ಜಲ ಒಪ್ಪಂದ ವಿವರ ನೀಡಿದ್ದು, ಪಾಕಿಸ್ತಾನದ ಮೇಲೆ ಐಬಿ ಕ್ಷಿಪಣಿಗಳನ್ನು ಉಡಾಯಿಸಲು ಭಾರತ ಸಿದ್ಧವಾಗಿದೆ
2. ಭಾರತ ಮತ್ತು ಹಮೀದ್ ಕರ್ಜಾಯ್ ರಿಂದ ಪಾಕಿಸ್ತಾನದ ವಿರುದ್ಧ ಹೊಸ ಅಪಪ್ರಚಾರ
3. ಭಾರತ ಪಾಕಿಸ್ತಾನ ಪ್ರಸ್ತುತ ಪರಿಸ್ಥಿತಿ ಟಿಎಲ್.ಪಿ. ಗುಂಟಾ ದೀರ್ಘ ಯಾತ್ರೆ ಮತ್ತು ಇಮ್ರಾನ್ ಖಾನ್ ನಿಂದ ಪಾಕ್ ಸೇನೆಯ ಇತ್ತೀಚಿನ ಕಾರ್ಯಾಚರಣೆ
4. ಹಿಂದೂ ಸಿಖ್ ಘರ್ಷಣೆಗಳ ಕುರಿತಂತೆ ಭಾರತದಿಂದ ದೊಡ್ಡ ವರದಿ | ರಾಜ್ಯದಲ್ಲಿ ಸಂಘರ್ಷಗಳನ್ನು ನಿರ್ವಹಿಸಲು ಮೋದಿ ಸರ್ಕಾರ ವಿಫಲ
|
ಚಂದಾದಾರರು: NA
ಒಟ್ಟು ವೀಕ್ಷಣೆಗಳು: 1,230,954
|
-
|
ಮೇರಾ ಪಾಕಿಸ್ತಾನ್ ವಿತ್ ಶಹಾಬ್
|
1. ಜನರಲ್ ಬಾಜ್ವಾ ಮತ್ತು ಇಮ್ರಾನ್ ಖಾನ್ ಗೆ ವಿಜಯದ ಕ್ಷಣ ಮತ್ತು ಪಾಕಿಸ್ತಾನ ಪ್ರಧಾನಿ ಮೋದಿಯ ಕೊನೆಯ ಆಯ್ಕೆಯಾಗಿದೆ- ಸಂಸದರಿಂದ ವಿವರ.
2. ಪಾಕಿಸ್ತಾನದಲ್ಲಿ ಕ್ರಿಕೆಟ್ ನಿಷೇಧಿಸಲು ಇಮ್ರಾನ್ ಖಾನ್ ಮತ್ತು ಜನರಲ್ ಬಾಜ್ವಾ ಗೆ ಹೊಸ ರಂಗ ತೆರೆದ ಪ್ರಧಾನಿ ಮೋದಿ
3. ಪಾಕಿಸ್ತಾನ್ ಕಿ ಏಕ್ ಔರ್ ಜೀತ್ ಔರ್ ಇಂಡಿಯಾ ಕಿ ಹಾರ್
|
ಚಂದಾದಾರರು: 1,34,000
ಒಟ್ಟು ವೀಕ್ಷಣೆ: 43,14,072
|
-
|
ಖಬರ್ ವಿತ ಅಹ್ಮದ್
|
1. ಕುದುರೆಗಳ ಮೇಲೆ ಗಾಲ್ವಾನ್ ಕಣಿವೆಯನ್ನು ಪ್ರವೇಶಿಸಿದ ಚೀನಾದ ಮಂಗೋಲ್ ಸೇನೆ
2. ಭಾರತೀಯ ಸಂಸತ್ತಿನ ಮೇಲೆ ಖಲಿಸ್ತಾನ ಧ್ವಜ
3. ಮೌಲಾನಾ ಕಲೀಮ್ ಸದಿಕ್ ನಿಂದಾಗಿ 15 ಸಾವಿರಕ್ಕೂ ಹೆಚ್ಚು ಹಿಂದೂಗಳು ಮುಸ್ಲಿಮರಾಗುತ್ತಿದ್ದಾರೆ
|
ಚಂದಾದಾರರು: 34,200
ಒಟ್ಟು ವೀಕ್ಷಣೆಗಳು: 28,85,895
|
-
|
ಎಚ್ ಆರ್ ಟಿ.ವಿ.
