ಆಹಾರ ಸಂಸ್ಕರಣಾ ಉದ್ದಿಮೆಗಳ ಸಚಿವಾಲಯ
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪರಾಸ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಚಿವಾಲಯಗಳ ಅನುಮೋದನೆ ಸಮಿತಿಯ (ಐಎಮ್ಎಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು
ಛತ್ತೀಸ್ಗಢ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಯು.ಪಿ. & ತಮಿಳುನಾಡಿನಲ್ಲಿ ರೂ.52.767 ಕೋಟಿ ಅನುದಾನ ಸೇರಿದಂತೆ ಒಟ್ಟು ಯೋಜನಾ ವೆಚ್ಚ ರೂ.216.489 ಕೋಟಿಗಳ 7 ಪ್ರಸ್ತಾವನೆಗಳನ್ನು ಸಮಿತಿಯು ಅನುಮೋದಿಸಿದೆ
Posted On:
29 OCT 2021 5:01PM by PIB Bengaluru
ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯ ಕೃಷಿ ಸಂಸ್ಕರಣಾ ಕ್ಲಸ್ಟರ್ (ಎಪಿಸಿ) ಗಾಗಿ ಮೂಲಸೌಕರ್ಯಗಳ ರಚನೆಯ ಯೋಜನೆಯಡಿ ಸ್ವೀಕರಿಸಿದ ಪ್ರಸ್ತಾವನೆಗಳನ್ನು ಪರಿಗಣಿಸಲು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ ಶ್ರೀ ಪಶುಪತಿ ಕುಮಾರ್ ಪಾರಸ್ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅಂತರ ಸಚಿವಾಲಯಗಳ ಅನುಮೋದನೆ ಸಮಿತಿ (ಐಎಮ್ಎಸಿ) ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ರಾಜ್ಯ ಸಚಿವ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ಯೋಜನೆಗಳ ಪ್ರವರ್ತಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಐಎಮ್ಎಸಿ, ಇಂದು ತನ್ನ ಸಭೆಯಲ್ಲಿ, ಛತ್ತೀಸ್ಗಢ, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಯು.ಪಿ. ಮತ್ತು ತಮಿಳುನಾಡಿನಲ್ಲಿ ರೂ.52.767 ಕೋಟಿ ಅನುದಾನ ಸೇರಿದಂತೆ ಒಟ್ಟು ಯೋಜನಾ ವೆಚ್ಚ ರೂ.216.489 ಕೋಟಿಗಳ 7 ಪ್ರಸ್ತಾವನೆಗಳನ್ನು ಸಮಿತಿಯು ಅನುಮೋದಿಸಿದೆ. ಈ ಯೋಜನೆಗಳು ರೂ.163.722 ಕೋಟಿಗಳ ಖಾಸಗಿ ಹೂಡಿಕೆಯನ್ನು ತರುತ್ತವೆ, 12,400 ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು 28,000 ರೈತರಿಗೆ ಪ್ರಯೋಜನವಾಗಲಿದೆ.
ದೇಶದಲ್ಲಿ ಕೃಷಿ ಸಂಸ್ಕರಣಾ ಕ್ಲಸ್ಟರ್ಗಳ ಸ್ಥಾಪನೆಗೆ ಉತ್ತೇಜನ ನೀಡಲು ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ ಅಡಿಯಲ್ಲಿ ಕೃಷಿ-ಸಂಸ್ಕರಣಾ ಕ್ಲಸ್ಟರ್ಗಾಗಿ ಮೂಲಸೌಕರ್ಯಗಳ ರಚನೆಯ ಯೋಜನೆಯನ್ನು 03.05.2017 ರಂದು ಅನುಮೋದಿಸಲಾಗಿದೆ. ಕ್ಲಸ್ಟರ್ ವಿಧಾನದ ಆಧಾರದ ಮೇಲೆ ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಉದ್ಯಮಿಗಳನ್ನು ಉತ್ತೇಜಿಸಲು ಈ ಯೋಜನೆಯು ಆಧುನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಈ ಕ್ಲಸ್ಟರ್ಗಳು ಹೆಚ್ಚುವರಿ ಉತ್ಪನ್ನಗಳ ವ್ಯರ್ಥವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ತೋಟಗಾರಿಕಾ / ಕೃಷಿ ಉತ್ಪನ್ನಗಳಿಗೆ ಮೌಲ್ಯವನ್ನು ಸೇರಿಸುತ್ತದೆ, ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಮಟ್ಟದಲ್ಲಿ ಉದ್ಯೋಗವನ್ನು ಸೃಷ್ಟಿಸುತ್ತದೆ.
***
(Release ID: 1767726)
Visitor Counter : 179