ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಕರ್ನಾಟಕದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿದ ಭಾರತ ಸರ್ಕಾರದ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಕಾರ್ಯದರ್ಶಿ

ಕರ್ನಾಟಕವು ಹೆಚ್ಚಿನ ರಾಗಿ ಉತ್ಪಾದನೆಗೆ ಸಜ್ಜಾಗಬೇಕು: ಆಹಾರ ಮತ್ತು ಸಾರ್ವಜನಿಕ ಪೂರೈಕೆ ಕಾರ್ಯದರ್ಶಿ

ನವೋದ್ಯಮಗಳ ಮೂಲಕ ಕಾಳುಗಳ ಉತ್ಪನ್ನಗಳ ಹೆಚ್ಚಿನ ಮಾರುಕಟ್ಟೆ ಪ್ರವೇಶಕ್ಕಾಗಿ ರಾಜ್ಯವು ಹೈದರಾಬಾದ್‌ ನಲ್ಲಿರುವ ಭಾರತೀಯ ಮಿಲೆಟ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು: ಶ್ರೀ ಸುಧಾಂಶು

ಮಹಾನಗರಗಳಲ್ಲಿ 100 ಎಥೆನಾಲ್ ಬಂಕ್‌ ಗಳನ್ನು ಪರಿಚಯಿಸಲು ಯೋಜಿಸಲಾಗಿರುವ ಎಂಟು ಗುರುತಿಸಲಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಎಥೆನಾಲ್ ಉತ್ಪಾದನೆ ಮತ್ತು ಮಿಶ್ರಣವನ್ನು ಪ್ರೋತ್ಸಾಹಿಸಬೇಕು: ಆಹಾರ ಕಾರ್ಯದರ್ಶಿ


Posted On: 08 JAN 2022 7:23PM by PIB Bengaluru

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವಾಲಯದ ಅಡಿಯಲ್ಲಿನ ಆಹಾರ ಮತ್ತು ಸಾರ್ವಜನಿಕ ಪೂರೈಕೆ ಇಲಾಖೆಯ ಕಾರ್ಯದರ್ಶಿ, ಶ್ರೀ ಸುಧಾಂಶು ಪಾಂಡೆ ಅವರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಖರೀದಿಗೆ ಸಂಬಂಧಿಸಿದ ಕ್ಲೇಮುಗಳ ಇತ್ಯರ್ಥ, ಖರೀದಿ ಕಾರ್ಯಾಚರಣೆಗಳಿಗೆ ರಾಜ್ಯದ ಸಿದ್ಧತೆಗಳು, ಬಲವರ್ಧಿತ ಭತ್ತದ ಕಾಳುಗಳ ಉತ್ಪಾದನೆಗೆ ಘಟಕಗಳ ಸ್ಥಾಪನೆ, ಬಲವರ್ಧಿತ ಅಕ್ಕಿ ವಿತರಣೆ, ಮಿಲೆಟ್ಸ್ (ರಾಗಿ, ಸಜ್ಜೆ, ನವಣೆ, ಸಾವೆ ಇತ್ಯಾದಿ ಕಾಳು) ಉತ್ಪಾದನೆಯನ್ನು ಉತ್ತೇಜಿಸುವುದು, ಎಥೆನಾಲ್ ಮಿಶ್ರಣ ಘಟಕಗಳ ಸ್ಥಾಪನೆ ಇತ್ಯಾದಿಗಳ ಬಗ್ಗೆ ಚರ್ಚಿಸಲಾಯಿತು.
ಸ್ವಯಂಚಾಲಿತ ಇಪಿಒಎಸ್ ವಿತರಣಾ ಪ್ರಮಾಣಗಳ ಮಟ್ಟಿಗೆ ಸಂಗ್ರಹಣೆ ಕ್ಲೇಮುಗಳ ಇತ್ಯರ್ಥ ಮತ್ತು ಪೂರೈಕೆ ಸಬ್ಸಿಡಿ ಮೊತ್ತವನ್ನು ರಾಜ್ಯಕ್ಕೆ ಪಾವತಿಸಲು ಈಗಾಗಲೇ ಅನುಮೋದಿಸಲಾಗಿದೆ ಎಂದು ಕಾರ್ಯದರ್ಶಿ ರಾಜ್ಯಕ್ಕೆ ತಿಳಿಸಿದರು. ರಾಜ್ಯವು ತನ್ನ ಖರೀದಿ ಮತ್ತು ವಿತರಣಾ ಯೋಜನೆಗಳನ್ನು ಇಲಾಖೆಯಿಂದ ಮುಂಚಿತವಾಗಿ ಅನುಮೋದಿಸಬೇಕು ಮತ್ತು ಉರುಟು ಧಾನ್ಯಗಳ ಖರೀದಿ ಮತ್ತು ವಿತರಣೆಗೆ ಪರಿಷ್ಕೃತ ಮಾರ್ಗಸೂಚಿಗಳನ್ನು 10 ತಿಂಗಳ ಅವಧಿಯವರೆಗೆ ವಿಸ್ತರಿಸಬೇಕು ಎಂದು ಅವರು ತಿಳಿಸಿದರು.