|
1. ಜನರಲ್ ಬಿಪಿನ್ ರಾವತ್ ಸುಗಮವಾಗಿ ನರಕಕ್ಕೆ ಹೋಗುತ್ತಿದ್ದಾರೆ ಬ್ರೇಕಿಂಗ್ ನ್ಯೂಸ್# ಪಿಎಂಮೋದಿ ಟ್ವೀಟ್ #ಇಂಡಿಯನ್ ಆರ್ಮಿ # ಬಿಪಿನ್ ರಾವತ್
2. 1000 ಇಸ್ರೇಲಿ ಡ್ರೋನ್ ಗಳು #LAC #ಭಾರತೀಯ ಸೇನೆ #ಚೀನಾ#ಇಂಡಿಯಾಚೀನಾ#ಲಡಾಕ್#ಅಪ್ನಿದುನಿಯಾ ನೆಟ್ ವರ್ಕ್
|
ಚಂದಾದಾರರು: NA
ಒಟ್ಟು ವೀಕ್ಷಣೆ: 12,68,313
|
- 8
|
ಸಬೀ ಕಾಜ್ಮಿ
|
1. ಭಾರತೀಯ ಏರ್ ಹೆಲಿಕಾಪ್ಟರ್ ಮುಖ್ಯಸ್ಥ ಇದರ ಹಿಂದೆ ಇದ್ದಾರೆ?| ಫೈಸಲಾಬಾದ್ ಘಟನೆ ನೈಜತೆ
2. 160 ದಶಲಕ್ಷ ಭದ್ರತಾ ವೈಫಲ್ಯ ಭಾರತ ಐಎಸ್ಐ ಅನ್ನು ದೂಷಿಸುತ್ತದೆ
3. ಖಾಲಿಸ್ತಾನ್ ಒಂದು ವಾಸ್ತವ
4. 15 ನಿಮಿಷಗಳಲ್ಲಿ ಚೀನಾ ಭಾರತವನ್ನು ಹೇಗೆ ವಶಪಡಿಸಿಕೊಂಡಿತು
5. ಜೋಹರ್ ಟೌನ್ ಸ್ಫೋಟದ ರೂವಾರಿ ರಾ ಜೊತೆ ಸಂಬಂಧ ಹೊಂದಿದ್ದ ಭಾರತೀಯ ನಾಗರಿಕ.
|
ಚಂದಾದಾರರು: 51,500
ಒಟ್ಟು ವೀಕ್ಷಣೆಗಳು: 42,31,907
|
- 9
|
ಸಚ್ ಟಿವಿ ನೆಟ್ ವರ್ಕ್
|
1. ಎಫ್.ಎಟಿಎಫ್ ಬೂದು ಪಟ್ಟಿಯಲ್ಲಿ ಭಾರತ
2. ಭಾರತವು ಮುತ್ತಿಗೆಯಲ್ಲಿದ್ದು, ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ನಿಲ್ಲಲು ಸಿದ್ಧವಾಗಿಲ್ಲ ಆದರೆ ಕ್ವಾಡ್ ನಿರೀಕ್ಷೆಗಳನ್ನು ಹೊಂದಿದೆ
3. ವೀಸಾ ಇಲ್ಲದೆ ಅರುಣಾಚಲ ಪ್ರದೇಶ ಪ್ರವೇಶಿಸಲು ಮೋದಿಗೆ ಅನುಮತಿ ಇಲ್ಲ
4. ಭಾರತೀಯ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರನ್ನು ಹೊತ್ತ ಐಎಎಫ್ ಹೆಲಿಕಾಪ್ಟರ್ ಎಂಐ-17 ಯು.ಎಸ್. ಪೆಂಟಗನ್ ನೊಂದಿಗೆ ಸಹಯೋಗ ಹೊಂದಿತ್ತು
|
ಚಂದಾದಾರರು: 1,80,000
ಒಟ್ಟು ವೀಕ್ಷಣೆಗಳು: 1,76,20,534
|
-
|
ಸಾಕ್ವಿಬ್ ಸ್ಪೀಕ್ಸ್
|
1. ಭಾರತ ಸೌದಿ ತೈಲ ಯುದ್ಧ | ಪ್ರಧಾನಿ ಮೋದಿಯಿಂದ ಎಂಬಿಎಸ್ ಗೆ ದ್ರೋಹ ಮತ್ತು ಇರಾನ್ ನೊಂದಿಗೆ ಕೈ ಮಿಲಾಯಿಸಿದ್ದಾರೆ| ಇಮ್ರಾನ್ ಮತ್ತು ಬಾಜ್ವಾ ಆನಂದಿಸುತ್ತಿದ್ದಾರೆ
