ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಪ್ರಧಾನಮಂತ್ರಿ ಮೋದಿ ಅವರ ನೀತಿಗಳು ಮತ್ತು ದೃಷ್ಟಿಕೋನ ಉದ್ಯಮಶೀಲತೆ ಮತ್ತು ಅವಕಾಶಗಳಿಗೆ ಶಕ್ತಿ ನೀಡುತ್ತಿದೆ: ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್


ತಂತ್ರಜ್ಞಾನವು ಉದ್ಯಮಶೀಲತೆಯನ್ನು  ವೇಗವರ್ಧಿಸುತ್ತಿದೆ ಮತ್ತು ಹೂಡಿಕೆಗಳು ಹಾಗೂ ಆರ್ಥಿಕ ಬೆಳವಣಿಗೆಗೆ ಶಕ್ತಿ ತುಂಬುತ್ತದೆ

ಏಷ್ಯಾದಲ್ಲಿ ಟೆಕ್ ದೈತ್ಯ ಮೆಟಾದ ಮೊದಲ ಸ್ವತಂತ್ರ ಕಚೇರಿಯನ್ನು ಉದ್ಘಾಟಿಸಿದ ರಾಜೀವ್ ಚಂದ್ರಶೇಖರ್

ಈ ಕಚೇರಿ ಭಾರತದ ಹೊಸ ಆರ್ಥಿಕತೆಗೆ ಚೈತನ್ಯ ತುಂಬುವ ಕೇಂದ್ರಕ್ಕೆ ಆತಿಥ್ಯ ವಹಿಸಲಿದೆ (ಸಿ-ಫೈನ್)

ಇದು ಭಾರತದ ಸಣ್ಣ ವ್ಯಾಪಾರ ಮಾಲೀಕರು, ಸೃಷ್ಟಿಕರ್ತರು, ಉದ್ಯಮಿಗಳು  ಮತ್ತು ಸ್ಥಳೀಯ ಸಮುದಾಯಗಳಿಗೆ ತರಬೇತಿ ಮತ್ತು ಕೌಶಲ್ಯವನ್ನು ನೀಡುತ್ತದೆ

Posted On: 08 DEC 2021 5:33PM by PIB Bengaluru

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಹರಿಯಾಣದ ಗುರುಗ್ರಾಮದಲ್ಲಿಂದು ಟೆಕ್ ದೈತ್ಯ ಮೆಟಾ (ಹಿಂದಿನ ಹೆಸರು ಫೇಸ್ ಬುಕ್) ಮೊದಲ ಸ್ವತಂತ್ರ್ಯ ಕಚೇರಿಯನ್ನು ಉದ್ಘಾಟಿಸಿದರು.

ಉದ್ಘಾಟನೆಯ ಸಂದರ್ಭದಲ್ಲಿ ರಾಜೀವ್ ಚಂದ್ರಶೇಖರ್ ಅವರು, "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀತಿಗಳು ಮತ್ತು ದೃಷ್ಟಿಕೋನ ಭಾರತದಲ್ಲಿ ಉದ್ಯಮಶೀಲತೆ ಮತ್ತು ಅವಕಾಶಗಳನ್ನು ಸಶಕ್ತಗೊಳಿಸುತ್ತಿದೆ. ಇದರ ಫಲವಾಗಿ, ಉದ್ಯಮಶೀಲತೆಯ ಬಲದಿಂದ ಭಾರತದ ಪ್ರಚಂಡ ಶಕ್ತಿಯನ್ನು ಬಯಲು ಮಾಡಿದೆ. ತಂತ್ರಜ್ಞಾನವು  ಉದ್ಯಮಶೀಲತೆಯ  ವೇಗವರ್ಧಿಸುತ್ತಿದ್ದು ಹೂಡಿಕೆಗಳು ಮತ್ತು ಆರ್ಥಿಕ ಬೆಳವಣಿಗೆಗೆ ಚೈತನ್ಯ ನೀಡುತ್ತಿದೆನಾನು ಯಾವಾಗಲೂ ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಎರಡರ ಬಗ್ಗೆಯೂ ಮಾತನಾಡುತ್ತೇನೆ ಏಕೆಂದರೆ ಇವೆರಡೂ ಆಳವಾದ ನಂಟು ಹೊಂದಿವೆ ಮತ್ತು ಛೇದಿಸಲ್ಪಟ್ಟಿವೆ ಎಂದು ನಾನು ಭಾವಿಸುತ್ತೇನೆ." ಎಂದರು.

