ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಎನ್ ಎಸ್ ಎಸ್ ಅಡಿ ಪ್ರಯೋಜನ ಪಡೆದ ವಿದ್ಯಾರ್ಥಿಗಳು

Posted On: 29 NOV 2021 4:23PM by PIB Bengaluru

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಸಿಖ್, ಜೈನ, ಮುಸ್ಲಿಂ, ಕ್ರೈಸ್ತ, ಬುದ್ಧ ಮತ್ತು ಪಾರ್ಸಿ ಆರು ಅಧಿಸೂಚಿತ ಅಲ್ಪ ಸಂಖ್ಯಾತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು/ ಅಭ್ಯರ್ಥಿಗಳಿಗೆ ಉಚಿತ ತರಬೇತಿ (ಕೋಚಿಂಗ್) ಮತ್ತು ಅದಕ್ಕೆ ಸಂಬಂಧಿಸಿದ ಯೋಜನೆ (ನಯಾ ಸವೇರಾ) ಯನ್ನು ಅನುಷ್ಠಾನಗೊಳಿಸುತ್ತಿದೆ, ಅದರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗ್ರೂಪ್ , ಬಿ ಮತ್ತು ಸಿ ಹಾಗೂ ಇತರೆ ಸಮಾನ ಹುದ್ದೆಗಳ ನೇಮಕಕ್ಕೆ ಮತ್ತು ಬ್ಯಾಂಕ್, ವಿಮಾ ಕಂಪನಿಗಳು, ಇತರೆ ಸ್ವಾಯತ್ತ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿನ ನೇಮಕಾತಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ವಿಶೇಷ ತರಬೇತಿ(ಕೋಚಿಂಗ್) ನೀಡಲಾಗುತ್ತಿದೆ ಯೋಜನೆಯನ್ನು ದೇಶಾದ್ಯಂತ ಯೋಜನಾ ಅನುಷ್ಠಾನ ಸಂಸ್ಥೆಗಳು/ ಸರ್ಕಾರೇತರ ಸಂಸ್ಥೆಗಳು (ಎನ್ ಜಿಒ)ಗಳ ನೆರವಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ.

ಕಳೆದ ನಾಲ್ಕು ವರ್ಷಗಳಲ್ಲಿ (2017-18 ರಿಂದ 2020-21) ಆರು ಅಧಿಸೂಚಿತ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಒಟ್ಟು 36,839 ವಿದ್ಯಾರ್ಥಿಗಳು/ಅಭ್ಯರ್ಥಿಗಳು ಯೋಜನೆಯಡಿ ಪ್ರಯೋಜನ ಪಡೆದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಯೋಜನೆಯ ಪ್ರಯೋಜನ ಪಡೆದ ವಿದ್ಯಾರ್ಥಿಗಳ ರಾಜ್ಯವಾರು ವಿವರ ಅಡಕದಲ್ಲಿದೆ. ಯೋಜನೆಯಡಿ ಪ್ರದೇಶಾವಾರು ಫಲಾನುಭವಿಗಳ ವಿವರಗಳನ್ನು ನಿರ್ವಹಣೆ ಮಾಡಿಲ್ಲ.

ಯೋಜನೆ ಆರಂಭವಾದಾಗಿನಿಂದ ಈವರೆಗೆ ಯೋಜನೆಯ ಅನುಷ್ಠಾನಕ್ಕಾಗಿ 344.34 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ.

ನಯಾ ಸವೇರಾ ಯೋಜನೆಯನ್ನು ಆರು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳ ಅಲ್ಪ ಸಂಖ್ಯಾತ ವರ್ಗದ ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲೂಎಸ್)ಗೆ ಸೇರಿದ ವಿದ್ಯಾರ್ಥಿಗಳು/ಅಭ್ಯರ್ಥಿಗಳ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗುತ್ತಿದೆ, ನಗರ ಮತ್ತು ಗ್ರಾಮೀಣ ವಲಯಗಳಿಗೆ ಪ್ರತ್ಯೇಕ ವರ್ಗೀಕರಣವನ್ನು ಮಾಡಲಾಗಿಲ್ಲ. ಶೇ.30ರಷ್ಟು ಸೀಟುಗಳನ್ನು ಅಲ್ಪ ಸಂಖ್ಯಾತ ಬಾಲಕಿಯರಿಗೆ ಮೀಸಲಿಡಲಾಗಿದೆ.

ಅಡಕ

ನಯಾ ಸವೇರಾ ಯೋಜನೆ (ಎನ್ ಎಸ್ ಎಸ್ ) ಅಡಿ ಕಳೆದ ನಾಲ್ಕು ವರ್ಷಗಳಲ್ಲಿ (2017-18ನೇ ಹಣಕಾಸು ವರ್ಷದಿಂದ 2020-21ರವರೆಗೆ ) ರಾಜ್ಯವಾರು ಪ್ರಯೋಜನ ಪಡೆದಿರುವ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳ ವಿವರ ಇಲ್ಲಿದೆ.

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು

ವಿದ್ಯಾರ್ಥಿಗಳ ಸಂಖ್ಯೆ

ಆಂಧ್ರಪದೇಶ

1560

ಅಸ್ಸಾಂ

150

ಬಿಹಾರ

200

ಚಂಡೀಗಢ್

540

ಛತ್ತೀಸ್ ಗಢ

300

ದೆಹಲಿ

1023

ಗುಜರಾತ್

1968

ಹರಿಯಾಣ

860

ಜಮ್ಮು ಮತ್ತು ಕಾಶ್ಮೀರ

640

ಜಾರ್ಖಂಡ್

360

ಕರ್ನಾಟಕ

4718

ಕೇರಳ

1930

ಮಧ್ಯಪ್ರದೇಶ

2195

ಮಹಾರಾಷ್ಟ್ರ

3930

ಮಣಿಪುರ

350

ಮೇಘಾಲಯ

410

ಪಂಜಾಬ್

1400

ರಾಜಸ್ಥಾನ್

1330

ತಮಿಳುನಾಡು

850

ತೆಲಂಗಣಾ

1750

ಉತ್ತರಪ್ರದೇಶ

8345

ಪಶ್ಚಿಮ ಬಂಗಾಳ

2030

ಕೇಂದ್ರ ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ರಾಜ್ಯಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ವಿಷಯವನ್ನು ತಿಳಿಸಿದ್ದಾರೆ.

***



(Release ID: 1776194) Visitor Counter : 144


Read this release in: English , Urdu , Marathi