2. ಚೀನಾ ಭಾರತ ಲಡಾಕ್ ಆಗಿದ್ದು, ಮೋದಿಗೆ ಸಹಾಯ ಮಾಡಲು ರಷ್ಯಾ ನಿರಾಕರಿಸಿದೆ
3. ಇನ್ ಸೈಡ್ ಸ್ಟೋರಿ ಭಾರತದೊಂದಿಗೆ ಕರಾಚಿ ಸ್ಟಾಕ್ ಎಕ್ಸ್ ಚೇಂಜ್ ನಂಟು
4. ಪಾಕಿಸ್ತಾನ ಚೀನಾ ಸ್ವೀಕಾರಾರ್ಹವಲ್ಲ! ರಷ್ಯಾ ಜೊತೆಗಿನ ಸಂಬಂಧವನ್ನು ಭಾರತ ತಿರಸ್ಕರಿಸಿದೆ
5. ಚೀನಾ ಭಾರತ ಲಡಾಖ್ ನಡುವಿನ ಒಪ್ಪಂದ ಮುರಿಯಲು ಪ್ರಧಾನಿ ಮೋದಿ ಆದೇಶ
6. ರಷ್ಯಾವನ್ನು ಮರೆತು ಬಿಡಿ ನಂತರ ನಾವು ಚೀನಾ ವಿರುದ್ಧ ನಿಮ್ಮನ್ನು ಬೆಂಬಲಿಸುತ್ತೇವೆ ಭಾರತಕ್ಕೆ ಯುಎಸ್ಎ ಹೇಳಿಕೆ
7. ನರೇಂದ್ರ ಮೋದಿಗೆ ದೊಡ್ಡ ಹಿನ್ನಡೆ 17 ರಾಜ್ಯಗಳು ಅವರ ಇಚ್ಛೆಗೆ ವಿರುದ್ಧ ನಿಂತಿವೆ
|
ಚಂದಾದಾರರು: 2,57,000
ಒಟ್ಟು ವೀಕ್ಷಣೆ: 2,01,85,193
|
-
|
ಸಲ್ಮಾನ್ ಹೈದರ್
ಅಫಿಷಿಯಲ್
|
1. ಬ್ರೇಕಿಂಗ್! ಪಾಕಿಸ್ತಾನದಿಂದ ಭಾರತ ತ್ರಿಪುರ ಅಪ್ ಡೇಟ್ ! ಆರ್.ಎಸ್.ಎಸ್ ಮತ್ತು ಭಾರತೀಯ ಸೇನೆ ಮುಸ್ಲಿಂ ಕಾರ್ಯಾಚರಣೆ
2. ಭಾರತದಿಂದ ಹೆಚ್ಚಿನ ಪ್ರದೇಶವನ್ನು ತೆಗೆದುಕೊಳ್ಳಲು ಚೀನಾ ನಿರ್ಧಾರ
|
ಚಂದಾದಾರರು: 1,16,000
ಒಟ್ಟು ವೀಕ್ಷಣೆಗಳು: 1,26,10,116
|
-
|
ಸಾಜಿದ್ ಗೊಂಡಲ್ ಸ್ಪೀಕ್ಸ್
|
1. ಖಾಲಿಸ್ತಾನ್ ಕಡೆಗೆ ಸಿಖ್ ಸಮುದಾಯ ಮತ್ತು ದೊಡ್ಡ ಸಂಕಷ್ಟದಲ್ಲಿ ಮೋದಿ ಸರ್ಕಾರ
2. ಭಾರತದಲ್ಲಿ ಹೊಸ ದಿಕ್ಕು ಪಡೆಯುತ್ತಿರುವ ಹೊಸ ಜನಾಭಿಪ್ರಾಯ ಸಂಗ್ರಹ
3. ಅಂತಿಮವಾಗಿ ನ್ಯೂಜಿಲ್ಯಾಂಡ್ ಪ್ರವಾಸದ ಹಿಂದೆ ಬಿದ್ದ ಭಾರತ ಮತ್ತು ಫವಾದ್ ಚೌಧರಿ ಒತ್ತಾಯಿಸಿದಂತೆ ಮಾರ್ಟಿನ್ ಗುಪ್ಟಿಲ್ ಪತ್ನಿಗೆ ಇಮೇಲ್
|
ಚಂದಾದಾರರು: 2,16,000
ಒಟ್ಟು ವೀಕ್ಷಣೆಗಳು: 8,00,61,734
|
13.
|
ಮಲೇಹಾ ಹಶ್ಮೆ
|
1. ಭಾರತದ ಹೊಸ ಡ್ರೋನ್ ನಾಟಕ ಹೇಗೆ ವಿಫಲವಾಯಿತು
2. ಸಿಒಎಎಸ್ ಗೆ ಭಾರತ ಏಕೆ ಹೆದರುತ್ತಿದೆ - ಜನರಲ್ ಬಜ್ವಾ! - ಮಲೇಹಾ ಹಶ್ಮೇ
|
ಚಂದಾದಾರರು: 1,39,000
ಒಟ್ಟು ವೀಕ್ಷಣೆಗಳು: 14,688,436
|
14.