Description: C:\Users\HP\Desktop\MoCAFPD\2022\January\08\WhatsApp Image 2022-01-08 at 5.59.48 PM.jpeg


2023 ಅನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಘೋಷಿಸಲಾಗಿದ್ದು, ಕರ್ನಾಟಕವು ರಾಗಿಯನ್ನು ಹೆಚ್ಚು ಬೆಳೆಯುವ ರಾಜ್ಯವಾಗಿದೆ, ರಾಜ್ಯವು ರಾಗಿ ಉತ್ಪಾದನೆಯನ್ನು ಹೆಚ್ಚಿಸಲು ಸಜ್ಜಾಗಬೇಕು ಮತ್ತು ನವೋದ್ಯಮಗಳ ಮೂಲಕ ರಾಗಿ ಉತ್ಪನ್ನಗಳ ಮಾರುಕಟ್ಟೆ ಪ್ರವೇಶವನ್ನು ಹೆಚ್ಚಿಸಲು ಹೈದರಾಬಾದ್‌ ನಲ್ಲಿರುವ ಭಾರತೀಯ ಮಿಲೆಟ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದು ಶ್ರೀ ಪಾಂಡೆ ತಿಳಿಸಿದರು. ಇತರ ರಾಜ್ಯಗಳ ರಾಗಿಯ ಅಗತ್ಯವನ್ನೂ ಕರ್ನಾಟಕ ಪೂರೈಸಬಲ್ಲುದಾಗಿದ್ದು, ಕೇಂದ್ರವು ಎಲ್ಲಾ ನಿರ್ವಹಣೆ ಮತ್ತು ಸಾಗಣೆ ವೆಚ್ಚವನ್ನು ಭರಿಸುತ್ತದೆ ಎಂದೂ ಆಹಾರ ಕಾರ್ಯದರ್ಶಿ ತಿಳಿಸಿದರು.
ರಾಜ್ಯದ ಸ್ವಯಂ ಬಳಕೆಗಾಗಿ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಸ್ಥಳೀಯ ಭತ್ತವನ್ನು ದಾಸ್ತಾನು ಮಾಡಲು ಕೇಂದ್ರವು ಈಗಾಗಲೇ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು. ಮುಂಗಡ ಸಬ್ಸಿಡಿ ಬಿಡುಗಡೆ ಕುರಿತ ಮುಖ್ಯ ಕಾರ್ಯದರ್ಶಿಯವರ ಕೋರಿಕೆಯ ಮೇರೆಗೆ, ಮುಂಗಡವನ್ನು ಬಿಡುಗಡೆ ಮಾಡಬಹುದಾದ ಖರೀದಿ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಮೊದಲು ರಾಜ್ಯವು ಅದರ ಸಂಭಾವ್ಯ ವೆಚ್ಚವನ್ನು ಕಳುಹಿಸಬೇಕು ಎಂದು ತಿಳಿಸಿದರು.
ಕೇಂದ್ರದ ಮಹತ್ವದ ಯೋಜನೆಯಾದ ಐಸಿಡಿಎಸ್ ಮತ್ತು ಎಂಡಿಎಂ ಯೋಜನೆಯಡಿ ಬಲವರ್ಧಿತ ಅಕ್ಕಿಯನ್ನು ವಿತರಿಸುವ ಕುರಿತು ರಾಜ್ಯದ ಗಮನ ಸೆಳೆದ ಅವರು, ಅಂತಹ ಮಕ್ಕಳ ಆರೋಗ್ಯ ಬೆಳವಣಿಗೆಯ ಮೇಲೆ ನಿಗಾ ವಹಿಸಲು ರಾಜ್ಯ ಆರೋಗ್ಯ ಇಲಾಖೆಯನ್ನು ನಿಯೋಜಿಸಬೇಕು ಎಂದು ಸಲಹೆ ನೀಡಿದರು. ರಾಜ್ಯವು ಬಲವರ್ಧಿತ ಭತ್ತದ ಸಂಗ್ರಹಣೆಯ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹೊಂದಿರುವುದರಿಂದ, ಮಹತ್ವಾಕಾಂಕ್ಷೆಯ ಮತ್ತು ತೀವ್ರ ಒತ್ತಡದ ಜಿಲ್ಲೆಗಳಿಗೆ ಶೇ.100ರಷ್ಟು ಬಲವರ್ಧಿತ ಅಕ್ಕಿಯನ್ನು ದೀರ್ಘಾವಧಿಯ ಉದ್ದೇಶದ ಮೇಲೆ ಎಫ್.ಆರ್.ಕೆ. ಘಟಕಗಳನ್ನು ಸ್ಥಾಪಿಸುವುದರೊಂದಿಗೆ ಬಲವರ್ಧಿತ ಅಕ್ಕಿಯನ್ನು ಸ್ಥಳೀಯವಾಗಿ ಸಂಗ್ರಹಿಸಬಹುದು ಎಂದೂ ಸಲಹೆ ನೀಡಿದರು. ರಾಜ್ಯದಲ್ಲಿ ಭತ್ತದ ಬಲವರ್ಧನೆಯನ್ನು ಗಿರಣಿ ಹಂತದಲ್ಲಿಯೇ ಮಾಡಬೇಕು ಎಂದು ಸಲಹೆ ನೀಡಿದರು.