ಭಾರತದ ಹೊಸ ಆರ್ಥಿಕತೆಗೆ ಶಕ್ತಿ ತುಂಬಿಸುವ ಕೇಂದ್ರವನ್ನು (ಸಿ-ಫೈನ್) ಆಯೋಜಿಸಬೇಕಾದ ಹೊಸ ಕಚೇರಿಯನ್ನು ಭಾರತದ ಸಣ್ಣ ವ್ಯಾಪಾರಗಳ ಮಾಲೀಕರು, ಸೃಜನಶೀಲರು, ಉದ್ಯಮಿಗಳು  ಮತ್ತು ಸ್ಥಳೀಯ ಸಮುದಾಯಗಳಿಗೆ ತರಬೇತಿ ಮತ್ತು ಕೌಶಲ್ಯಕ್ಕಾಗಿ ಸಮರ್ಪಿಸಲಾಗುವುದು.

"ಸಿ-ಫೈನ್ ನಂತಹ ಉಪಕ್ರಮಗಳು ಉದ್ಯಮಶೀಲತೆಗೆ ಚೈತನ್ಯ ಮತ್ತು ನಾವಿನ್ಯತೆ ಹಾಗೂ ದೇಶಾದ್ಯಂತ ಯುವಕರನ್ನು ಸಬಲೀಕರಣಗೊಳಿಸಲು, ಅವರ ಕನಸುಗಳನ್ನು ಗಣನೆಗೆ ತೆಗೆದುಕೊಂಡು ಅದರೊಂದಿಗೆ ನಿರ್ಣಾಯಕ ಸಮೂಹ, ಗಾತ್ರ ಮತ್ತು ಪ್ರಮಾಣವನ್ನು ಸೃಷ್ಟಿಸಲು, ಅಂತರ್ಜಾಲ ಮತ್ತು ತಂತ್ರಜ್ಞಾನದ ಶಕ್ತಿಯಾಗಬೇಕು ಎಂದು ನಾನು ಭಾವಿಸುತ್ತೇನೆ. ತಂತ್ರಜ್ಞಾನವು ಒಳಿತು ಮಾಡುತ್ತದೆ ಮತ್ತು ಜನರ ಜೀವನವನ್ನು ಪರಿವರ್ತಿಸುತ್ತದೆ ಎಂಬ ಕಾರಣಕ್ಕೆ ನಾನು ಸಾರ್ವಜನಿಕ ಜೀವನಕ್ಕೆ ಅನೇಕ ವರ್ಷಗಳಿಂದ ಬದ್ಧನಾಗಿದ್ದೇನೆ." ಎಂದೂ ಹೇಳಿದರು.

ಮೆಟಾ ಕಚೇರಿ ಶಿಕ್ಷಣ, ವಾಣಿಜ್ಯ ಮತ್ತು ಆರೋಗ್ಯ ಆರೈಕೆ ವಲಯಗಳನ್ನು ಹೇಗೆ ಪರಿವರ್ತಿಸಲಿದೆ ಎಂಬುದನ್ನು ಪ್ರದರ್ಶಿಸಲು ಸಮರ್ಪಿತವಾದ ಕ್ಷೇತ್ರ ಹೊಂದಿರುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ಒಂದು ರಾಷ್ಟ್ರವಾಗಿ ನಮಗೆ ಅಭೂತಪೂರ್ವ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ. ತಂತ್ರಜ್ಞಾನದ ಬಳಕೆಯಿಂದಾಗಿ ಜಗತ್ತು ಒಡೆದು  ಬದಲಾಗುತ್ತಿದೆ ಮತ್ತು ವಿಸ್ತರಿಸುತ್ತಿದೆ. ತಂತ್ರಜ್ಞಾನಕ್ಕೆ ಆಳವಾಗಿ ಬದ್ಧವಾಗಿರುವ ಸರ್ಕಾರ ನಮ್ಮಲ್ಲಿದೆ." ಎಂದು ಹೇಳಿದರು.

"ಸುಧಾರಣೆಯ ವೇದಿಕೆಯಿಂದ ಉದ್ಯಮಶೀಲತೆಯನ್ನು ಹೇಗೆ ಸಶಕ್ತಗೊಳಿಸಲಾಗಿದೆ ಎಂಬುದರ ಬಗ್ಗೆ ಗಾಥೆಗಳನ್ನು ಕೇಳುವಾಗ, ಜನರ ಸಾಮೂಹಿಕ ಒಳಿತಿಗಾಗಿ ಅಂತರ್ಜಾಲವನ್ನು ಬಳಸಿಕೊಳ್ಳಬೇಕು ಎಂದು 80 ದಶಕದ ಕೊನೆಯಲ್ಲಿ ನಾನು ಹೇಳಿದನ್ನು ಪುನರುಚ್ಚರಿಸುತ್ತೇನೆ."  ಎಂದು ಹೇಳಿ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದರು

ಶೀರ್ಷಿಕೆ: ಹರಿಯಾಣದ ಗುರುಗ್ರಾಮದಲ್ಲಿ ಮೆಟಾ ಕಚೇರಿ ಉದ್ಘಾಟಿಸಿದ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್.

***



(Release ID: 1779545) Visitor Counter : 186


Read this release in: English , Hindi , Punjabi