|
ಉಮರ್ ದರಾಜ್ ಗೊಂಡಾಲ್
|
1. ಇಮ್ರಾನ್ ಖಾನ್ ಸ್ಕಾರ್ಡು ವಿಮಾನ ನಿಲ್ದಾಣ, ಪಾಕಿಸ್ತಾನಕ್ಕೆ ಭಾರತದ ಕುಟುಕುವ ಪ್ರತಿಕ್ರಿಯೆ - ಉಮರ್ ದರಾಜ್ ಗೊಂಡಾಲ್ ಅವರಿಂದ ವಿವರಣೆ
2. ಆಘಾನಿಸ್ತಾನ್ ಸಮಸ್ಯೆ ಪಾಕಿಸ್ತಾನ ಮತ್ತು ಭಾರತೀಯ ಮಾಧ್ಯಮಗಳ ಆರೋಪದ ಬಳಿಕ ಇರಾನಿನ ಎಫ್ಎಂ ಭಾರತ ಭೇಟಿ, ಮುಲ್ಲಾ ಅಬ್ದುಲ್ ಘನಿ ಹೇಳಿಕೆ
3. ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಗೆಲುವು, ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಪ್ರಕರಣದಲ್ಲಿ ಗೆಲುವು - ನೌಮನ್ ಸ್ಪೀಕ್ಸ್ ನಿಂದ ವಿವರ
4. ಭಾರತ - ಆಫ್ಘಾನಿಸ್ತಾನ ಟಿ20 ಮ್ಯಾಚ್ ಫಿಕ್ಸಿಂಗ್ ಪುರಾವೆ ಶೋಯಿಬ್ ಅಖ್ತರ್ ಭಾರತೀಯ ಮಾಧ್ಯಮಗಳ ಬಾಯಿ ಮುಚ್ಚಿಸಿದ್ದಾರೆ - ವಿರಾಟ್ ಕೊಹ್ಲಿ
5. ಲೂಧಿಯಾನ ಕೋರ್ಟ್ ಸ್ಫೋಟದ ಹಿಂದೆ ಐಎಸ್ಐ ಪಾಕಿಸ್ತಾನಕ್ಕೆ ದೊಡ್ಡ ಪುರಾವೆ ಒದಗಿಸಿದ ಭಾರತ |ಜೆನ್ ನದೀಮ್ ಅಂಜುಮ್
|
ಚಂದಾದಾರರು: 3,96,000
ಒಟ್ಟು ವೀಕ್ಷಣೆಗಳು: 3,48,81,037
|
ತಲ್ಹಾ ಫಿಲ್ಮ್ಸ್
ಕ್ರ.ಸಂ.
|
ಯೂಟ್ಯೂಬ್ ವಾಹಿನಿಗಳು
|
ವಾಹಿನಿಗಳು ಪ್ರಸಾರ ಮಾಡಿದ ಸುಳ್ಳು ವಸ್ತು ವಿಷಯದ ಉದಾಹರಣೆಗಳು
|
ಮಾಧ್ಯಮ ಅಂಕಿ ಅಂಶಗಳು
|
-
|
ಖೋಜಿ ಟಿ.ವಿ.
|
1. ಭಾರತದ ವಿಮಾನ ಮತ್ತು ಬಿಪಿನ್ ರಾವತ್ ರ ಇತ್ತೀಚಿನ ವೀಡಿಯೊ
2. ಔಷಧ ಮತ್ತು ಇತರ ಚಿಕಿತ್ಸೆಯೊಂದಿಗೆ ಭಾರತ ತಲುಪಿದ ಪಾಕ್ ಸೇನೆಯ ಮತ್ತೊಂದು ವಿಮಾನ.
3. ಸಿರಿಯಾ ಬಂದರಿಗೆ ಅಪ್ಪಳಿಸಿದ ಭಾರತ- ಇಸ್ರೇಲಿ ವಾಯುದಾಳಿ ಮತ್ತು ಉತ್ತಮ ಪ್ರದರ್ಶನ ನೀಡದ ಎಸ್-400
4. ನರೇಂದ್ರ ಮೋದಿ ಪಾಕಿಸ್ತಾನಕ್ಕೆ ಏಕೆ ಬರುತ್ತಿದ್ದಾರೆ | ಪಾಕಿಸ್ತಾನ ಐಎಸ್ಐನ ದೊಡ್ಡ ಯಶಸ್ಸು
5. ಭಾರತೀಯ ನೌಕಾಪಡೆ ತನ್ನದೇ ಸ್ವಂತ ಹಡಗಿಗೆ ಹೊಡೆದ ಇತ್ತೀಚಿನ ದೊಡ್ಡ ಬೆಳವಣಿಗೆಯ ನಂತರ ದೊಡ್ಡ ಮುಜುಗರ ಎದುರಿಸುತ್ತದೆ
|
ಚಂದಾದಾರರು: 21,80,000
ಒಟ್ಟು ವೀಕ್ಷಣೆಗಳು: 230,5,65,187
|
-
|
ಖೋಜಿ ಟಿವಿ 2.0
|