 ಕರ್ನಾಟಕವು ಸಕ್ಕರೆಯ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿರುವುದರಿಂದ, ಮಹಾನಗರಗಳಲ್ಲಿ 100 ಎಥೆನಾಲ್ ಬಂಕ್‌ ಗಳನ್ನು ಪರಿಚಯಿಸಲು ಯೋಜಿಸಲಾದ ಎಂಟು ಗುರುತಿಸಲಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದ್ದು, ಎಥೆನಾಲ್ ಉತ್ಪಾದನೆ ಮತ್ತು ಮಿಶ್ರಣವನ್ನು ಪ್ರೋತ್ಸಾಹಿಸಬೇಕೆಂದು ಆಹಾರ ಕಾರ್ಯದರ್ಶಿ  ಸಲಹೆ ನೀಡಿದರು.
ಸಂಗ್ರಹಣೆ ಕಾರ್ಯಾಚರಣೆಗಾಗಿ ಒಂದು ಏಕೀಕೃತ ತಂತ್ರಾಂಶ ಹೊಂದಲು ಮುಖ್ಯ ಕಾರ್ಯದರ್ಶಿ ಅವರು ನೀಡಿರುವ ಸೂಚನೆ, ಪರಿಗಣನೆಯಲ್ಲಿದೆ ಎಂದೂ ಕಾರ್ಯದರ್ಶಿ ತಿಳಿಸಿದ್ದಾರೆ.
ವಲಸೆ ಕಾರ್ಮಿಕರು, ಕಾಫಿ ತೋಟದ ಕಾರ್ಮಿಕರು ಮತ್ತು ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿರುವ ಇತರ ನಿವಾಸಿ ಕಾರ್ಮಿಕರಿಗೆ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ನೀಡಿಕೆಯನ್ನು, ಬಡವರ ನಿಜವಾದ ಪ್ರಯೋಜನಕ್ಕಾಗಿ ರಾಜ್ಯವು ಸಕ್ರಿಯವಾಗಿ ಕೈಗೊಕೊಳ್ಳಬಹುದು ಎಂದು ಕಾರ್ಯದರ್ಶಿ ತಿಳಿಸಿದರು.

***(Release ID: 1788795) Visitor Counter : 81


Read this release in: English , Urdu , Hindi , Telugu