ಹಣಕಾಸು ಸಚಿವಾಲಯ
ಇಂಧನ, ಕಲ್ಲಿದ್ದಲು ಮತ್ತು ಅಣುಶಕ್ತಿಯ ಕ್ಯಾಪೆಕ್ಸ್ ಪರಿಶೀಲನಾ ಸಭೆ ನಡೆಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್
Posted On:
01 NOV 2021 8:00PM by PIB Bengaluru
ದೇಶದಲ್ಲಿ ಬಂಡವಾಳ ವೆಚ್ಚ(ಕ್ಯಾಪೆಕ್ಸ್) ಮತ್ತು ಮೂಲಸೌಕರ್ಯ ಪ್ರಗತಿಗೆ ಒತ್ತು ನೀಡುವ ಸಲುವಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಶ್ರೀಮತಿ ನಿರ್ಮಲಾ ಸೀತಾರಾಮನ್ ಇಂದು ಇಂಧನ, ಇಂಧನ ಸಚಿವಾಲಯ, ಕಲ್ಲಿದ್ದಲು ಸಚಿವಾಲಯ ಮತ್ತು ಅಣುಶಕ್ತಿ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಪರಿಶೀಲನಾ ಸಭೆಯಲ್ಲಿ ಕಾರ್ಯದರ್ಶಿ(ಹಣಕಾಸು ವ್ಯವಹಾರಗಳು), ಕಾರ್ಯದರ್ಶಿ (ಇಂಧನ), ಕಾರ್ಯದರ್ಶಿ(ಕಲ್ಲಿದ್ದಲು), ಕಾರ್ಯದರ್ಶಿ(ಅಣುಶಕ್ತಿ), ಹೆಚ್ಚುವರಿ ಕಾರ್ಯದರ್ಶಿ(ಕಲ್ಲಿದ್ದಲು), ಜಂಟಿ ಕಾರ್ಯದರ್ಶಿ(ಆರ್ಥಿಕ ವ್ಯವಹಾರಗಳು) ಮತ್ತಿತರರು ಉಪಸ್ಥಿತರಿದ್ದರು.
ಅಣು ಇಂಧನ ಇಲಾಖೆಯ ಕಾರ್ಯದರ್ಶಿ ಅವರ ಜತೆ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಕ್ಯಾಪೆಕ್ಸ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ತಳಮಟ್ಟದಲ್ಲಿ ಮೂಲಸೌಕರ್ಯಕ್ಕೆ ಮಾಡುತ್ತಿರುವ ವೆಚ್ಚದ ಮೇಲೆ ತೀವ್ರ ನಿಗಾ ಇರಿಸಬೇಕು ಎಂದು ಹಣಕಾಸು ಸಚಿವರು ಪ್ರತಿಪಾದಿಸಿದರು ಮತ್ತು ಸಚಿವರುಗಳು ಎಲ್ಲ ರಾಜ್ಯಗಳೊಂದಿಗೆ ಸಮನ್ವಯ ವೃದ್ಧಿ ಸೇರಿದಂತೆ ತ್ವರಿತಗತಿಯಲ್ಲಿ ಯೋಜನೆಗಳ ಅನುಷ್ಠಾನ ಖಾತ್ರಿಪಡಿಸಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ, ಮೊದಲನೇ ತ್ರೈಮಾಸಿಕ ಹಾಗೂ ಎರಡನೇ ತ್ರೈಮಾಸಿಕದ ಕ್ಯಾಪೆಕ್ಸ್ ಪ್ರಗತಿಯನ್ನು, ಪ್ರಸಕ್ತ ಹಣಕಾಸು ವರ್ಷದ ಮುಂಬರುವ ತ್ರೈಮಾಸಿಕದಲ್ಲಿ ಸಚಿವಾಲಯಗಳು ಮತ್ತು ಕೇಂದ್ರ ಸರ್ಕಾರಿ ಒಡೆತನದ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ(ಸಿಪಿಎಸ್ಇ) ಖರ್ಚು ಮಾಡಬೇಕಾಗಿರುವ ಬಂಡವಾಳ ಅಂದಾಜು ಗುರಿ, ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ (ಎನ್ಐಪಿ) ಯೋಜನೆಗಳ ಅನುಷ್ಠಾನಕ್ಕೆ ಮಾಡಿರುವ ವೆಚ್ಚ, ಸ್ವತ್ತು ನಗದೀಕರಣಕ್ಕಾಗಿ ಎತ್ತುವಳಿ ಮಾಡಬೇಕಾಗಿರುವ ಅಂದಾಜು ನಿಧಿ, ಪಿಪಿಪಿ ಅಡಿಯಲ್ಲಿ ಕೈಗೆತ್ತಿಕೊಂಡಿರುವ ಯೋಜನೆಗಳು ಮತ್ತು ರಾಷ್ಟ್ರೀಯ ಕ್ರಿಯಾ ಯೋಜನೆ(ಗತಿಶಕ್ತಿ) ಸಮನ್ವಯಗೊಳಿಸುವ ವಿಷಯಗಳ ಕುರಿತು ಚರ್ಚಿಸಲಾಯಿತು.
ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಕ್ಯಾಪೆಕ್ಸ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಆರ್ಥಿಕ ನೆರವು ಬಿಡುಗಡೆ ಮೇಲೆ ನಿಗಾವಹಿಸುವುದಲ್ಲದೆ ಯೋಜನೆಗಳ ಅನುಷ್ಠಾನದ ಪರಿಶೀಲನೆ ನಡೆಸುವಂತೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅಧಿಕಾರಿಗಳಿಗೆ ಸೂಚಿಸಿದರು. ಮೂಲಸೌಕರ್ಯ ಯೋಜನೆಗಳು ಸರ್ಕಾರದ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ಆರ್ಥಿಕತೆಗೆ ಅವುಗಳು ಸರಿಯಾದ ಮಾರ್ಗದಲ್ಲಿ ಪ್ರಗತಿ ಸಾಧಿಸುವುದು ಅತ್ಯಂತ ಪ್ರಮುಖವಾಗಿದೆ ಎಂದರು.
ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಅಣುಶಕ್ತಿ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ಕ್ಯಾಪೆಕ್ಸ್ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಚಿವಾಲಯಗಳು ಮತ್ತು ಇಲಾಖೆಗಳ ಜತೆ ನಿಕಟ ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಹಣಕಾಸು ಸಚಿವರು, ಆರ್ಥಿಕ ವ್ಯವಹಾರಗಳ ಇಲಾಖೆ(ಡಿಇಎ) ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಯೋಜನೆಗಳ ಅನುಷ್ಠಾನದ ವೇಳೆ ಸಿವಿಲ್ ಕಾಮಗಾರಿಗಳಿಂದ ಯಾವುದೇ ಕೆಲಸ ಕಾರ್ಯಗಳಿಗೆ ಅಡಚಣೆಯಾಗಲು ಸಂಸ್ಥೆಗಳ ನಡುವೆ (ಗುತ್ತಿಗೆದಾರರು ಇತ್ಯಾದಿ) ಸಮನ್ವಯದಿಂದ ತೊಂದರೆಯಾಗಬಾರದು ಅಥವಾ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ಅಗತ್ಯ ಸಾಧನಗಳ ಖರೀದಿಯಲ್ಲಿ ವಿಳಂಬವಾಗದಂತೆ ಖಾತ್ರಿಪಡಿಸಬೇಕು ಎಂದು ಸೂಚಿಸಿದರು.
ಇಂಧನ ಸಚಿವಾಲಯ(ಎಂಒಪಿ) ಪರಿಶೀಲನಾ ಸಭೆಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಸಕಾಲದಲ್ಲಿ ಅಗತ್ಯ ಅನುಮತಿಗಳನ್ನು ಪಡೆಯುವ ಮೂಲಕ ಯೋಜನೆಗಳ ಅನುಷ್ಠಾನದ ಕುರಿತು ರಾಜ್ಯಗಳ ನಡುವೆ ಸಂಪರ್ಕವನ್ನು ಹೆಚ್ಚಿಸಬೇಕೆಂದರು. ಕಲ್ಲಿದ್ದಲು ಸಚಿವಾಲಯದೊಂದಿಗಿನ ಸಮಾಲೋಚನೆಯಲ್ಲಿ ಶ್ರೀಮತಿ ಸೀತಾರಾಮನ್ ಅವರು ಸಕಾಲದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರಯತ್ನಗಳನ್ನು ಮುಂದುವರಿಸಬೇಕು ಎಂದರು. ಅಣುಶಕ್ತಿ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಸಿವಿಲ್ ಕಾಮಗಾರಿಗಳ ಮೇಲೆ ತೀವ್ರ ನಿಗಾಇರಿಸುವ ಅಗತ್ಯವಿದೆ ಎಂದು ಬಲವಾಗಿ ಪ್ರತಿಪಾದಿಸಿದರು ಮತ್ತು ಪ್ರಮುಖ ಅಂತಾರಾಷ್ಟ್ರೀಯ ಯಂತ್ರೋಪಕರಣಗಳ ಖರೀದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆಯೊಂದಿಗೆ ಸಮನ್ವಯದಿಂದ ಸಕ್ರಿಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಅಕ್ಟೋಬರ್ 2021ರ ಕೊನೆಯ ವಾರದಿಂದ ಸರಣಿ ಪರಿಶೀಲನಾ ಸಭೆಗಳು ಆರಂಭವಾಗಿದ್ದು, ಹಲವು ಮೂಲಸೌಕರ್ಯ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ ಹಣಕಾಸು ಸಚಿವರು ಕ್ಯಾಪೆಕ್ಸ್ ಕುರಿತು ನಡೆಸುತ್ತಿರುವ ಎರಡನೇ ಸುತ್ತಿನ ಸರಣಿ ಪರಿಶೀಲನಾ ಸಭೆ ಇದಾಗಿದೆ. ಜೂನ್ 2021ರಲ್ಲಿ ಕಳೆದ ಸುತ್ತಿನ ಸಭೆಗಳು ನಡೆದಿದ್ದವು. ಈ ಸಭೆಗಳು ಅದರ ಮುಂದುವರಿದ ಭಾಗವಾಗಿದೆ.
***
(Release ID: 1768776)
Visitor Counter : 213