1. ಭಾರತೀಯ ಸಿಡಿಎಸ್ ಬಿಪಿನ್ ರಾವತ್ ಎಂಐ 17 ಹೆಲಿಕಾಪ್ಟರ್ - ಪೂರ್ಣ ಇತ್ತೀಚಿನ ವೀಡಿಯೊ
2. ತನ್ನ ವಿಮಾನಗಳಿಗೆ ಇರಾನಿ ವಾಯುಪ್ರದೇಶವನ್ನು ಬಳಸದಂತೆ ಭಾರತಕ್ಕೆ ತಿಳಿಸಿದ ಇರಾನ್, ಚಹಬಹರ್ ಈಗ ಗವಾದಾರ್ ಬಂದರಿನ ಭಾಗವಾಗಿದೆ
3. ಪಾಕಿಸ್ತಾನ್ ನೆ ಇಂಡಿಯಾ ಕೆ ರಿವರ್ಸ್ ಪರ್ ಕಬ್ಜಾ ಕರ್ ಲಿಯಾ
4. ಪಾಕಿಸ್ತಾನದಿಂದ ಭಾರತಕ್ಕೆ ಸಹಾಯ | ಭಾರತಕ್ಕೆ ಸಹಾಯ ಮಾಡಲು ಪಾಕಿಸ್ತಾನ 50 ಆಂಬ್ಯುಲೆನ್ಸ್ ತಲುಪಿದೆ
5. ವಾಡಿಯಲ್ಲಿ ಕೆಲಸ ಮಾಡದ ನರೇಂದ್ರ ಮೋದಿ ಅಜಿತ್ ದೋವಲ್ ಮತ್ತು ಅಮಿತ್ ಶಾ ಅವರ ಹುಚ್ಚು ಯೋಜನೆ
|
ಚಂದಾದಾರರು: 9,92,000
ಒಟ್ಟು ವೀಕ್ಷಣೆಗಳು: 6,30,63,489
|
-
|
ಕವರ್ ಪಾಯಿಂಟ್
|
1. ಹಮಾಚಲ್ ಪರ್-ದೇಶ್ | ನಲ್ಲಿ ಚೀನಾದ ಸೇನಾ ಧ್ವಜ ಹಾರಾಟ, ಚೀನಾ ಮುಂದೆ ಭಾರತೀಯ ಸೇನೆ ಶರಣಾಗತಿ
2. ಭಾರತೀಯ ಪಂಜಾಬ್ ಸ್ವಾತಂತ್ರ್ಯಕ್ಕೆ ಅಮೆರಿಕ ಬೆಂಬಲ
3. ಭಾರತಕ್ಕೆ ಪರಮಾಣು ಬಾಂಬ್ ಸಿದ್ಧವಾಗಿದೆ ಎಂದು ಉತ್ತರ ಕೊರಿಯಾ ಅಧ್ಯಕ್ಷರ ಘೋಷಣೆ
4. ಚೀನಾದ ಯುದ್ಧ ವಿಮಾನಗಳು ಜೆ-11 ಭಾರತ ಪ್ರವೇಶಿಸಿದ್ದು, ಪರಮಾಣು ಪ್ರದೇಶವನ್ನು ಗುರಿಯಾಗಿಸಿಕೊಂಡಿವೆ
5. ಅಬಾಬೀಲ್ ಕ್ಷಿಪಣಿ ಬಳಸಿ ಭಾರತೀಯ ಎಸ್-400 ಕ್ಷಿಪಣಿಯನ್ನು ಹೊಡೆದುರುಳಿಸಿದ ಪಾಕ್ ಸೇನೆ
6. ಕ್ಷಿಪಣಿಗಳೊಂದಿಗೆ ಚೀನಾ ಭಾರತದ ಮೇಲೆ ನಿಯಂತ್ರಣವನ್ನು ಸಾಧಿಸುತ್ತಿದೆ
7. 6 ಭಾರತೀಯ ಪೈಲಟ್ ಗಳನ್ನು ಸೆರೆಹಿಡಿದ ನಂತರ ಆಫ್ಘಾನಿಸ್ತಾನದಲ್ಲಿ ದೊಡ್ಡ ಬೆಳವಣಿಗೆ
8. 7 ಕೆಜಿ ಯುರೇನಿಯಂನ ಪರಮಾಣು ಬಾಂಬ್ ಕಳೆದುಕೊಂಡ ಭಾರತ, ಪಾಕಿಸ್ತಾನ ಸೇನೆ ಮತ್ತು ಐಎಸ್ಐ ಗೆಲುವು
9. ತರಬೇತಿ ಕಸರತ್ತಿನ ವೇಳೆ ಐಎಎಫ್ ಮೊದಲ ರಫೆಲ್ ಫೈಟರ್ ಜೆಟ್ ಪತನ
|
ಚಂದಾದಾರರು: 7,13,000
ಒಟ್ಟು ವೀಕ್ಷಣೆಗಳು:
6,88,03,478
|
-
|
ಜುನೈದ್ ಫ್ಲಿಕ್ಸ್
|
1. ಶೋಪಿಯಾನ್ ಭಾರತೀಯರ ಸ್ಮಶಾನವಾಗಿದೆ | ಭಾರತೀಯ ಸೇನೆಯ ಮೇಲೆ ಘಜ್ನಾವಿ ಪಡೆ ಎರಗಿದೆ
2. ಪೂಂಚ್ ನಲ್ಲಿ ಮುಜಾಹಿದೀನ್ ಎಷ್ಟು ಕ್ರಮ ಕೈಗೊಂಡಿತ್ತೆಂದರೆ, ಭಾರತೀಯ ಸೇನೆಯ ಜೀವ ಉಳಿಸುವುದೂ ಕಷ್ಟವಾಗಿತ್ತು.
3. ಭಾರತೀಯ ಸೇನೆಯ ಅಪ್ನೆ ಹಲಕ್ ಫೋಜಿಯೋನ್ ಕೋ ಚೋರ್ ಕರ್.ಭಾಗ್ ಗಯಾ | ಕಾಶ್ಮೀರ್ ಆಜಾದಿ ಕೇ ಖರೀಬ್
4. ಆಜಾದ್ ಕಾಶ್ಮೀರದ ಮೇಲೆ ದಾಳಿ ಘೋಷಿಸಿದ ಭಾರತೀಯ ಸೇನಾ ಮುಖ್ಯಸ್ಥ
5. ಮೋದಿಯ ಕುತ್ತಿಗೆ ಪಟ್ಟಿ ಹಿಡಿದ ಎರ್ಡೋಗನ್
6. ಬ್ರೇಕ್ ಇನ್ | ಪೂಂಚ್ ಅರಣ್ಯದಲ್ಲಿ ಭಾರತೀಯ ಸೈನಿಕರ ಯಾತನೆಯ ಸ್ಥಿತಿ
7. ಬ್ರೇಕಿಂಗ್ ನ್ಯೂಸ್ | ಚೀನಾ ಮೇಲೆ ದಾಳಿಗೆ ಅಮೆರಿಕ, ಭಾರತ ಸಂಪೂರ್ಣ ಸಿದ್ಧತೆ | ಚೀನಾ ಎರಡಕ್ಕೂ ಜಂಟಿ ಸಮಾಧಿ ಅಗೆಯುತ್ತಿದೆ
|
ಚಂದಾದಾರರು: 29,800
ಒಟ್ಟು ವೀಕ್ಷಣೆಗಳು: 41,16,259
|
-
|
ನ್ಯಾಷನಲ್ ಸ್ಟುಡಿಯೋ
|
1. ಇಂಡಿಯಾ ಮೇ ಕಿಸಾನೊ ಕಾ ಬರ್ಹಾತ್ ಹುವಾ ಖತಲ್ - ಇ - ಆಮ್
2. ಮೋದಿ ಸರ್ಕಾರದಿಂದ ಅಸ್ಸಾಂ ಸಾರ್ವಜನಿಕರಿಗೆ ಮತ್ತು ಈ ಪ್ರದೇಶದಲ್ಲಿ ಹೊಸ ಅಭಿವೃದ್ಧಿಯ ಹೊಸ ಆದೇಶಗಳು
|
ಚಂದಾದಾರರು: 2,08,000
ಒಟ್ಟು ವೀಕ್ಷಣೆಗಳು: 1,28,95,298
|
-
|
ಇನ್ಫರ್ಮೇಟೀವ್ ವರ್ಲ್ಡ್
|
1. ಸಿಖ್ ಸಮುದಾಯಕ್ಕೆ ಭಾರತದಲ್ಲಿ ಸಂಕಷ್ಟ ಮತ್ತು ಜಗತ್ತಿನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
2. ಇಸ್ರೇಲ್ ತನ್ನ ಸ್ವಂತ ಪ್ರಯೋಜನಕ್ಕಾಗಿ ಭಾರತವನ್ನು ಬಳಸುತ್ತಿದೆ | ಇನ್ಫರ್ಮೇಟೀವ್ ವರ್ಲ್ಡ್
|
ಚಂದಾದಾರರು: 1,450
ಒಟ್ಟು ವೀಕ್ಷಣೆಗಳು: 38,795
|
-
|
ದುನಿಯಾ ಅಫಿಷಿಯಲ್
|
1. ರಕ್ತಪಾತವು ಪ್ರಾರಂಭ. ಮುಸ್ಲಿಮರ ಹತ್ಯಾಕಾಂಡ. ದೇಹಗಳು. ಮುಸ್ಲಿಮರನ್ನು ಕೊಲ್ಲಿರಿ (ಉರ್ದುವಿನಿಂದ ಅನುವಾದಿಸಲಾಗಿದೆ)
2. ಸೌದಿ ಅರೇಬಿಯಾದಿಂದ ಭಾರತ, ಭಾರತೀಯ ಜನರ ವಿರುದ್ಧ ವಿರುದ್ಧ ದೊಡ್ಡ ಕ್ರಮ, ಭಾರತೀಯ ತೈಲ ಪೂರೈಕೆ ಸ್ಥಗಿತ |ದುನಿಯಾ ಅಫಿಷಿಯಲ್
3. ಭಾರತದಲ್ಲಿ ಪಾಕ್ ಸೇನೆ ತಾಲಿಬಾನ್ ಮುಖಾಮುಖಿ, ವ್ಯಾಲಿ ನ್ಯೂಸ್ ವಿರುದ್ಧ ಕಠಿಣ ಕ್ರಮ. | ಇಂಡಿಯಾ ನ್ಯೂಸ್
|
ಚಂದಾದಾರರು: 1,14,000
ಒಟ್ಟು ವೀಕ್ಷಣೆಗಳು: 2,08,03,517
|
-
|
ಸ್ಟುಡಿಯೋ 360
|
1. ಭಾರತೀಯ ಸೇನೆಯ ಅದ್ಭುತ ವ್ಯಕ್ತಿ, ಎಲ್ಒಸಿಯಲ್ಲಿ ಸೇನಾ ಪ್ರಮುಖ ಅಧಿಕಾರಿಯನ್ನು ಕೊಂದಿದ್ದಾರೆ
|
ಚಂದಾದಾರರು: 3,90,000
ಒಟ್ಟು ವೀಕ್ಷಣೆಗಳು: 3,39,09,635
|
-
|
ಹಕೀಕತ್ ಟಿವಿ ನ್ಯೂಸ್
|
1. ಪ್ರಧಾನಮಂತ್ರಿ ಮೋದಿ ಅವರು ವಿಧಿ 370, 35ಎಯನ್ನು ಪುನರ್ ಸ್ಥಾಪಿಸಿದ್ದಾರೆ. ಚೀನಾ ಭಾರತ ಬಿಕ್ಕಟ್ಟು | ಟ್ರೆಂಡಿಂಗ್ ಪಾಯಿಂಟ್ ಗಳು
|
ಚಂದಾದಾರರು: 5,08,000
ಒಟ್ಟು ವೀಕ್ಷಣೆಗಳು: 5,82,45,542
|
-
|
ಹಕೀಕತ್ ಟಿವಿ 786
|
1. ಬಾಬ್ರಿ ಬಗ್ಗೆ ಎರ್ಡೋಗನ್ ಅದ್ಭುತ ಹೆಜ್ಜೆ
2. ತಯ್ಯಿಪ್ ಎರ್ಡೋಗನ್ ರಾಮ ಮಂದಿರ ಧ್ವಂಸ
3. ಕೈಯಿಂದ ಮಾಡಿದ ಯುಬಿಜಿಎಲ್: ಕಾಶ್ಮೀರದ ಇತ್ತೀಚಿನ ತಂತ್ರ, ಭಾರತೀಯ ಸೇನೆ ಹುಡುಗಿಯರ ವಿಡಿಯೋ ತೆಗೆದುಕೊಳ್ಳುತ್ತಿದೆ.
4. ರಾಮ ಮಂದಿರ ಧ್ವಂಸ || ಬಿಜೆಪಿ, ಮೋದಿ,
5. ಬಾಬ್ರಿ ಮಸೀದಿ || ರಾಮ ಮಂದಿರ ಧ್ವಂಸ
|
ಚಂದಾದಾರರು: 3,19,000
ಒಟ್ಟು ವೀಕ್ಷಣೆಗಳು: 3,99,82,059
|
-
|
ಬೋಲ್ ಮೀಡಿಯಾ ಟಿವಿ
|
1. ಸೂಪರ್ ಡ್ಯಾಮ್ ನಿಂದ ಭಾರತಕ್ಕೆ ಹರಿಯುವ ನೀರನ್ನು ನಿಲ್ಲಿಸಿದ್ದು ಚೀನಾ ಮತ್ತು ಭಾರತ ಮತ್ತೊಮ್ಮೆ ಎಲ್ಎಸಿಯಲ್ಲಿ ಪರಸ್ಪರ ಮುಖಾಮುಖಿಯಾಗುತ್ತಿವೆ
2. ಈದ್-ಉಲ್-ಫಿತರ್ ನಂತರ ಭಾರತದಲ್ಲಿ ಜಿಹಾದ್ ಘೋಷಿಸುವ Afgh@n T@liban
3. ಸೌದಿ ಅರೇಬಿಯಾ ಬದಲಾಗಿ ಮುಸ್ಲಿಮರ ನಾಯಕನಾಗಲು ಟರ್ಕಿಯನ್ನು ತಡೆಯುತ್ತಿರುವ ಲೇಟೆಸ್ಟ್ ಇಂಡಿಯಾ
|
ಚಂದಾದಾರರು: NA
ಒಟ್ಟು ವೀಕ್ಷಣೆಗಳು: 1,26,79,567
|
-
|
ಉರ್ದು ಸ್ಟುಡಿಯೋ
|
1. ಭಾರತ ಮತ್ತು ಮೋದಿ ತಂಡ ಕಾಶ್ಮೀರದಲ್ಲಿ ವಿಧಿ 370 ಮತ್ತು 35ಎ ಅನ್ನು ಹಿಂಪಡೆಯಬಹುದು
2. ಪ್ರಧಾನಮಂತ್ರಿ ಮೋದಿ ಅವರು ವಿಧಿ 370 ಮತ್ತು 35ಎ ಅನ್ನು ಪುನಃಸ್ಥಾಪಿಸಬಹುದು ಮತ್ತು ಚೀನಾ ಭಾರತ ಬಿಕ್ಕಟ್ಟು | ಡೈಲಿ ವೈರಲ್ | 11 ಜುಲೈ 2021
|
ಚಂದಾದಾರರು: 8,94,000
ಒಟ್ಟು ವೀಕ್ಷಣೆಗಳು: 89,20,295
|
-
|
ಜಾಕಿ ಅಬ್ಬಾಸ್
|
1. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಬಗ್ಗೆ ಬಿಜೆಪಿ ಯೋಜನೆ ಬಹಿರಂಗ
2. ಭಾರತದ ಸೋಲಿಗೆ ಮೋದಿ ಸರ್ಕಾರ ಕಾರಣ (ಕ್ರಿಕೆಟ್ ಪಂದ್ಯದಲ್ಲಿ)
|
ಚಂದಾದಾರರು: 17,300
ಒಟ್ಟು ವೀಕ್ಷಣೆಗಳು: 15,29,147
|
ಇತರೆ (ಇವು ನೆಟ್ ವರ್ಕ್ ಗಳ ಭಾಗವಲ್ಲ)
ಕ್ರ.ಸಂ.
|
ಯೂಟ್ಯೂಬ್ ವಾಹಿನಿಗಳು
|
ವಾಹಿನಿಗಳು ಪ್ರಸಾರ ಮಾಡಿದ ಸುಳ್ಳು ವಸ್ತು ವಿಷಯದ ಉದಾಹರಣೆಗಳು
|
ಮಾಧ್ಯಮ ಅಂಕಿ ಅಂಶಗಳು
|
-
|
ವೈಟ್ ನ್ಯೂಸ್
|
1. ಬಂಗಾಳಿ ಹುಡುಗಿಯರನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಭಾರತದ ಕುಖ್ಯಾತ ವ್ಯವಹಾರವು ಪ್ರವರ್ಧಮಾನಕ್ಕೆ ಬರುತ್ತಿದೆ
2. ಭಾರತೀಯ ತೀವ್ರಗಾಮಿಗಳು ಬಂಗಾಳಿ ಮುಸ್ಲಿಮರ ಮಸೀದಿಗಳನ್ನು ಧ್ವಂಸಪಡಿಸುತ್ತಿದ್ದಾರೆ
3. ಉಗ್ರ ಭಯೋತ್ಪಾದಕ ಸಂಘಟನೆ ಬಜರಂಗದಳ 14 ಮಸೀದಿಗಳಿಗೆ ಬೆಂಕಿ ಹಚ್ಚಿದೆ
4. ಭಾರತೀಯ ಸಶಸ್ತ್ರ ಪಡೆಗಳ ಮಾಜಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಏಕೆ ಹತ್ಯೆ ಮಾಡಲಾಯಿತು?
5. ಭಾರತೀಯ ತ್ರಿಪುರ ಗಲಭೆ| ಆರ್.ಎಸ್.ಎಸ್ ಹಿಂದೂಗಳು ಕುರಾನ್ ಮತ್ತು ಮಸೀದಿಗಳಿಗೆ ಬೆಂಕಿ ಹಚ್ಚಿದರು
6. 20000 ಬಂಗಾಳಿ ಮುಸ್ಲಿಮರನ್ನು ಅಸ್ಸಾಂನಲ್ಲಿ ಹಿಂದೂ ಗುಂಪುಗಳು ಕೊಂದವು
|
ಚಂದಾದಾರರು: 2,610
ಒಟ್ಟು ವೀಕ್ಷಣೆಗಳು: 1,42,460
|
-
|
ಡಿನೌ
|
1. ಕಾಶ್ಮೀರಿಗಳನ್ನು ಹೆಚ್ಚು ಅತ್ಯಾಧುನಿಕವಾಗಿ ನಿರ್ನಾಮ ಮಾಡಲು ಭಾರತ ಹೊಸ ಶಸ್ತ್ರಾಸ್ತ್ರಗಳಿಗೆ ಬೇಡಿಕೆ ಸಲ್ಲಿಸಿದೆ.
2. ಐ.ಐ.ಓ.ಜೆ.ಕೆ.ಯಲ್ಲಿ ಭಾರತದ ಬದಲಾಗುತ್ತಿರುವ ತಂತ್ರಗಳು: ದೌರ್ಜನ್ಯಗಳು ಹೆಚ್ಚು ಗೌಪ್ಯವಾಗಿರುತ್ತವೆ
3. ಜುನಾಗಢ್ ನಲ್ಲಿ ಭಾರತದ ಅಕ್ರಮ ಸ್ವಾಧೀನ - ಡಿ.ನೌ ಮೀಡಿಯಾ
4. ಭಾರತದಿಂದ ಸ್ವಾತಂತ್ರ್ಯ ಬಯಸುವ ಭಾರತೀಯ ರಾಜ್ಯಗಳಿಗೆ ಪಾಠ
5. ಬಾಬ್ರಿ ಮಸೀದಿಯ ನಂತರ, ಮತ್ತೊಂದು ಮಸೀದಿಯನ್ನು ಧ್ವಂಸಗೊಳಿಸಲು ತೀವ್ರಗಾಮಿ ಹಿಂದೂಗಳ ಪಿತೂರಿ
6. ಜುನಾಗಢ ರಾಜ್ಯವನ್ನು ಭಾರತ ಬಲವಂತವಾಗಿ ಸೇರ್ಪಡೆಗೊಳಿಸಿ 73 ವರ್ಷಗಳು ಸಂದಿವೆ.
7. ಕಾಶ್ಮೀರದಲ್ಲಿ ಭಾರತವು ಅವಿರತವಾಗಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ
8. ಕಾಶ್ಮೀರಗಳಲ್ಲಿ ನಕ್ಸಲೀಯರಂತಹ ವಿದೇಶಿ ತರಬೇತುದಾರರಿದ್ದಿದ್ದರೆ ಭಾರತದ ಪರಿಸ್ಥಿತಿ ಭೀಕರವಾಗಿರುತ್ತಿತ್ತು
|
ಚಂದಾದಾರರು: NA
ಒಟ್ಟು ವೀಕ್ಷಣೆಗಳು: 72,337
|
ಅಂತರ್ಜಾಲ ತಾಣಗಳು
ಕೆಲವು ನಕಲಿ ಸುದ್ದಿಗಳ ಸ್ಕ್ರೀನ್ ಶಾಟ್ಸ್
***
(Release ID: 1791607)
|